ಸಂಖ್ಯೆ 9ರ ಸ್ವಾರಸ್ಯ; ಆಂಜನೇಯನನ್ನು ನಂಬಿದ್ರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ
ತಾರೀಖು 9, 18, 27ರಂದು ಜನಿಸಿದವರ ಸಂಖ್ಯೆ 9 ಆಗಿರಲಿದೆ. ಈ ಸಂಖ್ಯೆಯಂದು ಜನಿಸಿದವರ ಗುಣಾವಗುಣಗಳೇನು, ಅವರು ಕೈಗೊಳ್ಳಬೇಕಾದ ಪರಿಹಾರಗಳೇನು ನೋಡೋಣ.
ನಾವು ತಾಯಿಯ ಗರ್ಭದಲ್ಲಿದ್ದಿದ್ದು ನವಮಾಸ, ನವರಾತ್ರಿ ಇರುವುದು 9 ದಿನಗಳ ಕಾಲ, ದುರ್ಗೆಯ ಅವತಾರಗಳು 9, ಗ್ರಹಗಳ ಸಂಖ್ಯೆ 9, 108 ಮಂತ್ರಗಳು 9 ವರ್ಷದ ಸೈಕಲ್‌ನಲ್ಲಿ ಬರುತ್ತವೆ..
ಹೀಗೆ ಒಂಬತ್ತು ಎಂಬ ಪದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ, ಆಧ್ಯಾತ್ಮದಲ್ಲಿ, ಸಂಖ್ಯಾಶಾಸ್ತ್ರದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಸಂಖ್ಯೆ 9 ಹೊಸ ಹುಟ್ಟನ್ನೂ, ಆಧ್ಯಾತ್ಮವನ್ನೂ ಹಾಗೂ ಕ್ರಾಂತಿಯನ್ನೂ ಪ್ರತಿನಿಧಿಸುತ್ತದೆ. ಸಂಖ್ಯೆ 9ಕ್ಕೆ ಅಧಿಪತಿ ಆಂಜನೇಯನಾಗಿದ್ದಾನೆ ಹಾಗೂ ಗ್ರಹದಲ್ಲಿ ಮಂಗಳ ಗ್ರಹ ಇದನ್ನು ಆಳುತ್ತದೆ. ಮಂಗಳವಾರವು ಸಂಖ್ಯೆ 9ಕ್ಕೆ ಸಂಬಂಧಿಸಿದ ದಿನವಾಗಿದೆ. ತಾರೀಖು 9, 18, 27ರಂದು ಜನಿಸಿದವರ ಸಂಖ್ಯೆ 9 ಆಗಿರಲಿದೆ. 9ಕ್ಕೆ ಎಷ್ಟನ್ನೇ ಸೇರಿಸಿದರೂ, ಅದನ್ನು ಜೋಡಿಸಿದಾಗ ಸಂಖ್ಯೆ ಬರುವ ಸಂಖ್ಯೆ ಮೂಲ ಸಂಖ್ಯೆಯೇ ಆಗಲಿದೆ. ಅಂದರೆ 9ರ ಜೊತೆ ಸೇರುವ ಸಂಖ್ಯೆಯ ಮೂಲರೂಪ ಕಳೆದುಕೊಳ್ಳುವುದಿಲ್ಲ. ಉದಾಹರಣೆಗೆ 9+5= 14. 1+4 ಅಂದರೆ ಮತ್ತೆ 5 ಆಗಲಿದೆ. ಇದೇ ಕಾರಣಕ್ಕೆ 9ನ್ನು ಸಂಪೂರ್ಣ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ.
ಸಂಖ್ಯೆ 9ರ ಧನಾತ್ಮಕ ಅಂಶಗಳು
9 ಸಂಖ್ಯೆಯೊಂದಿಗೆ ಸಂಬಂಧ ಹೊಂದಿರುವ ಜನರು ಹೆಚ್ಚು ರೊಮ್ಯಾಂಟಿಕ್(romantic) ಆಗಿರುತ್ತಾರೆ. ಅಲ್ಲದೆ, ಅವರು ಸಿಕ್ಕಾಪಟ್ಟೆ ದೇಶಪ್ರೇಮ(patriotic) ಹೊಂದಿರುತ್ತಾರೆ. ಸಾಹಸ ಪ್ರವೃತ್ತಿ ಹೊಂದಿರುವ ಅವರು ಎಲ್ಲೆಡೆ ಸಾಹಸ ಕ್ರೀಡೆಗಳನ್ನು, ಹವ್ಯಾಸಗಳನ್ನು ಅರಸಿ ಹೋಗುತ್ತಾರೆ.
ತಮ್ಮ ವೃತ್ತಿಜೀವನವನ್ನೂ, ವೈಯಕ್ತಿಕ ಜವಾಬ್ದಾರಿಗಳನ್ನೂ(personal responsibilities) ಸಮರ್ಥವಾಗಿ ನಿಭಾಯಿಸುವ ಛಾತಿ ಇವರಲ್ಲಿರುತ್ತದೆ. 9 ಸಂಖ್ಯೆಯ ಜನರು ಬಹಳ ಪ್ರಾಮಾಣಿಕರೂ, ನಿಷ್ಠಾವಂತರೂ ಆಗಿದ್ದು, ಸುಳ್ಳುಗಳು ಹಾಗೂ ತೋರಿಕೆಯ ಗುಣಗಳನ್ನು ಇವರು ಇಷ್ಟ ಪಡುವುದಿಲ್ಲ. ಅಂಥ ಸ್ವಭಾವದ ವ್ಯಕ್ತಿಗಳಿಂದ ದೂರ ಉಳಿಯಲು ಬಯಸುತ್ತಾರೆ.
ಹೊಸ ಜನರೊಂದಿಗೆ ಸ್ನೇಹಪರರಾಗಿ ವರ್ತಿಸುವ ಇವರು, ಬಹಳ ಪ್ರೀತಿಯ, ಕಾಳಜಿಯುಳ್ಳ ಸ್ವಭಾವ ಹೊಂದಿರುತ್ತಾರೆ. ತಮ್ಮ ಸ್ನೇಹಿತರು ಹಾಗೂ ಆಪ್ತರನ್ನು ತುಂಬಾ ಪ್ರೀತಿಸುತ್ತಾರೆ. ಇವರಲ್ಲಿ ಆರನೆಯ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತದೆ. ಕ್ರೀಡೆಗಳಲ್ಲಿ ಇವರ ಆಸಕ್ತಿ ಹೆಚ್ಚು. ತಮ್ಮನ್ನು ತಾವು ಆಟಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ನೋಡಲು ಬಯಸುತ್ತಾರೆ.
9 ಸಂಖ್ಯೆಯೊಂದಿಗೆ ಸಂಬಂಧ ಹೊಂದಿದವರು ಸದಾ ಚಟುವಟಿಕೆಯಿಂದಿರುತ್ತಾರೆ ಮತ್ತು ಕೆಲಸವನ್ನು ಶಿಸ್ತಿನಿಂದ ಮಾಡಲು ಬಯಸುತ್ತಾರೆ. ತಮ್ಮ ಗೌರವ, ಮರ್ಯಾದೆ ಎಲ್ಲದಕ್ಕಿಂತ ಹೆಚ್ಚು ಎಂದುಕೊಳ್ಳುತ್ತಾರೆ.
ರಸ್ತೆಯಲ್ಲಿ ದುಡ್ಡು ಸಿಕ್ಕರೆ ಏನರ್ಥ?!
9 ಸಂಖ್ಯೆಯನ್ನು ಹೊಂದಿರುವವರು, ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳನ್ನೂ, ಕನಸುಗಳನ್ನೂ ಕಟ್ಟಿಕೊಳ್ಳುತ್ತಾರೆ. ಬಹಳ ಪರಿಶ್ರಮದಿಂದ ಇವರು ಮೇಲೇರುತ್ತಾರೆ. ಇತರರ ಕಷ್ಟಗಳಿಗೆ ಬೇಗ ಮರುಗುವ ಗುಣ ಇವರದು. ಸ್ವತಂತ್ರ ಸಾಧಿಸಲು ಯಾವುದೇ ಸವಾಲುಗಳನ್ನಾದರೂ ಎದುರಿಸುತ್ತಾರೆ. ಈ ಸಂಖ್ಯೆಯಿಂದ ಆಳಲ್ಪಡುವವರು ಉತ್ತಮ ಕೌನ್ಸೆಲರ್ಸ್ ಹಾಗೂ ಸಲಹೆಗಾರರಾಗಿರುತ್ತಾರೆ.
ಸಂಖ್ಯೆ 9ರ ನಕಾರಾತ್ಮಕ ಅಂಶಗಳು
9 ಸಂಖ್ಯೆಯನ್ನು ಹೊಂದಿರುವ ಜನರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ವಾದ ಮಾಡುವ ಗುಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಇವರಿಂದ ಸಾಧ್ಯವಾಗುವುದಿಲ್ಲ. ಇವರಲ್ಲಿ ಹಿಂಸಾತ್ಮಕ ಪ್ರವೃತ್ತಿ ಕೊಂಚ ಹೆಚ್ಚು. ಯಾರಿಗಾದರೂ ಹೊಡೆವ ಮುನ್ನ ಯೋಚಿಸುವವರಲ್ಲ. ಬಹಳಷ್ಟು ಬಾರಿ ಹೆಚ್ಚು ಯೋಚಿಸದೆ ತೆಗೆದುಕೊಳ್ಳುವ ನಿರ್ಧಾರಗಳು ಇವರಿಗೆ ಹಿನ್ನಡೆ ತರುತ್ತವೆ. ಮನಸ್ಸಿಗೆ ಬಂದದ್ದನ್ನು ಅಲ್ಲಿಯೇ ಮುಖಕ್ಕೆ ಹೊಡೆದಂತೆ ಹೇಳುವ ಗುಣದಿಂದಾಗಿ ಕೆಲವೊಬ್ಬರ ದೃಷ್ಟಿಯಲ್ಲಿ ವಿಲನ್ ಎನಿಸಿಕೊಳ್ಳುತ್ತಾರೆ. ಇನ್ನೊಬ್ಬರಲ್ಲಿ ತಪ್ಪು ಹುಡುಕುವುದಷ್ಟೇ ಅಲ್ಲ, ಅದನ್ನು ಎತ್ತಿ ಆಡುತ್ತಾರೆ. ತಮ್ಮ ಅನುಮಾನದ ಗುಣದಿಂದಾಗಿ ಯಾರನ್ನೂ ಬೇಗ ನಂಬುವವರಲ್ಲ.
ಸ್ನೇಹಿತನಂಥ ಮೈದುನ ಯಾವ ರಾಶಿಯವನಾಗಿರುತ್ತಾನೆ ಗೊತ್ತಾ?
ಸಂಖ್ಯೆ 9 ಹೊಂದಿರುವ ಜನರಿಗೆ ಸಲಹೆಗಳು
- ಪ್ರತಿ ಮಂಗಳವಾರ ಆಂಜನೇಯನನ್ನು ಪೂಜಿಸಿ.
- ಜೇನುತುಪ್ಪ, ಧಾನ್ಯಗಳು ಹಾಗೂ ಕುಂಕುಮ(vermillion)ವನ್ನು ಹರಿಯುವ ನೀರಿಗೆ ಹಾಕಿ.
- ಸ್ನಾನದ ನಂತರ ಬಳಸುವ ಟವೆಲ್ ಬಣ್ಣ ಕೆಂಪಾಗಿರಲಿ. ಹಾಗೂ ಜೇಬಲ್ಲಿ ಸದಾ ಕೆಂಪು ಬಣ್ಣದ ಕರ್ಚೀಫ್ ಇರಲಿ.
- ಕೆಂಪು ಬಟ್ಟೆಯೊಂದರಲ್ಲಿ ಸೋಂಪನ್ನು ಹಾಕಿ ಗಂಟು ಕಟ್ಟಿ. ಇದನ್ನು ಬೆಡ್‌ರೂಮಲ್ಲಿಟ್ಟು ಪ್ರತಿ ದಿನ ಮಂಗಳನ ಶ್ಲೋಕ ಹೇಳುವುದರಿಂದ ಕಾಯಿಲೆ ಬೀಳುವುದರಿಂದ ತಪ್ಪಿಸಿಕೊಳ್ಳಬಹುದು.
- ಮಂಗಳವಾರ ಮಧ್ಯಾಹ್ನ ಸಮಯದಲ್ಲಿ ಮಧ್ಯದ ಬೆರಳಿಗೆ ಕಾಪರ್ ರಿಂಗ್ ಧರಿಸಿ.
- ಮನೆ ಅಥವಾ ಕಚೇರಿಯಲ್ಲಿ ಮಂಗಲ್ ಯಂತ್ರ ಇಡುವುದು ಕೂಡಾ ಬಹಳ ಒಳಿತು ಮಾಡುತ್ತದೆ.
- ಮಂಗಳವಾರದ ದಿನ ಕೆಂಪು ವಸ್ತುಗಳನ್ನು ದಾನ ಮಾಡಿ.