Asianet Suvarna News Asianet Suvarna News

ಇದೊಂದ್ ಗಿಡ ನೆಟ್ಬಿಡಿ ಸಾಕು, ಶನಿ, ಮಂಗಳ ದೋಷದಿಂದ ಪಾರಾಗಿ..

ನಿಮ್ಮನ್ನು ಕುಜ ದೋಷವೋ, ಶನಿ ದೋಷವೋ ಕಾಡುತ್ತಿದ್ದರೆ ಅದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದರೆ- ಈ ಒಂದು ಗಿಡ ನೆಟ್ಟು ಬೆಳೆಸಿ ಸಾಕು.. ದೋಷ ಪರಿಹಾರವಾಗುತ್ತದೆ. ಸಮಸ್ಯೆಗಳು ತಾವಾಗಿಯೇ ಕರಗುತ್ತವೆ. 

Plant THIS tree to reduce Mangal Shani dosh skr
Author
First Published Sep 19, 2022, 4:38 PM IST

ಜೀವನದಲ್ಲಿ ಸಮಸ್ಯೆಗಳು ಬರುತ್ತಿರುತ್ತವೆ, ಹೋಗುತ್ತಿರುತ್ತವೆ. ಕೆಲವೊಮ್ಮೆ ಮಾತ್ರ ಸಮಸ್ಯೆಗಳು ಎಷ್ಟು ಸಮಯವಾದರೂ ಹೋಗುತ್ತಿಲ್ಲವಲ್ಲ ಎನಿಸಬಹುದು. ಇದಕ್ಕೆ ಜಾತಕದಲ್ಲಿರುವ ಶನಿ ದೋಷವೋ ಅಥವಾ ಮಂಗಳ ದೋಷವೋ ಕಾರಣವಿರಬಹುದು. ಈ ಮಂಗಳನ ಕೋಪವಾಗಲೀ, ಶನಿಯ ಕೋಪವಾಗಲೀ ಸಾಕಷ್ಟು ಕಾಡಿಸುತ್ತವೆ. ಆದರೆ, ಪರಿಹಾರ ಕಾರ್ಯಗಳನ್ನು ಮಾಡಿದರೆ ಇವುಗಳಿಂದ ಮುಕ್ತಿ ಪಡೆಯಬಹುದು. ಸಮಸ್ಯೆಗಳಿಂದಲೂ ತಪ್ಪಿಸಿಕೊಳ್ಳಬಹುದು. ಈ ಎರಡು ದೋಷಗಳಿಂದ ತಪ್ಪಿಸಿಕೊಳ್ಳಲು ಒಂದು ಸುಲಭ ಪರಿಹಾರವೆಂದರೆ ಅದು ಬೇವಿನ ಮರದ ಪರಿಹಾರ. 

ಹೌದು, ಜ್ಯೋತಿಷ್ಯದಲ್ಲಿ ಬೇವನ್ನು ಅನೇಕ ರೀತಿಯ ಧಾರ್ಮಿಕ ಕಾರ್ಯಗಳಿಗೆ ಮತ್ತು ಅನೇಕ ಜ್ಯೋತಿಷ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಲಾಗುತ್ತದೆ. ಬೇವು ಉತ್ತರ ಭಾದ್ರಪದ ನಕ್ಷತ್ರಕ್ಕೂ ಸಂಬಂಧಿಸಿದೆ. ಉತ್ತರ ಭಾದ್ರಪದವು ಆಕಾಶದಲ್ಲಿರುವ 27 ರಾಶಿಗಳಲ್ಲಿ 26ನೇ ನಕ್ಷತ್ರವಾಗಿದೆ. ವಾಸ್ತುವಿನಲ್ಲೂ ಬೇವಿನ ಮರ(Neem tree)ವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ ಎಂದು ಹೇಳಲಾಗಿದೆ. ಬೇವಿನ ಆರೋಗ್ಯ ಲಾಭಗಳೂ ಹಲವು.

ಶಾಸ್ತ್ರಗಳ ಪ್ರಕಾರ ದೇವಿಯು ಬೇವಿನ ಮರದಲ್ಲಿ ನೆಲೆಸಿದ್ದಾಳೆ. ಜಾತಕದಲ್ಲಿ ಶನಿ, ರಾಹು, ಕೇತು, ಮಂಗಳ ಶಾಂತಿಗೆ ಇದು ತುಂಬಾ ಉಪಯುಕ್ತ. ಇದಲ್ಲದೆ, ಬೇವಿನ ಮರವು ಕುಟುಂಬದ ಸಂತೋಷ ಮತ್ತು ಅದೃಷ್ಟ(Happiness and Luck)ವನ್ನು ಹೆಚ್ಚಿಸಲು ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೇವಿನ ಮರವನ್ನು ಪೂಜಿಸುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.

ಈ ರಾಶಿಯ ಸ್ನೇಹಿತರು ನಿಮ್ಮ ಮೆಸೇಜ್ ಇಗ್ನೋರ್ ಮಾಡ್ತಿದಾರಾ? ಅದಕ್ಕೀ ಕಾರಣವಿರಬಹುದು..

  • ನಿಮ್ಮ ಜಾತಕದಲ್ಲಿ ಮಂಗಲ ದೋಷವಿದ್ದರೆ ಬೇವಿನ ಪೂಜೆಯು ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಮಂಗಳವಾರ(Tuesday)ದಂದು ಬೇವಿನ ಮರಕ್ಕೆ ನೀರನ್ನು ಅರ್ಪಿಸುವುದರೊಂದಿಗೆ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ. ಸತತ 11 ಮಂಗಳವಾರದಂದು ಹೀಗೆ ಮಾಡುವುದರಿಂದ ಪವನಪುತ್ರ ಹನುಮಂತನ ಆಶೀರ್ವಾದದಿಂದ ಮಂಗಳದೋಷದಿಂದ ಮುಕ್ತಿ ಪಡೆಯಬಹುದು.
  • ಉತ್ತರ ಭಾದ್ರಪದ ನಕ್ಷತ್ರದಲ್ಲಿ ಜನಿಸಿದವರು ಬೇವಿನ ಮರವನ್ನು ಪೂಜಿಸಬೇಕು, ಜೊತೆಗೆ ಬೇವಿನ ಮರ, ಅದರ ಎಲೆಗಳು ಅಥವಾ ಅದರ ಹಣ್ಣುಗಳಿಗೆ ಯಾವುದೇ ಹಾನಿಯಾಗಬಾರದು.
  • ನಿಮ್ಮ ಹೊಸ ವ್ಯವಹಾರದಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರೆ, ಆ ತೊಂದರೆಗಳನ್ನು ತೊಡೆದು ಹಾಕಲು, ಸ್ನಾನದ ನಂತರ ಬೇವಿನ ಮರದ ಬಳಿಗೆ ಹೋಗಿ ರೊಟ್ಟಿ, ಅನ್ನ ಮುಂತಾದವುಗಳನ್ನು ಅರ್ಪಿಸಿ ಕ್ರಮಬದ್ಧವಾಗಿ ಪೂಜಿಸಬೇಕು. ಈ ರೀತಿ ಮಾಡುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
  • ಜಾತಕ(Horoscope)ದಲ್ಲಿ ಶನಿಯ ಸ್ಥಿತಿಯನ್ನು ಸರಿಪಡಿಸಲು ಮನೆಯ ಹೊರಗೆ ಬೇವಿನ ಮರವನ್ನು ಸರಿಯಾದ ದಿಕ್ಕಿನಲ್ಲಿ ನೆಡಿ. ಇದರೊಂದಿಗೆ, ಅದರ ಚಕ್ಕೆಗಳಿಂದ ಹವನವನ್ನು ಮಾಡಿ. ಇದರಿಂದ ಶನಿದೇವನ ಕೃಪೆ ನಿಮ್ಮ ಮೇಲೆ ಉಳಿಯುತ್ತದೆ. ಇದರೊಂದಿಗೆ ಬೇವಿನ ಎಲೆಗಳಿಂದ ಮಾಡಿದ ಮಾಲೆಯನ್ನು ಧರಿಸಿದರೆ ಲಾಭವಾಗುತ್ತದೆ.

    Navratri 2022: ಮಹಿಳೆಯರು ಈ 16 ಮೇಕಪ್ ಮಾಡ್ಕೊಳ್ಳಲೇಬೇಕು! ಯಾಕೆ ಕೇಳಿ..
     
  • ಭವಿಷ್ಯದಲ್ಲಿ ನಿಮ್ಮ ಪ್ರಗತಿಯನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ನೀವು ಬೇವಿನ ಮರದ ಮುಂದೆ ಕೈ ಮುಗಿದು ನಮಸ್ಕರಿಸಬೇಕು, ಹಾಗೆಯೇ ಮರದ ಬೇರಿಗೆ ನೀರನ್ನು ಅರ್ಪಿಸಬೇಕು. ಇದರ ಹೊರತಾಗಿ ಬೇವಿನ ಮರಕ್ಕೆ ಅಂಟಿಕೊಂಡಿರುವ ಯಾವುದಕ್ಕೂ ಹಾನಿಯಾಗಬಾರದು.
  • ಮನೆಯ ಹೊರಗೆ ಬೇವಿನ ಮರವನ್ನು ನೆಟ್ಟರೆ, ಅದು ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕುವುದರ ಜೊತೆಗೆ, ಸುತ್ತಲೂ ತಂಪಾಗಿರುತ್ತದೆ.


ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios