ನವರಾತ್ರಿ ವಿಷಯಕ್ಕೆ ಗುಜರಾತಿಗಳು ಪ್ರತಿಭಟನೆ ಮಾಡ್ಬೋದು; ಆನಂದ್ ಮಹೀಂದ್ರಾ ಹೀಗಂದಿದ್ದೇಕೆ?!
ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಮಂಗಳವಾರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಮ್ಮ ಹಕ್ಕುಗಳಿಗಾಗಿ ಗುಜರಾತ್‌ನಿಂದ 'ಪ್ರತಿಭಟನೆಯ ಕೂಗು' ಕೇಳಬಹುದು ಎಂದಿದ್ದಾರೆ. ಏನೀ ವಿಡಿಯೋ?
ಈ ನಗರದ ನವರಾತ್ರಿ ಆಚರಣೆ ಮುಂದೆ ಗುಜರಾತ್ ಕೂಡಾ ಇಲ್ಲ. ನವರಾತ್ರಿಯ ಸಮಯದಲ್ಲಿ ಈ ನಗರವನ್ನು ಮೀರಿಸೋ ಮತ್ತೊಂದು ನಗರವಿಲ್ಲ ಎಂದಿದ್ದಾರೆ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ. ಇಷ್ಟಕ್ಕೂ ಅರು ಹೇಳಿದ್ದು ಯಾವ ನಗರದ ಬಗ್ಗೆ ಗೊತ್ತಾ?
ಅದೇ ಮುಂಬೈ.
ಮಂಗಳವಾರ ಮುಂಬೈನ ಮರೈನ್ ಡ್ರೈವ್(Marine Drive)ನಲ್ಲಿ ನಡೆಯುತ್ತಿದ್ದ ನವರಾತ್ರಿ ಸಂಭ್ರಮದ ಆಚರಣೆಯ ವಿಡಿಯೋ ಹಂಚಿಕೊಂಡಿರುವ ಅವರು, 'ನವರಾತ್ರಿಯ ಸಮಯದಲ್ಲಿ ಮುಂಬೈನಂತಹ ಸ್ಥಳವಿಲ್ಲ' ಎಂದು ವ್ಯಾಖ್ಯಾನಿಸಿದ್ದಾರೆ. ಜೊತೆಗೆ, 'ಈಗ ತಮ್ಮ ಹಕ್ಕುಗಳಿಗಾಗಿ ಗುಜರಾತ್‌ನಿಂದ ಪ್ರತಿಭಟನೆಯ ಕೂಗು ಕೇಳಬಹುದು' ಎಂದೂ ತಮಾಷೆಯಾಗಿ ಸೇರಿಸಿದ್ದಾರೆ.
'ಮುಂಬೈ, ಮೆರೈನ್ ಡ್ರೈವ್. ಮುಂಬೈನ ಬೀದಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಸ್ವಾಧೀನಪಡಿಸಿಕೊಳ್ಳುವುದು ಪೂರ್ಣಗೊಂಡಿದೆ. ಆದರೆ ಇವರು ಆಕ್ರಮಣಕಾರರು, ಅವರನ್ನು ಇಲ್ಲಿ ಮುಕ್ತ ತೋಳುಗಳಿಂದ ಸ್ವಾಗತಿಸಲಾಗುತ್ತದೆ.ನವರಾತ್ರಿಯ ಸಮಯದಲ್ಲಿ ಮುಂಬೈನಂತಹ ಸ್ಥಳವಿಲ್ಲ.(ಗುಜರಾತ್‌ನ ನಗರಗಳಿಂದ ನಾನು ಪ್ರತಿಭಟನೆಯ ಕೂಗನ್ನು ಕೇಳಲಿದ್ದೇನೆ ಎಂದು ನನಗೆ ತಿಳಿದಿದೆ!)' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಇವರ ಈ ಟ್ವೀಟ್‌ಗೆ ನೆಟಿಜನ್‌ಗಳು ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ನವರಾತ್ರಿ ಆಚರಣೆಗಳು ಹೆಚ್ಚು ಆಡಂಬರ ಮತ್ತು ಉತ್ಸಾಹದಿಂದ ನಡೆಯುತ್ತಿರುವ ಇತರ ಸ್ಥಳಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡು, ಇದೂ ಕೂಡಾ ಮುಂಬೈ(Mumbai)ಗಿಂತ ಕಮ್ಮಿಯಿಲ್ಲ ಎಂದು ವಾದಿಸಿದ್ದಾರೆ.
Navratri 2022 : ದುರ್ಗೆ ಪೂಜೆ ಜೊತೆ ಮನೆ ಮಹಿಳೆ ಮೇಲಿರಲಿ ವಿಶೇಷ ಪ್ರೀತಿ
'ಬರೋಡಾ. ಪಕ್ಷಿನೋಟದಿಂದ ಗರ್ಬಾ. ಇದಕ್ಕಿಂತ ಉತ್ತಮವಾದ ಮತ್ತು ದೊಡ್ಡದಾದ ಯಾವುದೂ ಸಿಗುವುದಿಲ್ಲ' ಎಂದು ಒಬ್ಬ ಬಳಕೆದಾರರು ಗುಜರಾತ್‌ನ ಎರಡನೇ ಅತಿ ದೊಡ್ಡ ನಗರವಾದ ಬರೋಡಾದಲ್ಲಿ ನಡೆಯುತ್ತಿರುವ ಗರ್ಬಾ(Garba)ದ ಅದ್ಭುತ ನೋಟವನ್ನು ಟ್ವೀಟ್ ಮಾಡಿದ್ದಾರೆ.
'ಕೋಲ್ಕತ್ತಾ ಅಕ್ಷರಶಃ ಅಸ್ತಿತ್ವದಲ್ಲಿದೆ!' ಎಂದು ಇನ್ನೊಬ್ಬ ಬಳಕೆದಾರ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ನವರಾತ್ರಿ ಸಂಭ್ರಮ ಹಂಚಿಕೊಂಡಿದ್ದಾರೆ.
ದುರ್ಗಾ ಪೂಜೆಯ ಸಮಯದಲ್ಲಿ ಕೋಲ್ಕತ್ತಾಗೆ ಭೇಟಿ ನೀಡುವಂತೆ ಒಬ್ಬ ಬಳಕೆದಾರ ಉದ್ಯಮಿ ಆನಂದ್ ಮಹೀಂದ್ರಾ(Anand Mahindra)ರನ್ನು ಆಹ್ವಾನಿಸಿದ್ದಾರೆ. ನಗರವು ಪ್ರತಿವರ್ಷ ವಿಶ್ವಪ್ರಸಿದ್ಧ ಪೂಜಾ ಪಂಡಲ್‌ಗಳನ್ನು ಆಯೋಜಿಸುತ್ತದೆ ಮತ್ತು ಎಲ್ಲೆಡೆಯಿಂದ ಪ್ರವಾಸಿಗರು ಮತ್ತು ಭಕ್ತರ ಗಮನವನ್ನು ಸೆಳೆಯುತ್ತದೆ.
ವಿಡಿಯೋದಲ್ಲೇನಿದೆ?
ಸುಮಾರು 3 ಲಕ್ಷ ವೀಕ್ಷಣೆಗಳನ್ನು ಹೊಂದಿರುವ ನಲವತ್ತು ಸೆಕೆಂಡ್ ವೀಡಿಯೋದಲ್ಲಿ ಜನರು ಕಚೇರಿ, ಕಾಲೇಜಿಗೆ ಹೋಗುವಂಥ ಸಾದಾ ಉಡುಗೆ ತೊಟ್ಟು ಗರ್ಬಾ ನೃತ್ಯ ಮಾಡುತ್ತಿದ್ದಾರೆ. ಎಲ್ಲರೂ ಈ ಸಂತೋಷದ ಸಮಯಕ್ಕಾಗಿ ತಮ್ಮ ದೈನಂದಿನ ವೇಳಾಪಟ್ಟಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಂಡಂತೆ ತೋರುತ್ತಿದೆ. ಗುಜರಾತಿ ಹಾಡಿಗೆ ಎಲ್ಲರೂ ಗರ್ಬಾ ನೃತ್ಯ ಮಾಡುತ್ತಾ ನವರಾತ್ರಿಯ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಆನಂದ್ ಮಹೀಂದ್ರಾ ಶೇರ್ ಮಾಡಿದ ಈ ವಿಡಿಯೋಗೆ 11 ಸಾವಿರಕ್ಕೂ ಅಧಿಕ ಜನ ಲೈಕ್ ಒತ್ತಿದ್ದು, ನೂರಾರು ಜನರು ಕಾಮೆಂಟ್ ಮಾಡಿದ್ದಾರೆ.
Navaratri Decoration: ನವರಾತ್ರಿ ಪೂಜಾ ಕೋಣೆ ಸಿಂಗಾರ ಮಾಡಿ ಧನಾತ್ಮಕ ವಾತಾವರಣ ಮೂಡಿಸಿ
ಆನಂದ್ ಮಹೀಂದ್ರಾ ಸಾಮಾನ್ಯವಾಗಿ ಟ್ವಿಟ್ಟರ್‌ನಲ್ಲಿ ಬ್ಯುಸಿಯಾಗಿದ್ದು, ಬಹಳ ಉತ್ತಮ ವಿಡಿಯೋಗಳನ್ನು, ಜನರ ಉತ್ತಮ ಕೆಲಸಗಳನ್ನು ಗುರುತಿಸಿ ಶೇರ್ ಮಾಡಿ ಪ್ರಶಂಸಿಸುತ್ತಿರುತ್ತಾರೆ.