ನಿಮ್ಮ ಜನ್ಮರಾಶಿಗೂ ಪಂಚಭೂತಗಳಿಗೂ ಹತ್ತಿರದ ಸಂಬಂಧವಿದೆ. ಪ್ರತಿ ಜನ್ಮರಾಶಿಯೂ ಒಂದಲ್ಲ ಒಂದು ಪಂಚಭೂತದ ಗುಣ ಹೊಂದಿರುತ್ತದೆ. ಹಾಗೆಯೇ ಬೇರೊಂದು ಪಂಚಭೂತದಿಂದ ಅಪಾಯವೂ ಇರುತ್ತದೆ. ಅವುಗಳನ್ನು ಮೊದಲೇ ತಿಳಿದುಕೊಂಡಿದ್ದರೆ, ಅವುಗಳ ಬಳಿ ಹೋದಾಗ ಹೆಚ್ಚು ಹುಷಾರಾಗಿರಬಹುದು. ಹಾಗೆಂದು ಇವುಗಳಿಂದ ಅಪಾಯವಿದ್ದೇ ಇದೆ ಎಂದರ್ಥವಲ್ಲ. ಅದೂ ಒಂದು ಸಾಧ್ಯತೆಯಷ್ಟೇ. ಎಚ್ಚರದಿಂದಿದ್ದರೆ ಇವುಗಳಿಂದ ಸಾಕಷ್ಟು ಪ್ರಯೋಜನವಿದೆ. ಹಾಗೆಯೇ ನಿಮಗೆ ಯಾವುದರಿಂದ ಅಪಾಯವಿದೆ ಎಂಬುದನ್ನು ಗೊತ್ತುಮಾಡಿಕೊಂಡು, ಅವುಗಳನ್ನು ಆರಾಧಿಸುತ್ತ ಇದ್ದರೆ ಲಾಭವೂ ಇದೆ.

ಮೇಷ ರಾಶಿ

ನಿಮ್ಮ ರಾಶಿಯ ಗುಣ ಬೆಂಕಿ. ನಿಮಗೆ ನೀರಿನಿಂದ ಅಪಾಯವಿದೆ. ಕೆರೆ, ನದಿ, ಸಮುದ್ರಗಳ ಬಳಿಗೆ ಹೋದಾಗ ಹುಷಾರಾಗಿರಬೇಕು. ನೀರಿನ ಮೂಲಗಳನ್ನು ಆರಾಧಿಸಿ, ಜಲಾರಾಧನೆ ಮಾಡಿದರೆ ಕಂಟಕವಿಲ್ಲ.

 

ವೃಷಭ ರಾಶಿ

ನಿಮ್ಮ ರಾಶಿಯ ಗುಣ ಭೂಮಿ. ಭೂಮಿಗೆ ಯಾವಾಗಲೂ ಆಕಾಶದಿಂದ ಅಪಾಯ. ಅಂದರೆ ಜೋರು ಮಳೆ, ಚಂಡಮಾರುತ, ಸುಂಟರಗಾಳಿ, ಸಿಡಿಲು ಮುಂತಾದವುಗಳಿಂದ ಅಪಾಯದ ಸಂಭವ ಇದೆ.

 

ನಿಮ್ಮ ರಾಶಿಯ ಇನ್ನೊಂದು ಮುಖ

 

ಮಿಥುನ ರಾಶಿ

ಇವರ ರಾಶಿಯ ಗುಣ ಗಾಳಿ. ಗಾಳಿಯನ್ನು ತಡೆಯುವುದು ಪರ್ವತ ಅರ್ಥಾತ್‌ ಭೂಮಿ. ಅಂದರೆ ಭೂಮಿ ಕುಸಿತದ ಸಂದರ್ಭದಲ್ಲಿ ನೀವು ಹತ್ತಿರ ಇರಲೇಬಾರದು. ದುರ್ಬಲ ಕಟ್ಟಡಗಳಲ್ಲಿ ವಾಸಿಸಬಾರದು.

 

ಕಟಕ ರಾಶಿ

ಕಟಕ ರಾಶಿಯ ಗುಣ ನೀರು. ಮೂತ್ರಕೋಶ ಸಂಬಂಧಿತ ಕಾಯಿಲೆ, ಕಿಡ್ನಿ ಪ್ರಾಬ್ಲೆಮ್‌ಗಳು ನಿಮ್ಮನ್ನು ಕಾಡಬಹುದು. ಚೆನ್ನಾಗಿ ನೀರು, ದ್ರವಪದಾರ್ಥ ಕುಡಿಯುವುದು ಅಗತ್ಯ. ಕಿಡ್ನಿಯ ಆರೋಗ್ಯಕ್ಕೆ ಸಂಬಂಧಿಸಿ ಜಾಗರೂಕರಾಗಿರಬೇಕು.

 

ಸಿಂಹ ರಾಶಿ

ಇವರ ಗುಣ ಬೆಂಕಿಯದ್ದು. ಆದರೆ ಸಿಂಹ ರಾಶಿ ಆಗಿರುವುದರಿಂದ ನೀರಿನ ಅಪಾಯವಿಲ್ಲ. ಬೆಂಕಿ ಅಥವಾ ಬೆಂಕಿಯಂಥ ಮಾರಕ ರೋಗಗಳದ್ದೇ ಚಿಂತೆ. ಧೂಮಪಾನ, ಮಧ್ಯಪಾನದಂಥ ಅಭ್ಯಾಸಗಳು ಇದ್ದರೆ ಅವುಗಳಿಂದ ದೂರ ಉಳಿಯಲು ಮನಸ್ಸು ಮಾಡಿ.

 

ಕನ್ಯಾ ರಾಶಿ

ಕನ್ಯಾ ರಾಶಿಯವರು ಭೂಮಿಯನ್ನು ಗುಣವಾಗಿ ಹೊಂದಿದವರು. ಇವರಿಗೆ ಯಾವುದರಿಂದಲೂ ಭಯವಿಲ್ಲ. ಗಾಳಿ ಬೆಳಕು ನೀರು ಬೆಂಕಿಗಳು ಇವರೊಡನೆ ಪ್ರೀತಿಯಿಂದ ಸಹಬಾಳ್ವೆ ನಡೆಸುತ್ತವೆ.

 

ತುಲಾ ರಾಶಿ

ತುಲಾ ರಾಶಿಯವರ ಗುಣ ಗಾಳಿ. ಗಾಳಿಯಿಂದ ಸಮಸ್ಯೆ ಉಂಟಾಗಬಹುದು. ಸುಂಟರಗಾಳಿ, ಚಂಡಮಾರುತಗಳು ಅಪಾಯ. ಕೆಲವೊಮ್ಮೆ ದೇಹದೊಳಗಿನ ವಾಯು, ಅಂದರೆ ಗ್ಯಾಸ್ಟ್ರಿಕ್‌ ಸಮಸ್ಯೆ ಕೂಡ ಉಂಟಾಗಬಹುದು.

 

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ಗುಣ ನೀರು. ನೀರಿನಲ್ಲಿ ಉಸಿರುಗಟ್ಟುವ ಸಂದರ್ಭಗಳಲ್ಲಿ ಹುಷಾರಾಗಿ ಇರಬೇಕು. ಉದಾಹರಣೆಗೆ ಈಜುಕೊಳ. ಸಮುದ್ರದಲ್ಲಿ ಬಹಳ ದೂರ ಅಥವಾ ಬಹಳ ಆಳದಲ್ಲಿ ಈಜಲು ಹೋಗಬಾರದು.

 

ಧನು ರಾಶಿ

ನಿಮ್ಮ ರಾಶಿಯಲ್ಲಿ ಬೆಂಕಿಯ ಗುಣ ಕಾಣಿಸುತ್ತಿದೆ. ಬೆಂಕಿಯಿಂದ ಅಪಾಯವಿಲ್ಲ. ಆದರೆ ನೀರು ಮತ್ತು ಗಾಳಿಗಳು ಸೇರಿದಾಗ ಉಂಟಾಗುವ ಸನ್ನಿವೇಶಗಳು ನಿಮಗೆ ಅಪಾಯಕಾರಿ. ಆಳವಿಲ್ಲದ ನೀರಿನಲ್ಲಿ ಈಜಲು ಕಲಿಯಿರಿ. ಈಜು ಪರಿಣತಿ ಪಡೆದ ಬಳಿಕವೇ ಆಳ ನೀರಿಗೆ ಇಳಿಯಿರಿ.

 

ಮಕರ ರಾಶಿ

ಭೂಮಿಯೇ ಇವರ ಗುಣ. ಭೂಮಿ ಗುಣದ ಮಕರ ರಾಶಿಯವರಿಗೆ ಆತಂಕ ಇರುವುದು ಆಕಾಶದಿಂದ. ಎತ್ತರದಿಂಧ ವಸ್ತುಗಳು ಬೀಳುವ ಕಡೆಗೆ ಹೋಗಬಾರದು, ತೆಂಗಿನ ಮರದಡಿ ನಿಲ್ಲುವು ಮುನ್ನ ಕೂಡ ಹತ್ತಾರು ಬಾರಿ ಯೋಚಿಸಿ.

 

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

 

ಕುಂಭ ರಾಶಿ

ಗಾಳಿಯು ನಿಮ್ಮ ರಾಶಿಯ ಗುಣ. ಗಾಳಿಯಿಂದೇನೂ ಅಪಾಯವಿಲ್ಲ. ಆದರೆ ಗಾಳಿಯ ಜೊತೆಗೆ ಬೆಂಕಿ ಸೇರಿದಾಗ ಮಾತ್ರ ದೊಡ್ಡ ಅನಾಹುತ ಸೃಷ್ಟಿಯಾಗುವುದನ್ನು ನೀವು ಕಾಣುವಿರಿ ಅಲ್ಲವೇ. ಹೊಟ್ಟೆಯ ಆರೋಗ್ಯದ ಕಡೆ ಹೆಚ್ಚು ಗಮನ ಇರಲಿ.

 

ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೈವದ ಗುಡಿಗೆ ಹೋಗೋದ ಮರೀಬೇಡಿ!..

 

ಮೀನ ರಾಶಿ

ಮೀನು ಇರುವುದೇ ನೀರಿನಲ್ಲಿ ಅಲ್ಲವೇ. ಇವರ ಗುಣ ನೀರು. ಹಾಗಂತ ನೀರಿನಿಂದ ಬಾಧಕವಿಲ್ಲ. ಆದರೆ ನೀರನ್ನು ಭೂಮಿ ಆಪೋಶನ ತೆಗೆದುಕೊಳ್ಳುವ ಅಪಾಯವಿದೆ. ಅಂದರೆ ಭೂಮಿಗೆ ಸಂಬಂಧಿಸಿದ ಗಂಡಾಂತರ ಖಾತ್ರಿ.