Asianet Suvarna News Asianet Suvarna News

Monday Born Personality: ಸೋಮವಾರ ಹುಟ್ಟಿದವರು ಹೀಗಿರುತ್ತಾರಂತೆ!

ಜನಿಸಿದ ವಾರಕ್ಕೂ ಒಂದು ಮಹತ್ವವಿದೆ. ಯಾವ ವಾರ ಜನಿಸಿದ್ದಾರೆ ಎಂಬ ಆಧಾರದ ಮೇಲೆ ಆ ವ್ಯಕ್ತಿಯ ಸ್ವಭಾವವನ್ನು ಮತ್ತು ಅಧಿಪತಿ ಗ್ರಹದ ಪ್ರಭಾವದ ಬಗ್ಗೆಯೂ ಸಹ ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಸೋಮವಾರ ಜನಿಸಿದವರ ಬಗ್ಗೆ ತಿಳಿಯೋಣ..
 

People born on Monday respect women and mothers and personality
Author
Bangalore, First Published Dec 8, 2021, 7:55 PM IST
  • Facebook
  • Twitter
  • Whatsapp

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಆಯಾ ರಾಶಿ (Zodiac), ನಕ್ಷತ್ರ (Star) ಮತ್ತು ಗ್ರಹಗಳ (Planet) ಆಧಾರದ ಮೇಲೆ ಭವಿಷ್ಯದ (Future) ವಿಷಯಗಳನ್ನು (Subject) ತಿಳಿದುಕೊಳ್ಳಲಾಗುತ್ತದೆ. ಹಾಗೆಯೇ ಹುಟ್ಟಿದ (Birth) ವಾರದ (Week) ಆಧಾರದ ಮೇಲೂ ಸಹ ವ್ಯಕ್ತಿಯ ವ್ಯಕ್ತಿತ್ವವನ್ನು (Nature) ತಿಳಿಯಬಹುದಾಗಿದೆ. ಯಾವ ವಾರ ಹುಟ್ಟಿದರೆ ಯಾವ ಗ್ರಹದ ಅಧಿಪತ್ಯವಿರುತ್ತದೆ ಮತ್ತು ಅವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದು. ಹಾಗಾಗಿ ಸೋಮವಾರ (Monday) ಹುಟ್ಟಿದವರ ವ್ಯಕ್ತಿತ್ವ (Personality) ಮತ್ತು ಯಾವ ಗ್ರಹದ ಅಧಿಪತ್ಯವಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ...

ಅಧಿಪತಿ ಗ್ರಹ (Lord Planet)
ಸೋಮವಾರದ ಅಧಿಪತಿ ಗ್ರಹ ಚಂದ್ರ ಗ್ರಹವಾಗಿದೆ. ಭೂಮಿಗೆ (Earth) ಹತ್ತಿರವಾಗಿರುವ ಅತ್ಯಂತ ಶಾಂತವಾದ ಗ್ರಹ ಚಂದ್ರ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಗ್ರಹವು (Moon Planet) ಒಂದು ಅದ್ಭುತ ಗ್ರಹವಾಗಿದೆ. ಚಂದ್ರನ ಗಾತ್ರ ಮತ್ತು ಪ್ರಕಾಶಮಾನ ಸಮಯದಿಂದ (Time) ಸಮಯಕ್ಕೆ ಬದಲಾಗುತ್ತಿರುತ್ತದೆ. ಚಂದ್ರ ಮನೋಕಾರಕ ಗ್ರಹನಾಗಿದ್ದಾನೆ. ಮನಸ್ಸನ್ನು ಆಳುವುದು ಮತ್ತು ನಿಯಂತ್ರಿಸುವುದು ಚಂದ್ರಗ್ರಹದ ಕಾರ್ಯವಾಗಿದೆ. ಚಂದ್ರ ಗ್ರಹವು ಕೌಟುಂಬಿಕ ಜೀವನ (Life), ಸಂಬಂಧಗಳು (Relation) ಮತ್ತು ಅನುವಂಶೀಯತೆಯನ್ನು (Heredity) ನಿಯಂತ್ರಿಸುತ್ತದೆ. ಸೋಮವಾರ ಜನಿಸಿದವರು ಚಂದ್ರಗ್ರಹದ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಚಂದ್ರನು ನೀಚಸ್ಥಿತಿಯಲ್ಲಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವಾರದ ದಿನದಲ್ಲಿ ಜನಿಸಿದವರು ದಯಾ ಗುಣವನ್ನು ಹೊಂದಿರುವುದಲ್ಲದೆ, ಹೊಂದಿಕೊಳ್ಳುವ ಮನೋಭಾವ, ಪೊಸೆಸೀವ್‌ನೆಸ್ (Posesiev), ಕಾಳಜಿ (Care) ಮತ್ತು ಮಾತೃಗುಣವನ್ನು ಸಹ ಹೊಂದಿರುತ್ತಾರೆ.

ಇದನ್ನು ಓದಿ: Personality traits of Amavasya born: ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ತಿಥಿಯಲ್ಲಿ ಹುಟ್ಟಿದವರು ಹೀಗೆ..!

ಸೋಮವಾರದಂದು ಹುಟ್ಟಿದವರು ತಾಯಿ (Mother), ಮಹಿಳೆಯರನ್ನು (Women) ಗೌರವಿಸುವುದಲ್ಲದೆ, ಕೌಟುಂಬಿಕ (Family) ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು (Importance) ನೀಡುತ್ತಾರೆ. ಇವರ ಜೀವನದಲ್ಲಿ ತಾಯಿ ಪಾತ್ರ ತುಂಬಾ ದೊಡ್ಡದಿರಲಿದ್ದು, ಹಲವಾರು ರೀತಿಯಲ್ಲಿ ಅವರು ಪ್ರಭಾವವನ್ನು ಬೀರುತ್ತಾರೆ. ಈ ವ್ಯಕ್ತಿಗಳು ಹೆಚ್ಚು ಅಂತರ್ಮುಖಿ (Introvert) ಸ್ವಭಾವವನ್ನು ಹೊಂದಿರುತ್ತಾರೆ. ಇವರು ಭಾವನೆಗಳಿಗೆ ಹೆಚ್ಚು ಒತ್ತು ನೀಡುವುದಲ್ಲದೆ, ವೈಯಕ್ತಿಕ ಅನುಭವಕ್ಕೂ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಸೋಮವಾರದಂದು ಜನಿದವರ ಅದೃಷ್ಟದ ಸಂಖ್ಯೆ (Lucky Number) 2 ಆಗಿರುತ್ತದೆ. ಈ ವ್ಯಕ್ತಿಗಳು ಈ ಸಂಖ್ಯೆಗೆ ಹೆಚ್ಚು ಮಹತ್ವ ನೀಡಿದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಲಿದ್ದಾರೆ. ಸೋಮವಾರದಂದು ಶಿವ (Lord Shiva) ಮತ್ತು ಗಣೇಶನನ್ನು ಪೂಜಿಸಬೇಕಿದೆ. ಹೀಗೆ ಮಾಡಿದಲ್ಲಿ ಜೀವನದಲ್ಲಿ ಹೆಚ್ಚು ಯಶಸ್ಸು ಮತ್ತು ಸಫಲತೆಯನ್ನು ಕಾಣಬಹುದಾಗಿದೆ.

ಸೋಮವಾರ ಜನಿಸಿದವರ ವೃತ್ತಿಜೀವನದ (Career) ಬಗ್ಗೆ ಹೇಳುವುದಾದರೆ, ಕೌಶಲ್ಯ (Skill), ಸೃಜನಾತ್ಮಕ (Skill) ಉದ್ಯೋಗಗಳಿಗೆ (Job) ಇವರು ಹೆಚ್ಚು ಪ್ರಸಿದ್ಧಿಯನ್ನು (Famous) ಹೊಂದುವುದಲ್ಲದೆ, ವ್ಯಾಪಾರವೂ (Business) ಇವರಿಗೆ ಆಗಿ ಬರುತ್ತದೆ. ಆದ್ದರಿಂದ ಇವರಿಗೆ ವ್ಯವಹಾರ ಜ್ಞಾನ (Knowledge) ಎಲ್ಲರಿಗಿಂತ ತುಸು ಹೆಚ್ಚೇ ಇರುತ್ತದೆ. ಒಂದು ವೇಳೆ ಉದ್ಯಮಿಯಾದರೆ, ಸಮರ್ಪಣಾ ಭಾವ ಹಾಗೂ ತಮ್ಮನ್ನು ತಾವು ನೂರಕ್ಕೆ ನೂರು ತೊಡಗಿಸಿಕೊಳ್ಳುವುದರಿಂದ ದೊಡ್ಡ ಮಟ್ಟದ ಲಾಭವನ್ನು (Profit) ಗಳಿಸಬಹುದು. ಈ ದಿನದಂದು ಜನಿಸಿದವರು ಪರಿಶ್ರಮ (Effort) ಮತ್ತು ಶಿಸ್ತುಬದ್ಧ (Discipline) ಕೆಲಸ ಕಾರ್ಯಗಳನ್ನು ರೂಢಿಸಿಕೊಂಡಿರುತ್ತಾರೆ. ಸೋಮವಾರ ಜನಿಸಿದವರಿಗೆ ವೃತ್ತಿಜೀವನದ ಯಶಸ್ಸು (Success) ಯಾವಾಗಲೂ ಖಚಿತ. ಕೆಲಸದ ಸ್ಥಳದಲ್ಲಿ ಇತರರನ್ನು ಆಕರ್ಷಿಸುವುದಲ್ಲದೆ, ಅವರ ಮೆಚ್ಚುಗೆಯನ್ನು ಗಳಿಸಲು ಸಹ ಸಾಧ್ಯವಾಗುತ್ತದೆ. 

ಇದನ್ನು ಓದಿ: birth time and luck: ಈ ಜನ್ಮ ತಿಥಿಯಂದು ಜನಿಸಿದವರ ಗುಣ ಹೀಗಿರುತ್ತೆ..

ಸೋಮವಾರ ಜನಿಸಿದವರಲ್ಲಿ ಕಾಳಜಿ ವಹಿಸುವ ಗುಣ ಹೆಚ್ಚು ಇರಲಿದೆ. ಇವರು ಒಮ್ಮೆ ತಮ್ಮವರು ಎಂದು ಭಾವಿಸಿದರೆ ಸಾಕು ಅವರ ಬಗ್ಗೆ ಅಪಾರ ಕಾಳಜಿಯನ್ನು ವಹಿಸುತ್ತಾರೆ. ಇತರರ ಅಗತ್ಯಗಳು ಮತ್ತು ಭಾವನೆಗಳಿಗೆ ಹೆಚ್ಚು ಬೆಲೆಯನ್ನು ಕೊಡುವುದಲ್ಲದೆ, ಅವರಿಗೆ ಮಿಡಿಯುತ್ತಾರೆ. ಇನ್ನು ನಂಬಿಕೆ ವಿಷಯ ಬಂದರೆ ಎದುರಿನವರನ್ನು ಬೇಗ ನಂಬಿಬಿಡುವ ಇವರು, ಮುಂದಾಲೋಚನೆಯನ್ನೇ ಮಾಡುವುದಿಲ್ಲ. ಇದು ಪ್ರೀತಿಯಲ್ಲೂ (Love) ಸಹ ಬಹುಬೇಗ ಬಿದ್ದುಬಿಡುತ್ತಾರೆ. ಆದರೆ, ಸೋಮವಾರ ಜನಿಸಿದ ವ್ಯಕ್ತಿಗಳು ಇತರರನ್ನು ಕಾಳಜಿ ವಹಿಸುವ ಭರದಲ್ಲಿ ತಮ್ಮನ್ನು ತಾವು ಮರೆಯಬಾರದು. ಅಲ್ಲದೆ, ಇವರು ತಮ್ಮ ಸಂಗಾತಿಯೊಂದಿಗೆ (Partner) ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ. ದ್ವೇಷ (Hate), ಜಗಳವನ್ನು ಇಷ್ಟಪಡದ ಈ ವ್ಯಕ್ತಿಗಳು, ಸದಾ ನೆಮ್ಮದಿಯ ಜೀವನವನ್ನು ಆರಿಸಿಕೊಳ್ಳುತ್ತಾರೆ.

Follow Us:
Download App:
  • android
  • ios