Astro Tips: ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ..
ಅಕ್ಕಪಕ್ಕದವರಿಗೆ, ಪರಿಚಿತರಿಗೆ ಅವರು ಏನಾದರೂ ಕೇಳಿದಾಗ ಕೊಡುವುದು ಉತ್ತಮ ಅಭ್ಯಾಸವೇ. ಆದರೆ, ಸೂರ್ಯಾಸ್ತದ ಬಳಿಕ ಈ ವಸ್ತುಗಳನ್ನು ಕೊಡುವುದು ಅಶುಭ ಎನ್ನುತ್ತದೆ ಜ್ಯೋತಿಷ್ಯ.
ಮನುಷ್ಯ ಸ್ನೇಹ ಜೀವಿ. ಅಕ್ಕಪಕ್ಕದವರು, ನೆಂಟರಿಷ್ಟರ ನಡುವೆ ಕೊಡು ಕೊಳ್ಳುವಿಕೆ ಬದುಕಿನ ಸಾಮಾನ್ಯ ದಿನಚರಿಯ ಭಾಗ. ಕೆಲವರು ಕಷ್ಟದಲ್ಲಿದ್ದಾಗ ಹಣ ಕೇಳುತ್ತಾರೆ, ಮತ್ತೆ ಕೆಲವರು, ಹೆಚ್ಚಾಗಿ ಅಕ್ಕಪಕ್ಕದ ಮನೆಯವರು ತಕ್ಷಣಕ್ಕೆ ಅಂಗಡಿಗೆ ಹೋಗಲಾಗದೆ ಹಾಲು, ಮೊಸರು, ಸಕ್ಕರೆ ಇತ್ಯಾದಿಗಳನ್ನು ಪಡೆಯುತ್ತಾರೆ. ಕೆಲವರು ಸಾಲವಾಗಿ ಪಡೆದರೆ ಮತ್ತೆ ಕೆಲವರು ಸ್ನೇಹವಾಗಿ ಪಡೆಯುತ್ತಾರೆ. ಅದು ಅವರವರ ನಡುವಿನ ಭಾವನಾತ್ಮಕ ಸಂಬಂಧದ ಮೇಲೆ ಹೋಗುತ್ತದೆ.
ಹೀಗೆ ಕೊಡು ಕೊಳ್ಳುವಿಕೆ ಒಳ್ಳೆಯದೇ. ಆದರೆ, ಎಲ್ಲಕ್ಕೂ ಸಮಯ ಸಂದರ್ಭ ಇರುತ್ತದೆ. ಕೆಲವು ಸಂದರ್ಭದಲ್ಲಿ ಮನೆಯಿಂದ ಕೆಲ ವಸ್ತುಗಳನ್ನು ಹೊರ ಕಳಿಸುವುದು ಅಶುಭ ಎನ್ನುತ್ತದೆ ಜ್ಯೋತಿಷ್ಯ. ಜ್ಯೋತಿಷ್ಯದಂತೆ, ಈ ಕೆಲ ವಸ್ತುಗಳನ್ನು ಸಂಜೆ ಸೂರ್ಯಾಸ್ತ(Sunset)ದ ಬಳಿಕ ಯಾರಿಗೂ ಕೊಡಬಾರದು. ಹೀಗಾಗಿ, ಕೇಳುವವರು ಕೂಡಾ ಸಂಜೆಯ ಒಳಗೇ ಕೇಳುವುದು ಉತ್ತಮ.
ಹಣ(Money)
ಲಕ್ಷ್ಮೀ ದೇವಿಯು ಸಂಪತ್ತಿನ ಒಡತಿಯಾಗಿದ್ದಾಳೆ. ಸಂಜೆ ದೀಪ ಹಚ್ಚುವ ಹೊತ್ತು ಲಕ್ಷ್ಮೀ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಅಂಥದರಲ್ಲಿ ಆ ಸಮಯದಲ್ಲಿ ಹಣವನ್ನು ಯಾರಿಗಾದರೂ ಕೊಡುವುದೆಂದರೆ ಬಂದ ಲಕ್ಷ್ಮೀಯನ್ನು ಮತ್ತೊಬ್ಬರಿಗೆ ದಾಟಿಸಿದಂತಾಗುತ್ತದೆ. ಅಂದರೆ ಲಕ್ಷ್ಮೀ ದೇವಿಗೆ ನಮ್ಮ ಮನೆಗೆ ನೀನು ಬೇಡ ಎಂದಂತಾಗುತ್ತದೆ. ಇದರಿಂದ ಆಕೆ ಮುಂದೆಂದೂ ಮನೆಗೆ ಬರದೆ ಹೋಗಬಹುದು. ಮನೆಯನ್ನು ದರಿದ್ರ ಲಕ್ಷ್ಮೀ ಆವರಿಸಬಹುದು. ಹಾಗಾಗಿ, ಸೂರ್ಯಾಸ್ತದ ಬಳಿಕ ಹಣವನ್ನು ಯಾರಿಗೂ ಕೊಡಬಾರದು. ಸಾಲ, ದಾನ ಯಾವುದೂ ಸಂಜೆಯ ನಂತರ ಸಲ್ಲದು.
Parenting Mistakes: ಈ ರಾಶಿಯವರು ಮುದ್ದಿನ ಹೆಸರಲ್ಲಿ ಮಕ್ಕಳನ್ನು ಹಾಳು ಮಾಡುತ್ತಾರೆ!
ಹಾಲು(Milk)
ಮನೆಯಲ್ಲಿ ಹಾಲು ಮೊಸರು ಯತೇಚ್ಛವಾಗಿದ್ದರೆ ಅದು ಬೆಳವಣಿಗೆಯ ಸಂಕೇತ. ಹಾಲು ಲಕ್ಷ್ಮೀದೇವಿ ಹಾಗೂ ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ಲಕ್ಷ್ಮೀ ದೇವಿ ಹಾಗೂ ವಿಷ್ಣುವು ಕ್ಷೀರ ಸಾಗರದಲ್ಲಿಯೇ ಇರುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ, ಸಂಜೆಯ ಹೊತ್ತು ಹಾಲನ್ನು ಮನೆಯಿಂದ ಹೊರಗೆ ಕಳುಹಿಸುವುದರಿಂದ ಲಕ್ಷ್ಮೀ ಹಾಗೂ ವಿಷ್ಣು ಮುನಿಸಿಕೊಳ್ಳುತ್ತಾರೆ. ಇದರಿಂದ ಮನೆಯ ಬೆಳವಣಿಗೆ ಕುಗ್ಗುತ್ತದೆ ಎಂಬ ನಂಬಿಕೆ ಇದೆ.
ಮೊಸರು(Curd)
ಮೊಸರು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಮನುಷ್ಯನಿಗೆ ಮೊಸರಿನಿಂದ ಸಂತೋಷ ಹಾಗೂ ಸಮೃದ್ಧಿ ಸಿಗುತ್ತದೆ. ಸೂರ್ಯಾಸ್ತದ ಬಳಿಕ ಮೊಸರನ್ನು ಬೇರೆಯವರಿಗೆ ಕೊಟ್ಟರೆ ಅದರಿಂದ ಮನೆಯಲ್ಲಿ ಸಂತೋಷದ ಕೊರತೆ ಅನುಭವಿಸಬೇಕಾಗುತ್ತದೆ. ಮೊಸರಷ್ಟೇ ಅಲ್ಲ, ಯಾವುದೇ ಡೈರಿ ಪ್ರಾಡಕ್ಟ್ಸ್‌ನ್ನು ಸಂಜೆಯ ನಂತರ ಯಾರಿಗೂ ಕೊಡಬಾರದು.
Vastu colours: ಬದುಕನ್ನು ನಿರ್ಧರಿಸೋ ಬಣ್ಣಗಳು.. ನಿಮ್ಮ ಮನೆಗೆ ಯಾವುದು ಒಳ್ಳೆಯದು ನೋಡಿ..
ಅರಿಶಿನ(Turmeric)
ಅರಿಶಿನ ಕೂಡಾ ಶುಕ್ರ(Venus) ಗ್ರಹಕ್ಕೆ ಸಂಬಂಧಿಸಿದೆ. ಹಾಗಾಗಿ, ಸೂರ್ಯಾಸ್ತದ ಬಳಿಕ ಅರಿಶಿನವನ್ನು ಯಾರಿಗಾದರೂ ಕೊಟ್ಟರೆ ಜಾತಕದಲ್ಲಿ ಗುರು ದುರ್ಬಲನಾಗುತ್ತಾನೆ. ಇದರಿಂದ ವ್ಯಕ್ತಿಗೆ ಹಣದ ಕೊರತೆಯಾಗುವ ಜೊತೆಗೆ, ಗುರು ಬಲ ಕಡಿಮೆಯಾಗುತ್ತದೆ.
ಈರುಳ್ಳಿ ಹಾಗೂ ಬೆಳ್ಳುಳ್ಳಿ(Garlic and Onions)
ಜ್ಯೋತಿಷ್ಯ ಶಾಸ್ತ್ರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯು ಕೇತುವಿಗೆ ಸಂಬಂಧಿಸಿದ್ದಾಗಿದೆ. ಈ ಗ್ರಹವು ದುಷ್ಟವಾದುದಾಗಿದೆ. ಹಾಗಾಗಿ, ಸಂಜೆ ಬಳಿಕ ಈರುಳ್ಳಿ ಬೆಳ್ಳುಳ್ಳಿ ಕೊಡುವುದರಿಂದ ಮನೆಗೆ ಕೆಟ್ಟದಾಗುತ್ತದೆ, ದುಷ್ಟ ಗ್ರಹಗಳ ಆರ್ಭಟ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಚಿನ್ನ ಧರಿಸೋದು ತರುತ್ತಾ ಲಕ್? ಕೆಲ ರಾಶಿಯವರಿಗಿದು ಅಶುಭ!
ಉಪ್ಪು(Salt)
ಸಂಜೆ ಹೊತ್ತಿನಲ್ಲಿ ಉಪ್ಪು ಕೊಡುವುದು ವ್ಯಕ್ತಿಯ ಋಣದ ಭಾರ ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ, ಸಂಜೆಯ ನಂತರ ಯಾರಿಗೂ ಉಪ್ಪು, ಉಪ್ಪಿನಕಾಯಿ ನೀಡಬಾರದು.