ಸತ್ಯವಾಗುತ್ತಿದೆಯೇ 2022ಕ್ಕೆ ನಾಸ್ಟ್ರಾಡಾಮಸ್ ನುಡಿದ ಭಯಾನಕ ಭವಿಷ್ಯವಾಣಿ?
ನಾಸ್ಟ್ರಾಡಾಮಸ್ ಜಗತ್ಪ್ರಸಿದ್ಧ ದಾರ್ಶನಿಕ.. ಅವರು 2022ರ ಬಗ್ಗೆ ನುಡಿದ ಭವಿಷ್ಯವಾಣಿಗಳು ಭಯ ಹುಟ್ಟಿಸುವಂತಿವೆ.. ಹಾಗಂಥ ಇವೆಲ್ಲ ನಿಜವಾಗುತ್ತಿರುವುದು ಕೂಡಾ ಸುಳ್ಳಲ್ಲ.. ಈ ವರ್ಷಕ್ಕೆ ಅವರು ಹೇಳಿದ ಭವಿಷ್ಯವಾಣಿಗಳು ಏನೆಲ್ಲ ಗೊತ್ತಾ?
'ನಾಸ್ಟ್ರಾಡಾಮಸ್' ಜಗತ್ಪ್ರಸಿದ್ಧ ದಾರ್ಶನಿಕ. ಫ್ರೆಂಚ್ ಜ್ಯೋತಿಷಿ, ವೈದ್ಯ ಮತ್ತು ದಾರ್ಶನಿಕನಾದ ಈತನ ನಿಜ ನಾಮ ಮೈಕೆಲ್ ಡಿ ನಾಸ್ಟ್ರೆಡೇಮ್. ಇವರು ಊಹಿಸಿದ ಭವಿಷ್ಯಗಳು ಹಲವು ನಿಜವಾಗಿರುವುದು ಅವರನ್ನು ಇಂದಿಗೂ ಪ್ರಸ್ತುತವಾಗಿಸಿವೆ. ಈಗಲೂ ಪ್ರತಿ ವರ್ಷ ಆಯಾ ವರ್ಷಕ್ಕೆ ನಾಸ್ಟ್ರಡಾಮಸ್ ಹೇಳಿದ ಭವಿಷ್ಯ ಹೆಚ್ಚು ಸದ್ದು ಮಾಡುತ್ತದೆ. ಅವರು ಭವಿಷ್ಯದ ಘಟನೆಗಳನ್ನು ಊಹಿಸುವ 942 ಕಾವ್ಯಾತ್ಮಕ ಕ್ವಾಟ್ರೇನ್‌ಗಳ ಸಂಗ್ರಹವಾಗಿರುವ ಲೆಸ್ ಪ್ರೊಫೆಟೀಸ್ ಪುಸ್ತಕಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಪುಸ್ತಕದ ಮೊದಲ ಆವೃತ್ತಿಯನ್ನು 1555 ರಲ್ಲಿ ಪ್ರಕಟಿಸಲಾಗಿದೆ.
ಈ ಎಲ್ಲ ವರ್ಷಗಳಲ್ಲಿ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಗಳು ಸಾಕಷ್ಟು ನಿಖರವಾಗಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಸಾಕಷ್ಟು ನಕಾರಾತ್ಮಕವಾಗಿವೆ. ಯುದ್ಧಗಳು, ಆಕ್ರಮಣ ಕೊಲೆಗಳು ಸೇರಿದಂತೆ ವಿಶ್ವ ಇತಿಹಾಸದಲ್ಲಿ ಕೆಲವು ದೊಡ್ಡ ಘಟನೆಗಳನ್ನು ಅವರು ಮುನ್ಸೂಚನೆ ನೀಡಿದ್ದಾರೆ. ಕೆಲವನ್ನು ಹೆಸರಿಸುವುದಾದರೆ ಅಡಾಲ್ಫ್ ಹಿಟ್ಲರ್‌ನ ಉದಯ, ಲಂಡನ್‌ನ ಮಹಾ ಬೆಂಕಿ, ಮಾಜಿ ಯುಎಸ್ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆ ಮತ್ತು 9/11 ರ ಭಯೋತ್ಪಾದಕ ದಾಳಿಗಳ ಬಗ್ಗೆ ಅವರು ತಿಳಿಸಿದ್ದರು. 3797ನೇ ವರ್ಷದವರೆಗೂ ಅವರು ಭವಿಷ್ಯ ಹೇಳಿದ್ದಾರೆ ಎನ್ನಲಾಗುತ್ತದೆ.
ಹಾಗಿದ್ದರೆ ಅವರು ಈಗ 2022ಕ್ಕೆ ನುಡಿದ ಭವಿಷ್ಯವಾಣಿಗಳು ಯಾವುವು ನೋಡೋಣ. ಅವುಗಳಲ್ಲಿ ಕೆಲವಾದರೂ ಈಗಾಗಲೇ ನಿಜವಾಗಿವೆಯೇ ಎಂದೂ ತಿಳಿಯೋಣ.
2022ಕ್ಕೆ ನಾಸ್ಟ್ರಾಡಾಮಸ್ ಭವಿಷ್ಯವಾಣಿ(Nostradamus-2022 predictions)
1. ಉಲ್ಕಾಪಾತ ಮತ್ತು ಕ್ಷುದ್ರಗ್ರಹ ಮಳೆ
ಉಲ್ಕಾಪಾತವು 2021 ರಿಂದ ನಾವೆಲ್ಲರೂ ಕೇಳುತ್ತಿರುವ ವಿಷಯವಾಗಿದೆ ಮತ್ತು 2022ರಲ್ಲಿ ಇದು ನಿಜವಾಗಿಯೂ ಬಹಳಷ್ಟು ಹಾನಿಯನ್ನು ಉಂಟು ಮಾಡಬಹುದು. ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಬಹುದು ಮತ್ತು ಇದು ಭೂಕಂಪಗಳಿಗೆ ಕಾರಣವಾಗುವ ಸುನಾಮಿಯನ್ನು ಉಂಟುಮಾಡುತ್ತದೆ ಎಂದಿದ್ದಾರೆ.
Baba Vanga Prediction: ನಿಜವಾಯ್ತು 2022ರ ಕುರಿತಾಗಿ ಬಾಬಾ ವಂಗಾ ಹೇಳಿದ್ದ ಎರಡೂ ಭವಿಷ್ಯ!
2. ಹಣದುಬ್ಬರ(Inflation)
ಹಣದುಬ್ಬರವು ನಿಯಂತ್ರಣ ತಪ್ಪುತ್ತದೆ ಮತ್ತು ಯುಎಸ್ ಡಾಲರ್ ಮೌಲ್ಯವು ಕುಸಿಯುತ್ತದೆ. ಅಷ್ಟೇ ಅಲ್ಲ, ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್ ಅನ್ನು ಸ್ವತ್ತುಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಜನರು ಅದರಲ್ಲಿ ಹೂಡಿಕೆ ಮಾಡುತ್ತಾರೆ.
3. ಕೃತಕ ಬುದ್ಧಿಮತ್ತೆಯಿಂದ ಮನುಷ್ಯರ ಸ್ವಾಧೀನ
ಕಂಪ್ಯೂಟರ್‌ಗಳು ಮತ್ತು ರೋಬೋಟ್‌ಗಳು ಮನುಷ್ಯರನ್ನು ಸ್ವಾಧೀನಪಡಿಸಿಕೊಳ್ಳುತ್ತವೆ ಮತ್ತು ಜಗತ್ತನ್ನು ಆಳುತ್ತವೆ ಎಂದು ಹೇಳುವ ಸಾಕಷ್ಟು ಚಲನಚಿತ್ರಗಳನ್ನು ನಾವು ಖಂಡಿತವಾಗಿ ನೋಡಿದ್ದೇವೆ. ನಾಸ್ಟ್ರಾಡಾಮಸ್ ಕೂಡ ಬಹಳ ಹಿಂದೆಯೇ ಅದೇ ಭವಿಷ್ಯ ನುಡಿದಿದ್ದಾರೆ. 2022ರ ವೇಳೆಗೆ ಕೃತಕ ಬುದ್ಧಿಮತ್ತೆ(Artificial Intelligence)ಯು ಮಾನವ ಇಂಟರ್ಫೇಸ್ನೊಂದಿಗೆ ಕಂಪ್ಯೂಟರ್ ಅನ್ನು ಆಳಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
4. ವಿಶ್ವದಲ್ಲಿ ಹಸಿವು ಹೆಚ್ಚಳ(World Hunger Will Increase)
ಅವರ ಭವಿಷ್ಯವಾಣಿಯ ಪ್ರಕಾರ, ಸಶಸ್ತ್ರ ಸಂಘರ್ಷಗಳಿಂದಾಗಿ ಪ್ರಪಂಚದ ಹಸಿವು ಹೆಚ್ಚಾಗಬಹುದು. ಇದು ಹೆಚ್ಚಿನ ಜನಸಂಖ್ಯೆಯ ಚಲನೆಗೆ ಕಾರಣವಾಗುತ್ತದೆ. ಜೊತೆಗೆ, ಮೊದಲಿಗಿಂತ ಏಳು ಪಟ್ಟು ಹೆಚ್ಚು ಜನರು ಕಡಲತೀರಗಳಲ್ಲಿ ಕೊಚ್ಚಿ ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.
5. ಪರಮಾಣು ಬಾಂಬ್ ಸ್ಫೋಟಗೊಳ್ಳುತ್ತದೆ
ನಾಸ್ಟ್ರಾಡಾಮಸ್ ಪ್ರಕಾರ, 2022ರಲ್ಲಿ ಪರಮಾಣು ಬಾಂಬ್ ಸ್ಫೋಟಗೊಳ್ಳುತ್ತದೆ, ಇದು ಹವಾಮಾನ ಬದಲಾವಣೆಗಳಿಗೆ ಮತ್ತು ಭೂಮಿಯ ಸ್ಥಾನದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದು ಪ್ರವಾಹ ಮತ್ತು ಭೂಕಂಪಗಳಿಗೂ ಕಾರಣವಾಗುತ್ತದೆ.
ಶ್ರಾವಣ ಮಾಸದಲ್ಲಿ ಕೂದಲು ಕತ್ತರಿಸಬಾರದು, ಯಾಕೆ ತಿಳಿದಿದೆಯೇ?
ಈ ಭವಿಷ್ಯವಾಣಿಗಳ ಬಗ್ಗೆ ಹೆಚ್ಚು ಖಚಿತತೆ ಇಲ್ಲದಿದ್ದರೂ ಅವು ಖಂಡಿತವಾಗಿಯೂ ಭಯಾನಕವಾಗಿವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.