ಕಾಗೆ ಸಾವಿನ ಸುದ್ದಿಯನ್ನು ತರುತ್ತದೆ, ಎಚ್ಚರದಿಂದ ಗಮನಿಸಿ!

ಕಾಗೆಗಳು ಎದುರು ಬಂದರೆ, ಒಂದು ಕಡೆ ಕೂತು ನಮ್ಮನ್ನೇ ನೋಡುತ್ತಿದ್ದರೆ, ಹಾರಿ ಬಂದು ನಮ್ಮನ್ನು ಮುಟ್ಟಿದರೆ ಅದರ ಸಾವಿನ, ಬದುಕಿನ ಸಂಕೇತ ಇರುತ್ತದೆ. ಕಾಗೆಗಳು ನೀಡುವ ಆ ಸಂಕೇತಗಳೇನು?

In ancient belief A crow brings news of death

ನಿತ್ಯ ಬದುಕಿನ ಕೆಲವು ಸಂಗತಿಗಳನ್ನ ಶಕುನಗಳು ಅಂತಾರೆ ದೊಡ್ಡವರು. ಆ ಶಕುನಗಳ ಆಧಾರದ ಮೇಲೆ ಒಳಿತು ಕೆಡುಕುಗಳನ್ನು ನಿರ್ಧರಿಸುತ್ತಾರೆ. ಎಷ್ಟೋ ಸಲ ಅಂಥಾ ಸಂಗತಿಗಳು ನಿಜವೇ ಆದಾಗ, ನಮಗೆ ಅಂಥಾ ಅನುಭವಗಳಾದಾಗ ಅವನ್ನು ನಂಬಲೇ ಬೇಕಾಗುತ್ತದೆ. ಕಾಗೆಗಳನ್ನು ಶಕುನಗಳ ನಿಜ ರಾಯಭಾರಿಗಳು ಅಂತ ಕರೀತಾರೆ. ಹಳ್ಳಿಗಳ ಕಡೆ ಇಂದಿಗೂ ಬೆಳ್ಳಂಬೆಳಗ್ಗೆ ಕಾಗೆ ಒಂದೇ ಸವನೆ ಕೂಗುತ್ತಿದ್ದರೆ, ಇವತ್ತು ಮನೆಗೆ ಯಾರೋ ನೆಂಟರು ಬರೋ ಹಾಗಿದೆ ಅಂತ ಅವಸರವಾಗಿ ಅಡುಗೆಗೆ ತಯಾರಿ ಮಾಡೋದನ್ನು ನೋಡಿದ್ದೇವೆ. ಎಷ್ಟೋ ಸಲ ಆ ದಿನ ನೆಂಟರು ಬರೋದಿದೆ. ಈಗೆಲ್ಲ ಫೋನ್ ಬಂದಿರೋ ಕಾರಣ ಫೋನ್ ಮಾಡದೇ ಬರೋದು ಅಪರೂಪ. ಆದರೆ ಎಷ್ಟೋ ಸಂಗತಿಗಳು ಮುನ್ಸೂಚನೆ ಕೊಡದೇ ಬರುತ್ತವೆ. ಅದರಲ್ಲಿ ಸಾವೂ ಕೂಡ ಒಂದು ಸಾವಿನ ಶಕುನವನ್ನೂ ಕಾಗೆ ಹೇಳುತ್ತದೆ ಎನ್ನುವ ನಂಬಿಕೆ ನಮ್ಮ ಪೂರ್ವಿಕರಲ್ಲಿದೆ. ಇದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ.

ವಿಷ್ಣು ಪುರಾಣದ ಪ್ರಕಾರ, ಕಾಗೆಯನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಶ್ರಾದ್ಧ ಪಕ್ಷದಲ್ಲಿ ಕಾಗೆಯನ್ನು ನೋಡುವುದು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಹೆಚ್ಚಿನ ಭಕ್ತಿ ಮತ್ತು ವಿನಮ್ರತೆಯಿಂದ ಆಹಾರವನ್ನು ನೀಡುವುದಕ್ಕೂ ಕೂಡ ಇದೇ ಕಾರಣವಾಗಿದೆ. ಕಾಗೆಯ ಮೂಲಕವೇ ಪೂರ್ವಿಕರು ತಮ್ಮ ಆಗಮನವನ್ನು ಸೂಚಿಸುತ್ತಾರೆ ಎಂದು ಭಾವಿಸಲಾಗಿದೆ. ಎಷ್ಟೋ ಕಡೆ ತಿಥಿಯ ಬಳಿಕ ಕಾಗೆಗಳನ್ನು ಕೂಗಿ ಕೂಗಿ ಕರೆದು ಪಿಂಡ ಕೊಡೋದಿದೆ. ಕಾಗೆಗಳು ಬಂದು ಅವನ್ನು ತಿಂದರೆ ತೀರಿಕೊಂಡ ಪೂರ್ವಿಕರೇ ಬಂದು ತಿಂದರೆಂದು ಸಂತೋಷಿಸೋದುಂಟು.

Astrology Tips: ಗುಲಾಬಿ ಹೂವುಗಳನ್ನು ಈ ರೀತಿ ಬಳಸಿದ್ರೆ ಅದೃಷ್ಟ ಬದಲಾಗುತ್ತೆ

ಅದೇ ಥರ ಒಂದೆಡೆ ಹಲವು ಕಾಗೆಗಳು ಕುಳಿತಿರುವುದನ್ನು ನೋಡಿದರೆ ಮುಂದೆ ಅಪಾಯ ಎದುರಾಗಲಿದೆ ಎಂದರ್ಥ. ನೀವು ದೊಡ್ಡ ದುರಂತವನ್ನು ಎದುರಿಸಲಿದ್ದೀರಿ ಅನ್ನೋದನ್ನು ಇದು ಧ್ವನಿಸುತ್ತದೆ. ಮನೆಯ ಮೇಲ್ಛಾವಣಿಯ ಮೇಲೆ ತುಂಬ ಕಾಗೆಗಳು ಒಂದೇ ಸವನೆ ಕೂಗುತ್ತಿದ್ದರೆ, ಕುಟುಂಬಕ್ಕೆ ಕೆಟ್ಟ ಸಮಯ ಬರುತ್ತಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಕಾಗೆಗಳು ಸಾವಿನ ಸುದ್ದಿಯನ್ನು ತರುತ್ತವೆ ಎಂದು ಅನೇಕರ ನಂಬಿಕೆ ಆಗಿದೆ. ಕಾಗೆಗಳನ್ನ ಇಂಥಾ ಸ್ಥಿತಿಯಲ್ಲಿ ನೋಡಿದವರು ಕೆಟ್ಟ ಶಕುನ ನೆನೆದು ಭಯ ಪಡೋದುಂಟು. ಕಾಗೆಯು ಹಾರುವಾಗ ಒಂದು ವೇಳೆ ವ್ಯಕ್ತಿಯ ಮೇಲೆ ಮಲವಿಸರ್ಜನೆ ಮಾಡಿದರೆ ಅದು ಕೆಡುಕನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ತೀವ್ರ ಆರೋಗ್ಯದಿಂದ ಬಳಲುವಿರಿ, ದೊಡ್ಡ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.

ಕಾಗೆಗಳು ಕೇವಲ ಕೆಟ್ಟ ಸಂಗತಿಗಳನ್ನಷ್ಟೇ ಧ್ವನಿಸೋದಿಲ್ಲ. ಕಾಗೆಯು ಹಾರುತ್ತಿರುವಾಗ ವ್ಯಕ್ತಿಯ ದೇಹದ ಭಾಗವನ್ನು ಸ್ಪರ್ಶಿಸುವುದು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ. ಶೀಘ್ರದಲ್ಲೇ ನಿಮಗೆ ಬಹಳಷ್ಟು ಹಣ ಬರುತ್ತದೆ ಎಂದು ಜನ ನಂಬುತ್ತಾರೆ. ಆದರೆ ಕಾಗೆ ಹಾರುವಾಗ ತಲೆಗೆ ತಾಗಿದರೆ ಮಾತ್ರ ಅದು ಅಪಶಕುನ. ಇದರಿಂದ ದೇಹಸ್ಥಿತಿ ತೀವ್ರವಾಗಿ ಹದಗೆಡುತ್ತದೆ, ಆರ್ಥಿಕ ಸಂಕಷ್ಟದಿಂದ ಜೀವನವು ಅಧೋಗತಿಗೆ ಇಳಿಯಬಹುದು.

ಕನಸಲ್ಲಿ ದೇವರು ಕಂಡ್ರಾ? ಅಪಾರ ಯಶಸ್ಸು ನಿಮ್ಮ ಹಾದಿಯಲ್ಲಿದೆ ಎಂದರ್ಥ!

ಎಲ್ಲೋ ಹೋಗುವಾಗ ದಾರಿಯಲ್ಲಿ ಕಾಗೆಯೊಂದು ಪಾತ್ರೆಯಲ್ಲಿ ನೀರು ಕುಡಿಯುತ್ತಿರುವುದನ್ನು ಕಂಡರೆ ತುಂಬಾ ಶುಭ, ಬೇಗನೇ ಕೈತುಂಬಾ ಹಣ ಸಿಗುತ್ತದೆ. ಅಲ್ಲದೇ ಕಾಗೆ(Crow) ತನ್ನ ಕೊಕ್ಕಿನಲ್ಲಿ ಆಹಾರದೊಂದಿಗೆ ಹಾರುವುದನ್ನು ನೋಡುವುದು ಕೂಡ ಶುಭ ಸಂಕೇತವಾಗಿದೆ. ನೀವು ಶೀಘ್ರದಲ್ಲೇ ಹಣವನ್ನು(Money) ಪಡೆಯುತ್ತೀರಿ. ಮಧ್ಯಾಹ್ನದ ಸಮಯದಲ್ಲಿ ಉತ್ತರ ಅಥವಾ ಪೂರ್ವದಲ್ಲಿ ಕಾಗೆಗಳು ಕೂಗುವುದನ್ನು ಕೇಳುವುದು ಮಂಗಳಕರ ಎಂದು ಹೇಳಲಾಗುತ್ತದೆ.

ಇದರಲ್ಲಿ ಕೆಲವನ್ನು ಜನ ಅಷ್ಟೊಂದು ಸೀರಿಯಸ್ಸಾಗಿ ತಗೊಳ್ಳದಿದ್ದರೂ ಸಾವಿನ(Death) ವಿಚಾರದಲ್ಲಿ ಕಾಗೆ ಶಕುನವನ್ನು ಹಲವರು ನಂಬುತ್ತಾರೆ. ಪದೇ ಪದೇ ಇಂಥಾ ಸಂಗತಿಗಳು ನಡೆದಿರೋದೆ ಇದಕ್ಕೆ ಕಾರಣ.

Latest Videos
Follow Us:
Download App:
  • android
  • ios