Asianet Suvarna News Asianet Suvarna News

Adventures ಸಂಗಾತಿಯ ಜೊತೆಗೆ ಡೇಟಿಂಗ್ ಹೋಗುವುದೆಂದರೆ ಇವರಿಗೆ ಇಷ್ಟ!

ಡೇಟಿಂಗ್ ಹೋದಾಗ ಸಂಗಾತಿಯ ಆಯ್ಕೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಗುಣಗಳನ್ನು ಹುಡುಕುತ್ತಾರೆ. ಇಲ್ಲಿ ನೀಡಲಾಗಿರುವ ರಾಶಿಯ ಜನರು ಸಾಹಸವನ್ನು ಇಷ್ಟ ಪಡುವ ಸಂಗಾತಿಗಾಗಿ ಹುಡುಕುತ್ತಾರೆ...

These zodiacs love to date with adventures partner
Author
First Published Dec 28, 2022, 11:13 AM IST

ಕೆಲವು ಜನರು ಸ್ವಾಭಾವಿಕತೆ ಮತ್ತು ಸಾಹಸದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಅದರ ಕುರಿತಾಗಿ ಬರುವ ಎಲ್ಲಾ ಅವಕಾಶಗಳನ್ನು (Chances) ಬಳಸಿಕೊಳ್ಳುವ ಮೂಲಕ ಜೀವನದ ಕುರಿತು ಹೆಚ್ಚು ಉತ್ಸುಕರಾಗಿರುತ್ತಾರೆ. ಇದರಂತೆಯೇ, ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ಸಾಹಸಮಯ ವ್ಯಕ್ತಿತ್ವವನ್ನು (Personality) ತಮ್ಮ ಡೇಟಿಂಗ್ ಜೀವನದಲ್ಲಿ ಪ್ರತಿಬಿಂಬಿಸಲು ಬಯಸುತ್ತಾರೆ ಮತ್ತು ತಮ್ಮ ಸಂಗಾತಿಯಾಗಿ ಬರುವ ವ್ಯಕ್ತಿಯಲ್ಲಿ ಕೂಡಾ ಅದೇ ಗುಣಮಟ್ಟವನ್ನು (Quality) ನಿರೀಕ್ಷಿಸುತ್ತಾರೆ. ತಮ್ಮ ಮುಂದಿನ ಜೀವನದಲ್ಲಿ ಇವರೊಂದಿಗೆ ಸಾಹಸದ ಜಗತ್ತಿನಲ್ಲಿ ತೊಡಗಿಸಿಕೊಳ್ಳುಲು ಭಯವಿಲ್ಲದ ಸಂಗಾತಿಯನ್ನು ಬಯಸುತ್ತಾರೆ. ಅವರನ್ನು ಆಕರ್ಷಿಸುವ ಮತ್ತು ಅವರೊಂದಿಗೆ ಜೀವನದಲ್ಲಿ ಅಪಾಯಗಳಂತಹ ಚಾಲೆಂಜ್ (Challenge) ಅನ್ನು ತೆಗೆದುಕೊಳ್ಳಲು ಸಿದ್ಧರಿರುವ ಪಾಲುದಾರರನ್ನು (Partner) ಹುಡುಕುತ್ತಾರೆ..

ಮೇಷ ರಾಶಿ (Aries)
 ಮೇಷ ರಾಶಿಯ ಜನರು ಸಾಹಸಮಯ (Adventure) ಸಂಗಾತಿಯನ್ನು ಹುಡುಕುತ್ತಾರೆ. ಕ್ರಿಯಾಶೀಲರಾಗಿರುವವರು (Creative), ಸವಾಲಿನವರು ಮತ್ತು ಹೊಸ ವಿಷಯಗಳನ್ನು ಅನ್ವೇಷಿಸುವ ಜನರು ಮೇಷ ರಾಶಿಯವರ ಗಮನವನ್ನು (Attract) ಸೆಳೆಯುವ ಸಾಧ್ಯತೆ ಹೆಚ್ಚು. ಈ ಸಾಹಸಮಯ ಚಿಹ್ನೆಯು ಹೊಸ ವಿಷಯಗಳನ್ನು ಅನುಭವಿಸುವುದನ್ನು ಹೆಚ್ಚು ಆನಂದಿಸುತ್ತದೆ, ಅದು ಒಳ್ಳೆಯ ಉದ್ದೇಶಕ್ಕಾಗಿ ಓಡುತ್ತಿರುವುದಾಗುರಲಿ ಅಥವಾ ದೂರದ ಸ್ಥಳಕ್ಕೆ ರೋಮ್ಯಾಂಟಿಕ್ (Romantic) ಗೆಟ್‌ಅವೇ ತೆಗೆದುಕೊಳ್ಳುತ್ತಿರುವುದಿರಲಿ ಒಟ್ಟಿನಲ್ಲಿ ಇವರು ರೋಮಾಂಚನಕಾರಿ (Exciting) ಸನ್ನಿವೇಶಗಳನ್ನು ಬಹಳ ಇಷ್ಟ ಪಡುತ್ತಾರೆ.

ಇದನ್ನೂ ಓದಿ: ಡೇಟಿಂಗ್‌ಗೂ ತಡವಾಗಿ ಹೋಗೋ ರಾಶಿಗಳಿವು

ಮಿಥುನ ರಾಶಿ (Gemini)
 ನಿಮ್ಮ ಮತ್ತು ನಿಮ್ಮ ಪ್ರಿಯತಮೆಯ ನಡುವಿನ ಸಂಪರ್ಕವು (Connection) ಬಲಗೊಳ್ಳುವುದಕ್ಕೆ ಇಬ್ಬರೂ ಒಟ್ಟಿಗೆ ಸಾಹಸಕ್ಕೆ ಹೋಗುವುದರಿಂದ ನೀವಿಬ್ಬರೂ ದಂಪತಿಗಳಾಗಿ ಮತ್ತು ವ್ಯಕ್ತಿಗಳಾಗಿ ಬೆಳೆಯುತ್ತೀರಿ. ಹಾಗೂ ನಿಮ್ಮ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ (Strong) ಎಂಬುದು ಮಿಥುನ ರಾಶಿಯ ಜನರ ನಂಬಿಕೆ (Belief). ಅವರು ರೋಮಾಂಚಕವಾದದ್ದನ್ನು ಹಂಚಿಕೊಳ್ಳಲು ಮತ್ತು ತಮ್ಮ ಒಡನಾಡಿಯೊಂದಿಗೆ ಹೊಸ ವಿಷಯಗಳನ್ನು ಪ್ರಯತ್ನಿಸಲು ಬಯಸುತ್ತಾರೆ. ಹೊಸ ವಿಷಯಗಳನ್ನು ಕಲಿಯಲು (Learn) ಮತ್ತು ಅವರ ಹಂಚಿದ ಹವ್ಯಾಸಗಳೊಂದಿಗೆ (Habbit) ಸ್ಥಿರವಾಗಿರುವುದನ್ನು ಆನಂದಿಸುವ ಸಂಗಾತಿಯನ್ನು ಇವರು ಗೌರವಿಸುತ್ತಾರೆ (Respect).

ಸಿಂಹ ರಾಶಿ (Leo)
ಸಿಂಹ ರಾಶಿಯೊಂದಿಗೆ, ಜೀವನವು (Life) ಎಂದಿಗೂ ಮಂದವಾಗಿರುವುದಿಲ್ಲ. ಆದ್ದರಿಂದ, ಅವರಿಗೆ ಸಂತೋಷದ ಜೀವನ ಸಾಗಿಸಲು ಉತ್ಸಾಹಭರಿತ, ಧೈರ್ಯಶಾಲಿ ಸಂಗಾತಿಯ ಅಗತ್ಯವಿರುತ್ತದೆ. ಡೇಟಿಂಗ್ ಮಾಡುವಾಗ, ಅವರು ತಮ್ಮ ಅನ್ವೇಷಣೆಯಲ್ಲಿ ಅವರನ್ನು ಪ್ರೋತ್ಸಾಹಿಸುವ (Supportive) ಪಾಲುದಾರರನ್ನು ಹುಡುಕುತ್ತಾರೆ ಮತ್ತು ಅವರನ್ನು ತಡೆಹಿಡಿಯುವುದಿಲ್ಲ (Stop), ಅವರು ತಮ್ಮ ಸಾಹಸಗಳನ್ನು ಅನುಸರಿಸುವಾಗ (Follow) ಅವರೊಂದಿಗೆ ನಿಲ್ಲಲು ಆದ್ಯತೆ ನೀಡುತ್ತಾರೆ. ಈ ಚಿಹ್ನೆಯು ಒಟ್ಟಿಗೆ ಸ್ಪಾಗೆ ಹೋಗುವುದು, ಹೊಸ ಸ್ಥಳಗಳನ್ನು ಅನ್ವೇಷಿಸುವುದು (Search) ಮತ್ತು ಹೊಸ ಫ್ಯಾಶನ್ ತಿನಿಸುಗಳಲ್ಲಿ ಔತಣವನ್ನು ಆನಂದಿಸುವ ಡೇಟಿಂಗ್ (Dating) ಅನ್ನು ಬಯಸುತ್ತಾರೆ.

ಇದನ್ನೂ ಓದಿ: Zodiac Signs: ಆಫೀಸ್ ಅಫೇರ್ಸ್‌ನಿಂದ ಈ ರಾಶಿಯ ಜನ ದೂರವೇ ಇರ್ತಾರೆ

ಧನು ರಾಶಿ (Sagittarius)
ಡೇಟಿಂಗ್ ವಿಷಯಕ್ಕೆ ಬಂದಾಗ, ಧನು ರಾಶಿಯವರು ಸಾಕಷ್ಟು ಮುಕ್ತ ಮನಸ್ಸಿನವರು (Open Minded). ಹೊಸ ದೃಷ್ಟಿಕೋನದಿಂದ ಜಗತ್ತನ್ನು ನೋಡಲು ಅವರನ್ನು ಮುಂದೆ ದೂಡುವ ಮತ್ತು ಅವರ ಧೈರ್ಯಶಾಲಿ (Daring) ಪ್ರಯತ್ನಗಳಲ್ಲಿ ಅವರನ್ನು ಪ್ರೋತ್ಸಾಹಿಸುವ ಯಾರೊಂದಿಗಾದರೂ ಇರಲು ಅವರು ಬಯಸುತ್ತಾರೆ. ಅವರು ತಮ್ಮ ಸಂಗಾತಿಯೊಂದಿಗೆ ಪ್ರವಾಸವನ್ನು ಮಾಡಲು ಬಯಸುತ್ತಾರೆ. ಹೊಸ (New) ವಿಷಯಗಳ ಅನ್ವೇಷಣೆ ಅಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ (Energy) ಇರುತ್ತದೆ.

ತಮ್ಮ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಇಲ್ಲಿ ನೀಡಿರುವ ರಾಶಿಗಳ ಜನರು ಅಡ್ವೆಂಚರಸ್ ಆಗಿರುವ ಸಂಗಾತಿಯನ್ನು ಬಯಸುತ್ತಾರೆ..

Follow Us:
Download App:
  • android
  • ios