Asianet Suvarna News Asianet Suvarna News

Foods And Zodiac: ನಿಮ್ಮ ರಾಶಿಗೆ ಈ ಆಹಾರ ತಿಂದ್ರೆ ಅಜೀರ್ಣ ಗ್ಯಾರಂಟಿ!

ಒಂದೊಂದು ರಾಶಿಚಕ್ರಕ್ಕೆ ಒಂದೊಂದು ಆಹಾರ ಆಗಿ ಬರುವುದಿಲ್ಲ. ನಿಮ್ಮ ರಾಶಿಗೆ ಯಾವ ಆಹಾರ ಒಳ್ಳೆಯದಲ್ಲ ನೋಡಿ. 

Foods you should avoid as per your zodiac skr
Author
Bangalore, First Published Apr 6, 2022, 7:52 AM IST

ಕೆಲ ಆಹಾರಗಳನ್ನು ತಿಂದಾಗ ನಿಮಗೆ ಬಹಳ ಹಿಂಸೆಯಾಗುತ್ತದೆ. ಮೈ ಮೇಲೆ ಬೊಬ್ಬೆ ಏಳುವುದು, ತುರಿಕೆ ಬರುವುದಾಗಿರಬಹುದು, ಅಥವಾ ಆ ಆಹಾರ ತಿಂದಾಗ ಗ್ಯಾಸ್ಟಿಕ್, ಮಲಬದ್ಧತೆ ಕಾಡುವುದು, ಇಲ್ಲವೇ ಅಜೀರ್ಣ ಸಮಸ್ಯೆ ಕಾಡಬಹುದು. ಕೆಲ ಆಹಾರ ಸೇವಿಸಿದಾಗ ಎದೆಯುರಿ ಬರಬಹುದು, ಸಂಕಟವಾಗಬಹುದು- ಒಟ್ಟಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ಆಹಾರ ಅಲರ್ಜಿ. ಎಲ್ಲರಿಗೂ ಎಲ್ಲ ಆಹಾರವೂ ಆಗಿ ಬರುವುದಿಲ್ಲ. ಅರೆ, ಇದೇಕೆ ನಿಮಗೆ ಮಾತ್ರ ಕೆಲ ಆಹಾರ ಹೀಗೆ ಕಾಟ ಕೊಡುತ್ತದೆ ಎಂದು ಆಶ್ಚರ್ಯವಾಗಿರಬಹುದು. ಆದರೆ ಇದಕ್ಕೆ ಉತ್ತರ ನಮ್ಮ ರಾಶಿ, ನಕ್ಷತ್ರಗಳಲ್ಲಿದೆ. 

ಹೌದು, ಒಂದೊಂದು ರಾಶಿಗೆ ಒಂದೊಂದು ರೀತಿಯ ಆಹಾರ ಆಗಿಬರುವುದಿಲ್ಲ. ಆ ರಾಶಿಯ ಗ್ರಹಾಧಿಪತಿಗೆ ಸೇರದ ಆಹಾರ ಅದಾಗಿರಬಹುದು. ಹಾಗಿದ್ದರೆ, ಯಾವ ರಾಶಿ ಯಾವ ರೀತಿಯ ಆಹಾರದಿಂದ ದೂರ ಉಳಿಯುವುದು ಉತ್ತಮ ನೋಡೋಣ. 

ಮೇಷ(Aries): ಈ ರಾಶಿಯವರು ಸಾಹಸ ಪ್ರಿಯರು. ಜೊತೆಗೆ ಸದಾ ಚೈತನ್ಯಶೀಲರು(energetic). ಹಾಗಾಗಿ, ಇವರು ಕಾಫಿ, ಆಲ್ಕೋಹಾಲ್ ಮತ್ತು ಮಸಾಲೆಯುಕ್ತ ಆಹಾರಗಳನ್ನು ದೂರವಿರಿಸಬೇಕು. ಇಲ್ಲದಿದ್ದಲ್ಲಿ ಎದೆಯುರಿ ಹಾಗೂ ಚರ್ಮದ ಕಿರಿಕಿರಿ ಇವರ ಸಾಹಸಗಳಿಗೆ ಅಡ್ಡಿಯಾದಾವು. 

ವೃಷಭ(Taurus): ಇವರ ದೈಹಿಕ ಶಕ್ತಿ ಅಗಾಧ, ಹಸಿವೂ(appetite) ಜಾಸ್ತಿ. ಇವರು ಭವಿಷ್ಯ ಚೆನ್ನಾಗಿರಬೇಕೆಂದರೆ ಅತಿಯಾಗಿ ಚಾಕೋಲೇಟ್ ಸೇವನೆ ಮಾಡಬಾರದು ಜೊತೆಗೆ, ಸಿಕ್ಕಾಪಟ್ಟೆ ಕಾರ್ಬೋಹೈಡ್ರೇಟ್ ಇರುವ ಆಹಾರದಿಂದ ದೂರ ಉಳಿಯಬೇಕು. 

ಮಿಥುನ(Gemini): ಕಾಫಿ(Coffee), ಯೀಸ್ಟ್ ಆಹಾರ ಮತ್ತು ಕಂದಮೂಲಗಳು ಮಿಥುನ ರಾಶಿಯವರಿಗೆ ಆಗಿ ಬರೋಲ್ಲ. ಇದರೊಂದಿಗೆ ಚಪ್ಪೆಯಾದ ಸಲಾಡ್ ಹಾಗೂ ಗ್ರಿಲ್ಡ್ ಆಹಾರದಿಂದ ದೂರವಿರಬೇಕು. 

ಕಟಕ(Cancer): ಇವರಿಗೆ ಮಸಾಲೆ ಆಹಾರಗಳು ಆಗಿ ಬರೋಲ್ಲ. ಮೆಣಸು, ಕಾಳುಮೆಣಸಿನಂಥ ಅತಿ ಖಾರವಾದ ಆಹಾರದಿಂದ ದೂರವಿರಬೇಕು. ಮೊದಲೇ ಎಮೋಶನಲ್ ಈಟರ್ ಆಗಿರುವ ಇವರು ದುಃಖಕ್ಕೋ ಖುಷಿಗೋ , ಬೇಜಾರಿಗೋ ಸಿಕ್ಕಾಪಟ್ಟೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇಂಥ ಸಂದರ್ಭದಲ್ಲಿ ಎಣ್ಣೆಯಿಂದ ತಯಾರಿಸಿದ ಆಹಾರ, ಅತಿಯಾದ ಉಪ್ಪು ಮತ್ತು ಸಕ್ಕರೆಯ ಆಹಾರದಿಂದ ದೂರವಿರಬೇಕು. 

ಸಿಂಹ(Leo): ಇವರು ಮಸಾಲೆಯುಕ್ತ ಆಹಾರಗಳು ಮತ್ತು ಹಾಲಿನ ಪದಾರ್ಥಗಳಿಂದ(dairy products) ದೂರವಿರಬೇಕು. ಇಲ್ಲದಿದ್ದಲ್ಲಿ ಜೀರ್ಣ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. 

ಕನ್ಯಾ(Virgo): ಹಾಲಿನ ಪದಾರ್ಥಗಳು ಮತ್ತು ಚಾಕೋಲೇಟ್‌ಗಳು ಇವರ ಜೀರ್ಣಾಂಗ ವ್ಯವಸ್ಥೆಗೆ ಒಗ್ಗುವುದಿಲ್ಲ. ಅದರಿಂದ ದೂರವಿರುವುದೇ ಉತ್ತಮ. 

Astro Profit: ಮಂಗಳನಿಂದ ಈ ನಾಲ್ಕು ರಾಶಿಯವರಿಗೆ ಧನಲಾಭ...!

ತುಲಾ(Libra): ಇವರ ದೇಹ ಆರೋಗ್ಯವಂತವಾಗಿ ಕಾಣುತ್ತದೆ. ಆದರೆ, ಕಿಡ್ನಿಗಳು ಅಷ್ಟೊಂದು ಸಬಲವಾಗಿರುವುದಿಲ್ಲ. ಹಾಗಾಗಿ ಇವರು ಕಾರ್ಬೋನೇಟೆಡ್ ಡ್ರಿಂಕ್ಸ್, ಆಲ್ಕೋಹಾಲ್, ರಿಫೈನ್ಡ್ ಶುಗರ್ ಸೇವನೆ ತಪ್ಪಿಸಬೇಕು. 

ವೃಶ್ಚಿಕ(Scorpio): ಮಾಂಸ ಮತ್ತು ಮದ್ಯ ಇವರಿಗಲ್ಲ. ಈ ಆಹಾರವು ಇವರ ಮಾನಸಿಕ ಆರೋಗ್ಯಕ್ಕೂ, ಜೀರ್ಣಾಂಗ ವ್ಯವಸ್ಥೆಗೂ ತೊಂದರೆ ನೀಡುತ್ತವೆ. ಎಣ್ಣೆಯುಕ್ತ ಹಾಗೂ ಯೀಸ್ಟ್ ಹೊಂದಿದ ಆಹಾರದಿಂದಲೂ ದೂರವಿರಿ. 

ಧನುಸ್ಸು(Sagittarius): ಇವರು ಆಗಾಗ ತೂಕದ ಸಮಸ್ಯೆ(weight issues)ಗಳನ್ನು ಎದುರಿಸುತ್ತಿರುತ್ತಾರೆ. ಹಾಗಾಗಿ, ಚಾಕೋಲೇಟ್ಸ್, ಸಾಸ್‌ಗಳು, ಸಕ್ಕರೆಯಿಂದ ದೂರವಿರಬೇಕು. ಜೊತೆಗೆ, ಜೇನುತುಪ್ಪ, ಓಟ್ಸ್, ಬಾಳೆಹಣ್ಣಿನಿಂದಲೂ ದೂರವಿದ್ದರೆ ಉತ್ತಮ. 

ರಾಮನವಮಿಯ ಹೊಸ್ತಿಲಲ್ಲಿ ಈ ಶಕ್ತಿಶಾಲಿ ಮಂತ್ರಗಳು ನಿಮ್ಮ ಬಲ ಹೆಚ್ಚಿಸಲಿವೆ..

ಮಕರ(Capricorn): ಇವರ ಮೂಳೆಗಳು ಹಾಗೂ ಹಲ್ಲುಗಳು ದುರ್ಬಲವಾಗಿರುತ್ತವೆ. ಹಾಗಾಗಿ ಇವರು ಹೆಚ್ಚಾಗಿ ಕ್ಯಾಲ್ಶಿಯಂ ಒಳಗೊಂಡಿರುವ ಆಹಾರ ಸೇವಿಸಬೇಕು. ಸೋಡಿಯಂ ಹೆಚ್ಚಿರುವ ಆಹಾರ, ಚಾಕೋಲೇಟ್‌ಗಳುನ್ನು ದೂರವಿಡಬೇಕು. 

ಕುಂಭ(Aquarius): ಇವರು ಕೊಂಚ ಮೂಡಿ ಸ್ವಭಾವದವರು, ಹೀಗಾಗಿ ಮೂಡ್ ಹಾಳು ಮಾಡುವಂಥ ಆಹಾರದಿಂದ ದೂರವಿರಬೇಕು. ಅಂದರೆ ಸೋಡಾ, ಅತಿಯಾದ ಉಪ್ಪಿರುವ ಆಹಾರ, ಕೊಲೆಸ್ಟೆರಾಲ್ ಹೊಂದಿರುವ ಆಹಾರ ಹಾಗೂ ಸಕ್ಕರೆಯಿಂದ ದೂರವಿರಬೇಕು. 

ಮೀನ(Pisces): ಮದ್ಯದತ್ತ ಬೇಗ ಆಕರ್ಷಿತರಾಗುವವರು ಇವರು. ಕುಡಿಯಲು ಶುರು ಮಾಡಿದರೆ ಮಿತಿ ಹಾಕುವುದು ಕಷ್ಟವಾಗುತ್ತದೆ. ಹಾಗಾಗಿ, ಮದ್ಯದಿಂದ ದೂರವಿರುವುದೇ ಉತ್ತಮ. ಜೊತೆಗೆ ಎಣ್ಣೆಯುಕ್ತ ಆಹಾರ ಮತ್ತು ಉಪ್ಪು ಹೆಚ್ಚಿರುವ ಆಹಾರದಿಂದ ದೂರವಿರಬೇಕು 
 

Follow Us:
Download App:
  • android
  • ios