Asianet Suvarna News Asianet Suvarna News

ಕೂಷ್ಮಾಂಡ ದೇವಿಯ ಆರಾಧನೆಯಿಂದ ಸಂಪತ್ತು, ಆರೋಗ್ಯ; ನವರಾತ್ರಿಯ ನಾಲ್ಕನೇ ದಿನ ಈಕೆಯನ್ನು ಪೂಜಿಸಿ

ನವರಾತ್ರಿಯ ನಾಲ್ಕನೇ ದಿನದಂದು (ಚತುರ್ಥಿ) ಮಾತೆ ಕೂಷ್ಮಾಂಡಳನ್ನು ಪೂಜಿಸಲಾಗುತ್ತದೆ. ದೇವಿ ಕೂಷ್ಮಾಂಡಳು ನವ ದುರ್ಗೆಯರಲ್ಲಿ ನಾಲ್ಕನೆಯವಳು. ಈಕೆಯನ್ನು ಪೂಜಿಸುವುದು ಹೇಗೆ, ಯಾವ ಬಗೆಯ ಪೂಜೆಯಿಂದ ಈಕೆ ಪ್ರಸನ್ನಳಾಗುತ್ತಾಳೆ, ಇಲ್ಲಿ ತಿಳಿಯಿರಿ.
 

On Navratri 4th day worshipping Kushmanda Devi brings luck to you
Author
Bengaluru, First Published Oct 7, 2021, 6:46 PM IST

ಸದಾ ಮಂದಸ್ಮಿತೆಯಾಗಿರುವ ದುರ್ಗಾದೇವಿಯ (Nav durga) ನಾಲ್ಕನೇ ಅವತಾರವೇ ಕೂಷ್ಮಾಂಡ. ಈಕೆಯ ಆರಾಧನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು (Light of knowledge) ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ. ಸಂಸ್ಕೃತದಲ್ಲಿ (Sanskrit) ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಎಂದರ್ಥ. ಇದಕ್ಕೆ ಬ್ರಹ್ಮಾಂಡ ಎಂದೂ ಅರ್ಥವಿದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಗುಂಬಳಕಾಯಿಯು ಜ್ಞಾನವರ್ಧಕ, ತೇಜೋ ವರ್ಧಕ. ಸಕಲ ತಾಪವನ್ನು ನಿವಾರಣೆ ಮಾಡಿ ದೇಹಕ್ಕೆ ತಂಪೆರೆವ ಶಾಕಾಹಾರ. ಕೂಷ್ಮಾಂಡ ಪದದಲ್ಲಿ ಕು ಎಂದರೆ ಚಿಕ್ಕದು, ಉಷ್ಮ ಎಂದರೆ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ. ಸರಳವಾಗಿ ಹೇಳುವುದಾದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯಶಕ್ತಿಯನ್ನೇ ತನ್ನ ಒಡಲಿನಲ್ಲಿ ಇಟ್ಟುಕೊಂಡವಳು ಎಂದರ್ಥ. ತಾಯಿ ಕೂಷ್ಮಾಂಡಳು ತನ್ನ ನಗುವಿನಿಂದ ಅಂಧಕಾರವನ್ನು ತೊಡೆದುಹಾಕುವ ಶಕ್ತಿ ದೇವತೆಯಾಗಿದ್ದು, ಆಕೆಗೆ ಎಂಟು ಕೈಗಳಿವೆ. ಹಾಗಾಗಿ ಅವಳನ್ನು ಅಷ್ಟಭುಜ ದೇವಿ ಎಂದೂ ಕರೆಯುತ್ತಾರೆ.

"

ಪೃಥ್ವಿಗೆ ಅಧಿಪತಿಯಾಗಿರುವ ತಾಯಿ ಕೂಷ್ಮಾಂಡಳು ಸೂರ್ಯನ ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಾಳೆ ಎಂದು ನಂಬಿಕೆ. ಸೂರ್ಯನಿಗಿಂತ ತಾಯಿ ಕೂಷ್ಮಾಂಡಳು ಹೆಚ್ಚು ಪ್ರಕಾಶಮಾನವಾಗಿದ್ದು, ಈಕೆಯ ವರದಿಂದಲೇ ಸೂರ್ಯನು ಕಾಯಿಲೆಗಳನ್ನು ವಾಸಿಮಾಡುವ ಗುಣವನ್ನು ಹೊಂದಿದ್ದಾನೆ. ತಾಯಿ ಕೂಷ್ಮಾಂಡಳು ಸಿಂಹದ ಮೇಲೆ ಕುಳಿತಿದ್ದು, ಎಂಟು ಕೈಗಳನ್ನು ಹೊಂದಿದ್ದಾಳೆ. ಕಮಂಡಲ, ಧನಸ್ಸು, ಜಪಮಾಲೆ, ಕಮಲ (Lotus), ಗದೆ, ಅಮೃತ ಕಳಶ, ಚಕ್ರ ಹಾಗೂ ಬಾಣವನ್ನು ಹಿಡಿದಿದ್ದಾಳೆ. ದುರ್ಗಾಸಪ್ತಶತಿಯ ಪ್ರಕಾರ ಕೂಷ್ಮಾಂಡ ದೇವಿಯೇ ಜಗದ ಸೃಷ್ಟಿಗೆ ಕಾರಣೀಭೂತಳಾಗಿದ್ದಾಳೆ. ಸೌರವ್ಯೂಹದ ಗ್ರಹಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಆಕೆ ಇರುವಲ್ಲಿ ಬೆಳಕು ಹಾಗೂ ಜ್ಞಾನವಿದೆ. ಕೂಷ್ಮಾಂಡ ದೇವಿಯು ತನ್ನ ಏಳೂ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ತಾವರೆ ಹೂವು, ಚಕ್ರ, ಗದೆ ಹಾಗೂ ಜಪಮಾಲೆಯನ್ನು ಹಿಡಿದಿದ್ದಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ. ವ್ಯಾಘ್ರವಾಹಿನಿಯಾಗಿರುವ ಈಕೆ ಧರ್ಮದ ಪ್ರತೀಕವಾಗಿದ್ದಾಳೆ. 
 

On Navratri 4th day worshipping Kushmanda Devi brings luck to you

ಕೂಷ್ಮಾಂಡ ದೇವಿಯ ಕತೆ
ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ 'ಈಶತ್‌' ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲು ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುವವು. 

ಮನಸ್ಸನ್ನು ತಿಳಿಯಾಗಿಸುವ ಶೈಲಪುತ್ರಿ: ನವರಾತ್ರಿಯ ಮೊದಲ ದಿನದ ದೇವಿ ಆರಾಧನೆ

ಈ ದೇವಿಯನ್ನು ನೆನೆದು ಮನಸ್ಸಿನಲ್ಲಿ ಪೂಜಿಸುವುದರಿಂದ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಹಾಗೆ ಮಾಡಿದರೆ ನಿಮ್ಮ ಬದುಕಿನಲ್ಲಿ ಕಂಡಿರುವ ಕೆಟ್ಟ ದಿನಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ. ದುಃಖಗಳು ಕಡಿಮೆಯಾಗುತ್ತದೆ. ತಾಯಿಯನ್ನು ಖುಷಿಪಡಿಸುವುದು ಭಕ್ತರಿಗೆ ಸುಲಭವಾದ ವಿಷಯವಾಗಿದೆ. ಸಾಧ್ಯವಾದರೆ ಆ ದಿನದಂದು ಒಳ್ಳೆಯ ಮನಸ್ಸಿನ ಸ್ತ್ರೀಯರನ್ನು ಕರೆದು ಊಟ ಬಡಿಸಬೇಕು. ಮೊಸರು, ಹಲ್ವಾ, ಹಣ್ಣು ಸೇರಿದಂತೆ ಸಿಹಿ ಊಟ ಬಡಿಸಿ. ಒಣ ಹಣ್ಣುಗಳನ್ನು ತಿನ್ನಲು ನೀಡಿ. ಆ ಮಹಿಳೆಯರು ಊಟದಿಂದ ಎಷ್ಟು ಖುಷಿ ಪಡುತ್ತಾಳೋ ಅಷ್ಟೇ ಒಳ್ಳೆಯದಾಗುತ್ತದೆ. ಭಕ್ತರಿಗೆ ಇದು ಒಳ್ಳೆಯ ಲಾಭವನ್ನೂ ತರಲಿದೆ.
ನವರಾತ್ರಿಯ ನಾಲ್ಕನೇ ದಿನದ ಪೂಜೆಯಲ್ಲಿ ಕೂಷ್ಮಾಂಡಳನ್ನು ಪೂಜಿಸುವುದರಿಂದ ಒಳ್ಳೆಯ ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ. ಸಿದ್ಧಿ ಮತ್ತು ನಿಧಿಯು ತಾಯಿಯ ಜಪಮಾಲೆಯಲ್ಲಿದೆ ಎಂದು ಗ್ರಂಥಗಳು ಹೇಳುತ್ತವೆ. 

ಪೂಜಾ ವಿಧಿ
ಕೂಷ್ಮಾಂಡ ದೇವಿಯನ್ನು ಅರ್ಚಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ದೇವಿಯನ್ನು ಅರ್ಚಿಸಿ ನಂತರ ಷೋಡಶೋಪಚಾರ ಪೂಜೆ ಅಂದರೆ 16 ವಿಧದ ಪೂಜೆಯನ್ನು ಮಾಡಿ. ನಿಮ್ಮ ಕುಟುಂಬ ಶ್ರೇಯಸ್ಸಿಗಾಗಿ ಬೇಡಿಕೊಳ್ಳಿ, ಆರತಿಯೊಂದಿಗೆ ಪೂಜೆ ಮುಗಿಸಿ.

ಕೇಸರಿ (Saffron) ಬಣ್ಣ ಧರಿಸಿ
ಈ ದಿನ ಕೇಸರಿ ಬಣ್ಣವು ಶುಭ. ಇದು ಕೂಷ್ಮಾಂಡ ದೇವಿಗೆ ಪ್ರಿಯವಾದುದು. ಪ್ರಕಾಶಮಾನವಾದ ಮತ್ತು ರೋಮಾಂಚಕ ಬಣ್ಣ, ಕಿತ್ತಳೆ (Orange) ಬಣ್ಣ. ಈ ಬಣ್ಣವು ಶಕ್ತಿ (Strenght) ಮತ್ತು ಸಂತೋಷವನ್ನು (Happiness) ಸೂಚಿಸುತ್ತದೆ. 

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ: ಅರ್ಥವೇನು ?

ಕೂಷ್ಮಾಂಡ ಮಂತ್ರ:
ಓಂ ದೇವೀ ಕೂಷ್ಮಾಂಡೈ ನಮಃ

ಓಂ ದೇವಿ ಕೂಷ್ಮಾಂಡದಾಯ್ಯೈ ನಮಃ ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ
ದಾಧನ ಹಸ್ತಪದ್ಮಾಭಯಂ ಕೂಷ್ಮಾಂಡ ಶುಭದಾಸ್ತು ಮೇ

ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ದುರ್ಗತಿನಾಶಿನಿ ತ್ವಂಹೀ ದರಿದ್ರಾದಿ ವಿನಾಶನಿಂ
ಜಯಂದಾ ಧನದಾ ಕೂಷ್ಮಾಂಡಾ ಪ್ರಣಮಾಮ್ಯಹಂ
ಜಗತಮಾತಾ ಜಗತಕಾತ್ರಿ ಜಗದಾಧರ ರೂಪಾನಿಂ
ಚರಚರೇಶ್ವರಿ ಕೂಷ್ಮಾಂಡೇ ಪ್ರಣಮಾಮ್ಯಹಂ
ತ್ರೈಲೋಕ್ಯಸುಂದರೀ ತ್ವಂಹಿ ದುಖಃ ಶೋಕ ನಿವಾರಿಣಿಂ
ಪರಮಾನಂದಮಯಿ ಕೂಷ್ಮಾಂಡೇ ಪ್ರಣಮಾಮ್ಯಹಂ

ಚಂದ್ರಘಂಟಾ ದೇವಿಯ ರೌದ್ರಾವತಾರ, ನವರಾತ್ರಿಯ ಮೂರನೇ ದಿನ ಈಕೆಯ ಪೂಜೆ
 

Follow Us:
Download App:
  • android
  • ios