Asianet Suvarna News Asianet Suvarna News

ಶಿವನ ಕೃಪೆ ಇರಬೇಕಂದ್ರೆ ಶ್ರಾವಣ ಮಾಸದಲ್ಲಿ ಈ ಕೆಲಸ ಮಾಡಿ!

ಸುಖ, ಸಂತೋಷ, ಸಂಪತ್ತು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬರೂ ಇದಕ್ಕಾಗಿ ಸದಾ ಪ್ರಾರ್ಥಿಸ್ತಾರೆ. ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ಭಕ್ತರು ನಾನಾ ಪೂಜೆ ಮಾಡ್ತಾರೆ. ಈ ಎಲ್ಲದರ ಮಧ್ಯೆ ಕೆಲ ವಸ್ತುಗಳನ್ನು ಮನೆಗೆ ತಂದ್ರೆ ಈಶ್ವರ ನಿಮಗೆ ಕರುಣೆ ತೋರುತ್ತಾನೆ.
 

These Things Must Be Bought In The Month Of Sawan
Author
Bangalore, First Published Jul 15, 2022, 3:28 PM IST

ಶ್ರಾವಣ ಮಾಸ ಮಹಾದೇವನಿಗೆ ಸಮರ್ಪಿತವಾದ ತಿಂಗಳು. ಶಿವ ಭಕ್ತರಿಗೆ ಶ್ರಾವಣ ಮಾಸ ಪ್ರಮುಖವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಎಲ್ಲೆಡೆ ಶಿವನ ಆರಾಧನೆ, ಪೂಜೆ, ಉಪವಾಸ, ವೃತಗಳು ನಡೆಯುತ್ತಿರುತ್ತವೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ಶಿವನ ಪೂಜೆ ಮಾಡಿದ್ರೆ, ಇಷ್ಟಾರ್ಥಗಳು ಶೀಘ್ರವೇ ಈಡೇರುತ್ತವೆ ಎಂದು ಭಕ್ತರು ನಂಬಿದ್ದಾರೆ. ಶ್ರಾವಣ ಮಾಸದ ಸೋಮವಾರಕ್ಕೆ ವಿಶೇಷ ಮಹತ್ವವಿದೆ. ಆ ದಿನ ಶಿವನ ಭಕ್ತರು ದೇವಸ್ಥಾನಕ್ಕೆ ಹೋಗಿ, ಶಿವನಿಗೆ ಜಲಾಭಿಷೇಕ ಮಾಡಿ, ಪ್ರಾರ್ಥನೆ ಸಲ್ಲಿಸ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದಲ್ಲಿ ಕೆಲವು ಮಂಗಳಕರ ವಸ್ತುಗಳನ್ನು ಖರೀದಿಸಿದರೆ, ಮಹಾದೇವನೊಂದಿಗೆ, ತಾಯಿ ಲಕ್ಷ್ಮಿಯ ಅನುಗ್ರಹ ನಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಪ್ರಕಾರ, ಶ್ರಾವಣ ಮಾಸದಲ್ಲಿ ಖರೀದಿಸಿದ ವಸ್ತುಗಳನ್ನು ಬಳಸುವುದ್ರಿಂದ ಜೀವನದಲ್ಲಿ ಸುಖ – ಸಂತೋಷ ಪ್ರಾಪ್ತಿಯಾಗುತ್ತದೆ. ಶ್ರಾವಣ ಮಾಸದಲ್ಲಿ ಯಾವೆಲ್ಲ ವಸ್ತುಗಳನ್ನು ಖರೀದಿ ಮಾಡ್ಬೇಕು ಹಾಗೆ ಯಾವೆಲ್ಲ ವಸ್ತುಗಳ ಪೂಜೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಶ್ರಾವಣ ಮಾಸ (Shravan Month) ದಲ್ಲಿ ತಪ್ಪದೆ ಮನೆಗೆ ತನ್ನಿ ಈ ವಸ್ತು : 
ಢಮರು (Drums) :
ನಂಬಿಕೆಯ ಪ್ರಕಾರ, ಢಮರು ಶಿವನಿಗೆ ತುಂಬಾ ಪ್ರಿಯವಾದ ವಸ್ತು. ಶ್ರಾವಣ ಮಾಸದಲ್ಲಿ ನೀವು ಶಿವನನ್ನು ಪ್ರಾರ್ಥಿಸುತ್ತಿದ್ದರೆ, ಶಿವನ ನಾಮ ಸ್ಮರಣೆ ಜೊತೆ ಢಮರನ್ನು ಕೂಡ ಬಾರಿಸಬೇಕು ಎನ್ನಲಾಗುತ್ತದೆ. ಇದರಿಂದ ಶಿವನು ಪ್ರಸನ್ನನಾಗಿ ಭಕ್ತರೆಲ್ಲರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ.

ಬೆಳ್ಳಿಯ (Silver) ಬಳೆ : ಶ್ರಾವಣ ಮಾಸದಲ್ಲಿ ಬೆಳ್ಳಿ ಬಳೆ ಖರೀದಿಯಿಂದ ಜೀವನದಲ್ಲಿನ ದಾರಿದ್ರ್ಯ ದೂರವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಶ್ರಾವಣ ಮಾಸವು ಬಳೆ ಖರೀದಿಗೆ ಅತ್ಯಂತ ಪ್ರಶಸ್ತವಾಗಿದೆ. ಆದ್ದರಿಂದ ಈ ತಿಂಗಳು ಬೆಳ್ಳಿ ಬಳೆ ಖರೀದಿಸಬೇಕೆಂದು ಹೇಳಲಾಗಿದೆ. 

ಈ ಐದು ರಾಶಿಗಳು ಬೆನ್ನ ಹಿಂದೆ ಮಾತಾಡೋದ್ರಲ್ಲಿ ಎಕ್ಸ್‌ಪರ್ಟ್ಸ್! ಕೊಂಚ ಹುಷಾರಾಗಿರಿ!

ಬೆಳ್ಳಿ ಪೆಟ್ಟಿಗೆ : ಮನೆಯಲ್ಲಿ ಭಸ್ಮವನ್ನು ಇಡುವುದರಿಂದ ಜೀವನದಲ್ಲಿ ಬಡತನ ದೂರವಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಬೆಳ್ಳಿಯ ಪೆಟ್ಟಿಗೆಯನ್ನು ಖರೀದಿಸಿ ಮತ್ತು ಅದರಲ್ಲಿ  ಭಸ್ಮವನ್ನು ಇರಿಸಿ. ಇದರಿಂದಾಗಿ ಮನೆಯಲ್ಲಿರುವ ಬೀರು ಹಣದಿಂದ ತುಂಬುತ್ತದೆ.

ಶಿವಲಿಂಗ (ShivLing) : ಶ್ರಾವಣ ಮಾಸದಲ್ಲಿ ಶಿವ ಭಕ್ತರು ಶಿವ ಲಿಂಗವನ್ನು ಮನೆಗೆ ತರ್ತಾರೆ. ಮನೆಯಲ್ಲಿ ಶಿವಲಿಂಗವನ್ನು ಇಟ್ಟು ಪೂಜಿಸಲು ಹಲವು ನಿಯಮಗಳಿವೆ. ನೀವು ಈ ಪವಿತ್ರ ತಿಂಗಳಲ್ಲಿ ಶಿವಲಿಂಗವನ್ನು ಖರೀದಿಸುತ್ತಿದ್ದರೆ 2 ಇಂಚುಗಳಿಗಿಂತ ದೊಡ್ಡ ಶಿವಲಿಂಗ ಖರೀದಿಸಬೇಡಿ. ಶಿವಲಿಂಗದ ಪೂಜೆಯನ್ನು ಎಲ್ಲಾ ನಿಯಮಗಳ ಪ್ರಕಾರ ಮಾಡಬೇಕು. ತಪ್ಪುಗಳಿಲ್ಲದೆ, ಭಯ, ಭಕ್ತಿಯಿಂದ ಶಿವಲಿಂಗದ ಪೂಜೆ ಮಾಡಿದ್ರೆ ಎಲ್ಲ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.   

ರುದ್ರಾಕ್ಷಿ (Rudrakshi) : ಶ್ರಾವಣ ಮಾಸದಲ್ಲಿ ಯಾವುದೇ ಶುಭ ಮುಹೂರ್ತದಲ್ಲಿ  ರುದ್ರಾಕ್ಷಿಯನ್ನು ನಿಮ್ಮ ಮನೆಗೆ ತರಬೇಕು. ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ. ಶಾಸ್ತ್ರಗಳ ಪ್ರಕಾರ, ಶ್ರಾವಣ ಮಾಸದಲ್ಲಿ ರುದ್ರಾಕ್ಷವನ್ನು ಧರಿಸಿದವರಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ.

ತುಳಸಿ ಗಿಡದ ಬಳಿ ಈ ವಸ್ತುಗಳನ್ನಿಡೋ ತಪ್ಪು ಮಾಡ್ಬೇಡಿ…

ಗಂಗಾ ಜಲ (Gangajal) : ಶ್ರಾವಣ ಮಾಸದಲ್ಲಿ ಗಂಗಾ ಜಲವನ್ನು ಮನೆಗೆ ತರಬೇಕು. ಗಂಗಾ ಜಲವನ್ನು ಶಿವಲಿಂಗಕ್ಕೆ ಅರ್ಪಿಸಿದ್ರೆ ಶಿವ ಪ್ರಸನ್ನನಾಗ್ತಾನೆ ಎಂದು ನಂಬಲಾಗಿದೆ. ಭಕ್ತರ ಪ್ರತಿಯೊಂದು ಆಸೆಯನ್ನೂ ಈಡೇರಿಸ್ತಾನೆ ಎನ್ನಲಾಗಿದೆ. ಶ್ರಾವಣ ಮಾಸದ ಮೊದಲ ದಿನ ಅಥವಾ ಶ್ರಾವಣ ಮಾಸದ ಯಾವುದೇ ಸೋಮವಾರ ಗಂಗಾಜಲವನ್ನು ಮನೆಗೆ ತರಬೇಕು. ಈ ಗಂಗಾ ಜಲವನ್ನು ಅಡುಗೆ ಮನೆಯಲ್ಲಿ ಶುದ್ಧ ಸ್ಥಳದಲ್ಲಿ ಇಡಬೇಕು. ಇದ್ರಿಂದ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ. ಹಾಗೆಯೇ ಇದು ಎಂದಿಗೂ ಕಡಿಮೆಯಾಗುವುದಿಲ್ಲ.  
 

Follow Us:
Download App:
  • android
  • ios