ಈ ನಾಲ್ಕು ರಾಶಿಗಳಿಗೆ 2023ರಲ್ಲಿ ರಾಹು ಕಾಟ ತಪ್ಪಿದ್ದಲ್ಲ, ಹಾಗಾದರೆ ಏನು ಮಾಡಬೇಕು?

ಹಿಮ್ಮುಖವಾಗಿ ಚಲಿಸುವ ರಾಹು ಗ್ರಹನ ಚಲನೆಯಿಂದ ಕೆಲವು ಜಾತಕರಿಗೆ, ಜನ್ಮರಾಶಿಯವರಿಗೆ ಈ ವರ್ಷ ಸಂಕಷ್ಟವಿದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹಾಗಾದರೆ ಇದರಿಂದ ಸಂಕಷ್ಟಕ್ಕೊಳಗಾಗುವ ರಾಶಿಗಳು ಯಾವುವು? ಪಾರಾಗಲು ಏನು ಮಾಡಬೇಕು?

Rahu effects these zodiac signs

ರಾಹು ಗ್ರಹದ ಚಲನೆ ಸದಾ ವಕ್ರ. ಅಂದರೆ ಅದು ಹಿಮ್ಮುಖವಾಗಿ ಚಲಿಸುತ್ತಾನೆ. ರಾಹು ಗ್ರಹ ಯಾವ ರಾಶಿಯಲ್ಲಿ ಇರುತ್ತದೆಯೋ ಆ ರಾಶಿಯ ವ್ಯಕ್ತಿಗೆ ತ್ವರಿತ ಫಲಿತಾಂಶಗಳನ್ನು ನೀಡುತ್ತಾನೆ. ಆದರೆ ಸಮಸ್ಯೆಗಳನ್ನೂ ಬೇಗನೆ ಸೃಷ್ಟಿ ಮಾಡುತ್ತಾನೆ. 2023ರಲ್ಲಿ ರಾಹು ಈ 4 ರಾಶಿಗಳ ತೊಂದರೆಗಳನ್ನು ಹೆಚ್ಚಿಸುತ್ತಾನೆ. ಅದು ಹೇಗೆ? ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣವಿಲ್ಲದ ಗ್ರಹ ರಾಹು. ಈ ರಾಹು 2023ರಲ್ಲಿ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ, ನಂತರ ಅಕ್ಟೋಬರ್​ನಲ್ಲಿ, ಮೀನ ರಾಶಿಗೆ ಹೋಗುತ್ತಾನೆ. ಈ ರೀತಿ ಸ್ಥಾನ ಬದಲಾವಣೆಯಾದಾಗ ರಾಶಿಗಳಲ್ಲಿ ಸಹ ಕೆಲ ಬದಲಾವಣೆ ಆಗುತ್ತದೆ.

ಮೇಷ (Aeris) ರಾಶಿ
ರಾಹು ಗ್ರಹವು ಅಕ್ಟೋಬರ್​ನಲ್ಲಿ ಮೇಷ ರಾಶಿಯಿಂದ 12ನೇ ಮನೆಗೆ ಸಾಗುತ್ತಾನೆ. ಆದ್ದರಿಂದ, ಈ ಸಮಯದಲ್ಲಿ ಈ ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳಿಗೆ ಈಡಾಗಬಹುದು. ಕೆಲವು ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಕೆಲವರು ಪಿತೂರಿಗಳಿಗೂ ಸಹ ಬಲಿಯಾಗಬಹುದು. ಸ್ನೇಹಿತರ ಜೊತೆ ಜಗಳಗಳು ಅಥವಾ ವಿವಾದಗಳು ಹೆಚ್ಚಾಗಬಹುದು. ಕೆಲವು ಆರೋಗ್ಯ ಸಮಸ್ಯೆಗಳು ಸಹ ಕಾಡಬಹುದು. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರಿ. ಅತಿ ವೇಗದ ಚಾಲನೆ ಬೇಡ. ಶಿವ ನಾಮ ಸ್ಮರಣೆಯನ್ನು ಮಾಡುವುದರಿಂದ ಈ ಸಂಕಷ್ಟಗಳಿಗೆ ಸ್ವಲ್ಪ ತಡೆ ಹಾಕಬಹುದು.

ವೃಷಭ (Taurus) ರಾಶಿ
ಅಕ್ಟೋಬರ್​ನಲ್ಲಿ, ರಾಹು 11ನೇ ಮನೆಯಲ್ಲಿ ಚಲಿಸುತ್ತಾನೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕು. ಸಾಲ ತೆಗೆದುಕೊಳ್ಳುವುದನ್ನ ಹಾಗೂ ನೀಡುವುದನ್ನ, ಇಲ್ಲದಿದ್ದರೆ ಹಣ ವ್ಯರ್ಥವಾಗಬಹುದು. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ. ಆದಾಯವೂ ಕಡಿಮೆಯಾಗಬಹುದು. ಹಾಗಾಗಿ ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು. ಅಲ್ಲದೆ, ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ರಾಹು ಗ್ರಹವು ಈ ಸಮಯದಲ್ಲಿ ನಿಮಗೆ ಮಾನಸಿಕ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಮಾನಸಿಕ ಸಮಸ್ಯೆಗಳು ನಿಮ್ಮ ಅಭಿವೃದ್ಧಿಗೆ ಕಂಟಕವಾಗಬಹುದು. ದುರ್ಗಾ ದೇವಿಯ ಮಂತ್ರಜಪದಿಂದ ಸಂಕಷ್ಟಗಳನ್ನು ನಿಯಂತ್ರಣಕ್ಕೆ ತರಬಹುದು.

ವಿವಾಹಿತ ಮಹಿಳೆಯರು ಈ ಮೇಕಪ್ ಐಟಂಗಳನ್ನು ಹಂಚಿಕೊಂಡ್ರೆ ಸಂಬಂಧದಲ್ಲಿ ಹೆಚ್ಚುತ್ತೆ ಸಮಸ್ಯೆ!

ಮೀನ (Pisces) ರಾಶಿ
ಅಕ್ಟೋಬರ್‌ನಲ್ಲಿ, ರಾಹು ಗ್ರಹ ನಿಮ್ಮ ಆರೋಗ್ಯದ ಮೇಲೆ ಕೆಂಗಣ್ಣು ಹಾಕಬಹುದು. ಈ ಬಗ್ಗೆ ವಿಶೇಷ ಗಮನ, ಕಾಳಜಿ ಇರಲಿ. ಸಾಲ ತೆಗೆದುಕೊಳ್ಳುವುದನ್ನ ಹಾಗೂ ನೀಡುವುದನ್ನ ನಿಯಂತ್ರಿಸಿ, ಇಲ್ಲದಿದ್ದರೆ ಹಣ ವ್ಯರ್ಥವಾಗಬಹುದು. ಸಾಲ ಹೆಚ್ಚಾದೀತು ಹಾಗೂ ಅದನ್ನು ಮರು ಪಾವತಿಸಲು ಕಷ್ಟವಾದೀತು. ಇಂಥಾ ಸಂಕಷ್ಟದ ಸಂದರ್ಭದಲ್ಲಿ ನಿಜ ಸ್ನೇಹಿತರ್ಯಾರು ಗೊತ್ತಾಗುತ್ತದೆ. ಇದರಿಂದ ಮಾನಸಿಕ ಆಘಾತ ಆಗಬಹುದು. ಆಂಜನೇಯನ ದರ್ಶನ ಹಾಗೂ ಹನುಮಾನ್ ಚಾಲೀಸಾ ಸದಾ ಪಠಿಸುವುದರಿಂದ ರಾಹು ಗ್ರಹದ ಕಾಟವನ್ನು ಕೊಂಚ ತಹಬಂದಿಗೆ ತರಬಹುದು.

ಮಕರ (Capricorn) ರಾಶಿ
ಈ ರಾಶಿಯ ನಾಲ್ಕನೇ ಮನೆಯಲ್ಲಿ ರಾಹು ಇರುತ್ತದೆ, ಅಕ್ಟೋಬರ್‌ನಲ್ಲಿ ಮೂರನೇ ಸ್ಥಾನಕ್ಕೆ ತಲುಪುತ್ತಾನೆ. ಈ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕಡೆಗೆ ಒಂದು ಕಣ್ಣು ಇಟ್ಟಿರಿ. ಪೋಷಕರ ಆರೋಗ್ಯದ ಕಾಳಜಿ ಇರಲಿ. ಸಹೋದರರೊಂದಿಗಿನ ಸಂಬಂಧಗಳು ಹದಗೆಡಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಪತಿ ಪತ್ನಿಯ ಮಧ್ಯೆ ಅಂತರ ಹೆಚ್ಚಾಗಬಹುದು. ಸ್ನೇಹಿತರು ದೂರವಾಗಬಹುದು. ಕೆಲವೊಮ್ಮೆ ನಿಮ್ಮ ಮಾನಸಿಕ ಒತ್ತಡದ ಪರಿಣಾಮ ಮನೆಯವರನ್ನೂ ಧೃತಿಗೆಡಿಸಬಹುದು. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿದರೆ ಸಂಕಷ್ಟಗಳು ನಿಯಂತ್ರಣದಲ್ಲಿರುತ್ತವೆ.

Adventures ಸಂಗಾತಿಯ ಜೊತೆಗೆ ಡೇಟಿಂಗ್ ಹೋಗುವುದೆಂದರೆ ಇವರಿಗೆ ಇಷ್ಟ!

 

Latest Videos
Follow Us:
Download App:
  • android
  • ios