ಮುಖದ ಈ ಭಾಗಗಳಲ್ಲಿ ಮಚ್ಚೆ ಇದ್ರೆ ನಿಮ್ಮದೇ ಅದೃಷ್ಟ...!

ಹಸ್ತದ ರೇಖೆಗಳಿಂದ, ಶರೀರದ ಭಾಗಗಳಲ್ಲಿರುವ ವಿವಿಧ ಚಿಹ್ನೆಗಳಿಂದ ಮತ್ತು ಶರೀರದಲ್ಲಿರುವ ಮಚ್ಚೆಗಳಿಂದ ವ್ಯಕ್ತಿಯ ಅದೃಷ್ಟ ಸೇರಿದಂತೆ ಭವಿಷ್ಯದ ಅನೇಕ ವಿಚಾರಗಳನ್ನು ತಿಳಿಯಲಾಗುತ್ತದೆ. ಕೇವಲ ಮುಖದಲ್ಲಿರುವ ಮಚ್ಚೆಗಳಿಂದಲೇ ವ್ಯಕ್ತಿಯ ಅದೃಷ್ಟವನ್ನು ತಿಳಿಯಬಹುದೆಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ಬಗ್ಗೆ ತಿಳಿಯೋಣ.

The person who has Mole on these parts of face is lucky

ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿರುವ ಸಾಮುದ್ರಿಕಾ ಶಾಸ್ತ್ರದಲ್ಲಿಯೂ ವ್ಯಕ್ತಿಯ ಭವಿಷ್ಯ ಮತ್ತು ವರ್ತಮಾನಗಳ ವಿಷಯಗಳನ್ನು ತಿಳಿಯಬಹುದು. ವ್ಯಕ್ತಿಯ ಸಂಪತ್ತು, ಸಂತಾನ, ಅಭಿವೃದ್ಧಿ ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಬಹುದು. 

ಹೌದು. ಶರೀರದ ಮೇಲಿರುವ ಮಚ್ಚೆಯು ವ್ಯಕ್ತಿಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸುತ್ತದೆ. ಮಚ್ಚೆ ಯಾವ ಭಾಗದಲ್ಲಿದೆ ಎಂಬುದರ ಮೇಲೆ ಶುಭವೇ ಅಥವಾ ಅಶುಭವೇ ಎಂಬುದನ್ನು ತಿಳಿಯಬಹುದಾಗಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಮತ್ತು ಪುರುಷರಿಗೆ ಇದರ ಫಲಗಳು ಭಿನ್ನಾವಾಗಿರುತ್ತವೆ. ಹಾಗಾಗಿ ಮುಖದ ಮೇಲಿರುವ ಮಚ್ಚೆ ಏನೆಲ್ಲ ರಹಸ್ಯವನ್ನು ಬಯಲು ಮಾಡುತ್ತದೆ ಎಂಬುದನ್ನು ತಿಳಿಯೋಣ...

ಇದನ್ನು ಓದಿ: ಮಂಗಳವಾರದ ಈ ಆರಾಧನೆಗಳಿಂದ ನಿಮಗೆ ಎಲ್ಲವೂ ಪ್ಲಸ್..!

ಬಣ್ಣಗಳ ಮಚ್ಚೆಗಳು ಏನು ಹೇಳುತ್ತವೆ..?

ಸಾಮುದ್ರಿಕಾ ಶಾಸ್ತ್ರದಲ್ಲಿ ಹಸ್ತದಲ್ಲಿರುವ ರೇಖೆಗಳಂತೆ, ಶರೀರದಲ್ಲಿರುವ ಮಚ್ಚೆಗಳು ವ್ಯಕ್ತಿಯ ಜೀವನದ ಬಗ್ಗೆ ಅನೇಕ ಅಂಶಗಳನ್ನು ತಿಳಿಸುತ್ತವೆ. ಮಚ್ಚೆಗಳಲ್ಲೂ ಬೇರೆ ಬೇರ ವಿಧಗಳಿವೆ. ಕಪ್ಪು, ಕೆಂಪು, ಕಂದು ಇತ್ಯಾದಿ ಬಣ್ಣಗಳ ಮಚ್ಚೆಗಳು ಶರೀರದಲ್ಲಿ ಕಾಣಸಿಗುತ್ತವೆ.
ಮಚ್ಚೆ ಶರೀರದ ಯಾವ ಭಾಗದಲ್ಲಿದೆ ಎಂಬುದರ ಆಧಾರದ ಮೇಲೆ ಶುಭ ಅಥವಾ ಅಶುಭ ಎಂಬ ವಿಷಯವು ನಿರ್ಧರಿತವಾಗುತ್ತದೆ. ಇಲ್ಲಿ ನಾವು ಮುಖದ ಮೇಲೆ ಇರುವ, ಶುಭ ಫಲವನ್ನು ನೀಡುವ ಮಚ್ಚೆಯ ಬಗ್ಗೆ ತಿಳಿಯೋಣ...

ಬಲ-ಎಡ ಭಾಗದಲ್ಲಿದ್ದರೆ ಏನರ್ಥ..?

ಮುಖದ ಬಲ ಭಾಗದಲ್ಲಿ ಕೆಂಪು ಅಥವಾ ಕಪ್ಪು ಮಚ್ಚೆ ಇದ್ದರೆ ಅಂಥಹ ವ್ಯಕ್ತಿಗಳು ಜೀವನದಲ್ಲಿ ಸಕಲ ಸುಖಗಳನ್ನು ಪಡೆಯುತ್ತಾರೆ ಎಂದು ಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ಒಟ್ಟಾರೆಯಾಗಿ ಇಂಥ ವ್ಯಕ್ತಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಎಡ ಭಾಗದ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳ ಗೃಹಸ್ಥ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳ ಜೀವನದಲ್ಲಿ ಹಣ ಸಂಪತ್ತಿಗೆ ಯಾವುದೇ ಕೊರತೆ ಕಾಣುವುದಿಲ್ಲ. ಅದೇ ರೀತಿ ಬಲ ಭಾಗದ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳು ಬುದ್ಧಿವಂತರು ಮತ್ತು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸನ್ನು ಕಾಣುತ್ತಾರೆ.

ಇದನ್ನು ಓದಿ: ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!

ಹುಬ್ಬು – ಕಿವಿ ಭಾಗದಲ್ಲಿ ಮಚ್ಚೆ

ಹುಬ್ಬುಗಳ ಮಧ್ಯ ಭಾಗದಲ್ಲಿ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳು ದೀರ್ಘಾಯಸ್ಸನ್ನು ಪಡೆದಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ಹೃದಯವಂತರು ಸಹ ಆಗಿರುತ್ತಾರೆಂದು ಹೇಳಲಾಗುತ್ತದೆ. ಬಲ ಕಿವಿಯ ಮೇಲೆ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳು ಕಡಿಮೆ ವಯಸ್ಸಿನಲ್ಲಿಯೇ ಹಣವಂತರಾಗುತ್ತಾರೆ ಎಂದು ಹೇಳಲಾಗುತ್ತದೆ.

ಮೂಗಿನ ಭಾಗದಲ್ಲಿ ಮಚ್ಚೆಯ ಸಂಕೇತ

ಮೂಗಿನ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳು ಸತತ ಪರಿಶ್ರಮದಿಂದ ಜೀವನದಲ್ಲಿ ಸಫಲತೆಯನ್ನು ಕಾಣುತ್ತಾರೆ ಎಂದು ಹೇಳಲಾಗುತ್ತದೆ. ಮೂಗಿನ ಮೇಲೆ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳು ಪ್ರತಿಭಾವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಈ ವ್ಯಕ್ತಿಗಳು ಜೀವನದಲ್ಲಿ ಹೆಚ್ಚು ಕಷ್ಟಗಳನ್ನು ಅನುಭವಿಸದೇ, ಸುಖಿ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಮೂಗಿನ ಮೇಲೆ ಮಚ್ಚೆ ಇದ್ದರೆ ಅದು ಅತ್ಯಂತ ಶುಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. 

ಕಣ್ಣುಗಳ ಈ ಭಾಗದಲ್ಲಿ...

ಬಲಗಣ್ಣಿನ ಕೆಳ ಭಾಗದಲ್ಲಿ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳ ಜೀವನ ಸುಖದಿಂದ ಸಾಗುತ್ತದೆ ಎಂದು ಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ವ್ಯಕ್ತಿಯ ಬಲಗಣ್ಣಿನ ರೆಪ್ಪೆಯ ಮೇಲೆ ಮಚ್ಚೆ ಇದ್ದರೆ ಅಂಥವರು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಚತುರರಾಗಿರುವ ಈ ವ್ಯಕ್ತಿಗಳು ಜಾಣತನದಿಂದ ಮಾಡಬೇಕಾದ ಕಾರ್ಯಗಳಿಗೆ ಸಂಬಂಧಿಸಿದ ಕ್ಷೇತ್ರವನ್ನು ಆರಿಸಿಕೊಳ್ಳುವುದು ಉತ್ತಮ.

ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರು ಹೆಚ್ಚು ಭಾಗ್ಯವಂತರು..!

ತುಟಿ-ಹಣೆಯ ಕಡೆಗಳಲ್ಲಿ...

ತುಟಿಗಳ ಮೇಲೆ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಉದಾರಿಗಳಾಗಿರುತ್ತಾರೆ. ಅಷ್ಟೇ ಅಲ್ಲದೆ ಇಂಥ ವ್ಯಕ್ತಿಗಳ ಉದಾರ ಗುಣದಿಂದ ಕುಟುಂಬದಲ್ಲಿ ಸುಖ-ಸಮೃದ್ಧಿಯ ವಾತಾವರಣ ನೆಲೆಸಿರುತ್ತದೆ. ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳು ಭಾಗ್ಯಶಾಲಿಗಳಾಗಿರುತ್ತಾರೆ. ಈ ವ್ಯಕ್ತಿಗಳ ಆರ್ಥಿಕ ಸ್ಥಿತಿ ಅತ್ಯಂತ ಉತ್ತಮವಾಗಿರುತ್ತದೆ.

Latest Videos
Follow Us:
Download App:
  • android
  • ios