Asianet Suvarna News Asianet Suvarna News

ಮುತ್ತನ್ನು ಈ ಆರು ರತ್ನಗಳೊಂದಿಗೆ ಧರಿಸಿದರೆ ಅಪಾಯ ತಪ್ಪಿದ್ದಲ್ಲ!

ಎಲ್ಲ ರತ್ನಗಳೂ ಒಂದಕ್ಕೊಂದು ಹೊಂದುವುದಿಲ್ಲ. ಅಂತೆಯೇ ಮುತ್ತನ್ನು ನೀವು ಯಾವೆಲ್ಲ ರತ್ನಗಳೊಂದಿಗೆ ಧರಿಸಬಾರದೆಂಬುದನ್ನು ತಿಳಿದಿರಬೇಕು.

Never wear Pearl with Diamond Emerald and these 3 other gemstones skr
Author
Bangalore, First Published Jun 18, 2022, 7:36 PM IST

ಮುತ್ತುಗಳು(pearls) ನೋಡಲು ಬಲು ಸುಂದರ. ಕತ್ತಿಗೆ ಅವು ಕೊಡುವ ಅಂದವೇ ಬೇರೆ. ಉತ್ತಮ ಮುತ್ತುಗಳು ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮುತ್ತುಗಳು ಚಂದ್ರನ ಅಂಶವಾಗಿವೆ. ಅವನ್ನು ಧರಿಸುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ ಮತ್ತು ಮಾನಸಿಕ ಒತ್ತಡ(mental stress) ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಹಾಗಿದ್ದೂ ಮುತ್ತು ಧರಿಸಿದಾಗ ಜೊತೆಗೆ ಬೇರೆ ರತ್ನಗಳಲ್ಲಿ ಕೆಲವನ್ನು ಧರಿಸಬಾರದು. ನೀವು ತಿಳಿಯದೆ ಮಾಡುವ ಈ ತಪ್ಪುಗಳು(mistakes) ಬದುಕನ್ನು ಅಲ್ಲೋಲಕಲ್ಲೋಲವಾಗಿಸಬಹುದು. ಸಕಾರಾತ್ಮಕ ಫಲಿತಾಂಶಗಳಿಗಾಗಿ ನೀವು ಯಾವ ರತ್ನ(gem)ದ ಕಲ್ಲುಗಳೊಂದಿಗೆ ಮುತ್ತು ಧರಿಸಬೇಕು ಎಂದು ತಿಳಿದಿರಬೇಕು. ಏಕೆಂದರೆ ರತ್ನ ಪ್ರಪಂಚ ಬಹಳ ವಿಸ್ತಾರವಾಗಿದೆ. ಅವು ಎಲ್ಲ ಗ್ರಹಗಳವರೆಗೂ ತಮ್ಮ ಪ್ರಭಾವವನ್ನು ಹರಡುತ್ತವೆ. ಕೆಲವು ರತ್ನಗಳನ್ನು ಆಭರಣದಂತೆ ಯಾವುದೇ ತಜ್ಞರನ್ನು ಸಂಪರ್ಕಿಸದೇ ಧರಿಸಿದರೆ, ಅವು ನಿಮಗಾಗದೆ ಹೋದರೆ ಬಹಳ ಕೆಡುಕನ್ನು ಅನುಭವಿಸಬೇಕಾಗುತ್ತದೆ.

ಜ್ಯೋತಿಷ್ಯ(Astrology)ದಲ್ಲಿ, ಮುತ್ತಿನ ಕಲ್ಲು ಚಂದ್ರನ ಅಂಶ ಎಂದು ಹೇಳಲಾಗುತ್ತದೆ. ರತ್ನ ಶಾಸ್ತ್ರದ ಪ್ರಕಾರ, ಮುತ್ತು ಧರಿಸಿದ ವ್ಯಕ್ತಿಗೆ ಲಕ್ಷ್ಮಿ ದೇವಿ(Lakshmi devi)ಯ ಆಶೀರ್ವಾದ ಇರುತ್ತದೆ. ವ್ಯಕ್ತಿಯ ಪ್ರಗತಿಗೂ ಮುತ್ತು ಸಹಕಾರಿ. ಮುತ್ತುಗಳು ಮನಸ್ಸಿನ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತವೆ ಎಂದು ಪರಿಗಣಿಸಲಾಗಿದೆ. ಆದರೆ ಕೆಲವೊಮ್ಮೆ ಜಾತಕವನ್ನು ಪರಿಗಣಿಸದೆ ಧರಿಸಿದರೆ ನಕಾರಾತ್ಮಕ ಪರಿಣಾಮವೂ ಉಂಟಾಗುತ್ತದೆ. ಹೌದು, ಮುತ್ತು ಚಂದ್ರ(moon)ನ ಕಾರಕವಾಗಿರುವುದರಿಂದ ಚಂದ್ರದೇವನಿಗೆ ಪ್ರತಿಕೂಲ ರಾಶಿ ಇರುವವರು ಮುತ್ತು ಧರಿಸುವುದನ್ನು ತಪ್ಪಿಸಬೇಕು. ಅಲ್ಲದೆ, ಹಲವಾರು ರತ್ನಗಳನ್ನು ಒಟ್ಟಿಗೆ ಬೆರೆಸಿ ಧರಿಸಬಾರದು. ಇದು ನಕಾರಾತ್ಮಕ ಪರಿಣಾಮವನ್ನೂ ಬೀರುತ್ತದೆ.

ಶೃಂಗೇರಿ ಶ್ರೀಗಳಿಂದ ಪ್ರತಿಷ್ಠಾಪನೆಗೆ ಶಂಕರಾಚಾರ್ಯ ದೇವಾಲಯ ಸಜ್ಜು

ಮುತ್ತನ್ನು ಯಾವ ರತ್ನದೊಂದಿಗೆ ಧರಿಸಬೇಕು?
ಮುತ್ತನ್ನು ಯಾವಾಗಲೂ ಹಳದಿ ನೀಲಮಣಿ(yellow topaz) ಅಥವಾ ಹವಳ(coral)ದೊಂದಿಗೆ ಧರಿಸಬೇಕು. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ.

ಯಾವ ರತ್ನಗಳೊಂದಿಗೆ ಮುತ್ತುಗಳನ್ನು ಧರಿಸಬಾರದು?
ಒಬ್ಬ ವ್ಯಕ್ತಿಯು ವಜ್ರ(Diamond), ಹವಳ, ಗೋಮೇಧಿಕಾ ರತ್ನ(Gomed), ಲೆಹ್ಸುನಿಯಾ ಅಥವಾ ವೈಡೂರ್ಯ ಮತ್ತು ನೀಲಂ ಅನ್ನು ಧರಿಸಿದ್ದರೆ, ಅದರ ಜೊತೆಗೆ ಮುತ್ತುಗಳೊಂದಿಗೆ ಸಂಯೋಜಿಸುವುದನ್ನು ತಪ್ಪಿಸಬೇಕು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರನ ಅಶುಭ ಪರಿಣಾಮವನ್ನು ಕಡಿಮೆ ಮಾಡಲು ಮುತ್ತನ್ನು ಧರಿಸಲಾಗುತ್ತದೆ. ಶುಕ್ರ, ಶನಿ, ಬುಧರೊಂದಿಗೆ ಚಂದ್ರನ ದ್ವೇಷ ಇದೆ. ಇದರಿಂದಾಗಿ ಈ ರತ್ನಗಳು ಈ ಗ್ರಹಗಳಿಗೆ ಸಂಬಂಧಿಸಿವೆ. ಹಾಗಾಗಿ, ಮುತ್ತುಗಳನ್ನು ಈ ರತ್ನಗಳೊಂದಿಗೆ ಧರಿಸಬಾರದು. ಒಂದು ವೇಳೆ ಧರಿಸಿದರೆ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು.

ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ನಿಭಾಯಿಸೋದ್ರಲ್ಲಿ ಈ ರಾಶಿಗಳು ನಿಸ್ಸೀಮರು!

ಯಾವ ರಾಶಿಯವರು ಮುತ್ತುಗಳನ್ನು ಧರಿಸಬಾರದು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ, ಶುಕ್ರ, ಶನಿ ಮತ್ತು ರಾಹು ರಾಶಿಯ ಅಧಿಪತಿಗಳು ಮುತ್ತುಗಳನ್ನು ಧರಿಸಬಾರದು. ಮುತ್ತುಗಳು ಈ ರಾಶಿಚಕ್ರ ಚಿಹ್ನೆಗಳ ಸ್ಥಳೀಯರಿಗೆ ಹಾನಿ ಮಾಡುತ್ತವೆ. ಅಂದರೆ ವೃಷಭ(Taurus), ಮಿಥುನ, ಕನ್ಯಾ, ಮಕರ ಮತ್ತು ಕುಂಭ(Aquarius) ರಾಶಿಯವರು ಮುತ್ತುಗಳನ್ನು ಧರಿಸಬಾರದು. ಅಂಥವರು ಮುತ್ತುಗಳನ್ನು ಧರಿಸಿದರೆ ಅವರ ಮನಸ್ಸು ವಿಚಲಿತವಾಗುತ್ತದೆ ಮತ್ತು ಜೀವನದಲ್ಲಿ ಏರುಪೇರು ಪ್ರಾರಂಭವಾಗುತ್ತದೆ. ಇವರಲ್ಲದೆ, ಜಾತಕ(Horoscope)ದಲ್ಲಿ 12 ಅಥವಾ 10ನೇ ಮನೆಯಲ್ಲಿ ಚಂದ್ರನ ಸ್ಥಾನವನ್ನು ಹೊಂದಿರುವ ಜನರು ಮುತ್ತುಗಳನ್ನು ಧರಿಸಲು ಸಲಹೆ ನೀಡುವುದಿಲ್ಲ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios