Asianet Suvarna News Asianet Suvarna News

ಕ, ಕೆಯಿಂದ ಆರಂಭವಾಗೋ ಹೆಸರಿನವರು ಹೇಗಿರ್ತಾರೆ ಗೊತ್ತೆ?

ಇಂಗ್ಲಿಷ್‌ನ ಕೆ ಅಥವಾ ಕನ್ನಡ ಕ ಅಕ್ಷರದಿಂದ ಆರಂಭವಾಗುವ ಹೆಸರಿನವರು ವೃತ್ತಿಯಲ್ಲೂ ಕುಟುಂಬದಲ್ಲೂ ಪ್ರಣಯದಲ್ಲಿ ಪರ್‌ಫೆಕ್ಷನಿಸ್ಟ್‌ಗಳಾಗಿರುತ್ತಾರೆ. 

Persons whose names begin with letter K would be perfectionists
Author
Bengaluru, First Published Mar 20, 2021, 5:09 PM IST

ಕನ್ನಡದ ಕ ಅಥವಾ ಇಂಗ್ಲಿಷ್‌ನ ಕೆ ಅಕ್ಷರದಿಂದ ಆರಂಭವಾಗಿವ ಹೆಸರಿನವರು ಸಾಮಾನ್ಯವಾಗಿ ಪರ್‌ಫೆಕ್ಷನಿಸ್ಟ್‌ಗಳಾಗಿರುತ್ತಾರೆ. ಹೀಗಾಗಿ ವೃತ್ತಿ ಕ್ಷೇತ್ರದಲ್ಲೂ ಕುಟುಂಬದಲ್ಲೂ ಕೆಲವೊಮ್ಮೆ ಕಿರಿಕಿರಿ ಉಂಟುಮಾಡಿಕೊಳ್ಳುತ್ತಾರೆ. ಆದರೆ ಇವರಿಗೆ ಸಾಮಾನ್ಯವಾಗಿ ತಾವು ಹೇಳಿದ್ದೇ ಆಗಬೇಕು ಎಂದು ಹಠವಿರುತ್ತದೆ. ಅದು ಸರಿಯಾಗುವರೆಗೂ ಅವರು ಬಿಡುವುದೇ ಇಲ್ಲ. 

ವೃತ್ತಿ ಜೀವನ:
ಇವರು ಬಾಸ್‌ಗಳಾಗಿದ್ದರೆ ಕೈ ಕೆಳಗಿನವರಿಗೆ ಸಂಕಷ್ಟ ಕಾದಿದೆ. ತಮ್ಮ ಕೈ ಕೆಳಗಿನವರು ಸರಿಯಾಗಿ ಕೆಲಸ ಮಾಡದಿದ್ದರೆ ಕೆಲಸ ತೆಗೆಸುತ್ತಾರೆ, ಅಥವಾ ತಾವೇ ಅದನ್ನು ಮಾಡುತ್ತಾರೆ. ಕೆಲವನ್ನು ಮೊದಲಿನಿಂದ ಆರಂಭಿಸುವುದೂ ಉಂಟು. ಕೆಲವೊಮ್ಮೆ ತಾವೇ ಮಾಡಿದ್ದನ್ನೂ ಮುರಿದು ಕಟ್ಟಿ ಮರಳಿ ಮಾಡುವ ಹಠವಿರುತ್ತೆ. ಇವರು ಪರ್‌ಫೆಕ್ಷನಿಸ್ಟ್‌ಗಳಾದುದರಿಂದ ಜಗತ್ತಿನಲ್ಲಿರುವ ಅತ್ಯುತ್ತಮವಾದುದೆಲ್ಲವೂ ತಮಗೆ ಬೇಕು ಎಂಬ ಹಠವನ್ನು ಹೊಂದಿರುತ್ತಾರೆ. ತಮ್ಮ ಸಿಬ್ಬಂದಿ ಕೂಡ ಉತ್ತಮ ಸೌಲಭ್ಯ ಹೊಂದಿರಬೇಕು ಎಂದು ಬಯಸುವುದರಿಂದ, ಅವರಿಗೆ ಪ್ರಿಯರಾಗಿ ಇರಲೂ ಸಾಧ್ಯವಿದೆ. ಕೆಲಸಗಾರರ ತಪ್ಪನ್ನು ಎತ್ತಿ ಆಡುತ್ತಾರೆ. ಹೀಗಾಗಿ ಅವರ ಸಿಟ್ಟಿಗೆ ಒಳಗಾಗಲೂ ಸಾಧ್ಯ. ಹಾಗೇ ಸರಿಯಾದ ದಾರಿಯನ್ನೂ ಸುಚಿಸುವುದರಿಂದ ಮಾರ್ಗದರ್ಶಕರಾಗಿಯೂ ಇರುತ್ತಾರೆ.

Persons whose names begin with letter K would be perfectionists

ಪ್ರಣಯ ಜೀವನ:
ಇವರ ಪ್ರಣಯ ಜೀವನ ಉನ್ನತ ಮಟ್ಟದ್ದಾಗಿರುತ್ತದೆ. ಸಂಗಾತಿಗಳನ್ನೂ ಕೂಡ ಒಳ್ಳೆಯ ಅಭಿರುಚಿ ಹೊಂದಿರುವವರನ್ನು ಆರಿಸಿಕೊಳ್ಳುತ್ತಾರೆ. ಹಾಗೇ ಅವರಿಗೂ ತಮ್ಮಿಂದಾದ ಪ್ರೀತಿಯನ್ನೆಲ್ಲ ಧಾರೆ ಎರೆಯುತ್ತಾರೆ. ಪ್ರೀತಿ ಪ್ರೇಮದ ವಿಷಯದಲ್ಲಿ ವಂಚನೆ ಮಾಡುವುದಿಲ್ಲ. ಪ್ರಣಯದಲ್ಲಿ ಹೊಸ ಹೊಸ ಭಂಗಿಗಳನ್ನು ಅನ್ವೇಷಿಸುವವರಲ್ಲ. ಆದರೆ ಗೊತ್ತಿರುವ ಭಂಗಿಗಳನ್ನು ಪರ್‌ಫೆಕ್ಟ್ ಆಗಿಯೇ ಮಾಡುವವರು! ಆದರೆ ದಾಂಪತ್ಯದ ಮಟ್ಟಿಗೆ ಬಂದರೆ ಎಲ್ಲ ಸರಿಯಾಗಿರಬೇಕು ಎಂದು ಬಯಸುವವರು. ಹೀಗಾಗಿ ಇವರ ಸಂಗಾತಿಗೆ ಸ್ವಲ್ಪ ಸಮಸ್ಯೆಯೇ. ಇಟ್ಟದ್ದು ಇಟ್ಟ ಹಾಗಿರಬೇಕು, ಕ್ಲೀನ್ ಆಗಿರಬೇಕು, ಎಲ್ಲೂ ಕೊಳೆ ಆಗಿರಬಾರದು ಮುಂತಾದ ಇವರ ಷರತ್ತುಗಳೆಲ್ಲ ಈಡೇರಲೇಬೇಕು. ಇಲ್ಲವಾದರೆ ಜಗಳ ಸೃಷ್ಟಿಯಾಗಬಹುದು. ಎಲ್ಲಿಯವರೆಗೆ ಎಂದರೆ ಡೈವೋರ್ಸ್ ವರೆಗೂ ಹೋಗಬಹುದು. 

ನಿಮ್ಮ ಕೆಲಸ ಆಗಬೇಕೆ? ಈ ರಾಶಿಯವರು ಈ ಬಣ್ಣದ ಬಟ್ಟೆ ಧರಿಸಿ! ...

ಸಂಬಂಧಗಳು: 
ಇವರು ಸಂಬಂಧಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಸಂಬಂಧಿಗಳನ್ನು ನೋಡಲು ಹೋಗುವಾಗ ತಪ್ಪದೆ ಗಿಫ್ಟ್ ತೆಗೆದುಕೊಂಡು ಹೋಗುವವರು. ಹೆಣ್ಣುಮಕ್ಕಳಾಗಿದ್ದರೆ, ಅಪ್ಪ ಅಮ್ಮನ ಹಾಗೆಯೇ ಮಾವ ಅತ್ತೆಯನ್ನೂ ನೋಡಿಕೊಳ್ಳುವವರು. ಗಂಡು ಮಕ್ಕಳಾಗಿದ್ದರೆ ಪತ್ನಿಯ ಕಡೆಯ ಸಂಬಂಧವನ್ನೂ ಅಚ್ಚುಕಟ್ಟಾಗಿಯೇ ಸಂಭಾಳಿಸುವವರು. ಇವರಿಂದ ಸಂಬಂಧಿಕರಿಗೆ ಯಾವಾಗಲೂ ಆನಂದ, ಉತ್ಸಾಹ, ಹುಮ್ಮಸ್ಸು ಹೊಮ್ಮುತ್ತಿರುತ್ತದೆ. ಇವರು ಇದ್ದ ಕಡೆ ಒಂದು ಆನಂದದ ಬುಗ್ಗೆ. ಯಾಕೆಂದರೆ ಇವರು ಸಾಕಷ್ಟು ಸೆನ್ಸ್ ಆಫ್‌ ಹ್ಯೂಮರ್ ಕೂಡ ಹೊಂದಿರುತ್ತಾರೆ. ಕಂಡದ್ದರಲ್ಲೆಲ್ಲಾ ಒಂದು ತಮಾಷೆಯನ್ನು ಹೊಮ್ಮಿಸುತ್ತಾರೆ. ಹೀಗಾಗಿ ಮಕ್ಕಳಿಗೂ ಇವರನ್ನು ಕಂಡರೆ ಸದಾ ಸಂತೋಷ. ಮಕ್ಕಳ ಜೊತೆ ಒಳ್ಳೆಯ ರ್ಯಾಪೋ ಹೊಂದಿರುತ್ತಾರೆ. 

ಶುಕ್ರನ ಮೀನರಾಶಿ ಪ್ರವೇಶ: ಈ ನಾಲ್ಕು ರಾಶಿಯವರಿಗೆ ಶುಕ್ರದೆಸೆ, ಈ ಅದೃಷ್ಟವಂತರಲ್ಲಿ ನೀವಿದ್ದೀರಾ! ...

ಹಣಕಾಸು ವಿಷಯ:
ಹಣಕಾಸು ವಿಷಯದಲ್ಲಿ ಇವರು ಎಷ್ಟು ಅಚ್ಚಕಟ್ಟು ಎಂದರೆ, ಮುಂದಿನ ಹತ್ತು ವರ್ಷಗಳ ತಮ್ಮ ಹಣಕಾಸು ನೀತಿಯನ್ನು ಈಗಲೇ ಪ್ಲಾನ್ ಮಾಡಿರುತ್ತಾರೆ. ಕಾಸಿಗೆ ಕಾಸು ಗಂಟು ಹಾಕುವ ಸ್ವಭಾವದವರೂ ಹೌದು. ಆದರೆ ಜೀವನದ ಮಧ್ಯ ವಯಸ್ಸಿನಲ್ಲಿ ಇವರು ಆಲ್‌ಮೋಸ್ಟ್ ಸೆಟಲ್ ಆಗಿರುತ್ತಾರೆ. ಯಾಕೆಂದರೆ ತಮ್ಮ ತಾರುಣ್ಯದಿಂದಲೇ ತಮ್ಮ ದುಡಿಮೆಯಿಂದಲೇ ಇವರು ಜೀವನವನ್ನು ಗಟ್ಟಿಯಾಗಿ ಕಟ್ಟಿಕೊಂಡು ಬಂದಿರುತ್ತಾರೆ. ಇವರಿಗೆ ಸದಾ ಕಾಲ ಹಣಕಾಸು ವಿಷಯಗಳನ್ನು ಚಿಂತಿಸುವುದೇ ಕೆಲಸ. ಸಂಬಂಧಗಳು ಎರಡನೇ ಸ್ಥಾನ. ಹಾಗೆಂದು ಹಣದ ಮುಂದೆ ಸಂಬಂಧಗಳನ್ನು ನಿರ್ಲಕ್ಷಿಸುತ್ತಾರೆ ಎಂದಲ್ಲ. ಸರಿಯಾದ ಪ್ಲಾನಿಂಗ್ ಇದ್ದರೆ ಜೀವನ ಸುಗಮ ಎಂಬುದು ಇವರ ಚಿಂತನೆ. ಆರೋಗ್ಯ ಸಮಸ್ಯೆಗಳು ಬಂದಾಗ, ತುರ್ತು ಪರಿಸ್ಥಿತಿಗಳು ಒದಗಿದಾಗ ಇವರ ಮುನ್ನೋಟ ಅಥವಾ ಭವಿಷ್ಯದ ಚಿಂತನೆಯನ್ನು ನೀವು ಶ್ಲಾಘಿಸದೆ ಇರಲಾರಿರಿ. 

ಎಸ್, ಸ ಅಕ್ಷರದಿಂದ ಆರಂಭವಾಗುವ ಹೆಸರಿನವರು ಪ್ರಣಯ ಪ್ರಿಯರಂತೆ! ...

ಇವರನ್ನು ನಂಬಬಹುದೇ?
ಖಂಡಿತವಾಗಿ ಇವರನ್ನು ನಂಬಬಹುದು. ಇವರು ಕ್ಷಣಚಿತ್ತ ಕ್ಷಣಪಿತ್ತ ಸ್ವಭಾವದವರಲ್ಲ. ಆಡಿದ ಮಾತನ್ನು ಆಡಿದ ಹಾಗೇ ಉಳಿಸಿಕೊಳ್ಳುವವರು. ಇವರು ಸಾಲ ತೆಗೆದುಕೊಂಡರು ಹೇಳಿದ ಸಮಯಕ್ಕೆ ಕರೆಕ್ಟಾಗಿ ಮರಳಿಸುತ್ತಾರೆ. ಆದರೆ ಇವರ ಬಳಿ ಸಾಲ ತೆಗೆದುಕೊಂಡು ನೀವು ಹಿಂತಿರುಗಿ ಕೊಡುವುದಕ್ಕೆ ಮೀನ ಮೇಷ ಎಣಿಸಿದರೆ, ಜೀವನಪೂರ್ತಿ ನಿಮ್ಮನ್ನು ಕಾಡದೆ ಇರಲಾರರು. 

Follow Us:
Download App:
  • android
  • ios