Asianet Suvarna News Asianet Suvarna News

Lucky Zodiac of 2022: ಹೊಸ ವರ್ಷ ಈ ಆರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

2022ರ ಪಂಚಾಂಗದ ಪ್ರಕಾರ ಕೆಲವು ರಾಶಿಗಳ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಆ ಅದೃಷ್ಟವಂತರು ನೀವಿರಬಹುದೇ ನೋಡಿ. 

Taurus and other five most lucky zodiac signs of year 2022 skr
Author
Bangalore, First Published Dec 1, 2021, 4:18 PM IST
  • Facebook
  • Twitter
  • Whatsapp

ಹೊಸ ವರ್ಷ(new year) ಅಂದರೆ ಪ್ರತಿಯೊಬ್ಬರಿಗೂ ಹೊಸ ಕನಸು(dream)ಗಳಿರುತ್ತವೆ. ಹೊಸ ವರ್ಷದಲ್ಲಾದರೂ ತಮ್ಮ ಭಾಗ್ಯದ ಬಾಗಿಲು ತೆರೆದುಕೊಳ್ಳಬಹುದೆಂಬ ಆಕಾಂಕ್ಷೆ, ನಿರೀಕ್ಷೆ ಎಲ್ಲರಿಗೂ ಇರುತ್ತದೆ. 2022ರ ಪಂಚಾಂಗದನ್ವಯ, ಕೆಲವೊಂದು ರಾಶಿಗಳಿಗೆ ಅದೃಷ್ಟ ಕುಲಾಯಿಸಲಿದೆ. ಈ ಕೆಳಗಿನ ರಾಶಿಯವರು ಕಂಡ ಕನಸುಗಳೆಲ್ಲ ಬರುವ ವರ್ಷ ನನಸಾಗಲಿದೆ. ಇವರ ರಾಶಿಗೆ ಗ್ರಹ, ನಕ್ಷತ್ರಗಳೆಲ್ಲವೂ ಕೂಡಿ ಬಂದು ಒಳಿತನ್ನೇ ಅನುಗ್ರಹಿಸಲಿವೆ. ಇಂಥ ಅದೃಷ್ಟಶಾಲಿ ರಾಶಿ ಯಾವುವೆಲ್ಲ ಅಂತ ನೋಡಿ.

ವೃಷಭ(taurus)
ಹೊಸ ವರ್ಷವು ವೃಷಭ ರಾಶಿಯವರ ನಿರೀಕ್ಷೆಗಳನ್ನು ಹುಸಿ ಹೋಗಲು ಬಿಡುವುದಿಲ್ಲ. ಉದ್ಯೋಗ(job) ಕಂಡುಕೊಳ್ಳಲು, ಉದ್ಯೋಗದಲ್ಲಿ ಮೇಲಕ್ಕೇರಲು ಅವಕಾಶ(oppurtunity)ಗಳ ಮಹಾಪೂರವೇ ಎದುರಾಗುತ್ತದೆ. ಸರಿಯಾದ ಆಯ್ಕೆ ಮಾಡಿಕೊಳ್ಳುವ ಜಾಣ್ಮೆ ಬೇಕಷ್ಟೇ. ಇನ್ನೊಬ್ಬರಿಗೆ ಸಹಾಯ ಮಾಡುವಾಗ ಸಹಾಯ ದುರುಪಯೋಗವಾಗದಂತೆ ಸ್ವಲ್ಪ ಯೋಚಿಸಿ ಮುಂದುವರೆಯಿರಿ. ಶೇರು- ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ದೊಡ್ಡ ಮಟ್ಟದ ಲಾಭ ಬಂದು ಬದುಕಿನ ಗತಿ ಬದಲಾಯಿಸುವುದು. ಹೊಸ ಬಿಸ್ನೆಸ್ ಆರಂಭಿಸಬಹುದು.

ಸಿಂಹ(Leo)
ಸಿಂಹ ರಾಶಿಯವರ ಪಾಲಿಗೆ 2022 ಒಂದು ವರವೇ ಸರಿ. ನಿಮ್ಮ ಉದ್ಯೋಗ, ವ್ಯಾಪಾರಗಳೆಲ್ಲವೂ ಯಶಸ್ಸಿನ ಮುಖ ನೋಡುವುವು. ಹೊಸ ಅವಕಾಶಗಳು, ಪ್ರಮೋಶನ್(promotion) ಎಲ್ಲ ಧಾರಾಳವಾಗಿ ಸಿಗಲಿದೆ. ಬಹುಕಾಲದ ಕನಸನ್ನು ನನಸು ಮಾಡಲು ಮುನ್ನುಡಿ ಬರೆಯುವಿರಿ. ಮನೆ, ವಾಹನದ ಕನಸು(dream) ಈ ವರ್ಷ ಈಡೇರಲಿದೆ. ಕೋರ್ಟ್(court) ವ್ಯಾಜ್ಯಗಳನ್ನು ಸಂಧಾನದ ಮೂಲಕ ಈಡೇರಿಸಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುವುದೇ ಉತ್ತಮ. ಮಗು ಹೊಂದಬಯಸುವ ದಂಪತಿಗೆ ಸಂತಾನ ಪ್ರಾಪ್ತಿಯಾಗುವುದು. 

ತುಲಾ(Libra)
ಬದುಕಿನಲ್ಲಿ ಯಶಸ್ಸು(success) ನಿಮಗೆ  ಸನ್ನಿಹಿತವಾಗಿದೆ. ಔದ್ಯೋಗಿಕ ಬದುಕು, ವೈವಾಹಿಕ ಬದುಕು ಎಲ್ಲವೂ ಸಂತೋಷವನ್ನೇ ತರಲಿವೆ. ನೀವು ಬಯಸುವ ನಿರ್ದಿಷ್ಟ ವಿಷಯಗಳಿಗೆ ಹೆಚ್ಚಿನ ಗಮನ ಹರಿಸಿ ಪ್ರಯತ್ನ ಹಾಕಿದರೆ ಅದೃಷ್ಟ ಖಂಡಿತಾ ನಿಮ್ಮ ಕೈ ಹಿಡಿಯುತ್ತದೆ. ಭೂಮಿ ಕೊಳ್ಳುವ ಯೋಗವಿದೆ. ತಂದೆ ಕಡೆಯ ಸಂಬಂಧಿಕರಿಂದ ಬದುಕಿನ ನಿರ್ಧಾರವೊಂದು ಗಟ್ಟಿಯಾಗಲಿದೆ.  ಪೋಷಕರಿಗೆ ಮಕ್ಕಳ ಭವಿಷ್ಯದ ಚಿಂತೆ ನೀಗಿ ಸಮಾಧಾನ ಸಿಗುವುದು. 

Effect of Solar Eclipse on Zodiac signs: ಸೂರ್ಯಗ್ರಹಣ: ಯಾವ ರಾಶಿಗೆ ಏನು ಫಲ?

ವೃಶ್ಚಿಕ(Scorpio)
ವೃಶ್ಚಿಕ ರಾಶಿಯವರಿಗೆ 2021 ಬಹಳ ನಿರಾಶಾದಾಯಕವಾಗಿತ್ತು. ಆದರೆ, 2022 ಹಳೆಯ ನಿರಾಶೆಯೆಲ್ಲ ಮರೆಯುವಂತೆ ಹೊಸತನ್ನು ಕೊಡಲಿದೆ. ಕೈ ಹಾಕಿದ್ದೆಲ್ಲ ಚಿನ್ನವಾಗಲಿದೆ. ನಿಮ್ಮ ಕನಸಿನ ಉದ್ಯೋಗ ನಿಮಗೆ ದೊರಕಲಿದೆ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಬಗೆಹರಿಯಲಿವೆ. ವಿದೇಶ ಪ್ರವಾಸದ ಕನಸೂ ಈಡೇರಲಿದೆ. ಮಧ್ಯೆ ಮಧ್ಯೆ ಕೊಂಚ ನಿರಾಸೆ ಮೂಡಿದರೂ ಇಡೀ ವರ್ಷದ ಫಲ ನೋಡಿದಾಗ ಎಲ್ಲವೂ ಒಳಿತೇ ಆಗಲಿದೆ. ಹೆಚ್ಚು ಮೊತ್ತದ ಹೊಸ ವಸ್ತುಗಳು ನಿಮ್ಮದಾಗಲಿವೆ. 

ಮಕರ(Capricorn)
ಬರುವ ವರ್ಷ ಮಕರ ರಾಶಿಯವರಿಗೆ ಒಳ್ಳೊಳ್ಳೆ ಸುದ್ದಿಗಳನ್ನು ಕೇಳುವ ಭಾಗ್ಯವಿದೆ. ನಿಮ್ಮ ಪಾಲಿಗಿದು ಬಹಳ ಅದೃಷ್ಟಶಾಲಿ(lucky) ವರ್ಷವಾಗಲಿದೆ. ಯಶಸ್ಸಿನ ಹಾದಿಯಲ್ಲಿದ್ದೀರಿ. ಅದು ನಿಮ್ಮನ್ನು ಗುರಿ ಮುಟ್ಟಿಸದೆ ಬಿಡದು. ಬಹಳ ಸಮಯದಿಂದ ಮುಂದೆ ಹೋಗದೆ ನಿಂತ ವಿವಾಹ ಸಂಬಂಧ ಮಾತುಕತೆಗಳು ಮುಂದೆ ಹೋಗಿ ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ. ವಿದ್ಯಾರ್ಥಿಗಳು ಅತ್ಯುನ್ನತ ಪ್ರಗತಿ ಸಾಧಿಸಿ ಭವಿಷ್ಯದ ಅಡಿಪಾಯ ಭದ್ರಪಡಿಸಿಕೊಳ್ಳುವ ಅವಕಾಶಗಳಿವೆ. 

Luck is on the way: ಸಧ್ಯದಲ್ಲೇ ಶ್ರೀಮಂತರಾಗೋ ಅದೃಷ್ಟ ಈ ರಾಶಿಗಳವರದು

ಕುಂಭ(Aquarius)
ಯಾವ ನಿರೀಕ್ಷೆಯಿಂದ ಹೊಸ ವರ್ಷ ಆರಂಭಿಸುತ್ತೀರೋ ಆ ನಿರೀಕ್ಷೆಗಳೆಲ್ಲವೂ ಸಫಲವಾಗಲಿವೆ. ಬದುಕಿನ ಬಹಳಷ್ಟು ವಿಷಯಗಳಲ್ಲಿ ಯಶಸ್ಸನ್ನು ನೋಡುವಿರಿ. ಮದುವೆ(marriage), ಪ್ರೇಮ, ನಿಶ್ಚಿತಾರ್ಥ, ಉದ್ಯೋಗ, ಮಗು ಮುಂತಾದ ವಿಷಯಗಳಿಗೆ ಈ ವರ್ಷ ಪ್ರಯತ್ನ ಹಾಕಿದಲ್ಲಿ ಫಲ ಸಿಗದೆ ಇರದು. ವಿದೇಶ ವ್ಯಾಸಂಗಕ್ಕೆ ಅವಕಾಶಗಳು ಬರಲಿವೆ. ಸಮಾಜದಲ್ಲಿ ಗೌರವ ಹೆಚ್ಚಿಸುವ ಸಂಗತಿಗಳು ಜರುಗಲಿವೆ. 
 

Follow Us:
Download App:
  • android
  • ios