ರಾಹು ಕೇತುಗಳನ್ನು ಬಿಟ್ಟು ಉಳಿದೈದು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಾದರೆ, ಅದು ಪಂಚಗ್ರಹ ಯೋಗವಾಗುತ್ತದೆ. ಅಂಥ ಯೋಗ ಇರೋರ ಯೋಗಾಯೋಗ ಹೇಗಿರುತ್ತದೆ?

- ರವಿ, ಚಂದ್ರ, ಬುಧ, ಶುಕ್ರ, ಶನಿ ಗ್ರಹಗಳು ಒಂದೇ ರಾಶಿಯಲ್ಲಿದ್ದರೆ, ಜನಿಸಿದವರು ಉತ್ತಮ ಶರೀರ ಉಳ್ಳವರೂ, ದೇಹದ ಮೇಲೆ ಬಹಳ ರೋಮ ಉಳ್ಳವರೂ ಆಗಿರುತ್ತಾರೆ. ಇವರಿಗೆ ಹಣಕಾಸಿನ ತೊಂದರೆ, ಮಕ್ಕಳ ತೊಂದರೆಗಳು ಬರುತ್ತದೆ. ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿರುತ್ತಾರೆ. 
- ಪಂಚಗ್ರಹ ಯೋಗವಿದ್ದರೆ ಇತರರಿಗೆ ತೊಂದರೆ ಕೊಡುವುದೇ ಇವರ ಜೀವನವಾಗುತ್ತದೆ. ಇಂಥ ಜಾತಕದವರು ಮಾನ, ಮರ್ಯಾದೆ ಇಲ್ಲದವರೂ, ಧರ್ಮ, ಆಚಾರ – ವಿಚಾರಗಳನ್ನು ನಂಬದಂಥವರೂ ಆಗಿರುತ್ತಾರೆ- ಇಂಥವರು ಚಪಲ ಚಿತ್ತರೂ, ಜಗಳ ಗಂಟರೂ, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಬುದ್ಧೀವಂತರೂ ಆಗಿರುತ್ತಾರೆ.
- ರವಿ, ಕುಜ, ಬುಧ, ಶನಿ ಒಂದೇ ರಾಶಿಯಲ್ಲಿದ್ದರೆ, ಬೇರೆಯವರಿಂದ ತೊಂದರೆ ಬರುತ್ತದೆ. ಈ ಜಾತಕದವರು ತಿಂಡಿ, ತಿನಿಸುಗಳನ್ನು ಬಯಸುವವರೂ, ಶತ್ರುಗಳಿಂದ ತೊಂದರೆಯನ್ನು ಅನುಭವಿಸುವಂಥವರೂ, ರೋಗದಿಂದ ಕೂಡಿದವರೂ, ಕೆಲಸ ಕಳೆದುಕೊಳ್ಳುವವರೂ ಆಗುತ್ತಾರೆ.

ವಿಚಿತ್ರ ಎನಿಸಿದರೂ ನಿಮ್ಮ ಜಾತಕಗಳ ಇನ್ನೊಂದು ಮುಖ

- ರವಿ, ಚಂದ್ರ, ಬುಧ, ಗುರು, ಶುಕ್ರರು ಇರುವಾಗ ಜನಿಸಿದವರು ಸಮಾಜದಲ್ಲಿ ಬಹಳ ಪ್ರಖ್ಯಾತಿಯನ್ನು ಹೊಂದುತ್ತಾರೆ, ಮಂತ್ರಿಯಾಗುತ್ತಾರೆ, ನ್ಯಾಯವಾದಿ, ನ್ಯಾಯಾಧೀಶರೂ ಆಗುತ್ತಾರೆ, ಬಹಳ ಹಣವಂತರೂ ಆಗುತ್ತಾರೆ.
- ರವಿ, ಚಂದ್ರ, ಕುಜ, ಗುರು, ಶನಿ ಇದ್ದರೆ, ಪರರಿಗೆ ಹಿಂಸೆ ಕೊಡುವವರೂ ಕಳ್ಳತನ ಮಾಡುವವರೂ ಆಗಿರುತ್ತಾರೆ. 
- ರವಿ, ಚಂದ್ರ, ಕುಜ, ಬುಧ, ಶುಕ್ರ ಒಂದೇ ರಾಶಿಯಲ್ಲಿರುವವರು ಜೀವನದಲ್ಲಿ ಬಹಳ ದುಃಖಿಗಳಾಗುತ್ತಾರೆ. ಹೆಂಡತಿಯನ್ನು ಕಳೆದುಕೊಳ್ಳುತ್ತಾರೆ. ಇವರು ನೇರ, ನಡೆ ನುಡಿ ಇಲ್ಲದವರಾಗಿರುತ್ತಾರೆ.
- ರವಿ, ಕುಜ, ಬುಧ, ಗುರು, ಶನಿಗಳು ಒಂದೇ ರಾಶಿಯಲ್ಲಿ ಜನಿಸಿದಂಥವರು ಇನ್ನೊಬ್ಬರಲ್ಲಿ ಬೇಡುವವರೂ, ಕೊಳಕಿನಿಂದ ಕೂಡಿದವರೂ, ಶುಚಿತ್ವಕ್ಕೆ ಗಮನ ಕೊಡದವರೂ, ರೋಗಿಯೂ, ಕೃಶಾಂಗರೂ ಆಗಿರುತ್ತಾರೆ. 
- ಚಂದ್ರ, ಬುಧ, ಗುರು, ಶುಕ್ರ, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವರು ಧರ್ಮ ಪರಿಪಾಲಿಸುತ್ತಾರೆ. ಅನುಕಂಪ ಇರುವವರೂ, ಗುರುಹಿರಿಯರಿಗೆ ವಿಧೇಯರೂ ಆಗಿರುತ್ತಾರೆ.
- ಚಂದ್ರ, ಕುಜ, ಬುಧ, ಶುಕ್ರ, ಶನಿಗಳು ಒಂದೇ ರಾಶಿಯಲ್ಲಿದ್ದು ಜನಿಸಿದವರು ಮಾಡಿದ ಅಡುಗೆ ಬಹಳ ರುಚಿ ಇರುತ್ತದೆ. ಇಂಥವರು ಕ್ರಯ ವಿಕ್ರಯಗಳಲ್ಲಿ ಜಾಣರೂ, ಕಲಹ ಪ್ರಿಯರೂ ಆಗುತ್ತಾರೆ.
- ರವಿ, ಕುಜ, ಗುರು, ಶನಿ ಗ್ರಹಗಳು  ಒಟ್ಟಿಗಿದ್ದರೆ ಜ್ಯೋತಿಷ್ಯವನ್ನು ತಿಳಿದಿರುತ್ತಾರೆ. ಗಣಕ ಯಂತ್ರ, ಎಲೆಕ್ಟ್ರಾನಿಕ್ ಯಂತ್ರದಲ್ಲಿ ಜಾಣರೂ ಆಗಿರುತ್ತಾರೆ. ಸಮಾಜದಲ್ಲಿ ಪ್ರಸಿದ್ಧರೂ ಆಗುತ್ತಾರೆ.
- ಕುಜ, ಬುಧ, ಗುರು, ಶುಕ್ರ, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವರು ಜಾಸ್ತಿ ನಿದ್ರಿಸುತ್ತಾರೆ. ದುಃಖ ಎಂಬುದೇ ಇಲ್ಲದಂಥವರೂ, ದರಿದ್ರರೂ, ಉನ್ಮಾದವುಳ್ಳವರೂ ಆಗುತ್ತಾರೆ.
- ರವಿ, ಕುಜ, ಬುಧ, ಗುರು, ಶುಕ್ರರು ಒಂದೇ ಮನೆಯಲ್ಲಿದ್ದರೆ ತಂದೆ, ತಾಯಿಯನ್ನು ಕಳೆದುಕೊಳ್ಳುತ್ತಾರೆ. ಬಹಳ ದುಃಖದಿಂದ ಇರುವವರೂ, ಕಲಾ ಪ್ರಿಯರಾಗಿರುತ್ತಾರೆ. 

ನೀವು ಹುಟ್ಟಿದ ವಾರಕ್ಕೂ, ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

- ರವಿ, ಚಂದ್ರ, ಗುರು, ಶುಕ್ರ, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದರೆ ಅವರು ವಾಗ್ಮಿಗಳೂ, ನೀರಿನಲ್ಲಿ ಆಡುವವರೂ, ಚಪಲ ಚಿತ್ತರೂ, ಸ್ತ್ರೀಯರನ್ನು ಮರುಳು ಮಾಡುವವರೂ, ಶತ್ರುಗಳ ಭಯ ಉಳ್ಳವರಾಗಿರುತ್ತಾರೆ. 
- ಚಂದ್ರ, ಕುಜ, ಬುಧ, ಗುರು, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವರು ಪುತ್ರ ಸಂತತಿ ಇಲ್ಲದವರೂ, ದುಃಖಿಗಳೂ, ಅಲ್ಪಾಯುಗಳೂ, ಅಂಗಹೀನರೂ ಆಗುತ್ತಾರೆ.
- ರವಿ, ಚಂದ್ರ, ಬುಧ, ಗುರು, ಶನಿ ಒಂದೇ ರಾಶಿಯಲ್ಲಿದ್ದಾಗ ಜನಿಸಿದವರು ಸ್ತಿçÃಯರಿಂದ ತೊಂದರೆಗೆ ಒಳಗಾಗುವವರೂ, ಕೋಪಿಷ್ಠರೂ, ಉನ್ಮತ್ತರೂ ಆಗುತ್ತಾರೆ.