Asianet Suvarna News Asianet Suvarna News

Lunar Eclipse 2022: ಚಂದ್ರ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೀಗೆ ಮಾಡಬಾರದು

Lunar Eclipse 2022: ಈ ಬಾರಿ ಮೇ 16ರಂದು ಸಂಭವಿಸಲಿರುವ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಿದ್ದರೂ ಗರ್ಭಿಣಿಯರು ಜಾಗರೂಕರಾಗಿರುವುದು ಉತ್ತಮ. ಗ್ರಹಣದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸಿದರೆ, ಮುಂದೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಂತೆ ಆಗುತ್ತದೆ. ಹಾಗಾಗಿ ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಯಾವ ಕ್ರಮವನ್ನು ಅನುಸರಿಸಬೇಕು ಎಂಬ ಬಗ್ಗೆ ನೋಡೋಣ... 

Pregnant women should not do this during a lunar eclipse 2022
Author
Bangalore, First Published May 13, 2022, 6:19 PM IST

ಮೇ ತಿಂಗಳ 16ರಂದು ಚಂದ್ರಗ್ರಹಣವು ಗೋಚಾರವಾಗುತ್ತಿದೆ. ಆದರೆ ಈ ಗ್ರಹಣವು ಭಾರತದಲ್ಲಿ (India) ಗೋಚಾರ ಆಗುವುದಿಲ್ಲ ಎನ್ನುವುದು ಸಮಾಧಾನಕರ ವಿಷಯವಾಗಿದೆ. ಇದರಿಂದ ಭಾರತದಲ್ಲಿ ಇರುವವರಿಗೆ ಸೂತಕ ಇರುವುದಿಲ್ಲ. ಮೇ 15 ಮತ್ತು 16ರಂದು ಪೂರ್ಣ ಚಂದ್ರಗ್ರಹಣವಾಗಲಿದ್ದು, ಸೂರ್ಯ, ಭೂಮಿ ಮತ್ತು ಚಂದ್ರ ಸಮಾನ ರೇಖೆಯಲ್ಲಿ ಕಾಣಿಸಿಕೊಳ್ಳುವುದರಿಂದ ಸೂರ್ಯನ ಬೆಳಕು ನೇರವಾಗಿ ಚಂದ್ರನ ಮೇಲೆ ಬೀಳಲಿದೆ. ಹೀಗಾಗಿ ಚಂದ್ರ ಕೆಂಪು ಬಣ್ಣದಲ್ಲಿ ಕಾಣಲಿದ್ದು, ಇದಕ್ಕೆ ಬ್ಲಡ್ ಮೂನ್ ಎಂದು ಸಹ ಕರೆಯುತ್ತಾರೆ. 

ಚಂದ್ರ ಗ್ರಹಣವು ಒಟ್ಟಾರೆಯಾಗಿ ಸುಮಾರು 5 ಗಂಟೆ 20 ನಿಮಿಷಗಳ ಕಾಲ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮೇ 15ರ ರಾತ್ರಿ 9.40ಕ್ಕೆ ಗ್ರಹಣ ಆರಂಭವಾಗಿ ಮೇ 16ರ ಬೆಳಗ್ಗೆ 12.20ರ ವರೆಗೆ ಇರಲಿದೆ. ರಾತ್ರಿ 10.23ರ ಸಮಯದಲ್ಲಿ ಗ್ರಹಣವು ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ. ಆದರೆ, ರಾಶಿ ಚಕ್ರಗಳ ಮೇಲೆ ಇದರ ಪ್ರಭಾವ ಆಗಲಿದೆ ಎಂದು ಜ್ಯೋತಿಷ್ಯವು (Astrology) ಹೇಳುತ್ತದೆ. 

ವರ್ಷದ ಮೊದಲ ಚಂದ್ರಗ್ರಹಣವು ವೃಶ್ಚಿಕ ರಾಶಿಯಲ್ಲಿ (Scorpio) ಆಗಲಿದ್ದು, ಈ ರಾಶಿಯ ವ್ಯಕ್ತಿಗಳು ಜಾಗ್ರತೆಯಿಂದ ಇರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕಾರಣ, ಈ ಸಮಯದಲ್ಲಿ ನಕಾರಾತ್ಮಕ (Negative) ಪರಿಣಾಮವು ಈ ರಾಶಿಚಕ್ರದವರ ಮೇಲಿರುತ್ತದೆ. ಹಾಗೇ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಸಹ ಬಹಳ ಜಾಗ್ರತೆ ವಹಿಸಬೇಕು. ಗ್ರಹಣ ಗೋಚರಿಸುವ ಸಂದರ್ಭದಲ್ಲಿ ನಕಾರಾತ್ಮಕ (Negative) ಪ್ರಭಾವಗಳು (Effects) ಹೆಚ್ಚಾಗಿ ಇರುವುದರಿಂದ ಗರ್ಭಣಿಯಾದವರಿಗೆ ಹಾನಿ ಆಗುವ ಸಂಭವ ಸಹ ಇರುತ್ತದೆ. ಭಾರತದಲ್ಲಿ ಗ್ರಹಣ ಗೋಚಾರ ಆಗದಿದ್ದರೂ ಗರ್ಭಿಣಿಯರು ಸ್ವಲ್ಪ ಮುಂಜಾಗ್ರತೆ ವಹಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ಕಾಳಜಿಯನ್ನು (Care) ವಹಿಸಿಕೊಳ್ಳಬೇಕು. ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಯಾವ ಯಾವ ಮುನ್ನೆಚ್ಚರಿಕೆ (Precautions) ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನೋಡೋಣ... 

ಗ್ರಹಣದ ಸಮಯದಲ್ಲಿ ಗಾಳಿ, ಕಿರಣಗಳು (Defected rays) ಗರ್ಭದಲ್ಲಿರುವ (Womb) ಶಿಶುವಿನ (Infant) ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರುತ್ತವೆ. ಹೀಗೆ ಆಗುವುದರಿಂದ ಶಿಶುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ಪ್ರಭಾವ ಭೀರುವ ಸಾಧ್ಯತೆ ಸಹ ಇರಲಿದೆ. 

- ಗ್ರಹಣದ ಸಮಯದಲ್ಲಿ ಗರ್ಭಿಣಿಯಾದವರು ಹರಿತ (Sharp) ವಸ್ತುಗಳಾದ ಚಾಕು, ಚೂರಿ, ಪಿನ್ ಮತ್ತು ಕತ್ತಿ ಇತ್ಯಾದಿಗಳಿಂದ ದೂರ ಇರಬೇಕು. ಈ ಸಂದರ್ಭದಲ್ಲಿ ಗರ್ಭಿಣಿಯ ಪತಿ (Husband) ಕೂಡಾ ಅಷ್ಟೇ ಜಾಗ್ರತೆಯನ್ನು ವಹಿಸಬೇಕು. ಆತ ಕೂಡ  ಈ ವಸ್ತುಗಳನ್ನು ಬಳಸಬಾರದು. ಇವುಗಳನ್ನು ಬಳಸಿದರೆ ಶಿಶುವಿನ ಅಂಗಾಂಗಳು ಊನವಾಗುವ ಸಾಧ್ಯತೆ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

- ಗ್ರಹಣದ ವೇಳೆ ಗರ್ಭಿಣಿಯರು ಹೊರಗಡೆ ಸಂಚರಿಸುವುದು ಒಳ್ಳೆಯದಲ್ಲ. ಅವರು ಆ ವೇಳೆ ಮನೆಯಲ್ಲೇ ಇರಬೇಕು. ಹೊರಗೆ ಸಂಚಾರ ಮಾಡುವುದರಿಂದ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಸಹ ಹೆಚ್ಚಿದೆ. ಗ್ರಹಣದ ಸಮಯದಲ್ಲಿ ಮಲಗುವುದು ನಿಷಿದ್ಧ ಎಂದು ಹೇಳುತ್ತಾರಾದರೂ ಗರ್ಭಿಣಿಯರಿಗೆ ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಅವರು ಈ ಸಮಯದಲ್ಲಿ ಮಲಗಬಹುದು. ಇನ್ನು ದೇವರನ್ನು ಧ್ಯಾನಿಸಬಹುದಾಗಿದ್ದು, ಮಾಡಲು ಸಾಧ್ಯವಿದ್ದವರು ಧ್ಯಾನಿಸಬಹುದು. 

ಇದನ್ನು ಓದಿ : Vastu Tips: ಆರ್ಥಿಕ ಮುಗ್ಗಟ್ಟು, ಪ್ರಗತಿ ಕಾಣದಿರಲು ಇವೇ ಕಾರಣ!

- ಗರ್ಭಿಣಿಯರು ಗ್ರಹಣವನ್ನು ವೀಕ್ಷಿಸದಿರುವುದು ಉತ್ತಮ. ನಕಾರಾತ್ಮಕ (Negativity) ಪ್ರಭಾವಗಳು ಉಂಟಾಗುವುದರಿಂದ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಇರಲಿದೆ. ಇದು ಗರ್ಭದಲ್ಲಿನ ಶಿಶುವಿನ ಮೇಲೂ ಪ್ರಭಾವ ಆಗಬಹುದು. ಅಂದರೆ ಶಿಶುವಿಗೆ ಚರ್ಮದ ತೊಂದರೆಗಳು (Skin problem) ಆಗುವ ಸಂಭವವೂ ಇರುತ್ತದೆ. ಗ್ರಹಣ ಅಂತ್ಯವಾದ ನಂತರ ಗರ್ಭಿಣಿಯರು ಸ್ನಾನ ಮಾಡಿ, ದೇವರಿಗೆ ತುಪ್ಪದ ದೀಪ ಹಚ್ಚಬೇಕು. 

- ಗ್ರಹಣದ ಸಮಯ ಇಲ್ಲವೇ ಗ್ರಹಣ ಪೂರ್ಣವಾದ ಸಂದರ್ಭದಲ್ಲಿ ಗರ್ಭಿಣಿಯರು ಆಹಾರ ಸೇವಿಸಲು ಬಯಸಿದರೆ ಆಹಾರಕ್ಕೆ ತುಳಸಿ ಎಲೆಯನ್ನು (Tulsi leaves) ಹಾಕಿ ಸೇವಿಸುವುದು ಒಳ್ಳೆಯದು. ತುಳಸಿಗೆ ನಕಾರಾತ್ಮಕ ಶಕ್ತಿಯನ್ನು ತಡೆಯುವ ಗುಣವಿದೆ. ಜೊತೆಗೆ ಆಹಾರವೂ ಶುದ್ಧವಾಗಿ ಸೇವನೆಗೆ ಯೋಗ್ಯವಾಗುತ್ತದೆ. 

ಇದನ್ನು ಓದಿ : ಶುಕ್ರ ಗೋಚಾರದಿಂದ ಈ ರಾಶಿಯವರಿಗೆ ಶುಭವೋ ಶುಭ..

- ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯಾದವರು ದೇವರ ಧಾನ್ಯ, ಸ್ತೋತ್ರಗಳ ಪಠಣೆಯನ್ನು (Chanting) ಮಾಡುತ್ತಿರಬೇಕು. ಇದರಿಂದ ಅವರಲ್ಲಿ ಧನಾತ್ಮಕ ಚಿಂತನೆಯು ಹೆಚ್ಚುವುದಲ್ಲದೆ, ಯಾವುದೇ ರೀತಿಯಾದಂತಹ ನಕಾರಾತ್ಮಕ ಚಿಂತನೆಯು ಬಾರದು. 

Follow Us:
Download App:
  • android
  • ios