Vastu Tips: ತವಾ ತಲೆ ಕೆಳಗಿಟ್ರೆ ತೊಂದರೆ ತಪ್ಪಿದ್ದಲ್ಲ!
ಅಡುಗೆ ಮನೆಯಲ್ಲಿ ಆರೋಗ್ಯದ ಗುಟ್ಟಿದೆ. ಅಲ್ಲಿನ ಪ್ರತಿಯೊಂದು ವಸ್ತುಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಅಡುಗೆ ಮನೆಯ ವಾಸ್ತು ಬಗ್ಗೆಯೂ ನಾವು ತಿಳಿದಿರುವ ಅವಶ್ಯಕತೆಯಿದೆ. ಸುಖ, ಸಮೃದ್ಧಿಗೆ ಪಾತ್ರೆಗಳನ್ನು ಹೇಗೆ ಬಳಸ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಅವಶ್ಯಕತೆಯಿರುವ ಹಾಗೂ ನಮಗಿಷ್ಟವಾಗುವ ಪಾತ್ರೆ (Vessel) ಗಳನ್ನು ನಾವು ಮನೆ (Home) ಗೆ ತರ್ತೇವೆ. ಅಡುಗೆ ಮನೆಯಲ್ಲಿ ಜಾಗ ಪಡೆಯುವ ಪಾತ್ರೆಗಳನ್ನು ಬಳಸಿದ ನಂತ್ರ ಸ್ವಚ್ಛಗೊಳಿಸ್ತೇವೆ ನಿಜ. ಆದ್ರೆ ಅದನ್ನು ಹೇಗೆ ಬಳಕೆ ಮಾಡ್ಬೇಕೆಂಬುದು ನಮಗೆ ತಿಳಿದಿರುವುದಿಲ್ಲ. ಅದಕ್ಕೂ ವಾಸ್ತು (Vastu) ಶಾಸ್ತ್ರಕ್ಕೂ ಇರುವ ಸಂಬಂಧವೂ ನಮಗೆ ಗೊತ್ತಿರುವುದಿಲ್ಲ. ಇದ್ರಿಂದ ನಮಗೆ ತಿಳಿಯದೆ ತವಾ, ಸಿಲಿಂಡರ್, ಪಾತ್ರೆಗಳನ್ನು ತಪ್ಪಾಗಿ ಬಳಕೆ ಮಾಡಿ ಅದ್ರಿಂದ ವಾಸ್ತುದೋಷವಾಗುವಂತೆ ಮಾಡ್ತೇವೆ. ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಇಡುವ ವಿಧಾನ ತಪ್ಪಾದ್ರೂ ವಾಸ್ತುದೋಷಕ್ಕೆ ನಾವು ಗುರಿಯಾಗ್ಬೇಕಾಗುತ್ತದೆ. ಅಡುಗೆ ಮನೆ, ಮನೆಯ ಮುಖ್ಯ ಭಾಗಗಳಲ್ಲಿ ಒಂದು. ಅಡುಗೆ ಮನೆ ಸರಿಯಾಗಿದ್ದರೆ ಮನೆ ಮಂದಿಯೆಲ್ಲ ಆರೋಗ್ಯವಾಗಿ ಹಾಗೂ ಸಂತೋಷವಾಗಿರ್ತಾರೆ. ವಾಸ್ತುದೋಷವಾಗ್ಬಾರದು, ಮನೆಯಲ್ಲಿ ಸುಖ, ಸಮೃದ್ಧಿ ಹಾಗೂ ಆರ್ಥಿಕ ವೃದ್ಧಿಯಾಗ್ಬೇಕೆಂದ್ರೆ ಅಡುಗೆ ಮನೆಯಲ್ಲಿರುವ ಪಾತ್ರೆಗಳ ಬಳಕೆ ಬಗ್ಗೆ ತಿಳಿದಿರಬೇಕು.
ಅಡುಗೆ ಮನೆಯಲ್ಲಿ ಪಾತ್ರೆಗಳ ಬಳಕೆ ಹೀಗಿರಲಿ
ಪ್ಯಾನ್ ಮತ್ತು ಕಡಾಯಿ : ಎಲ್ಲರ ಅಡುಗೆ ಮನೆಯಲ್ಲೂ ಪ್ಯಾನ್ ಮತ್ತು ಕಡಾಯಿ ಇರುತ್ತದೆ. ಈ ಪ್ಯಾನ್, ಕಡಾಯಿಯನ್ನು ನಾವು ಸ್ವಚ್ಛಗೊಳಿಸಿ ಅದ್ರ ನೀರು ಹೊರಗೆ ಹೋಗ್ಲಿ ಎನ್ನುವ ಕಾರಣಕ್ಕೆ ಅದನ್ನು ತಲೆಕೆಳಗಾಗಿ ಇಡ್ತೇವೆ. ಆದ್ರೆ ವಾಸ್ತುಶಾಸ್ತ್ರದ ಪ್ರಕಾರ ಇದು ತಪ್ಪು. ಅಡುಗೆ ಮನೆಯಲ್ಲಿರುವ ಪ್ಯಾನ್ ಹಾಗೂ ಕಡಾಯಿ ರಾಹುವಿನ ಸಂಕೇತವಾಗಿದೆ. ವಾಸ್ತು ಪ್ರಕಾರ, ಪ್ಯಾನ್ ಮತ್ತು ಕಡಾಯಿಯನ್ನು ತಲೆಕೆಳಗಾಗಿ ಇಟ್ಟರೆ ಮನೆಯ ನೆಮ್ಮದಿಗೆ ಭಂಗ ಉಂಟಾಗುತ್ತದೆ. ಮನೆಯಲ್ಲಿ ಹಣದ ವಿಚಾರದಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಎಂದೂ ಕಡಾಯಿಯನ್ನು ಎಂದೂ ತಲೆಕೆಳಗಾಗಿ ಇಡಬೇಡಿ.
ಗಂಟೆಗಳಿಂದ NEGATIVE ENERGY ತೆಗೀಬಹುದು.. ಆದರೆ ಈ ವಿಷಯಗಳ ಬಗ್ಗೆ ಇರಲಿ ಗಮನ!
ಪಾತ್ರೆಯನ್ನು ಇಡುವ ವಿಧಾನ : ಗ್ಯಾಸ್ ಮುಂದೆ ತವಾ ಅಥವಾ ಪ್ಯಾನ್ ಅನ್ನು ಎಂದಿಗೂ ಇಡಬೇಡಿ. ನೀವು ಅಡುಗೆ ಮಾಡುತ್ತಿರುವ ಬದಿಯ ಬಲಭಾಗದಲ್ಲಿ ಎರಡೂ ಪಾತ್ರೆಗಳನ್ನು ಇರಿಸಿ. ಇದಲ್ಲದೆ ಅಡುಗೆ ಮಾಡಿದ ನಂತ್ರ ನಾವು ಗ್ಯಾಸ್ ಮೇಲೆಯೇ ಪಾತ್ರೆಗಳನ್ನು ಇಟ್ಟಿರುತ್ತೇವೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮಾಡಿದ ನಂತರ ಪ್ಯಾನ್ ಅನ್ನು ಎಂದಿಗೂ ಗ್ಯಾಸ್ ಮೇಲೆ ಇಡಬಾರದು. ಹಾಗೆಯೇ ಹರಿತವಾದ ವಸ್ತುವಿನಿಂದ ಪ್ಯಾನ್ ಅನ್ನು ಎಂದಿಗೂ ಉಜ್ಜಬಾರದು.
ತವಾವನ್ನು ಸಿಂಕ್‌ನಲ್ಲಿ ಇಡಬೇಡಿ : ರಾತ್ರಿ ಊಟ ಮಾಡಿದ ನಂತ್ರ ಪಾತ್ರೆ ತೊಳೆಯುವ ಅಭ್ಯಾಸ ಅನೇಕರಿಗಿರುವುದಿಲ್ಲ. ಪಾತ್ರೆಗಳನ್ನು ಸಿಂಕ್ ನಲ್ಲಿ ಗುಡ್ಡೆ ಹಾಕಿ ಮಲಗ್ತಾರೆ. ಇದು ತಪ್ಪು. ರಾತ್ರಿ ಸಿಂಕ್ ನಲ್ಲಿ ಪಾತ್ರೆಗಳಿದ್ದರೆ ಅದು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ರಾತ್ರಿ ಸಿಂಕ್ ನಲ್ಲಿ ಕೊಳಕಾದ ಪ್ಯಾನ್ ಇದ್ದರೆ ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ವೃದ್ಧಿಸಲು ಕಾರಣವಾಗುತ್ತದೆ. ಹಾಗೆ ಹಣಕಾಸಿನ ಸಮಸ್ಯೆ ಮನೆಯವರನ್ನು ಕಾಡುತ್ತದೆ.
Foods And Zodiac: ನಿಮ್ಮ ರಾಶಿಗೆ ಈ ಆಹಾರ ತಿಂದ್ರೆ ಅಜೀರ್ಣ ಗ್ಯಾರಂಟಿ!
ಕಣ್ಣಿನ ದೋಷ : ಅಡುಗೆ ಮನೆ ಸುಂದರವಾಗಿ ಕಾಣಲಿ ಎನ್ನುವ ಕಾರಣಕ್ಕೆ ನಾವು ಅನೇಕ ಬಾರಿ ಚೆಂದದ ತವಾವನ್ನು ತೂಗಿ ಹಾಕ್ತೇವೆ. ಜಾಗದ ಸಮಸ್ಯೆಯಿರುವವರು ಎಲ್ಲರ ಎದುರಿಗೆ ಕಾಣುವಂತೆ ಅದನ್ನು ಇಡ್ತಾರೆ. ಆದ್ರೆ ತವಾವನ್ನು ಯಾರ ಕಣ್ಣಿಗೂ ಬೀಳದ ಸ್ಥಳದಲ್ಲಿ ಇಡಬೇಕು. ತವಾ ಎದುರಿಗಿದ್ದರೆ ದೃಷ್ಟಿದೋಷವಾಗುತ್ತದೆ.
ಅಡುಗೆ ಮಾಡುವ ಮೊದಲು ಹೀಗೆ ಮಾಡಿ : ಅಡುಗೆ ಮಾಡುವ ಮೊದಲು ನಾವು ತವಾ ಅಥವಾ ಕಡಾಯಿಯನ್ನು ಒಲೆ ಮೇಲೆ ಇಡ್ತೇವೆ. ಒಲೆ ಮೇಲೆ ಇಟ್ಟ ತಕ್ಷಣ ಅದಕ್ಕೆ ಚಿಟಕಿ ಉಪ್ಪನ್ನು ಹಾಕ್ಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ.