Asianet Suvarna News Asianet Suvarna News

Pancha Maha Paapa: ಅರಿವಿಲ್ಲದೆ ಮಾಡಿದ ಈ ತಪ್ಪು ಪಾಪದ ಸಾಲಿಗೆ ಸೇರುತ್ತೆ

Hindu Dharma Beliefs: ತಿಳಿಯದೆ ಮಾಡಿದ ತಪ್ಪಿಗೆ ಶಿಕ್ಷೆಯಿಲ್ಲ ಎಂದು ನಾವು ಭಾವಿಸ್ತೇವೆ. ಆದ್ರೆ ನಮ್ಮ ನಂಬಿಕೆ ಸುಳ್ಳು. ಕೆಲವು ತಪ್ಪುಗಳನ್ನು ತಿಳಿದು ಮಾಡಿರಲಿ ಇಲ್ಲ ತಿಳಿಯದೆ ಮಾಡಿರಲಿ ಅದು ತಪ್ಪೇ ಹಾಗೆ ಅದರಿಂದ ಪಾಪ ಪ್ರಾಪ್ತಿಯಾಗುತ್ತದೆ. 
 

Panchsuna Paap Significance In Hindu Dharm
Author
First Published Nov 26, 2022, 11:38 AM IST

ಹಿಂದೂ ಧರ್ಮದಲ್ಲಿ ಪಾಪ ಮತ್ತು ಪುಣ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರತಿಯೊಂದು ಕೆಲಸವನ್ನೂ ಪಾಪ – ಪುಣ್ಯದ ದೃಷ್ಟಿಯಿಂದ ನೋಡಲಾಗುತ್ತದೆ.  ಯಾವ ಕರ್ಮಗಳನ್ನು ಮಾಡುವುದರಿಂದ ಒಬ್ಬ ವ್ಯಕ್ತಿಯು ಪುಣ್ಯವನ್ನು ಪಡೆಯುತ್ತಾನೆ ಮತ್ತು ಕೆಲ ಕೆಲಸ ಮಾಡುವುದ್ರಿಂದ ಪಾಪ ಸುತ್ತಿಕೊಳ್ಳುತ್ತದೆ ಎಂಬುದನ್ನು ಧರ್ಮ ಗ್ರಂಥದಲ್ಲಿ ವಿವರವಾಗಿ ಹೇಳಲಾಗಿದೆ. ಪಾಪ ಮಾಡಿದ ವ್ಯಕ್ತಿ ನರಕಕ್ಕೆ ಹೋಗ್ತಾನೆ ಎಂಬ ನಂಬಿಕೆಯಿದೆ. ಸತ್ತ ಮೇಲೆ ಕಷ್ಟ ಸಿಗದಿರಲಿ ಎನ್ನುವ ಕಾರಣಕ್ಕೆ ಜನರು ಪಾಪ ಪರಿಹಾರಕ್ಕೆ ಮುಂದಾಗ್ತಾರೆ. ಮಾಡಿದ ಪಾಪ ತೊಳೆದುಕೊಳ್ಳಲು ಅನೇಕ ಪರಿಹಾರ ಮಾಡ್ತಾರೆ. ಇರುವಾಗ ಪುಣ್ಯ ಸಂಪಾದಿಸಿಕೊಂಡರೆ ಸತ್ತ ಮೇಲೆ ಸ್ವರ್ಗ ಸಿಗುತ್ತದೆ ಎಂದು ಹಿಂದೂ ಧರ್ಮದಲ್ಲಿ ಜನರು ನಂಬುತ್ತಾರೆ.

ಹಿಂದೂ (Hindu) ಧರ್ಮಗ್ರಂಥಗಳು ಪಾಪವನ್ನು ಎರಡು ಭಾಗವಾಗಿ ಮಾಡಿವೆ. ಒಂದು ಉದ್ದೇಶಪೂರ್ವಕವಾಗಿ ಮಾಡಿದ ಪಾಪಗಳು ಇನ್ನೊಂದು ತಿಳಿಯದೆ ಮಾಡಿದ ಪಾಪಗಳು. 
ಉದ್ದೇಶ ಪೂರ್ವಕವಾಗಿ ಮಾಡಿದ ತಪ್ಪುಗಳಿಗೆ ಮಾತ್ರ ಶಿಕ್ಷೆಯಾಗುತ್ತದೆ, ಅದನ್ನು ಪಾಪ ಎನ್ನಲಾಗುತ್ತದೆ ಎಂದು ಅನೇಕರ ಭಾವಿಸಿದ್ದಾರೆ. ಆದ್ರೆ ತಿಳಿಯದೆ ಮಾಡಿದ ತಪ್ಪಿಗೂ ಶಿಕ್ಷೆಯಾಗುತ್ತದೆ. ಹಿಂದೂ ಧರ್ಮದಲ್ಲಿ ಅದರಿಂದಲೂ ಪಾಪವೆಂದೇ ಭಾವಿಸಲಾಗುತ್ತದೆ. ನಾವಿಂದು ತಿಳಿಯದೆ ಮಾಡಿದ ಯಾವೆಲ್ಲ ಕೆಲಸಗಳು ಪಾಪದಲ್ಲಿ ಸೇರುತ್ತವೆ ಎಂಬುದನ್ನು ನಿಮಗೆ ಹೇಳ್ತೆವೆ. 

ವ್ಯಕ್ತಿಯು ತಿಳಿಯದೆ ಮಾಡುವ ಐದು ರೀತಿಯ ತಪ್ಪುಗಳು ಪಾಪದ ಸಾಲಿಗೆ ಸೇರುತ್ತವೆ. ಭವಿಷ್ಯ ಪುರಾಣ, ಮನುಸ್ಮೃತಿ (Manusmriti) ಸೇರಿದಂತೆ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಈ ಪಾಪಗಳ ಬಗ್ಗೆ ಹೇಳಲಾಗಿದೆ. ಈ ತಪ್ಪುಗಳು ನಾವು ದಿನನಿತ್ಯ ಮಾಡ್ತೇವೆ. ನಮಗೆ ಗೊತ್ತಾಗದೆ ಮನೆಯಲ್ಲಿಯೇ ನಾವು ಇದನ್ನು ಮಾಡಿರ್ತೇವೆ. ಹಾಗಾಗಿ ನಾವು ಈ ಪಾಪಗಳ ಬಗ್ಗೆ ತಿಳಿಯಬೇಕು. ಜೊತೆಗೆ ಈ ದೋಷಗಳ ಪರಿಹಾರವನ್ನೂ ತಿಳಿದಿರಬೇಕು.  

ಅಡುಗೆ (Cooking) ಮನೆಯಲ್ಲಿ ಮಾಡಿದ ಈ ತಪ್ಪು ಪಾಪವಾಗುತ್ತೆ : ಅಡುಗೆ ಮಾಡುವಾಗ ನಮಗೆ ತಿಳಿಯದೆ ನಾವು ಕೆಲ ಕೀಟಗಳು ಮತ್ತು ಪತಂಗಗಳನ್ನು ಸುಟ್ಟಿರುತ್ತೇವೆ. ಅನೇಕ ಬಾರಿ ಅವು ಸತ್ತಿವೆ ಎಂಬುದೇ ನಮಗೆ ತಿಳಿಯೋದಿಲ್ಲ. ನಾವು ಅಡುಗೆ ಮಾಡುವಾಗ ಅವೇ ಬಂದು ಬಿದ್ದಿರುತ್ತವೆ. ಕೆಲವೊಮ್ಮೆ ಅದು ತಿಳಿದ್ರೂ ನಮಗೆ ಏನು ಮಾಡ್ಬೇಕೆಂಬುದು ಗೊತ್ತಾಗೋದಿಲ್ಲ. ಅದನ್ನು ಬದಿಗಿಟ್ಟು ಆಹಾರ ಸೇವನೆ ಮಾಡೋರಿದ್ದಾರೆ. ನೀವು ಆಹಾರ ತಯಾರಿಸುವಾಗ ಪತಂಗ, ಕೀಟ ಸಾವನ್ನಪ್ಪಿದ್ರೆ ಅದು ಪಾಪದ ಸಾಲಿನಲ್ಲಿ ಸೇರುತ್ತದೆ. 

ಹಿಟ್ಟು ರುಬ್ಬುವಾಗ ಮಾಡುವ ಈ ತಪ್ಪು ಪಾಪವಾಗುತ್ತೆ : ಗಿರಣಿಯಲ್ಲಿ ಹಿಟ್ಟು ಅರೆಯುವಾಗ ಅಥವಾ ಮನೆಯಲ್ಲಿ ಹಿಟ್ಟು ಬೀಸುವಾಗ ನಮಗೆ ತಿಳಿಯದೆ ಕೀಟಗಳು ಸಾವನ್ನಪ್ಪಿರುತ್ತವೆ. ಅಕ್ಕಿಯಲ್ಲಿರುವ ಹುಳವಾಗಿರಬಹುದು ಇಲ್ಲ ಗೋದಿಯಲ್ಲಿರುವ ಹುಳವಾಗಿರಬಹುದು. ಅವುಗಳನ್ನು ಕೊಂದ ಪಾಪ ನಮಗೆ ಅಂಟಿಕೊಳ್ಳುತ್ತದೆ. ಇದು ಗೊತ್ತಿಲ್ಲದೆ ಆದ ತಪ್ಪು, ಇದ್ರಿಂದ ಪಾಪವಿಲ್ಲ ಎಂದುಕೊಳ್ಳೋರೆ ಹೆಚ್ಚು. 

ಇದನ್ನೂ ಓದಿ: ಮಲಗೋ ಮುನ್ನ ಈ ತಪ್ಪುಗಳನ್ನು ಮಾಡಿದ್ರೆ ಮೈ ತುಂಬಾ ಸಾಲ ಆಗುತ್ತೆ ನೋಡಿ

ನಡೆಯುವಾಗ ಆಗುತ್ತೆ ಈ ತಪ್ಪು : ಚಿಕ್ಕ ಚಿಕ್ಕ ಕೀಟಗಳು ನಮ್ಮ ಕಣ್ಣಿಗೆ ಕಾಣೋದಿಲ್ಲ. ಇರುವೆಗಳು ಕೂಡ ಮನೆ ತುಂಬ ಓಡಾಡುತ್ತಿರುತ್ತವೆ. ರಸ್ತೆಯಲ್ಲಿ ಇಂಥ ಸಣ್ಣ ಕೀಟಗಳ ಸಂಖ್ಯೆ ಸಾಕಷ್ಟಿರುತ್ತದೆ. ಈ ಕೀಟಗಳನ್ನು ನಾವು ತಿಳಿಯದೆ ತುಳಿದಿರ್ತೇವೆ. ನಮ್ಮ ಕಾಲಿನಡಿ ಸಿಕ್ಕಿ ಸಾವನ್ನಪ್ಪುವ ಕೀಟಗಳ ಸಾವಿನ ಶಾಪ ನಮಗೆ ಪಾಪವಾಗುತ್ತದೆ.

ನೀರಿನಲ್ಲಿ ಬಿದ್ದು ಜೀವಿಗಳ ಸಾವು : ಮನೆಯಲ್ಲಿ ಶುದ್ಧ ನೀರಿಟ್ಟಿದ್ದರೆ ಅದಕ್ಕೆ ಬರುವ ಅನೇಕ ಕೀಟಗಳು ನೀರಿನಲ್ಲಿ ಬಿದ್ದು ಸಾವನ್ನಪ್ಪಿರುತ್ತವೆ. ಈ ಕೀಟಗಳ ಸಾವು ನಮಗೆ ಪಾಪವಾಗುತ್ತದೆ.

ಇದನ್ನೂ ಓದಿ: FRIDAY BORN PERSONALITY: ಶುಕ್ರವಾರ ಹುಟ್ಟಿದವರ ಸ್ವಭಾವ, ವೃತ್ತಿ, ಲವ್‌ಲೈಫ್, ಆರೋಗ್ಯ..

ಗುಡಿಸುವಾಗ ಸಾಯುತ್ವೆ ಜೀವಿಗಳು : ಪ್ರತಿ ದಿನ ನಾವು ಮನೆ ಸ್ವಚ್ಛಗೊಳಿಸ್ತೇವೆ. ಬೀದಿ ಸ್ವಚ್ಛಗೊಳಿಸುವವರು ಸಾಕಷ್ಟು ಮಂದಿ ಇರ್ತಾರೆ. ಮನೆ ಅಥವಾ ಬೀದಿ ಎಲ್ಲೇ ಇರಲಿ ನಾವು ಗುಡಿಸುವಾಗ ನಮ್ಮ ಪೊರಕೆಗೆ ತಾಗಿ ಕೀಟಗಳು ಸಾವನ್ನಪ್ಪಿದ್ರೂ ಅದು ಪಾಪವಾಗುತ್ತದೆ. ಐದು ಯಾಗಗಳನ್ನು ಮಾಡುವುದ್ರಿಂದ, ಅತಿಥಿ ಸತ್ಕಾರದಿಂದ ಹಾಗೂ ದಾನ ಮಾಡುವುದ್ರಿಂದ ಈ ಪಾಪದಿಂದ ಮುಕ್ತಿ ಪಡೆಯಬಹುದಾಗಿದೆ. 

Follow Us:
Download App:
  • android
  • ios