Asianet Suvarna News Asianet Suvarna News

ಆಕಾಶಕಾಯಗಳಿಗೆ ಸಂಬಂಧಿಸಿದ ಈ ಮೂಢನಂಬಿಕೆಗಳು ವಿಚಿತ್ರವಾದರೂ ಜನಪ್ರಿಯ!

ಗ್ರಹಣ, ಸೂರ್ಯ, ಚಂದ್ರ, ನಕ್ಷತ್ರ ಸೇರಿದಂತೆ ಆಕಾಶಕಾಯಗಳ ಬಗ್ಗೆ ನಮ್ಮ ನಡುವೆ ಸಾಕಷ್ಟು ನಂಬಿಕೆ(ಮೂಢ)ಗಳಿವೆ.. ಅಂಥ ಜನಪ್ರಿಯ 6 ಮೂಢನಂಬಿಕೆಗಳನ್ನು ಇಲ್ಲಿ ಕೊಡಲಾಗಿದೆ. 

Popular and freakiest astronomical superstitions skr
Author
bangalore, First Published Jul 15, 2022, 4:41 PM IST | Last Updated Jul 15, 2022, 4:41 PM IST

ಸೌರ ಮತ್ತು ಚಂದ್ರ ಗ್ರಹಣಗಳಂತಹ ಖಗೋಳ ವಿದ್ಯಮಾನಗಳು ಜನರ ಜೀವನದಲ್ಲಿ ವಿವಿಧ ರೀತಿಯ ಶಕ್ತಿಯನ್ನು ತರುತ್ತವೆ. ಇವು ಹೆಚ್ಚು ಖಗೋಳಶಾಸ್ತ್ರದ ಘಟನೆಗಳಾಗಿದ್ದರೂ, ಪ್ರಪಂಚದಾದ್ಯಂತ ಹಲವೆಡೆಗಳಲ್ಲಿ ಧಾರ್ಮಿಕವಾಗಿಯೂ ಮಹತ್ವ ಪಡೆದಿವೆ. ಹೀಗಾಗಿ, ಗ್ರಹಣದ ವಿಚಾರವಾಗಿ ಪುರಾಣಗಳಲ್ಲಿ ಅನೇಕ ಮೂಢನಂಬಿಕೆಗಳಿವೆ. ಕೇವಲ ಗ್ರಹಣವಲ್ಲ, ಗ್ರಹಿಸಲು ಕಷ್ಟಕರವಾದ ಆಕಾಶಕಾಯಗಳ ವಿಚಾರದಲ್ಲಿ ಹಲವು ಮೂಢನಂಬಿಕೆಗಳು ನಮ್ಮ ನಡುವೆ ಜನಪ್ರಿಯವಾಗಿವೆ. ಅವುಗಳಲ್ಲೆ ಕೆಲವು ಭಯಾನಕವಾಗಿದ್ದರೆ ಮತ್ತೆ ಕೆಲವು ವಿಲಕ್ಷಣವಾಗಿವೆ. 
ಅವುಗಳಲ್ಲಿ ಕೆಲವನ್ನು ನೋಡೋಣ!

ನಕ್ಷತ್ರಗಳಿಗೆ ಕೈ ತೋರುವುದು(Pointing at the stars)
ಇದು ತುಂಬಾ ಸಾಮಾನ್ಯವಾದ ಕ್ರಿಯೆಯಾಗಿದ್ದರೂ ಸಹ ನಕ್ಷತ್ರಗಳತ್ತ ಕೈ ತೋರಿಸುವುದು ತುಂಬಾ ಅಸಭ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ನಕ್ಷತ್ರಗಳು ನಿಜವಾಗಿ ದೇವರುಗಳೆಂದು ನಂಬಲಾಗಿದೆ ಮತ್ತು ದೇವರಿಗೆ ಕೈ ತೋರಿಸುವುದರಿಂದ ಹಿರಿಯರಾದ ಅವರಿಗೆ ಕೋಪ ಉಂಟಾಗುತ್ತದೆ ಮತ್ತು ಇದು ವ್ಯಕ್ತಿಗೆ ದುರದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಗ್ರಹಣದ ಮೂಲ(Origin of solar eclipse)
ಗ್ರಹವಾದ ರಾಹು ಕೋಪಗೊಂಡಾಗ ಸೂರ್ಯನನ್ನು ನುಂಗುತ್ತದೆ ಮತ್ತು ಇದು ಗ್ರಹಣಕ್ಕೆ ಕಾರಣವಾಗುತ್ತದೆ ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆದಾಗ್ಯೂ, ಸೂರ್ಯ ಮತ್ತು ಚಂದ್ರರನ್ನು ರಾಹುವಿನ ಬಾಯಿಯಲ್ಲಿ ದೀರ್ಘ ಕಾಲ ಹಿಡಿದಿಟ್ಟುಕೊಳ್ಳಲಾಗುವುದಿಲ್ಲ. ಹೀಗಾಗಿ ಸೂರ್ಯ ಚಂದ್ರರು ನಿಧಾನವಾಗಿ ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದಲೇ ಮೂಢನಂಬಿಕೆಗಳ ಪ್ರಕಾರ ಗ್ರಹಣಗಳು ಹೆಚ್ಚು ಕಾಲ ಉಳಿಯುವುದಿಲ್ಲ.

ಶಿವನ ಕೃಪೆ ಇರಬೇಕಂದ್ರೆ ಶ್ರಾವಣ ಮಾಸದಲ್ಲಿ ಈ ಕೆಲಸ ಮಾಡಿ!

ನಕ್ಷತ್ರಗಳು ಲೆಕ್ಕ(Counting stars)
ನಕ್ಷತ್ರಗಳು ನಿಮ್ಮ ಮನಸ್ಸು ಮತ್ತು ದೇಹಕ್ಕೆ ನಕಾರಾತ್ಮಕ ಶಕ್ತಿಯನ್ನು ತರುವುದರಿಂದ ಅವುಗಳನ್ನು ಎಣಿಸುವುದು ದುರದೃಷ್ಟವೆಂದು ಪರಿಗಣಿಸಲಾಗುತ್ತದೆ. ಕೆಲವು ದಂತಕಥೆಗಳು ನೀವು ನಕ್ಷತ್ರಗಳ ಎಣಿಸುತ್ತಾ 100 ಅನ್ನು ತಲುಪಿದಾಗ, ನೀವು ಸಾಯುತ್ತೀರಿ ಎಂದು ಸಹ ಹೇಳುತ್ತವೆ! ಇದಂತೂ ಬಹಳ ಅಸಹಜವಾಗಿದೆ. ಬಹುಷಃ ನಕ್ಷತ್ರಗಳನ್ನು ಎಣಿಸಲಾಗುವುದಿಲ್ಲ ಎಂಬುದನ್ನು ಈ ರೀತಿ ಹೇಳಿರಬಹುದು. 

ಸೂರ್ಯನನ್ನು ನುಂಗುವ ಡ್ರ್ಯಾಗನ್(Dragon swallowing the sun)
ಡ್ರ್ಯಾಗನ್‌ಗಳು ಚೀನೀ ಸಂಪ್ರದಾಯಗಳು, ಸಂಸ್ಕೃತಿಗಳು ಮತ್ತು ಇತಿಹಾಸದ ಅವಿಭಾಜ್ಯ ಅಂಗವಾಗಿವೆ. ಚೀನೀಯರು ಡ್ರ್ಯಾಗನ್‌ಗಳು ಊಟಕ್ಕೆ ಸೂರ್ಯನನ್ನು ತಿನ್ನುತ್ತವೆ, ಹೀಗಾಗಿ ಗ್ರಹಣ ಉಂಟಾಗುತ್ತದೆ  ಎಂದು ನಂಬುತ್ತಾರೆ. ಆಗ, ಅವರ ಜನ್ಮ ದೇವರು, ಝಾಂಗ್ ಕ್ಸಿಯಾನ್ ಡ್ರ್ಯಾಗನ್ ಮೇಲೆ ಬಾಣಗಳನ್ನು ಹಾರಿಸುತ್ತಾನೆ ಮತ್ತು ಇದು ಡ್ರ್ಯಾಗನ್ ಸೂರ್ಯನನ್ನು ಬಾಯಿಯಂದ ಹೊರ ಎಸೆಯಲು ಕಾರಣವಾಯಿತು. ಹೀಗೆ ಗ್ರಹಣ ಮುಗಿಯುತ್ತದೆ ಎಂದು ನಂಬುತ್ತಾರೆ. 

ದೇವರ ಕೋಪ!(God's anger)
ಪುರಾತನ ಗ್ರೀಕರು ಗ್ರಹಣ ಸಂಭವಿಸಿದಾಗ, ದೇವರು ಮನುಷ್ಯರ ಮೇಲೆ ಕೋಪಗೊಂಡಿದ್ದಾರೆ ಮತ್ತು ಜನರಿಗೆ ಪಾಠ ಕಲಿಸಲು, ಈ ರೀತಿ ಅವರಿಗೆ ದುಃಖ ಕೊಡುತ್ತಾರೆ ಎಂದು ನಂಬುತ್ತಿದ್ದರು. 

ಈ ಐದು ರಾಶಿಗಳು ಬೆನ್ನ ಹಿಂದೆ ಮಾತಾಡೋದ್ರಲ್ಲಿ ಎಕ್ಸ್‌ಪರ್ಟ್ಸ್! ಕೊಂಚ ಹುಷಾರಾಗಿರಿ!

ಶೂಟಿಂಗ್ ಸ್ಟಾರ್
ಸಮುದ್ರದಲ್ಲೇ ಸಮಯ ಕಳೆವ ಮೀನುಗಾರರಲ್ಲಿ ನಕ್ಷತ್ರಗಳ ಕುರಿತಾಗಿ ಬಹಳಷ್ಟು ಮೂಢನಂಬಿಕೆಗಳಿವೆ. ಅವರು ಶೂಟಿಂಗ್ ಸ್ಟಾರ್ ಅಥವಾ ನಾರ್ತ್ ಸ್ಟಾರ್‌ಗಳು ಸಮುದ್ರದಲ್ಲಿ ತಮ್ಮ ದಿಕ್ಕನ್ನು ನಿರ್ಧರಿಸಲು ಅವಕಾಶ ಮಾಡಿಕೊಡುತ್ತಾರೆ. ವಿಶೇಷವಾಗಿ ಗುಡುಗು ಸಹಿತ ಮಳೆಯ ಸಮಯದಲ್ಲಿ ಅವು ಕಂಡ ಕಡೆ ಹೋಗುವುದರಿಂದ ಮೀನುಗಾರರಿಗೆ ಮತ್ತು ಅವರ ಸಿಬ್ಬಂದಿಗೆ ಅದೃಷ್ಟ ಎಂದು ಹೇಳಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios