ಹೊಸ ವರ್ಷದಂದು ಅಳು, ದುಃಖ, ನಕಾರಾತ್ಮಕತೆ, ಕಪ್ಪು ಬಟ್ಟೆ, ಖಾಲಿ ಪರ್ಸ್, ಸಾಲ, ಹರಿತ ವಸ್ತುಗಳ ಬಳಕ ತಪ್ಪಿಸಿ. ಸಕಾರಾತ್ಮಕವಾಗಿರಿ. ದೇವಸ್ಥಾನಕ್ಕೆ ಹೋಗುವಾಗ ಶುದ್ಧವಾಗಿ, ಶಾಂತ ಮನಸ್ಸಿನಿಂದ ಹೋಗಿ. ಮನೆ ದೇವರನ್ನು ಪೂಜಿಸಿ ನಂತರ ದೇವಸ್ಥಾನಕ್ಕೆ ತೆರಳಿ. ವಸ್ತುವನ್ನು ಒಡೆಯಬೇಡಿ. ವರ್ಷದ ಮೊದಲ ದಿನ ಮಾಡಿದ ತಪ್ಪು ಇಡೀ ವರ್ಷ ಹಿಂಬಾಲಿಸುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. 

ಹೊಸ ವರ್ಷ (New Year )ದ ಮೊದಲ ದಿನ ಹಾಗಿರಬೇಕು, ಹೀಗಿರಬೇಕು ಎಂದು ಜನರು ಪ್ಲಾನ್ ಮಾಡ್ತಾರೆ. ಆದ್ರೆ ಅದನ್ನು ಕಾರ್ಯರೂಪಕ್ಕೆ ತರುವವರ ಸಂಖ್ಯೆ ಬಹಳ ವಿರಳ. ಬೆಳಗಿನ ಜಾವದವರೆಗೆ ಪಾರ್ಟಿ ಮಾಡುವ ಜನರಿಗೆ ವರ್ಷದ ಮೊದಲ ಬೆಳಕನ್ನು ನೋಡಲು ಸಾಧ್ಯವಾಗೋದಿಲ್ಲ. ಇನ್ನು ಕೆಲವರು ದೇವಸ್ಥಾನಕ್ಕೆ ಹೋಗಿ ವರ್ಷದ ಮೊದಲ ದಿನವನ್ನು ಶುರು ಮಾಡ್ತಾರೆ. ವರ್ಷದ ಮೊದಲ ದಿನ ನಾವು ಮಾಡುವ ತಪ್ಪುಗಳು ಇಡೀ ವರ್ಷ ನಮ್ಮನ್ನು ಕಾಡುತ್ವೆ ಎನ್ನುವ ನಂಬಿಕೆಯೊಂದಿದೆ. 2025ರ ಮೊದಲ ದಿನ ನೀವು ಅಪ್ಪಿತಪ್ಪಿಯೂ ಕೆಲ ಕೆಲಸಗಳನ್ನು ಮಾಡ್ಬೇಡಿ. ಇದ್ರಿಂದ ಸಮಸ್ಯೆ ನಿಮ್ಮ ಬೆನ್ನು ಹತ್ತುತ್ತದೆ. ದೇವಸ್ಥಾನಕ್ಕೆ ಹೋಗುವಾಗ್ಲೂ ಕೆಲ ವಿಷ್ಯಗಳನ್ನು ನೀವು ನೆನಪಿಟ್ಟುಕೊಳ್ಳಬೇಕು. 

ವರ್ಷದ ಮೊದಲ ದಿನ ಈ ತಪ್ಪುಗಳನ್ನು ಮಾಡ್ಬೇಡಿ : 

ಅಳು, ದುಃಖ : ನವ ವರ್ಷ ನಿಮ್ಮ ಜೀವನದಲ್ಲಿ ಸಂತೋಷ (Happy)ವೇ ತುಂಬಿರಬೇಕು ಎಂದಾದ್ರೆ ವರ್ಷದ ಮೊದಲ ದಿನ ಕಣ್ಣೀರು ಹಾಕ್ಬೇಡಿ. ನಕಾರಾತ್ಮಕ ಆಲೋಚನೆಯನ್ನು ಮಾಡ್ತಾ, ನಿಮ್ಮ ಕಷ್ಟಗಳನ್ನು ನೆನಪಿಸಿಕೊಳ್ತಾ ನೋವು ತಿನ್ನಬೇಡಿ. ಯಾವುದೇ ಕಾರಣಕ್ಕೂ ಅಳಬೇಡಿ. ಮೊದಲ ದಿನವನ್ನು ಸಾಧ್ಯವಾದಷ್ಟು ಖುಷಿಯಿಂದ ಕಳೆಯಿರಿ. ಪ್ರತಿ ಕ್ಷಣವನ್ನು ಸಕಾರಾತ್ಮಕ ಆಲೋಚನೆ (positive thinking)ಗೆ ಮೀಸಲಿಡಿ. 

2025ರಲ್ಲಿ ಅದೃಷ್ಟ ಪಡೆಯಲು ಸರಳ ಮಾರ್ಗಗಳು

ವಸ್ತು ಒಡೆಯಬೇಡಿ : ವರ್ಷದ ಮೊದಲ ದಿನ ಯಾವುದೇ ವಸ್ತುವನ್ನು ಒಡೆಯಬೇಡಿ. ಅದು ಗಾಜಿನ ವಸ್ತುವಾಗಿರಲಿ ಇಲ್ಲ ಬೇರೆ ಯಾವುದೇ ವಸ್ತುವಿರಲಿ. ಅದನ್ನು ಕೆಳಗೆ ಬೀಳಿಸಿ ಒಡೆಯುವ ತಪ್ಪು ಮಾಡ್ಬೇಡಿ. ಇದ್ರಿಂದ ದುರಾದೃಷ್ಟ ನಿಮ್ಮ ಬೆನ್ನು ಹತ್ತುತ್ತದೆ.

ಈ ಬಟ್ಟೆ ಧರಿಸಬೇಡಿ : ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ಅಶುಭ ಎನ್ನಲಾಗುತ್ತದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಅಥವಾ ವರ್ಷದ ಮೊದಲ ದಿನ ನೀವು ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ. 

ಖಾಲಿ ಪರ್ಸ್ : ವರ್ಷದ ಮೊದಲ ದಿನ ನಿಮ್ಮ ಪರ್ಸ್ ಖಾಲಿ ಇಡಬೇಡಿ. ಪರ್ಸ್ನಲ್ಲಿ ಹಣ ಇರುವಂತೆ ನೋಡಿಕೊಳ್ಳಿ. ಪರ್ಸ್ ನಲ್ಲಿ ಹಣವಿದ್ದರೆ ವರ್ಷಪೂರ್ತಿ ಹಣ ಬರ್ತಿರುತ್ತದೆ. ಆರ್ಥಿಕ ಸಮಸ್ಯೆ ಎಂದಿಗೂ ನಿಮ್ಮನ್ನು ಕಾಡುವುದಿಲ್ಲ. 

ಸಾಲ ಪಡೆಯಬೇಡಿ : ವರ್ಷದ ಮೊದಲ ದಿನ ಸಾಲ ಪಡೆಯಬೇಡಿ. ಮೊದಲ ದಿನ ಸಾಲ ಪಡೆದರೆ ನಿಮ್ಮ ಮೈಮೇಲೆ ಸಾಲದ ಹೊರೆ ಹೆಚ್ಚಾಗುತ್ತದೆ. ವರ್ಷಪೂರ್ತಿ ನೀವು ಸಾಲದ ಸಮಸ್ಯೆಯಲ್ಲಿ ಕಳೆಯಬೇಕಾಗುತ್ತದೆ. 

ಹರಿತವಾದ ವಸ್ತು ಬಳಕೆ : ವರ್ಷದ ಮೊದಲ ದಿನ ಚಾಕು, ಚೂರಿ ಸೇರಿದಂತೆ ಯಾವುದೇ ಅಪಾಯಕಾರಿ ವಸ್ತುಗಳನ್ನು ಬಳಸಬೇಡಿ. ಹಾಗೆಯೇ ಇದನ್ನು ಮಾರುಕಟ್ಟೆಯಿಂದ ಖರೀದಿ ಮಾಡಬೇಡಿ. 

2025ರ ಹೊಸ ವರ್ಷದ ಶುಭಾಶಯಗಳು

ನಕಾರಾತ್ಮಕತೆಯಿಂದ ದೂರವಿರಿ : ವರ್ಷದ ಮೊದಲ ದಿನ ನಕಾರಾತ್ಮಕತೆಯಿಂದ ದೂರವಿರಿ. ನಕಾರಾತ್ಮಕವಾಗಿ ಆಲೋಚನೆ ಮಾಡುವ, ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕತೆ ತುಂಬುವ ವ್ಯಕ್ತಿಯನ್ನು ಭೇಟಿಯಾಗ್ಬೇಡಿ. ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ತುಂಬುವ, ನಿಮ್ಮನ್ನು ಹುರಿದುಂಬಿಸುವ ವ್ಯಕ್ತಿಯ ಸ್ನೇಹ ಬೆಳೆಸಿಕೊಳ್ಳಿ.

ದೇವಸ್ಥಾನಕ್ಕೆ ಹೋಗುವ ಮೊದಲು ಇದು ನೆನಪಿರಲಿ : 
• ದೇವಸ್ಥಾನಕ್ಕೆ ಹೋಗುವಾಗ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ದೇವರ ಧ್ಯಾನ ಮಾಡ್ತಾ ಹೋಗಿ. ದ್ವೇಷದ ಭಾವನೆಯಲ್ಲಿ ದೇವಸ್ಥಾನಕ್ಕೆ ಹೋಗಬೇಡಿ. ಅನವಶ್ಯಕ ಚರ್ಚೆಯನ್ನು ದೇವಸ್ಥಾನದಲ್ಲಿ ಮಾಡ್ಬೇಡಿ.
• ಹೊಸ ವರ್ಷದ ಮೊದಲ ದಿನ ನೀವು ದೇವಸ್ಥಾನಕ್ಕೆ ಹೋಗುತ್ತಿದ್ದರೆ, ಶುದ್ಧತೆ ಬಗ್ಗೆ ಗಮನ ಹರಿಸಿ. ಸ್ನಾನ ಮಾಡಿಯೇ ದೇವಸ್ಥಾನಕ್ಕೆ ಹೋಗಿ. ಶುದ್ಧವಾದ ಬಟ್ಟೆಯನ್ನು ಧರಿಸಿ.
• ಮನೆಯಲ್ಲಿರುವ ದೇವರನ್ನು ಪೂಜಿಸಿಯೇ ನಂತ್ರ ದೇವಸ್ಥಾನಕ್ಕೆ ಹೋಗಿ. ಯಾವುದೇ ವ್ಯಕ್ತಿಯಾಗಿರಲಿ ಮೊದಲು ಮನೆಯಲ್ಲಿರುವ ದೇವರಿಗೆ ವಂದಿಸಬೇಕು. ನಂತ್ರ ದೇವಸ್ಥಾನಕ್ಕೆ ತೆರಳಬೇಕು.