Asianet Suvarna News Asianet Suvarna News

ಮಲಗೋ ಮುನ್ನ ಈ ತಪ್ಪುಗಳನ್ನು ಮಾಡಿದ್ರೆ ಮೈ ತುಂಬಾ ಸಾಲ ಆಗುತ್ತೆ ನೋಡಿ

ಹಣಕ್ಕೆ ಸಂಬಂಧಿಸಿದಂತೆ ಶಾಸ್ತ್ರದಲ್ಲಿ ಅನೇಕ ಸಂಗತಿ ಹೇಳಲಾಗಿದೆ. ಅದನ್ನು ತಿಳಿಯದೆ ನಾವು ಮಾಡುವ ಕೆಲವೊಂದು ತಪ್ಪಿನಿಂದಾಗಿ ಲಕ್ಷ್ಮಿ ಮನೆಯಿಂದ ಹೊರಗೆ ಹೋಗ್ತಾಳೆ. ರಾತ್ರಿ ನಾವು ಮಾಡುವ ಕೆಲ ಕೆಲಸಗಳು ಕೂಡ ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತೆ.
 

Astro Tips For Money Savings Rules
Author
First Published Nov 25, 2022, 4:40 PM IST

ರಾತ್ರೋ ರಾತ್ರಿ ಶ್ರೀಮಂತರಾಗ್ಬೇಕು ಎಂದು ಬಯಸುವವರೇ ಹೆಚ್ಚು. ಎಷ್ಟು ರಾತ್ರಿ ಕಳೆದ್ರೂ ಶ್ರೀಮಂತಿಕೆ ಕನಸು ಕನಸಾಗಿಯೇ ಇರುತ್ತೆ. ಐಷಾರಾಮಿ ಜೀವನಕ್ಕಾಗಿ ಜನರು ಹಗಲಿರುವಳು ದುಡಿಯುತ್ತಾರೆ. ಆದಾಯ ಹೆಚ್ಚಾಗಲಿ ಅಂತಾ ನಾನಾ ಕಸರತ್ತು ಮಾಡ್ತಾರೆ. ಯಾವುದೇ ಸಾಧ್ಯವಾಗ್ತಿಲ್ಲ ಎಂದಾಗ ದೇವರ ಮೊರೆ ಹೋಗ್ತಾರೆ. ದೇವರಿಗೆ ಪೂಜೆ, ಹೋಮ ಮಾಡಿ, ಹರಕೆ ಕಟ್ಟಿಕೊಳ್ಳುವವರಿದ್ದಾರೆ. ಇಷ್ಟಾದ್ರೂ ಕೆಲವರ ಕೈನಲ್ಲಿ ಹಣ ನಿಲ್ಲೋದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವ ಸ್ಥಿತಿ ಅನೇಕರದ್ದಾಗಿರುತ್ತದೆ. ಶ್ರಮವಹಿಸಿ ದುಡಿದ್ರೂ ಪ್ರಮೋಷನ್ ಸಿಗೋದಿಲ್ಲ, ವ್ಯಾಪಾರದಲ್ಲಿ ವೃದ್ಧಿಯಾಗೋದಿಲ್ಲ. ನೀವೂ ಇದೇ ಸಮಸ್ಯೆಯನ್ನು ಎದುರಿಸ್ತಿದ್ರೆ ವಾಸ್ತು ಶಾಸ್ತ್ರದ ಬಗ್ಗೆಯೂ ಸ್ವಲ್ಪ ಗಮನ ನೀಡಿ. ನೀವು ಪ್ರತಿ ದಿನ ಹೇಗೆ ಮಲಗ್ತೀರಿ ಎಂಬುದು ಮುಖ್ಯವಾಗುತ್ತದೆ. ರಾತ್ರಿ ಮಲಗುವ ವೇಳೆ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಆರ್ಥಿಕ ವೃದ್ಧಿಗೆ ಅಡ್ಡಿಯಾಗುತ್ತದೆ. ಆದಾಯ ಕುಸಿಯಲು ಕಾರಣವಾಗುತ್ತದೆ. ನಾವಿಂದು ಲಕ್ಷ್ಮಿ ಮನೆಯಲ್ಲಿರಬೇಕು, ಲಾಕರ್ ತುಂಬಿರಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.

ರಾತ್ರಿ (Night) ಮಲಗುವ ವೇಳೆ ಈ ವಿಷ್ಯದ ಬಗ್ಗೆ ಗಮನವಿರಲಿ :
ಇಡೀ ಮನೆ ಬೆಳಕು ಆರಿಸಬೇಡಿ :
ಬಹುತೇಕರು ರಾತ್ರಿ ಹಾಸಿಗೆ (Bed) ಗೆ ಹೋಗುವ ಮುನ್ನ ಇಡೀ ಮನೆಯ ದೀಪ (Lamp) ಆರಿಸ್ತಾರೆ. ಇದ್ರಿಂದ ಮನೆ ಸಂಪೂರ್ಣ ಕತ್ತಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಮನೆಯ ಎಲ್ಲ ದೀಪವನ್ನು ಆರಿಸುವುದು ತಪ್ಪು. ಮನೆಯಲ್ಲಿ ಒಂದು ಸಣ್ಣ ಬೆಳಕು ಉರಿಯುತ್ತಿರಬೇಕು. ಇಡೀ ಮನೆ ಕತ್ತಲಾದ್ರೆ ಮುನಿಸಿಕೊಂಡು ಲಕ್ಷ್ಮಿ (Lakshmi) ಮನೆಯಿಂದ ಹೊರಗೆ ಹೋಗ್ತಾಳೆ. 

ರಾತ್ರಿ ಹಣ ಎಣಿಸಬೇಡಿ (Don't count money) : ರಾತ್ರಿ ಮಲಗುವ ಮುನ್ನ ಇಂದು ಬಂದ ಆದಾಯವನ್ನು ಕೆಲವರು ಲೆಕ್ಕ ಹಾಕ್ತಾರೆ. ಹಾಸಿಗೆ ಮೇಲೆ ನೋಟುಗಳನ್ನು ಹರಡಿಕೊಂಡು ಲೆಕ್ಕ ಮಾಡುವವರಿದ್ದಾರೆ. ಶಾಸ್ತ್ರಗಳ ಪ್ರಕಾರ, ಮಲಗುವ ಮೊದಲು ಹಣವನ್ನು ಎಣಿಸಬಾರದು. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ. ನಿಮ್ಮ ಮನೆಯಲ್ಲಿ ಆಕೆ ನೆಲೆ ನಿಲ್ಲುವುದಿಲ್ಲ. ಒಂದ್ವೇಳೆ ಹಣ ಎಣಿಸುವುದು ಅನಿವಾರ್ಯವಿದೆ ಎಂದಾಗ ಅಥವಾ ಯಾರಿಗಾದ್ರೂ ಹಣ ನೀಡಲೇಬೇಕಾದ ಸಂದರ್ಭ ಬಂದ್ರೆ ಮೊದಲು ತಾಯಿ ಲಕ್ಷ್ಮಿಯನ್ನು ನೆನೆಪಿಸಿಕೊಳ್ಳಬೇಕು. ಆಕೆಗೆ ನಮಸ್ಕರಿಸಿ ನಂತ್ರ ಹಣ ಎಣಿಸಬೇಕು.   

ಮಲಗುವ ಮುನ್ನ ಬಟ್ಟೆ ಬದಲಿಸಿ : ಹಗಲಿನಲ್ಲಿ ಧರಿಸಿದ ಬಟ್ಟೆಯನ್ನೇ ಬಹುತೇಕರು ರಾತ್ರಿ ಧರಿಸುತ್ತಾರೆ. ಇದು ತಪ್ಪು ಎನ್ನುತ್ತದೆ ಶಾಸ್ತ್ರ. ರಾತ್ರಿ ಮಲಗುವ ಮುನ್ನ ನೀವು ಬಟ್ಟೆ ಬದಲಿಸಬೇಕು. ಅಪ್ಪಿತಪ್ಪಿಯೂ ರಾತ್ರಿ ಬೆತ್ತಲೆಯಾಗಿ ಮಲಗಬಾರದು. ಇದನ್ನು ಮಾಡುವುದು ಧರ್ಮಗ್ರಂಥಗಳಲ್ಲಿ ತಪ್ಪು ಎಂದು ನಂಬಲಾಗಿದೆ. ರಾತ್ರಿ ಬೆತ್ತಲೆಯಾಗಿ ಮಲಗುವವರ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. 

ಈ ಮರಗಳನ್ನು ಮನೆಯಲ್ಲಿ ಎಂದಿಗೂ ಬಳಸಬೇಡಿ, ಆರ್ಥಿಕವಾಗಿ ನಷ್ಟವಾಗುತ್ತೆ!

ಪಾದಗಳ ಸ್ವಚ್ಛತೆ : ರಾತ್ರಿ ಮಲಗುವ ಮುನ್ನ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಪಾದಗಳಿಗೆ ನೀರು ಹಾಕಿ, ಚೆನ್ನಾಗಿ ತೊಳೆದು ನಂತ್ರ ಬಟ್ಟೆಯಲ್ಲಿ ಒರೆಸಿಕೊಂಡು ಹಾಸಿಗೆಗೆ ಹೋಗಬೇಕು. ಒದ್ದೆಯಾದ ಪಾದಗಳಲ್ಲಿಯೇ ಮಲಗುವುದು ಶುಭವಲ್ಲ. ಇದು ಆರ್ಥಿಕ ಬಿಕ್ಕಟ್ಟನ್ನು ಆಹ್ವಾನಿಸುತ್ತದೆ.  

ತಲೆ ಮೇಲೆ ಈ ವಸ್ತುಗಳನ್ನು ಇಡಬೇಡಿ : ಹಾಸಿಗೆಗೆ ಹೋದ್ಮೇಲೆ ಅನೇಕರು ಮೊಬೈಲ್, ಲ್ಯಾಪ್ ಟಾಪ್ ಬಳಸ್ತಾರೆ. ನಿದ್ರೆ ಬರ್ತಿದ್ದಂತೆ ಅದನ್ನು ದಿಂಬಿನ ಬದಿಗಿಟ್ಟು ಮಲಗ್ತಾರೆ. ಆದ್ರೆ ರಾತ್ರಿ ದಿಂಬಿನ ಅಕ್ಕಪಕ್ಕ ಯಾವುದೇ ಗ್ಯಾಜೆಟ್ ಇಡಬಾರದು. ಹಾಗೆಯೇ ಚೂಪಾದ ವಸ್ತುಗಳನ್ನು ಕೂಡ ಇಟ್ಟುಕೊಳ್ಳಬಾರದು. ಇದ್ರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಒತ್ತಡ ಹೆಚ್ಚಾಗುವ ಜೊತೆಗೆ ಆರೋಗ್ಯ ಹದಗೆಡುತ್ತದೆ. ಆರ್ಥಿಕ ಸಮಸ್ಯೆ ಕಾಡುತ್ತದೆ.

ಹಾಲಿನ ಪಾತ್ರೆ ಮುಚ್ಚಿಡಿ : ಹಾಲನ್ನು ಬಿಸಿ ಮಾಡಿದ ನಂತ್ರ ತೆರೆದಿಡಬಾರದು. ಅದನ್ನು ಮುಚ್ಚಿಡಬೇಕು. ರಾತ್ರಿ ಮಾತ್ರವಲ್ಲ ಹಗಲಿನಲ್ಲಿ ಕೂಡ ಹಾಲಿನ ಪಾತ್ರೆಯನ್ನು ಮುಚ್ಚಿಡಬೇಕು. ಹಾಲಿನ ಪಾತ್ರೆಯನ್ನು ಹಾಗೆಯೇ ಇಟ್ಟರೆ ಆರ್ಥಿಕ ಸಮಸ್ಯೆ ಶುರುವಾಗುತ್ತದೆ. ಆರೋಗ್ಯ ನಷ್ಟಕ್ಕೂ ಇದು ಕಾರಣವಾಗುತ್ತದೆ ಎಂದು ಧರ್ಮ ಗ್ರಂಥದಲ್ಲಿ ಹೇಳಲಾಗಿದೆ. 

New Year 2023: ರಾಶಿಗೆ ತಕ್ಕಂತೆ ಬಣ್ಣ ಬಳಸಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ

ಅಡುಗೆ ಮನೆ ಸ್ವಚ್ಛತೆ : ರಾತ್ರಿ ಮಲಗುವ ಮುನ್ನ ಅಡುಗೆ ಮನೆ ಸ್ವಚ್ಛತೆ ಬಗ್ಗೆ ನೀವು ಗಮನ ನೀಡಬೇಕು. ಗ್ಯಾಸ್ ಒಲೆ ಕ್ಲೀನ್ ಆಗಿರಬೇಕು. ಹಾಗೆಯೇ ಸಿಂಕ್ ನಲ್ಲಿ ಯಾವುದೇ ಪಾತ್ರೆಗಳು ಇರಬಾರದು. ಒಲೆಗೆ ರಾತ್ರಿ ಬಟ್ಟೆಯನ್ನು ಮುಚ್ಚಿಡಬೇಕು. ಒಲೆ ಮೇಲೆ ಯಾವುದೇ ಪಾತ್ರೆಯನ್ನು ಇಡಬಾರದು.
 

Follow Us:
Download App:
  • android
  • ios