Asianet Suvarna News Asianet Suvarna News

Vastu colours: ಬದುಕನ್ನು ನಿರ್ಧರಿಸೋ ಬಣ್ಣಗಳು.. ನಿಮ್ಮ ಮನೆಗೆ ಯಾವುದು ಒಳ್ಳೆಯದು ನೋಡಿ..

ಬಣ್ಣಗಳು ವ್ಯಕ್ತಿಯ ಭಾವನೆಗಳು ಹಾಗೂ ಯೋಚನಾ ಲಹರಿಯ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ನಮ್ಮ ಯೋಚನೆಗಳು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಇವೆಲ್ಲವೂ ಚೈನ್ ರಿಯಾಕ್ಷನ್. ಬದುಕು ಚೆನ್ನಾಗಿರಲು ಯಾವ ಬಣ್ಣ ಆರಿಸಬೇಕು ಗೊತ್ತಾ?

Know which vastu colours will bring happiness for you skr
Author
Bangalore, First Published Jan 22, 2022, 12:40 PM IST

ಕಾಮನಬಿಲ್ಲು ನೋಡಿದಾಗ ಮನಸ್ಸಿನಲ್ಲಿ ಅಲೆಗಳು ಏಳುತ್ತವಾ? ತುಂಬಾ ಬಣ್ಣ ತುಂಬಿದ ಸ್ಥಳಕ್ಕೆ ಕಾಲಿಟ್ಟ ಕೂಡಲೇ ಮನಸ್ಸು ಚೇತೋಹಾರಿಯಾಗುವ ಅನುಭವ ನಿಮಗೂ ಆಗಿದೆಯಾ? ಬಣ್ಣಗಳಿಗಿರುವ ತಾಕತ್ತೇ ಅದು. ಅವು ಪಾಸಿಟಿವ್ ವೈಬ್ಸ್ ತರಬಲ್ಲವು. ಕೆಲವು ನೆಗೆಟಿವ್ ವೈಬ್ಸನ್ನೂ ತರುತ್ತವೆ. ಪ್ರತಿ ಬಣ್ಣಕ್ಕೂ ನಮ್ಮ ಭಾವನೆಗಳನ್ನು ಕೆಣಕುವ ಶಕ್ತಿ ಇದೆ. ಹಾಗಾಗಿ, ಮನೆಗೆ ಬಣ್ಣಗಳ(colors) ಆಯ್ಕೆ ಮಾಡುವಾಗ ಬಹಳ ಬುದ್ಧಿವಂತಿಕೆ ಬೇಕು. ಏಕೆಂದರೆ, ಮನೆಯಲ್ಲಿ ನಾವು ಹೆಚ್ಚಿನ ಸಮಯ ಕಳೆಯುತ್ತೇವೆ. ಅಲ್ಲಿನ ಬಣ್ಣಗಳು ನಮ್ಮ ಮನಸ್ಸನ್ನು ನಿಯಂತ್ರಿಸುತ್ತವೆ, ಮನಸ್ಸು ನಮ್ಮ ಬದುಕಿನ ನಿರ್ಧಾರಗಳಲ್ಲಿ ಪಾತ್ರ ವಹಿಸುತ್ತದೆ. ಹೀಗಾಗಿ, ಮನೆಯ ಬಣ್ಣಗಳು ನಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬುವಂತಿರಬೇಕು. 

ಉದಾಹರಣೆಗೆ ಖಿನ್ನತೆಯಲ್ಲಿರುವವನನ್ನು ಕತ್ತಲೆ ಕೋಣೆಯಲ್ಲಿ ತಳ್ಳಿದರೆ ಆತ ಮತ್ತಷ್ಟು ಕುಗ್ಗಿ ಹೋಗುತ್ತಾನೆ. ಬೆಳಕಿನಲ್ಲಿಟ್ಟರೆ ಆತನ ಯೋಚನೆಗಳು ತಿಳಿಯಾಗುತ್ತವೆ. ಹಾಗಾಗಿ, ಬಣ್ಣಗಳ ಆಯ್ಕೆಯಲ್ಲಿ ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಲ್ಲಿ ಚೆನ್ನಾಗಿರಬೇಕೆಂದರೆ ಯಾವೆಲ್ಲ ಬಣ್ಣಗಳ ಬಳಕೆ ಮಾಡಬೇಕೆಂಬ ಬಗ್ಗೆ ಇಲ್ಲಿದೆ. 

ನೀಲಿ(blue)
ನೀಲಿ ಬಣ್ಣವು ಜಲ ಹಾಗೂ ಆಕಾಶ(sky)ವನ್ನು ಪ್ರತಿನಿಧಿಸುತ್ತದೆ. ಈ ಬಣ್ಣ ಬಹಳ ನೆಮ್ಮದಿ, ಪ್ರಶಾಂತತೆ ಒದಗಿಸುವಂಥದ್ದು. ಹಾಗಾಗಿ, ಮನೆಯ ಮಾಸ್ಟರ್ ಬೆಡ್‌ರೂಂಗೆ ಈ ಬಣ್ಣ ಪರ್ಫೆಕ್ಟ್ ಆಗಿರುತ್ತದೆ. ತಿಳಿ ನೀಲಿ ಬಣ್ಣದ ಗುಣಕಾರಿ ಅಂಶಗಳು ನಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಬಲ್ಲವು. ಸಣ್ಣ ಕೋಣೆಯ ಬದಲು ದೊಡ್ಡ ಕೋಣೆಯೊಂದಕ್ಕೆ ಈ ಬಣ್ಣ ಬಳಸಿ. ಹಾಗಂಥ ಇಡೀ ಮನೆ ಕೇವಲ ತಿಳಿ ನೀಲಿಯೊಂದೇ ಬೇಡ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ನೀಲಿ ಹೆಚ್ಚಾದರೆ ಕೆಮ್ಮು, ಶೀತ ಸಮಸ್ಯೆ(cold)ಗಳು ಹೆಚ್ಚಬಹುದು. 

ಬಿಳಿ(White)
ಬಿಳಿ ಬಣ್ಣವು ಶುದ್ಧತೆ, ಮುಗ್ಧತೆ ಹಾಗೂ ಶಾಂತಿ(tranquility)ಯ ಪ್ರತೀಕ. ಮನೆಯ ಕೋಣೆಗೆ ಈ ಬಣ್ಣ ಹಚ್ಚಿದರೆ ಇದರಿಂದ ಲಕ್ಷುರಿ ಸೆನ್ಸ್ ಬರುತ್ತದೆ. ಇದು ಮನೆಯಲ್ಲಿರುವವರ ನಡುವೆ ಸಂಬಂಧವನ್ನು ಆಪ್ತಗೊಳಿಸುತ್ತದೆ. ಖಾಸಗಿತನದ ಬೆಲೆ ಹೆಚ್ಚಿಸುತ್ತದೆ. ಮನೆಯ ಎಲ್ಲ ಚಾವಣಿಗಳು(ceilings) ಬಿಳಿ ಬಣ್ಣವಿದ್ದರೆ ಸೊಗಸು. ಅತಿಯಾಗಿ ಬಳಸಿದರೆ ಮನೆಯಲ್ಲಿ ಸ್ವಾರ್ಥ ಹೆಚ್ಚಬಹುದು. 

Successful Zodiacs: ಈ ನಾಲ್ಕು ರಾಶಿಯವರು ಹುಟ್ಟಿರೋದೇ ಯಶಸ್ಸು ಕಾಣೋಕೆ!

ಕೆಂಪು(Red)
ಕೆಂಪು ಬಹಳ ಶಕ್ತಿಶಾಲಿ ಬಣ್ಣ. ಇದು ಪ್ಯಾಶನ್, ಧೈರ್ಯ(courage), ಪ್ರೀತಿ ಎಲ್ಲವನ್ನೂ ಪ್ರತಿನಿಧಿಸುತ್ತದೆ. ಲಿವಿಂಗ್ ರೂಂಗೆ ಎನರ್ಜಿ ತುಂಬಲು ಸಶಕ್ತವಾಗಿದೆ. ಆದರೆ, ಖಿನ್ನತೆ ಇರುವವರು, ನೆನಪಿನ ಶಕ್ತಿ ಕಡಿಮೆ ಇರುವವರು( memory weakness) ಈ ಬಣ್ಣವನ್ನು ಬಳಸಬಾರದು. ಅವರಲ್ಲಿ ಈ ಬಣ್ಣ ಒತ್ತಡ ತರುತ್ತದೆ. 

ಹಸಿರು(Green)
ಹಸಿರು ಬೆಳವಣಿಗೆ(growth), ಸಂತಾನಾಭಿವೃದ್ಧಿ, ಅಭಿವೃದ್ಧಿ ಹಾಗೂ ಧನಾತ್ಮಕತೆಯ ಪ್ರತೀಕ. ವ್ಯಕ್ತಿಯ ಇಂದ್ರಿಯಗಳನ್ನು ತಣಿಸುವ ಶಕ್ತಿ ಈ ಬಣ್ಣಕ್ಕಿದೆ. ಇದು ಒತ್ತಡ ಹಾಗೂ ಆತಂಕ(anxiety) ನಿವಾರಣೆ ಮಾಡುತ್ತದೆ. ತುಂಬಾ ಕೋಪ ಇರುವವರು ತಮ್ಮ ಕೋಣೆಯಲ್ಲಿ ಈ ಬಣ್ಣ ಬಳಸುವುದು ಒಳಿತು. 

Vastu Tips : ನಿಮಗೆ ಯಾವ ಬಣ್ಣದ ಚಪ್ಪಲಿ ಆಗಿ ಬರೋಲ್ಲ ತಿಳಿಯಿರಿ..

ಹಳದಿ(Yellow)
ತಿಳಿ ಹಳದಿ ಎಂದರೆ ಅದೃಷ್ಟ, ಧನಾತ್ಮಕತೆ, ಬುದ್ಧಿವಂತಿಕೆ ಹಾಗೂ ಸ್ಥಿರತೆ(stability)ಯ ಸಂಕೇತ. ಈ ಬಣ್ಣ ಮನೆಗೆ ಬಳಸಿದಾಗ ಕೋಣೆಗಳು ಇರುವುದಕ್ಕಿಂತ ದೊಡ್ಡದಾಗಿ ಕಾಣುತ್ತವೆ. ಹಾಗಾಗಿ ಚಿಕ್ಕ ಚಿಕ್ಕ ಕೋಣೆಗಳಿಗೆ ಇದನ್ನು ಬಳಸಿ. ಮಕ್ಕಳ ಕೋಣೆಗೆ ಒಳ್ಳೆಯದು. ಏಕೆಂದರೆ ಇದು ವರ್ತನೆಯನ್ನು ಉತ್ತಮವಾಗಿಸುತ್ತದೆ. 

ನೇರಳೆ(Violet)
ತಿಳಿ ನೇರಳೆ ಬಣ್ಣವು ತೃಪ್ತಿ, ಆಧ್ಯಾತ್ಮ ಹಾಗೂ ಪ್ರಶಾಂತತೆಯ ಪ್ರತೀಕ. ಈ ಬಣ್ಣವು ಜೀವನದಲ್ಲಿ ಉತ್ತಮ ಆಯ್ಕೆಗಳನ್ನು ಮಾಡಲು ಸಹಾಯಕವಾಗಿದೆ. ಪೂಜಾ ಕೋಣೆಗೆ, ಮಕ್ಕಳ ಕೋಣೆಗೆ ಇದು ಉತ್ತಮವಾಗಿದೆ. 

Follow Us:
Download App:
  • android
  • ios