Asianet Suvarna News Asianet Suvarna News

ದೇಶದ ಹಲವು ರಾಜ್ಯಗಳಲ್ಲಿದೆ ಜಗದೋದ್ಧಾರಕನಿಗೆ ಆಸ್ತಿ: ಪುರಿ ಜಗನ್ನಾಥ ಎಷ್ಟೊಂದು ಶ್ರೀಮಂತ

ಒಡಿಶಾದ ಪುರಿ ಜಗನ್ನಾಥ ದೇಗುಲವು  ಹಿಂದೂಗಳ ಪ್ರಮುಖ ಭಕ್ತಿಕೇಂದ್ರವಾಗಿದ್ದು, ದೇಶದೆಲ್ಲೆಡೆಯಿಂದ ಪ್ರತಿವರ್ಷ ಲಕ್ಷಾಂತರ ಜನ ಭಕ್ತರು ಇಲ್ಲಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ.

Odisha In many states of the country, there is property for Lord Puri Jagannath akb
Author
First Published Oct 3, 2023, 10:51 AM IST

ಭುವನೇಶ್ವರ (ಒಡಿಶಾ):  ಒಡಿಶಾದ ಪುರಿ ಜಗನ್ನಾಥ ದೇಗುಲವು  ಹಿಂದೂಗಳ ಪ್ರಮುಖ ಭಕ್ತಿಕೇಂದ್ರವಾಗಿದ್ದು, ದೇಶದೆಲ್ಲೆಡೆಯಿಂದ ಪ್ರತಿವರ್ಷ ಲಕ್ಷಾಂತರ ಜನ ಭಕ್ತರು ಇಲ್ಲಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಇಲ್ಲಿ ಶ್ರೀಕೃಷ್ಣನನ್ನು ಜಗನ್ನಾಥನ ರೂಪದಲ್ಲಿ ಪೂಜಿಸಲಾಗುತ್ತದೆ. ಒಡಿಶಾದ ಪುರಿಯಲ್ಲಿ ಈ ದೇಗುಲವಿದ್ದು, ಇಲ್ಲಿ ತನ್ನ ಹಿರಿಯ ಸಹೋದರ ಬಲರಾಮನ ಜೊತೆ (ಬಲಭದ್ರ) ಹಾಗೂ ಕಿರಿಯ ಸಹೋದರಿ ಸುಭದ್ರ ಜೊತೆ ಜಗನ್ನಾಥ ನೆಲೆಸಿದ್ದಾನೆ.  ಹಲವು ರೀತಿಯ ವಿವರಿಸಲಾಗದ, ವಿಜ್ಞಾನಕ್ಕೆ ನಿಲುಕದ ಪವಾಡಗಳೊಂದಿಗೆ ದೇಗುಲ ಮಿಳಿತವಾಗಿದೆ. ಇಂತಹ ಪುರಿ ಜಗನ್ನಾಥನಿಗೆ ದೇಶದ ಹಲವೆಡೆ ಆಸ್ತಿ ಇದೆಯಂತೆ..!

ಪುರಿ ಜಗನ್ನಾಥ (Puri Jagannata) ದೇವಸ್ಥಾನವು ಒಡಿಶಾ ಸೇರಿ 7 ರಾಜ್ಯಗಳಲ್ಲಿ ಸುಮಾರು 60822 ಎಕರೆ ಭೂಮಿ ಆಸ್ತಿಯನ್ನು ಹೊಂದಿದೆ ಎಂದು ಒಡಿಶಾ ಕಾನೂನು ಸಚಿವ ಜಗನ್ನಾಥ್‌ ಸಾರಕ ಹೇಳಿದ್ದಾರೆ. ಈ ಪೈಕಿ ಒಡಿಶಾದಲ್ಲಿ 38061 ಎಕರೆ  ಆಸ್ತಿ ಇದ್ದರೆ, ಪಶ್ಚಿಮ ಬಂಗಾಳದಲ್ಲಿ (West Bengal) 323 ಎಕರೆ, ಮಹಾರಾಷ್ಟ್ರದಲ್ಲಿ 29 ಎಕರೆ, ಮಧ್ಯಪ್ರದೇಶದಲ್ಲಿ 25 ಎಕರೆ, ಆಂಧ್ರಪ್ರದೇಶದಲ್ಲಿ 17020 ಎಕರೆ, ಛತ್ತೀಸ್‌ಗಢದಲ್ಲಿ 1700 ಎಕರೆ ಮತ್ತು ಬಿಹಾರದಲ್ಲಿ 1 ಎಕರೆ ಜಾಗ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಹಲವು ಕಡೆ ಜಗನ್ನಾಥನ ಆಸ್ತಿಗೆ ಕೆಲವರು ಕನ್ನ ಹಾಕಿದ್ದು, ಈ ಹಿನ್ನೆಲೆಯಲ್ಲಿ ಶ್ರೀ ಜಗನ್ನಾಥ ದೇಗುಲ ಆಡಳಿತ ಮಂಡಳಿ ಒಟ್ಟು  974 ಒತ್ತುವರಿ ಪ್ರಕರಣಗಳನ್ನು ದಾಖಲಿಸಿದೆ. 

ಸೆಪ್ಟೆಂಬರ್‌ನಲ್ಲಿ 1.62 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ: ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚು

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ದೇಶದಲ್ಲಿ ಒಟ್ಟು 1.62 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಕಳೆದ (2022) ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಸಂಗ್ರಹವಾದ 1.47 ಲಕ್ಷ ಕೋಟಿ ರು. ಜಿಎಸ್‌ಟಿಗಿಂತ ಶೇ.10 ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ ಜಿಎಸ್‌ಟಿ ಸಂಗ್ರಹವು 1.6 ಲಕ್ಷ ಕೋಟಿ ರು. ಗಡಿ ದಾಟಿದೆ. ಅಲ್ಲದೇ ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಆಮದು ಸೇರಿದಂತೆ ದೇಶೀಯ ಆದಾಯವು ಶೇ.14ರಷ್ಟು ಏರಿಕೆಯಾಗಿದೆ. ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

2023ರ ಸೆಪ್ಟೆಂಬರ್‌ನಲ್ಲಿ ಒಟ್ಟು 1,62,712 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಇದರಲ್ಲಿ ಕೇಂದ್ರ ಜಿಎಸ್‌ಟಿ (GST) 29,818 ಕೋಟಿ ರು., ರಾಜ್ಯ ಜಿಎಸ್‌ಟಿ 37,657 ಕೋಟಿ ರು., ಇಂಟಿಗ್ರೇಟೆಡ್ ಜಿಎಸ್‌ಟಿ 83,623 ಕೋಟಿ ರು. ಮತ್ತು ಸೆಸ್ ಜಿಎಸ್‌ಟಿ 11,613 ಕೋಟಿ ರು. ಸಂಗ್ರಹವಾಗಿದೆ. ಕರ್ನಾಟಕ ನಂ.2: ಸೆಪ್ಟೆಂಬರ್‌ ತಿಂಗಳಲ್ಲಿ ಮಹಾರಾಷ್ಟ್ರ 25137 ಕೋಟಿ ರು., ಕರ್ನಾಟಕ, 11693 ಕೋಟಿ ರು.,ತಮಿಳುನಾಡು 10481 ಕೋಟಿ ರು., ಗುಜರಾತ್‌ 10129 ಕೋಟಿ ರು. ಮತ್ತು ಹರ್ಯಾಣ 8009 ಕೋಟಿ ರು. ಜಿಎಸ್ಟಿ ಸಂಗ್ರಹ ಮೂಲಕ ಟಾಪ್‌ 5 ರಾಜ್ಯಗಳಾಗಿ ಹೊರಹೊಮ್ಮಿವೆ.

Follow Us:
Download App:
  • android
  • ios