Best Partners: ಈ 4 ರಾಶಿಯವರು ನಿಮ್ಮ ಅತ್ಯುತ್ತಮ ಸಂಗಾತಿ ಆಗಬಲ್ಲರು!

ಸಂಗಾತಿ ಆಯ್ಕೆ ಬಗ್ಗೆ ಎಲ್ಲರಿಗೂ ಗೊಂದಲ ಇರುವುದು ಸಹಜ. ಅವರು ನಮಗೆ ಒಗ್ಗಿಕೊಳ್ಳುತ್ತಾರೆಯೇ..? ಅನ್ನೋದು ಸಹ ಮುಖ್ಯವಾಗುತ್ತದೆ. ಆದರೆ, ಜೀವನಲದಲ್ಲಿ ಉತ್ತಮ ಸಂಗಾತಿಯಾಗಬಲ್ಲ, ಜೀವನವಿಡೀ ಜೊತೆಗಿರುವ, ಪ್ರಾಮಾಣಿಕವಾಗಿ ಜೀವಿಸುವ 4 ರಾಶಿಚಕ್ರದವರ ಬಗ್ಗೆ ನೋಡೋಣ...

Pisces Scorpio libra cancer Zodiac signs could become best partners

ಜೀವನದಲ್ಲಿ (Life) ಏನು ಬೇಕು..? ಒಳ್ಳೇ ಶಿಕ್ಷಣ (Education), ಒಳ್ಳೇ ಉದ್ಯೋಗ (Job)– ಕೈ ತುಂಬಾ ಸಂಬಳ (Salary) ಹಾಗೂ ಅಪ್ಪ – ಅಮ್ಮನನ್ನು (Father – Mother) ಚೆನ್ನಾಗಿ ನೋಡಿಕೊಳ್ಳುವುದು, ಹೀಗೆ ಇವೆಲ್ಲದರ ನಡುವೆ ಒಂದೊಳ್ಳೇ ಸಂಗಾತಿ ಸಿಕ್ಕರೆ ಸಾಕಪ್ಪ ಅನ್ನೋದು ಬಹುತೇಕ ಎಲ್ಲರ ಮನಸ್ಥಿತಿ ಆಗಿರುತ್ತದೆ. ಆದರೆ, ನಮಗೆ ಒಪ್ಪುವ ಸಂಗಾತಿ (Partner) ಸಿಗುವರೇ..? ಎಂಬ ಅನುಮಾನಗಳು ಇರುವುದು ಸಹಜ ಕೂಡಾ. 

ಜೀವನ ಎಂಬುದು ನಿಂತ ನೀರಲ್ಲ. ನಮಗೆ ಇಲ್ಲಿ ಬಹಳಷ್ಟು ಜನ ಸಿಗುತ್ತಾರೆ. ಅವರಲ್ಲಿ ಕೆಲವರು ನಮ್ಮ ಜೊತೆ ಒಂದಲ್ಲಾ ಒಂದು ರೀತಿಯ (ಸ್ನೇಹ (Friendship), ನೆರೆಹೊರೆ, ಸಹೋದ್ಯೋಗಿ ಇತ್ಯಾದಿ) ಬಾಂಧವ್ಯವನ್ನು ಹೊಂದಬಹುದು. ಇನ್ನು ವೈವಾಹಿಕ (Marriage) ವಿಷಯವನ್ನು ನೋಡುವುದಾದರೆ ಸಂಗಾತಿಯ ಆಯ್ಕೆ ಬಹಳ ಕಷ್ಟಕರವಾಗಿರುತ್ತದೆ. ಪರಿಚಯ ಇದ್ದವರನ್ನೇ ವಿವಾಹವಾಗುವುದಾದರೂ ಇಲ್ಲವೇ ಹಿರಿಯರು ನಿಶ್ಚಯಿಸಿ ವೈವಾಹಿಕ ಜೀವನಕ್ಕೆ ಕಾಲಿಡುವುದಾದರೂ ಮನದ ಒಂದು ಆಳದಲ್ಲಿ ಭಯ ಎಂಬುದು ಇದ್ದೇ ಇರುತ್ತದೆ. ಇವರು ನಮ್ಮ ಜೊತೆಗೆ ಜೀವನ ಪರ್ಯಂತ ಒಳ್ಳೆಯವರಾಗಿ, ಕೈಬಿಡದೇ ಬಾಳುತ್ತಾರೆಯೇ ಎಂಬ ಆತಂಕ ಇರುತ್ತದೆ. 

ಇಂತಹ ಸಂದಿಗ್ದ ಸನ್ನಿವೇಶ ಎದುರಾಗಿದೆ ಎಂದಾದಲ್ಲಿ ನಿಮ್ಮ ಸಹಾಯಕ್ಕೆ ಜ್ಯೋತಿಷ್ಯ ಶಾಸ್ತ್ರ (Astrology) ಬರಲಿದೆ. ಅಂದರೆ, ನೀವು ಇದರನ್ವಯ ನಿಮ್ಮ ಮುಂದಿನ ದಾರಿಯನ್ನು ಕಂಡುಕೊಳ್ಳಬಹುದಾಗಿದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಹನ್ನೆರೆಡು ರಾಶಿಗಳಲ್ಲಿ 4 ರಾಶಿಯವರು (Zodiac) ಅತ್ಯುತ್ತಮ ಸಂಗಾತಿಗಳು ಎಂದು ಪರಿಗಣಿಸಲ್ಪಟ್ಟಿದೆ. 

ಕರ್ಕಾಟಕ ರಾಶಿ (Cancer)
ನಿಮಗೆ ಕರ್ಕಾಟಕ ರಾಶಿಯವರು ಸಂಗಾತಿಯಾಗಿ ಸಿಕ್ಕಿದ್ದಾರೆಂದರೆ ಅಥವಾ ಸಿಗಲಿದ್ದಾರೆಂದರೆ ನೀವೇ ಅದೃಷ್ಟವಂತರು. ಈ ರಾಶಿಯ ಜಾತಕದವರು (Horoscope) ಅತ್ಯಂತ ಸ್ಥಿತ ಬುದ್ಧಿಮತ್ತೆಯನ್ನು ಹೊಂದಿರುವುದಲ್ಲದೆ, ತಿಳಿವಳಿಕೆಯುಳ್ಳವರಾಗಿದ್ದಾರೆ. ಕರ್ಕಾಟಕ ರಾಶಿಯವರಿಗೆ ಮನೆ ಹಾಗೂ ಮನೆಮಂದಿಯೆಂದರೆ ಅಚ್ಚುಮೆಚ್ಚು. ಅವರ ಆರೈಕೆಯಲ್ಲೇ ತಮ್ಮ ಸುಖವನ್ನು ಕಾಣುವವರು. ಹಾಗಾಗಿ ಸಂಗಾತಿಯನ್ನು ಸಂತೋಷವಾಗಿಡಲು (Happy) ಸಾಕಷ್ಟು ಶ್ರಮ ವಹಿಸುತ್ತಾರೆ. ಇವರಿಗೆ ಸಂಬಂಧದ ಮಹತ್ವದ ಅರಿವು ಬಹಳ ಉತ್ತಮವಾಗಿಯೇ ಇರಲಿದ್ದು, ಸಂಬಂಧಗಳಿಗೆ ಬೆಲೆ ಕೊಡುತ್ತಾರೆ. ಹೀಗಾಗಿ ಇವರು ಸಂಗಾತಿಯನ್ನು ಬಹಳವೇ ಪ್ರೀತಿಸುತ್ತಾರೆ.

ದೇವರಿಗೆ ಮಹಾಮಂಗಳಾರತಿ: ಕ್ರಮ – ಫಲ ತಿಳಿಯಿರಿ

ಮೀನ ರಾಶಿ (Pisces)

ಮೀನ ರಾಶಿಯವರು ಶಾಂತ ಸ್ವಭಾವದವರಾಗಿದ್ದು, ಸಂಬಂಧದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾರೆ. ಇವರಿಗೆ ಸಂಘರ್ಷ ಎಂದರೆ ಆಗದು, ಎಲ್ಲರನ್ನೂ ಇಷ್ಟಪಡುವ ಮನೋಭಾವವುಳ್ಳ ಇವರು, ಎಂಥದ್ದೇ ವಿವಾದಗಳು ಬರಲಿ ಬೆಣ್ಣೆಯಿಂದ ಕೂದಲು ತೆಗೆದಷ್ಟು ಸಲೀಸಾಗಿ ಆ ಸಮಸ್ಯೆಯಿಂದ (Problems) ಹೊರಬರುತ್ತಾರೆ. ಇವರು ಸೂಕ್ಷ್ಮಮತಿಗಳಾಗಿದ್ದು, ತಮ್ಮ ಸಂಗಾತಿಯ ನೋವು, ಮನಸ್ಥಿತಿಯನ್ನು ಬಹುಬೇಗ ತಿಳಿದುಕೊಂಡುಬಿಡುತ್ತಾರೆ. ಇವರ ಬಗ್ಗೆ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಸಖತ್ ರೊಮ್ಯಾಂಟಿಕ್ (Romantic) ಆಗಿರುತ್ತಾರೆ. ಜೊತೆಗೆ ಸಂಬಂಧ, ಸಂಗಾತಿಯಂದು ಬಂದರೆ ಎಂತಹ ಪರಿಸ್ಥಿತಿಯಲ್ಲಿಯೂ ಇವರು ಬಿಟ್ಟುಕೊಡುವವರಲ್ಲ. 

ತುಲಾ ರಾಶಿ (Libra)
ಈ ರಾಶಿಯವರನ್ನು ಜೀವನ ಸಂಗಾತಿಯಾಗಿ ಪಡೆದರೆ ಅದೃಷ್ಟ ಮಾಡಿದ್ದೀರೆಂದೇ ಅರ್ಥ. ವಿವಾಹದ ಬಳಿಕವೂ ಇವರು ಸಂಗಾತಿಯೊಂದಿಗೆ ಸ್ನೇಹಿತರಂತೆ ಇರುತ್ತಾರೆ. ಇವರು ಬಹಳ ದೃಢ ಸ್ವಭಾವದವರಾಗಿದ್ದು, ಉತ್ತಮ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದಾರೆ. ಇವರು ಒಮ್ಮೆ ಒಬ್ಬರನ್ನು ನಂಬಿದರು ಎಂದಾದರೆ ಬೇರೆಯವರು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಇವರು ಜೀವನ ಸಂಗಾತಿಯ ಆಯ್ಕೆ ವಿಷಯದಲ್ಲಿ ಸ್ವಲ್ಪ ಸಮಯಾವಕಾಶವನ್ನು ತೆಗೆದುಕೊಳ್ಳುತ್ತಾರೆ. ಒಮ್ಮೆ ಅವರ ಮೇಲೆ ನಂಬಿಕೆ (Trust) ಬಂತೆಂದಾದರೆ ಜೀವಮಾನವಿಡೀ ಅವರಿಗೆ ಪ್ರಾಮಾಣಿಕವಾಗಿರುತ್ತಾರೆ. 

ಗಡಿಬಿಡಿ, ಅಗ್ರೆಸ್ಸೀವ್, ಉತ್ಸಾಹಿ, ರೊಮ್ಯಾಂಟಿಕ್ ನಕ್ಷತ್ರಗಳಿವು!

ವೃಶ್ಚಿಕ ರಾಶಿ (Scorpio)
ಈ ರಾಶಿಯವರು ಬಹಳವೇ ಎಮೋಷನಲ್ (Emotional) ಜೀವಿಗಳು. ಇವರು ಭಾವನೆಗಳಿಗೆ ಹೆಚ್ಚಿನ ಬೆಲೆಯನ್ನು ಕೊಡುವ ಮನೋಭಾವ ಉಳ್ಳವರು. ಆದರೆ, ಇವರ ಈ ವ್ಯಕ್ತಿತ್ವದಿಂದಲೇ ಕೆಲವರು ಇವರಿಗೆ ಮೋಸ ಮಾಡುತ್ತಾರೆ. ಒಮ್ಮೆ ಇತರರು ಮೋಸಗಾರರು ಎಂದು ತಿಳಿದರೆ ಇವರು ಅವರನ್ನು ಎಂದೂ ಕ್ಷಮಿಸರು. ಇವರು ಸಂಗಾತಿ ಜೊತೆಗೆ ನಿಷ್ಠೆಯಿಂದ ಜೀವನ ನಡೆಸುವವರಾಗಿದ್ದು, ಸದಾ ಪ್ರೀತಿಸುತ್ತಾರೆ.

Pisces Scorpio libra cancer Zodiac signs could become best partners

 

Latest Videos
Follow Us:
Download App:
  • android
  • ios