Personality traits of Amavasya born: ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ತಿಥಿಯಲ್ಲಿ ಹುಟ್ಟಿದವರು ಹೀಗೆ..!
ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಗಳ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. ಕೇವಲ ರಾಶಿ, ನಕ್ಷತ್ರಗಳಷ್ಟೇ ಅಲ್ಲದೆ ಜನ್ಮ ತಿಥಿಯಿಂದ ಸಹ ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯಬಹುದಾಗಿದೆ. ಅಷ್ಟಮಿ ತಿಥಿಯಿಂದ, ಅಮಾವಾಸ್ಯೆ ತಿಥಿಯವರೆಗೆ ಜನಿಸಿದವರ ಬಗ್ಗೆ ತಿಳಿಯೋಣ...
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಮಗು (Child) ಹುಟ್ಟಿದ ಸಮಯ (Time), ತಿಥಿ , ಮಾಸ (Month), ದಿನಾಂಕ (Date), ರಾಶಿ (Zodiac), ನಕ್ಷತ್ರ (Star) ವಾರಗಳ (Day) ಆಧಾರದ ಮೇಲೆ ಜಾತಕವನ್ನು (Horoscope) ರಚಿಸಲಾಗುತ್ತದೆ. ಅಷ್ಟೇ ಅಲ್ಲದೆ ಪ್ರತ್ಯೇಕ ನಕ್ಷತ್ರ, ರಾಶಿ, ವಾರಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ (Nature) ಗುಣಗಳನ್ನು ತಿಳಿಯಬಹುದಾಗಿದೆ. ಹಾಗೆಯೇ ಹುಟ್ಟಿದ ತಿಥಿಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದೆಂದು ಶಾಸ್ತ್ರ ಹೇಳುತ್ತದೆ. ಹಾಗಾಗಿ ಅಷ್ಟಮಿ, ನವಮಿ, ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆಯಂದು ಜನಿಸಿದವರ ಬಗ್ಗೆ ತಿಳಿಯೋಣ...
ಅಷ್ಟಮಿ ತಿಥಿ (Ashtami)
ಅಷ್ಟಮಿ ತಿಥಿಯಂದು ಜನಿಸಿದ ವ್ಯಕ್ತಿಗಳು ಹೆಚ್ಚು ಧಾರ್ಮಿಕ (Religious) ಪ್ರವೃತ್ತಿಯನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಸತ್ಯವಂತರಾಗಿದ್ದು, ಇತರರಿಗೆ ಸಹಾಯ ಮಾಡುತ್ತಾರೆ ಮತ್ತು ದಯಾಗುಣವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳ ಎಲ್ಲ ಕ್ಷೇತ್ರಗಳ ವಿಷಯವನ್ನು ಸ್ವಲ್ಪ ಮಟ್ಟಿಗೆ ತಿಳಿದಿರುತ್ತಾರೆ.
ನವಮಿ ತಿಥಿ (Navami)
ನವಮಿಯಂದು ಜನಿಸಿದ ವ್ಯಕ್ತಿಗಳಿಗೆ ಧರ್ಮ ಕರ್ಮಗಳಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಅಷ್ಟೇ ಅಲ್ಲದೆ ಪೂಜೆ (Worship) ಮಾಡುವುದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಈ ವ್ಯಕ್ತಿಗಳು ಕುಟುಂಬದವರು ಮತ್ತು ಮಕ್ಕಳ (Children) ಮೇಲೆ ಹೆಚ್ಚು ಪ್ರೀತಿಯನ್ನು (Love) ಹೊಂದಿರುತ್ತಾರೆ. ಧರ್ಮ ಶಾಸ್ತ್ರಗಳ ಬಗ್ಗೆ ಹೆಚ್ಚು ಅಧ್ಯಯನ (Study) ಮಾಡಲು ಬಯಸುತ್ತಾರೆ.
ದಶಮಿ ತಿಥಿ (Dashami)
ದಶಮಿ ತಿಥಿಯಂದು ಜನಿಸಿದ ವ್ಯಕ್ತಿಗಳು ಸಾಮಾಜಿಕ (Social) ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. ಈ ವ್ಯಕ್ತಿಗಳು ಉತ್ತಮ ಲೇಖಕರು (Writer) ಆಗಿರುತ್ತಾರೆ. ಇತರರಿಂದ ಕೆಲಸ ಮಾಡಿಕೊಳ್ಳುವ ಬಗೆ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಈ ವ್ಯಕ್ತಿಗಳು ಹೆಚ್ಚು ಖುಷಿಯಾಗಿರುತ್ತಾರೆ.
ಇದನ್ನು ಓದಿ : birth time and luck: ಈ ಜನ್ಮ ತಿಥಿಯಂದು ಜನಿಸಿದವರ ಗುಣ ಹೀಗಿರುತ್ತೆ..
ಏಕಾದಶಿ ತಿಥಿ (Ekadashi)
ಏಕಾದಶಿಯಂದು ಜನಿಸಿದವರು ಅಲ್ಪ ತೃಪ್ತರೆಂದು ಹೇಳಲಾಗುತ್ತದೆ. ಇದ್ದುದರಲ್ಲೇ ಹೆಚ್ಚು ಖುಷಿಯಾಗಿರುತ್ತಾರೆಂದು ಹೇಳಲಾಗುತ್ತದೆ. ಇನ್ನೂ ಹೆಚ್ಚು ಬೇಕು ಎಂಬ ಹಪಹಪಿ – ದುರಾಸೆ (Greed) ಇವರಲ್ಲಿರುವುದಿಲ್ಲ. ದಾನ ಧರ್ಮಗಳನ್ನು ಮಾಡುತ್ತಿರುತ್ತಾರೆ. ಕಟುವಾಗಿ (Rude) ಮಾತನಾಡುವ ಈ ವ್ಯಕ್ತಿಗಳು, ಉತ್ತಮ ಮನಸ್ಸನ್ನು ಹೊಂದಿರುತ್ತಾರೆ.
ದ್ವಾದಶಿ ತಿಥಿ (Dwadashi)
ದ್ವಾದಶಿ ತಿಥಿ ಎಂದು ಜನಿಸಿದವರು ಚಂಚಲ (Distraction) ಮನಸ್ಥಿತಿಯನ್ನು ಹೊಂದಿರುತ್ತಾರೆ. ಶಾಂತವಾಗಿ (Peace) ಸಂಯಮದಿಂದ ಇರುವುದು ಇವರಿಗೆ ಗೊತ್ತಿರುವುದಿಲ್ಲ ಸದಾ ಏನನ್ನೋ ಯೋಚಿಸುತ್ತಾ, ಒತ್ತಡದಲ್ಲೇ (Stress) ಕಾಲ ಕಳೆಯುತ್ತಾರೆ. ಹಣಕಾಸಿನ (Finance) ಬಗ್ಗೆ ಹೆಚ್ಚು ಯೋಜನೆಗಳನ್ನು (Plan) ಹಾಕಿಕೊಳ್ಳುತ್ತಾರೆ . ದೂರದ ಊರುಗಳಿಗೆ ಮತ್ತು ವಿದೇಶಗಳಿಗೆ ತೆರಳುವ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.
ತ್ರಯೋದಶಿ ತಿಥಿ (Trayodhashi)
ತ್ರಯೋದಶಿಯಂದು ಜನಿಸಿದ ವ್ಯಕ್ತಿಗಳು ಸಾಧಕರಾಗಿರುತ್ತಾರೆ (Successful). ವಿದ್ಯಾರ್ಥಿ (Student) ಜೀವನದಿಂದ ವೃತ್ತಿಜೀವನದ (Career) ನಿಷ್ಠೆಯಿಂದ ಸಾಧನೆ ಮಾಡುತ್ತಾರೆ. ಈ ವ್ಯಕ್ತಿಗಳು ಹೆಚ್ಚು ಬುದ್ಧಿವಂತರಾಗಿರುತ್ತಾರೆ (Brilliant). ಅಷ್ಟೆ ಅಲ್ಲದೆ ತ್ರಯೋದಶಿ ತಿಥಿಯಂದು ಜನಿಸಿದವರು ಮನಸ್ಸನ್ನು ಚೆನ್ನಾಗಿ ನಿಯಂತ್ರಿಸಿಕೊಳ್ಳುತ್ತಾರೆ (Control).
ಚತುರ್ದಶಿ ತಿಥಿ (Chaturdashi)
ಚತುರ್ದಶಿ ತಿಥಿ ಎಂದು ಜನಿಸಿದವರು ಹೆಚ್ಚು ಹಣವನ್ನು (Money) ಹೊಂದಿರುತ್ತಾರೆ. ಈ ವ್ಯಕ್ತಿಗಳು ಕಡಿಮೆ ಕೆಲಸ ಮಾಡಿ ಹೆಚ್ಚು ಹಣವನ್ನು ಗಳಿಸುತ್ತಾರೆ. ಉತ್ತಮ ಕಾರ್ಯಗಳಿಗೆ ಗೌರವಾದರಗಳನ್ನು (Respect) ಪಡೆದು ಕೊಳ್ಳುವುದಲ್ಲದೆ ಅದರಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ಮತ್ತು ಸಾಮಾಜಿಕ (Social) ಸೇವೆಗಳಿಗೆ (Service) ಸದಾ ಸಿದ್ಧರಿರುತ್ತಾರೆ.
ಇದನ್ನು ಓದಿ : Lucky zodiac signs: ಈ ನಾಲ್ಕು ರಾಶಿಯ ಹುಡುಗಿಯರು ಹೆಚ್ಚು ಸೌಭಾಗ್ಯವಂತರು....
ಹುಣ್ಣಿಮೆ (Full Moon)
ಹುಣ್ಣಿಮೆಯಂದು ಜನಿಸಿದವರು ಉತ್ತಮ ಆಹಾರವನ್ನು (Food) ಪಡೆಯುತ್ತಾರೆ. ಈ ವ್ಯಕ್ತಿಗಳು ಎಂದೂ ಒಬ್ಬರೇ ಭೋಜನ (Meal) ಮಾಡುವುದಿಲ್ಲ. ಸದಾ ಸಂತೋಷದಿಂದ (Happiness) ಇರುತ್ತಾರೆ ಮತ್ತು ಉತ್ತಮ ಜನರ ಸ್ನೇಹವನ್ನು ಮಾಡುತ್ತಾರೆ. ಈ ವ್ಯಕ್ತಿಗಳಿಗೆ ಹಣದ ಸಮಸ್ಯೆ (Problem) ಎಂದಿಗೂ ಕಾಡುವುದಿಲ್ಲ. ತಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ (Share).
ಅಮಾವಾಸ್ಯೆ (New Moon)
ಅಮಾವಾಸ್ಯೆಯಂದು ಜನಿಸಿದವರು ನಿಧಾನವಾಗಿ (Slow) ಕೆಲಸ - ಕಾರ್ಯಗಳನ್ನು ಆರಂಭಿಸುತ್ತಾರೆ. ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಸರಿಯಾದ ರೀತಿಯಲ್ಲಿ ನಿಯಮ (Rule) ಬದ್ಧವಾಗಿ ಮಾಡುವುದು ಇವರ ಉದ್ದೇಶವಾಗಿರುತ್ತದೆ (Purpose). ಯಾವ ವ್ಯಕ್ತಿಗಳ ಮೇಲಾದರೂ ಬೇಸರಗೊಂಡರೆ (Boredom) ಅವರ ಬಗ್ಗೆ ದ್ವೇಷವನ್ನು (Hate) ಬೆಳೆಸಿಕೊಳ್ಳುತ್ತಾರೆ. ಹೆಚ್ಚು ಸಿಟ್ಟಿನಲ್ಲಿದ್ದಾಗ (Anger) ಈ ವ್ಯಕ್ತಿಗಳಿಗೆ ಒಳ್ಳೇಯದು (Good) ಯಾವುದು, ಕೆಟ್ಟದ್ದು (Bad) ಯಾವುದು ಎಂಬುದೇ ತಿಳಿಯುವುದಿಲ್ಲ. ಸಿಟ್ಟಿನಲ್ಲಿ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ.