ಸ್ವಂತ ಬ್ಯುಸಿನೆಸ್ ಪ್ರಾರಂಭಿಸೋ ಮೊದಲು, ಆಚಾರ್ಯ ಚಾಣಕ್ಯ ಏನ್ ಹೇಳಿದ್ದಾರೆ ತಿಳಿಯಿರಿ
ನೀವು ನಿಮ್ಮದೇ ಆದ ಸ್ವಂತ ಬ್ಯುಸಿನೆಸ್ ಆರಂಭಿಸುವ ಬಗ್ಗೆ ಯೋಚನೆ ಮಾಡಿದ್ದೀರಿ. ಆದರೆ ಯಾವ ರೀತಿ ಆರಂಭಿಸುವುದು, ಅದಕ್ಕೇನು ಮಾಡಬೇಕು ಅನ್ನೊದು ತಿಳಿತಾ ಇಲ್ವೇ? ಹಾಗಿದ್ರೆ ಆಚಾರ್ಯ ಚಾಣಕ್ಯನ ನೀತಿಗಳನ್ನು ನೀವು ತಿಳಿಯಬೇಕು. ಚಾಣಕ್ಯ ವ್ಯವಹಾರದ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದಾರೆ.
ಇತ್ತೀಚಿಗೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಬಯಸುತ್ತಾರೆ. ಇದಕ್ಕಾಗಿ, ಕೆಲವರು ಉದ್ಯೋಗಗಳನ್ನು ಮಾಡುತ್ತಾರೆ, ಕೆಲವರು ತಮ್ಮದೇ ಆದ ವ್ಯವಹಾರ ಮಾಡುತ್ತಾರೆ.ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಇತರೆ ಉದ್ಯೋಗಗಳನ್ನು ಕಡಿಮೆ ಮತ್ತು ತಮ್ಮ ಸ್ವಂತ ವ್ಯವಹಾರವನ್ನು ಹೆಚ್ಚು ಮಾಡಲು ಬಯಸುತ್ತಾರೆ. ಜನರು ಸಹ ಅದಕ್ಕಾಗಿ ಶ್ರಮಿಸುತ್ತಾರೆ. ಕೆಲವರು ಮಾತ್ರ ಇದರಲ್ಲಿ ಯಶಸ್ವಿಯಾಗುತ್ತಾರೆ. ಹಾಗೆಯೇ, ಫೇಲ್ಯೂರ್ ಜನರ ಸಂಖ್ಯೆ ಸಹ ಹೆಚ್ಚಾಗಿದೆ. ನೀವು ಸಹ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಆಚಾರ್ಯ ಚಾಣಕ್ಯನ (Acharya chanakya) ಈ ವಿಷಯಗಳನ್ನು ಖಂಡಿತವಾಗಿಯೂ ಗಮನಿಸಿ.
ಬಿಸ್ನೆಸ್ ನಲ್ಲಿ(Business) ಮಾತಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಾತನ್ನು ಮಧುರವಾಗಿಡೋ ಮೂಲಕ, ವ್ಯಕ್ತಿಯ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತೆ ಎಂದು ಹೇಳಲಾಗುತ್ತೆ. ಹಾಗೆಯೇ, ಕಹಿ ಪದದ ಬಳಕೆಯು ಸಂಬಂಧವನ್ನು ಹದಗೆಡಿಸೋದಲ್ಲದೆ ವ್ಯವಹಾರದಲ್ಲಿ ನಷ್ಟ ಹೆಚ್ಚಿಸುತ್ತೆ. ಇದಕ್ಕಾಗಿ, ವ್ಯವಹಾರ ಮಾಡುವಾಗ ನಿಮ್ಮ ಮಾತನ್ನು ಸಿಹಿಯಾಗಿರಿಸಿಕೊಳ್ಳಿ. ಸರಳವಾಗಿ ಹೇಳುವುದಾದರೆ, ಸಿಹಿಯಾಗಿ ಮಾತನಾಡಿ.
ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಗಂಭೀರವಾಗಿ ಯೋಚಿಸಿ(Think). ವಿಶೇಷವಾಗಿ, ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಯೋಚಿಸಿ. ನೀವು ಪ್ರಾರಂಭಿಸಿದ ನಂತರ ಮಧ್ಯದಲ್ಲಿ ನಿಲ್ಲಿಸಬೇಡಿ. ನಿಮ್ಮ ಕೆಲಸವನ್ನು ಸಂಪೂರ್ಣ ಸಮರ್ಪಣೆಯಿಂದ ಮಾಡಿ.
ಅನೇಕ ಜನರು ಬೇರೆ ಜನರೊಂದಿಗೆ ವಿಚಾರಗಳ ವಿನಿಮಯದಲ್ಲಿ ಫೇಲ್ಯೂರ್(Failure) ಬಗ್ಗೆ ಮಾತನಾಡುತ್ತಾರೆ. ಅದರಿಂದ ಪ್ರಭಾವಿತರಾಗಬೇಡಿ. ನೀವು ತಾಳ್ಮೆಯಿಂದಿರಬೇಕು. ಈ ನಿಟ್ಟಿನಲ್ಲಿ, ಆಚಾರ್ಯ ಚಾಣಕ್ಯನು ಸಸ್ಯವು ಬೆಳೆಯಲು ಸಮಯ ತೆಗೆದುಕೊಳ್ಳುತ್ತೆ ಎಂದು ಹೇಳುತ್ತಾನೆ. ಇದಕ್ಕಾಗಿ, ತಾಳ್ಮೆಯಿಂದಿರಿ ಮತ್ತು ನಿಮ್ಮ ಕೆಲಸವನ್ನು ಮುಂದುವರಿಸಿ.
ನೀವು ವ್ಯವಹಾರವನ್ನು ಪ್ರಾರಂಭಿಸಿದಾಗ, ನಿಮ್ಮ ಕೆಲಸದ ಬಗ್ಗೆ ಬೇರೆಯವರಿಗೆ ತಿಳಿಸಬೇಡಿ. ನಿಮ್ಮ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ(Share). ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ವ್ಯವಹಾರದ ಬಗ್ಗೆ ಮಾತನಾಡಿದರೆ, ದ್ವೇಷದ ಜನರು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು.
ಆಚಾರ್ಯ ಚಾಣಕ್ಯನ ಪ್ರಕಾರ, ಯಾವುದೇ ಕೆಲಸವನ್ನು ಮಾಡುವಾಗ, ನೈತಿಕ ಸ್ಥೈರ್ಯವನ್ನು (Morality) ಕುಗ್ಗಿಸುವ ಜನರಿಂದ ದೂರವಿರಬೇಕು. ಈ ಕಾರ್ಯದಲ್ಲಿ ನೀವು ಯಶಸ್ವಿಯಾಗಲು(Success) ಸಾಧ್ಯವಿಲ್ಲ ಎಂದು ಯಾರಾದರೂ ನಿಮಗೆ ಸಲಹೆ ನೀಡಿದರೆ, ಅವರ ಮಾತುಗಳಿಂದ ವಿಚಲಿತರಾಗಬೇಡಿ.
ವ್ಯವಹಾರವನ್ನು ಪ್ರಾರಂಭಿಸಿದ ನಂತರ, ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಕಠಿಣ ಪರಿಶ್ರಮ(Hardwork) ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಬ್ಯುಸಿನೆಸ್ ಉನ್ನತ ಮಟ್ಟದಲ್ಲಿ ಮಿಂಚುವುದು ಖಚಿತ. ಬೇಕಾದರೆ ಕಾದು ನೋಡಿ.