Asianet Suvarna News Asianet Suvarna News

Mahabharata Facts: ಇಂದಿಗೂ ಜೀವಂತವಿರುವ ಮಹಾಭಾರತ ವ್ಯಕ್ತಿಗಳಿವರು

ಮಹಾಭಾರತದ ಯುದ್ಧವನ್ನು ಇಲ್ಲಿನವರೆಗಿನ ದೊಡ್ಡ ಯುದ್ಧವೆಂದು ಪರಿಗಣಿಸಲಾಗಿದೆ. ಕುರುಕ್ಷೇತ್ರದಲ್ಲಿ ಅನೇಕ ಮಹಾನ್ ವ್ಯಕ್ತಿಗಳ ಸಾವಾಗಿದೆ. ಆದ್ರೆ ಯುದ್ಧದಲ್ಲಿ ಪಾಲ್ಗೊಂಡಿದ್ದ ಅಥವಾ ಮಹಾಭಾರತದ ಭಾಗವಾಗಿದ್ದ ಕೆಲ ವ್ಯಕ್ತಿಗಳು ಇನ್ನೂ ಜೀವಂತವಾಗಿದ್ದಾರೆಂದು ನಂಬಲಾಗಿದೆ. ಅವರ ಬಗ್ಗೆ ವಿವರ ಇಲ್ಲಿದೆ.
 

People Still Alive After Mahabharata War
Author
First Published Mar 30, 2023, 3:51 PM IST | Last Updated Mar 30, 2023, 3:53 PM IST

ಮಹರ್ಷಿ ವೇದವ್ಯಾಸರಿಂದ ರಚಿತವಾದ, ಭಾರತದ ಸಂಸ್ಕೃತಿಯ ದ್ಯೋತಕ ಮತ್ತು ಹಿಂದೂ ಧರ್ಮದ ಪವಿತ್ರ ಗ್ರಂಥ ಮಹಾಭಾರತ ಜಾಗತಿಕ ಮಟ್ಟದಲ್ಲಿ ಮಹಾಕಾವ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಲ್ಲಿ ವರ್ಣನೆಯಾದ ಕಥೆಗಳು, ಕುರುಕ್ಷೇತ್ರ ಯುದ್ಧ, ಶ್ರೀಕೃಷ್ಣನ ಭಗವದ್ಗೀತೆ, ದ್ರೌಪದಿಯ ವಸ್ತ್ರಾಪಹರಣ, ಜೂಜಾಟ, ಅರಗಿನಮನೆಯ ವಾಸ, ಹೋರಾಟ, ಸಾವು ನೋವು ಇಂತಹ ಹತ್ತು ಹಲವು ಅಂಶಗಳು ಒಂದಲ್ಲ ಒಂದು ರೀತಿಯಲ್ಲಿ ಮನುಷ್ಯನಿಗೆ ಕೆಡುಕು ಮತ್ತು ಒಳಿತುಗಳ ಬೋಧನೆಯನ್ನು ಮಾಡುತ್ತವೆ. ಮಹಾಭಾರತದಲ್ಲಿ ಹದಿನೆಂಟು ದಿನಗಳ ಕಾಲ ನಡೆದ ಯುದ್ಧ ಇಂದಿಗೂ ಅತಿದೊಡ್ಡ ಯುದ್ಧ ಎಂದೇ ಪ್ರಖ್ಯಾತಿ ಹೊಂದಿದೆ. ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡು ಇಂದಿಗೂ ಜೀವಂತವಿರುವ ಕೆಲವು ವ್ಯಕ್ತಿಗಳ ಬಗ್ಗೆ ನಾವು ಇಂದು ತಿಳಿಯೋಣ.

ವೇದವ್ಯಾಸರು (Vedavyasa) : ಮಹಾಭಾರತ (Mahabharata) ಗ್ರಂಥದಲ್ಲಿ ಋಷಿ ವೇದವ್ಯಾಸರನ್ನು ಬ್ರಾಹ್ಮಣ (Brahmin) ಋಷಿ ಪರಾಶರ ಮತ್ತು ಸತ್ಯವತಿಯ ಮಗ ಎಂದು ವರ್ಣನೆ ಮಾಡಲಾಗಿದೆ. ವೇದವ್ಯಾಸರನ್ನು ವೇದಮಂತ್ರಗಳ ಸೂತ್ರದಾರ ಮತ್ತು ಹದಿನೆಂಟು ಪುರಾಣಗಳ ಮತ್ತು ಬ್ರಹ್ಮ ಸೂತ್ರಗಳ ಕರ್ತೃ ಎಂದು ಕರೆಯಲಾಗುತ್ತದೆ. ವೇದವ್ಯಾಸರು ರಚಿಸಿದ ಮಹಾಭಾರತ ಗ್ರಂಥವನ್ನು ಪಾರ್ವತಿ ಪುತ್ರ ಗಣೇಶ ಬರೆದಿದ್ದಾನೆ ಎಂಬುದರ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಹಾಗಾಗಿ ಮಹರ್ಷಿ ವೇದವ್ಯಾಸರು ಇಂದಿಗೂ ಜೀವಂತವಿದ್ದಾರೆ ಎಂದು ಹಿಂದೂ ಪುರಾಣ ಹೇಳುತ್ತೆ.

Zodiac Sign: ಪ್ರಾಮಾಣಿಕವಾಗಿ ಭಾವನೆ ಹಂಚ್ಕೊಳೋಕೆ ಸೋಲ್ತಾರೆ ಈ ಜನ

ಪರಶುರಾಮ: ಪರಶು ಎಂದರೆ ಕೊಡಲಿ. ಪರಶುವನ್ನು ಹಿಡಿದ ರಾಮನೇ ಪರಶುರಾಮ. ಜಮದಗ್ನಿ ಮತ್ತು ರೇಣುಕಾದೇವಿಯ ಮಗನಾದ ಪರಶುರಾಮ ದಶಾವತಾರದಲ್ಲಿನ ಆರನೇ ಅವತಾರವಾಗಿದ್ದಾನೆ. ಈತ ಮಹಾನ್ ಯೋಧ, ಗುರು ಮತ್ತು ಬ್ರಾಹ್ಮಣ ಋಷಿಯಾಗಿದ್ದಾನೆ. ಮಹಾನ್ ಯೋಧನಾದ ಈತನನ್ನು ಭೀಷ್ಮ, ದ್ರೋಣಾಚಾರ್ಯ ಮತ್ತು ಕರ್ಣರಿಗೆ ಗುರು ಎಂದು ಕೂಡ ಗುರುತಿಸಿಕೊಂಡಿದ್ದಾನೆ. ಸದಾಕಾಲ ಪರಶುವನ್ನು ಹಿಡಿದ ಕೋಪಿಷ್ಠ ಬ್ರಾಹ್ಮಣನಾಗೇ ಕಾಣಿಸುವ ಪರಶುರಾಮ ಒಮ್ಮೆ ತನ್ನ ಅಧಿಕಾರ ಮತ್ತು ಕೋಪದಿಂದ ಅನೇಕ ಕ್ಷತ್ರಿಯ ಯೋಧರನ್ನು ಕೊಂದಿದ್ದಾನೆ.

ದುರ್ವಾಸ ಮುನಿಗಳು : ಪರಶಿವನ ಅವತಾರ ಎಂದೇ ಹೇಳಲಾಗುವ ದುರ್ವಾಸರು ತಪಸ್ವಿಗಳು ಮತ್ತು ಮುಂಗೋಪಿಗಳೂ ಹೌದು. ದುರ್ವಾಸರು ಕುಂತಿಯ ಸೇವೆಗೆ ಮೆಚ್ಚಿ ಕಷ್ಟ ಬಂದಾಗ ತನಗಿಷ್ಟ ಬಂದ ದೇವರನ್ನು ಆಹ್ವಾನಿಸುವ ವರವನ್ನು ಅವಳಿಗೆ ನೀಡಿದ್ದರು. ದುರ್ವಾಸರ ಆಶೀರ್ವಾದದಿಂದಲೇ ಕುಂತಿ ಕರ್ಣನಿಗೆ ಜನ್ಮ ನೀಡಿದಳು. ಮಹಾಭಾರತದಲ್ಲಿ ದುರ್ವಾಸರು ಪಾಂಡವರ ಜೊತೆ ವನವಾಸದಲ್ಲಿ ಕೂಡ ಭಾಗಿಯಾಗಿದ್ದರು. ಒಮ್ಮೆ ದುರ್ಯೋಧನ ತನ್ನ ಕುಟಿಲತನದಿಂದ ಪಾಂಡವರು ದುರ್ವಾಸರ ಕೋಪಕ್ಕೆ ಗುರಿಯಾಗುವಂತೆ ಮಾಡುವ ಪ್ರಯತ್ನ ಮಾಡಿದ. ಕೋಪಿಷ್ಠರಾದ ದುರ್ವಾಸರು ಪಾಂಡವರಿಗೆ ಶಾಪ ಕೊಡಬೇಕೆಂಬುದು ದುರ್ಯೋಧನನ ಗುರಿಯಾಗಿತ್ತು. ಅಂತಹ ಸಂದರ್ಭದಲ್ಲಿ ದ್ರೌಪದಿ ಶ್ರೀಕೃಷ್ಣನನ್ನು ನೆನೆದಾಗ ಶ್ರೀಕೃಷ್ಣ , ಪಾಂಡವರು ದುರ್ವಾಸರ ಕೋಪ, ಶಾಪದಿಂದ ಪಾಂಡವರನ್ನು ರಕ್ಷಿಸುತ್ತಾನೆ.

ಸ್ವಂತ ಬ್ಯುಸಿನೆಸ್ ಪ್ರಾರಂಭಿಸೋ ಮೊದಲು, ಆಚಾರ್ಯ ಚಾಣಕ್ಯ ಏನ್ ಹೇಳಿದ್ದಾರೆ ತಿಳಿಯಿರಿ

ಹನುಮಂತ : ರಾಮಾಯಣದಲ್ಲಿ ಹನುಮಂತನನ್ನು ಹಿಂದೂ ದೇವತೆ ಮತ್ತು ರಾಮನ ಬಂಟನ ರೂಪದಲ್ಲಿ ನೋಡಲಾಗುತ್ತದೆ. ಮಹಾಭಾರತದಲ್ಲಿ ಕೂಡ ಅರ್ಜುನನ ಧ್ವಜದಲ್ಲಿ ಹನುಮಂತನಿರುವುದು ಕಂಡುಬರುತ್ತದೆ. ಮಹಾಭಾರತದಲ್ಲಿ ಬರುವ ಕಥೆಯ ಅನುಸಾರ ಒಮ್ಮೆ ಹನುಮಂತನು ಒಬ್ಬ ಮುದಿ ಕಪಿಯ ರೂಪದಲ್ಲಿ ದಾರಿಯಲ್ಲಿ ಮಲಗಿರುತ್ತಾನೆ. ದಾರಿಯಲ್ಲಿ ಬರುವ ಭೀಮನಿಗೆ ಹನುಮಂತ ತನ್ನ ಬಾಲವನ್ನು ಎತ್ತಿ ಪಕ್ಕಕ್ಕಿಟ್ಟು ಮುಂದಕ್ಕೆ ಹೋಗುವಂತೆ ಹೇಳುತ್ತಾನೆ. ಹನುಮಂತ ಮಾತಿನಂತೆ ಭೀಮ ಹನುಮಂತನ ಬಾಲವನ್ನು ಪಕ್ಕಕ್ಕಿಡಲು ಅಶಕ್ತನಾಗುತ್ತಾನೆ. ಆಗ ಭೀಮನಿಗೆ ಇವನು ಸಾಧಾರಣ ವ್ಯಕ್ತಿಯಲ್ಲ ಎಂಬುದು ಸ್ಪಷ್ಟವಾಗಿ ಹನುಮಂತನ ಬಳಿ ನಿಜ ರೂಪವನ್ನು ತೋರಿಸಬೇಕೆಂದು ವಿನಂತಿಸಿಕೊಳ್ಳುತ್ತಾನೆ. ನಂತರ ಹನುಮಂತ ತನ್ನ ನಿಜ ರೂಪವನ್ನು ತೋರಿಸಿ ಭೀಮನ ಯುದ್ಧಘೋಷಣೆಯಿಂದ ಶತ್ರುಗಳ ಹೃದಯ ದುರ್ಬಲಗೊಳ್ಳುತ್ತದೆ ಎಂದು ಹೇಳುತ್ತಾನೆ.

ಅಶ್ವತ್ಥಾಮ : ಅಶ್ವತ್ಥಾಮ ದ್ರೋಣಾಚಾರ್ಯರ ಮಗ, ಕೌರವರ ರಾಜಕುಮಾರ ಮತ್ತು ದುರ್ಯೋಧನನ ಸ್ನೇಹಿತ. ಅಶ್ವತ್ಥಾಮ ಕೌರವರ ಪರವಾಗಿ ಹೋರಾಡಿದವನಾದರೂ ಕೃಷ್ಣನ ಶಾಪದಿಂದ ಮಹಾಭಾರತ ಯುದ್ಧದಲ್ಲಿ ಕೂಡ ಸೋಲದೇ ಕಲಿಯುಗದ ಕೊನೆಯವರೆಗೂ ಜೀವಂತವಾಗಿರುತ್ತಾನೆ.

Latest Videos
Follow Us:
Download App:
  • android
  • ios