Holi: ಹೋಳಿ ದಿನ ಅಪ್ಪಿತಪ್ಪಿಯೂ ಇದನ್ನ ದಾನ ಮಾಡ್ಬೇಡಿ

ಬಣ್ಣ ಬಣ್ಣದ ಹಬ್ಬವೆಂದೇ ಪ್ರಸಿದ್ಧಿ ಪಡೆದಿರುವ ಹೋಳಿಯ ರಂಗು ಏರ್ತಿದೆ. ಹಬ್ಬದ ದಿನ ಬರೀ ಬಣ್ಣ ಎರಚಿಕೊಳ್ಳೋದಿಲ್ಲ. ಕೆಲವೊಂದು ಪದ್ಧತಿಗಳನ್ನು ಪಾಲನೆ ಮಾಡ್ತಾರೆ. ಅದ್ರಲ್ಲಿ ದಾನವೂ ಒಂದು. ಬಡವರಿಗೆ ದಾನ ಮಾಡೋದು ಪುಣ್ಯದ ಕೆಲಸ. ಆದ್ರೆ ಎಲ್ಲ ವಸ್ತುವನ್ನು ದಾನ ಮಾಡೋಹಾಕಿಲ್ಲ.
 

Never Donate These Things On Holi

ಹೋಳಿಗೆ ಇನ್ನೊಂದು ದಿನ ಬಾಕಿಯಿದೆ. ಬಣ್ಣಗಳ ಹಬ್ಬವಾಗಿರುವ ಹೋಳಿಗೆ ಎಲ್ಲೆಡೆ ತಯಾರಿ ನಡೆದಿದೆ. ಮಾರುಕಟ್ಟೆಗಳಲ್ಲಿ ಬಣ್ಣಗಳ ಮಾರಾಟ ಜೋರಾಗಿ ನಡೆದಿದೆ. ಮಾರ್ಚ್ 7ರಂದು ಹೋಳಿಕಾ ದಹನ ನಡೆದ್ರೆ ಮಾರ್ಚ್ 8ರಂದು ಬಣ್ಣವನ್ನು ಪರಸ್ಪರ ಹಚ್ಚಿ, ಜನರು ಸಂಭ್ರಮಿಸುತ್ತಾರೆ. ಹೋಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಅದ್ರಲ್ಲಿ ದಾನ ಕೂಡ ಸೇರಿದೆ.

ಸಾಮಾನ್ಯವಾಗಿ ಹಬ್ಬ (Festival) ದ ಶುಭ ಸಂದರ್ಭದಲ್ಲಿ ದಾನಕ್ಕೆ ಮಹತ್ವವಿದೆ. ಹೋಳಿ ದಿನದಂದು ಒಬ್ಬ ವ್ಯಕ್ತಿ ಸರಿಯಾದ ವಸ್ತುಗಳನ್ನು ದಾನ (Donation) ಮಾಡಿದರೆ ಅವನ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ. ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ. ಆದ್ರೆ ಕೆಲ ವಸ್ತುಗಳನ್ನು ಅಪ್ಪಿತಪ್ಪಿಯೂ ದಾನ ಮಾಡಬಾರದು. ಹೋಳಿ (Holi) ಹಬ್ಬದಂದು ಯಾವ ವಸ್ತುಗಳನ್ನು ದಾನ ಮಾಡಬಾರದು ಎಂಬ ಬಗ್ಗೆ ನಾವು ಮಾಹಿತಿ ನೀಡ್ತೇವೆ.

ಈ 4 ರಾಶಿಯವರಿಗೆ ನೀಲಿ ಕಲ್ಲು ಧಾರಣೆ ತರುತ್ತೆ ಶನಿ ಕಾಟದಿಂದ ಮುಕ್ತಿ

ಹೋಳಿ ಹಬ್ಬದ ಸಂದರ್ಭದಲ್ಲಿ ಈ ವಸ್ತುಗಳ ದಾನ ಮಾಡ್ಬೇಡಿ : 

ಬಳಸಿದ ಬಟ್ಟೆ ದಾನ (Used Cloths) : ಬಡವರಿಗೆ ಅವಶ್ಯವಿರುವ ವಸ್ತುಗಳನ್ನು ನೀವು ಯಾವಾಗ ಬೇಕಾದ್ರೂ ದಾನ ಮಾಡಬಹುದು. ಆದ್ರೆ ಹೋಳಿಯ ಶುಭ ಸಮಯದಲ್ಲಿ ನೀವು ಬಟ್ಟೆಯನ್ನು ದಾನವಾಗಿ ನೀಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹೋಲಿಕಾ ದಹನ ಹಾಗೂ ಬಣ್ಣದ ಹೋಳಿ ಎರಡೂ ದಿನ ನೀವು ಧರಿಸಿದ ಬಟ್ಟೆಯನ್ನು ಬಡವರಿಗೆ ನೀಡಬಾರದು. ಇದ್ರಿಂದ ನಿಮ್ಮ ಮನೆಯ ಸಮೃದ್ಧಿ ನಾಶವಾಗುತ್ತದೆ. ನೀವು ದಾನ ಮಾಡ್ಲೇಬೇಕು ಎಂದಾದ್ರೆ ಹೊಸ ಬಟ್ಟೆಯನ್ನು ಬಡವರಿಗೆ ದಾನ ಮಾಡಬಹುದು.

ಈ ಲೋಹದ ಪಾತ್ರೆಗಳನ್ನು (Metal Vessels) ದಾನವಾಗಿ ನೀಡ್ಬೇಡಿ : ಹೋಳಿ ಹಬ್ಬದಂದು ಕಬ್ಬಿಣ ಮತ್ತು ಉಕ್ಕಿನ ಪಾತ್ರೆಗಳನ್ನು ಬಡವರಿಗೆ ದಾನ ಮಾಡಬಾರದು. ನೀವು ಈ ಪಾತ್ರೆಗಳನ್ನು ದಾನ ಮಾಡಿದ್ರೆ ನಿಮ್ಮ ಮನೆಯ ಆರ್ಥಿಕ ಸ್ಥಿತಿಗೆ ಹಾನಿಯಾಗುತ್ತದೆ. ಈ ದಿನ ಯಾರಿಗೂ ಯಾವುದೇ ಲೋಹವನ್ನು ದಾನ ಮಾಡಬೇಡಿ. ದಾನ ಮಾತ್ರವಲ್ಲ ಲೋಹದ ವಸ್ತುವನ್ನು ಉಡುಗೊರೆ ರೂಪದಲ್ಲಿ ಕೂಡ ಕೊಡಲು ಹೋಗ್ಬೇಡಿ. ನಿಮ್ಮ ಕೈನಲ್ಲಿ ಹಣವಿದೆ ಎಂದಾದ್ರೆ ಹೋಲಿಕಾ ದಹನದ ದಿನದಂದು ನೀವು ಚಿನ್ನವನ್ನು ದಾನ ಮಾಡಬಹುದು. ಹುಡುಗರಿಗೆ ಚಿನ್ನದ ವಸ್ತುವನ್ನು ದಾನವಾಗಿ ನೀಡಿದ್ರೆ ನಿಮ್ಮ ಮನೆಯ ಖಜಾನೆ ತುಂಬುತ್ತದೆ ಎಂದು ನಂಬಲಾಗಿದೆ.

ಕಾಗೆ ಸಾವಿನ ಸುದ್ದಿಯನ್ನು ತರುತ್ತದೆ, ಎಚ್ಚರದಿಂದ ಗಮನಿಸಿ!

ಹೋಳಿಯ ದಿನ ಹಣವನ್ನು (Money) ದಾನ ಮಾಡ್ಬೇಡಿ : ಅಗತ್ಯವಿರುವವರಿಗೆ ಹಣವನ್ನು ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಆದ್ರೆ ದಾನ ಮಾಡುವ ವೇಳೆ ದಿನ ಹಾಗೂ ಸಮಯವನ್ನು ನೋಡಬೇಕಾಗುತ್ತದೆ. ನೀವು ಹೋಲಿಕಾ ದಹನದ ದಿನ ರಾತ್ರಿ ಹಣವನ್ನು ದಾನ ಮಾಡಿದ್ರೆ ನಿಮ್ಮ ಕೈ ಬರಿದಾಗುತ್ತದೆ. ಹಾಗಾಗಿ ಹಣವನ್ನು ದಾನದ ರೂಪದಲ್ಲಿ ನೀಡುವ ಸಹವಾಸಕ್ಕೆ ಹೋಗ್ಬೇಡಿ.

ಬಿಳಿ ವಸ್ತುಗಳ (White Items) ದಾನ ಬೇಡ : ಹೋಲಿಕಾ ದಹನದ ದಿನ ಯಾವುದೇ ಬಿಳಿ ವಸ್ತುವನ್ನು ದಾನ ಮಾಡಬಾರದು. ಈ ದಿನ ನೀವು ಯಾರಿಗಾದರೂ ಹಾಲು ಅಥವಾ ಮೊಸರನ್ನು ದಾನ ಮಾಡಿದರೆ, ಶುಕ್ರನ ಕೋಪಕ್ಕೆ ತುತ್ತಾಗುತ್ತೀರಿ. ಸಕ್ಕರೆ ಮತ್ತು ಅಕ್ಕಿಯನ್ನು ಸಹ ದಾನ ಮಾಡಬಾರದು. ಹಾಗೆ ಈ ವಸ್ತುವನ್ನು ಯಾರಿಂದಲೂ ತೆಗೆದುಕೊಳ್ಳಬೇಡಿ. 

ಮೇಕಪ್ ವಸ್ತುಗಳನ್ನು (Make Up Items) ದಾನ ಮಾಡಬೇಡಿ : ಹೋಳಿಯಲ್ಲಿ ಮೇಕಪ್ ವಸ್ತುಗಳನ್ನು ದಾನ ಮಾಡಬೇಡಿ. ವಿವಾಹಿತ ಮಹಿಳೆ ಮೇಕಪ್ ವಸ್ತುಗಳನ್ನು ದಾನ ಮಾಡಿದ್ರೆ ಪತಿಗೆ ಸಮಸ್ಯೆ ಕಾಡುತ್ತದೆ.  

ಸಾಸಿವೆ ಎಣ್ಣೆ ದಾನ ಮಾಡಬೇಡಿ : ಹೋಳಿ ದಿನದಂದು ಎಣ್ಣೆಯನ್ನು ದಾನ ಮಾಡುವುದರಿಂದ ಶನಿ ಕೋಪಗೊಳ್ಳಬಹುದು. ವಾಸ್ತವವಾಗಿ ಸಾಸಿವೆ ಎಣ್ಣೆಯನ್ನು ದಾನ ಮಾಡುವುದರಿಂದ ಶನಿಕೋಪ ಕಡಿಮೆಯಾಗುತ್ತದೆ. ಆದ್ರೆ ಹೋಲಿಕಾ ದಹನದ ದಿನ ಈ ಕೆಲಸ ಮಾಡಬಾರದು.   

ಗಾಜಿನ ವಸ್ತುಗಳನ್ನು (Glass Items) ನೀಡ್ಬೇಡಿ : ಹೋಳಿ ದಿನದಂದು ಉಡುಗೊರೆಗೆ ಮಹತ್ವದ ಸ್ಥಾನವಿದೆ. ಈ ವೇಳೆ ನೀವು ಗಾಜಿನ ವಸ್ತುವನ್ನು ಉಡುಗೊರೆ ನೀಡ್ಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಉಂಟಾಗಬಹುದು.  
 

Latest Videos
Follow Us:
Download App:
  • android
  • ios