Tumakuru: ಮಳೆ - ಬೆಳೆಯ ಭವಿಷ್ಯ ತಿಳಿಸುವ ಮೊಲ!

ಸಂಕ್ರಾಂತಿ ಬಳಿಕ ವಿಶಿಷ್ಟ ಆಚರಣೆ
ಸೀಗೇಬಾಗಿಯಲ್ಲೊಂದು ವಿಶಿಷ್ಠ ಆಚರಣೆ
ಮೊಲದ ಚಲನೆಯಿಂದ ಭವಿಷ್ಯ ತಿಳಿಯೋ ಗ್ರಾಮಸ್ಥರು

Rabbit predicts yearly horoscope in Tumakur during Sankranti skr

ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ಗೊರವಯ್ಯನ ಭವಿಷ್ಯ ಹಾಗೂ ಕೋಡಿಮಠದ ಭವಿಷ್ಯ ನುಡಿಗಳು ರಾಜ್ಯದಲ್ಲಿ ಸಾಕಷ್ಟು ಜನಜನಿತವಾಗಿವೆ. ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಬಳಿಕ ಮೊಲದ ಮೂಲಕ ಮುಂದಿನ  ಭವಿಷ್ಯ ಅಂದಾಜಿಸುವ ಪದ್ಧತಿಯೊಂದು ಚಾಲ್ತಿಯಲ್ಲಿದೆ. 

ವಿಶೇಷವೆನಿಸಬಹುದು. ಆದರೆ, ಇದು ಬಹಳಷ್ಟು ವರ್ಷಗಳಿಂದ ನಡೆದು ಬಂದಿದೆ. 

ಸಂಕ್ರಾಂತಿ ಬಳಿಕ ಕಾಡಿನಿಂದ ಹಿಡಿದು ತಂದ ಮೊಲದ ಕಿವಿಗೆ ಓಲೆ ಹಾಕಿ ಬಳಿಕ ಪೂಜೆ ಸಲ್ಲಿಸಿ ಮತ್ತೆ ಕಾಡಿಗೆ ಬಿಡುವ ಮೂಲಕ ಗ್ರಾಮಸ್ಥರು ರಾಜ್ಯದ ಮಳೆ- ಬೆಳೆ  ಭವಿಷ್ಯವನ್ನು ಅಂದಾಜಿಸುತ್ತಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಸೀಗೆಬಾಗಿ ಗ್ರಾಮಸ್ಥರು ಇನ್ನೂ ಈ ಆಚರಣೆಯನ್ನು ನಡೆಸಿಕೊಂಡು ಬರ್ತಾ ಇದ್ದಾರೆ. 

ಬೆಳ್‌ಬೆಳ್ಗೆ ಈ ರೀತಿ ಗೋಸುಂಬೆ ಕಾಣಿಸಿಕೊಂಡ್ರೆ ಹಣ ಕೈಗೆ ಬರುತ್ತಂತ ಅರ್ಥ!

ವರ್ಷದ ಮೊದಲ ಹಬ್ಬವಾಗಿ ಆಚರಿಸುವ ಈ ಹಬ್ಬಕ್ಕೆ ಮೂರು ದಿನದ ಮೊದಲೇ ಗ್ರಾಮದ ಕೆಲವರು ಕಾಡಿಗೆ ಹೋಗಿ ಮೊಲವನ್ನು ಜೀವಂತವಾಗಿ ಹಿಡಿದು ತರುತ್ತಾರೆ. ಹೀಗೆ ತಂದ ಮೊಲದ ಕಿವಿಗೆ ಓಲೆ ಹಾಕುತ್ತಾರೆ. ಸಂಕ್ರಾಂತಿ ಹಬ್ಬದ ದಿನ  ವಿಶೇಷವಾಗಿ ಪೂಜಿಸಿ ಜೋಪಾನವಾಗಿ ಹಿಡಿದಿಟ್ಟಿರುತ್ತಾರೆ. ಹಬ್ಬದ ಮರುದಿನ ಸಂಜೆ ವರದರಾಜಸ್ವಾಮಿ ದೇಗುಲದ ಆವರಣದಿಂದ ವರದರಾಜಸ್ವಾಮಿ ಹಾಗೂ ವಿವಿಧ ದೇವರುಗಳಿಗೆ ಪೂಜೆ ಸಲ್ಲಿಸಿ ನೂರಾರು ಮಂದಿ ಸಮ್ಮುಖದಲ್ಲಿ ಮೊಲಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಿವಿಗೆ ಓಲೆ ಹಾಕಿದ್ದ ಮೊಲವನ್ನು ಪುನಃ ಕಾಡಿಗೆ ಬಿಡುತ್ತಾರೆ. ಅದು ಯಾವ ದಿಕ್ಕಿಗೆ ಓಡುತ್ತದೆಯೋ ಆ ದಿಕ್ಕಿನಲ್ಲಿ ಉತ್ತಮ ಬೆಳೆಯಾಗುತ್ತದೆ ಎಂಬ ಪ್ರತೀತಿ ಗ್ರಾಮಸ್ಥರಲ್ಲಿದೆ. ಇದೊಂದು ಪುಟ್ಟ ಜಾತ್ರೆಯ ರೀತಿ ನಡೆಯುತ್ತಿದ್ದು ಅನಾದಿ ಕಾಲದಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ.

Latest Videos
Follow Us:
Download App:
  • android
  • ios