Asianet Suvarna News Asianet Suvarna News

ನಾಮಕರಣಕ್ಕೆ ಜ.22ಕ್ಕಿಂತ ಉತ್ತಮ ದಿನವೆಲ್ಲಿದೆ? ನಿಮ್ಮ ಮಗುವಿಗೆ ರಾಮ, ಸೀತೆಯ ಈ ಹೆಸರನ್ನು ಇರಿಸಬಹುದು

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಆದ್ದರಿಂದ ಈ ದಿನ ನಿಮ್ಮ ಮಗುವಿನ ನಾಮಕರಣ ಮಾಡಲು ತುಂಬಾ ಮಂಗಳಕರವಾಗಿದೆ. ನೀವು ಮಕ್ಕಳಿಗೆ ಶ್ರೀ ರಾಮ ಮತ್ತು ಸೀತೆಯ ಹೆಸರನ್ನು ಇಡಲು ಬಯಸಿದರೆ ಈ ಪಟ್ಟಿ ನಿಮಗೆ ಸಹಾಯಕ್ಕೆ ಬರಬಹುದು.

Namkaran Muhurat 2024 22 January Ram and Seeta names for child skr
Author
First Published Jan 13, 2024, 3:18 PM IST | Last Updated Jan 13, 2024, 3:18 PM IST

ಭಗವಾನ್ ರಾಮನು 500 ವರ್ಷಗಳ ನಂತರ ತನ್ನ ಭವ್ಯವಾದ ಗುಡಿಗೆ ಮರಳುತ್ತಿದ್ದಾನೆ. ಜನವರಿ 22, 2024ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಸಂಪೂರ್ಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಾಮನ ಪ್ರಾಣಪ್ರತಿಷ್ಠೆ ನಡೆಯುತ್ತಿದೆ. ನಿಮ್ಮ ಮನೆಯಲ್ಲಿ ಈಗ ತಾನೇ ಹುಟ್ಟಿದ ಕಂದಮ್ಮನಿಗೆ ನಾಮಕರಣ ಶಾಸ್ತ್ರ ಮಾಡಲು ಇದಕ್ಕಿಂತ ಸುಮೂಹೂರ್ತ ಇನ್ನಾವುದಿದೆ?

ಜನವರಿ 22, 2024ರಂದು ಮಗುವಿಗೆ ನಾಮಕರಣ ಮಾಡಲು ದಿನ ಅದ್ಭುತವಾಗಿದೆ. ಈ ದಿನ ಮುಹೂರ್ತ ಸಮಯ ನೋಡೋಣ. 

ಹೆಸರು ಮಗುವಿಗೆ ನಾಮಕರಣ ಶಾಸ್ತ್ರದಿಂದ ಕಡೆವರೆಗೂ ಅದರ ಜೊತೆಯಲ್ಲಿರುತ್ತದೆ. ಮಗುವಿನ ವ್ಯಕ್ತಿತ್ವದೊಂದಿಗೆ ಹೆಸರು ಥಳುಕು ಹಾಕಿಕೊಂಡಿರುತ್ತದೆ. ಹಾಗಾಗಿ, ಹೆಸರಿಡುವಾಗ ಶುಭ ದಿನ, ಶುಭ ಮುಹೂರ್ತ ನೋಡಬೇಕು. ಈ ತಿಂಗಳಲ್ಲಿ 22 ಜನವರಿ ಎಲ್ಲ ಹಿಂದೂಗಳಿಗೆ ವಿಶೇಷ ದಿನವಾಗಿದೆ. ಈ ದಿನ ಬೆಳಗ್ಗೆ 7.13ರಿಂದ 23 ಜನವರಿ 2024, ಬೆಳಗ್ಗೆ 4.59ರವರೆಗೆ ಶುಭ ಮುಹೂರ್ತವಿರಲಿದೆ. 

ರಾಮಚರಿತ ಮಾನಸ ಪುಸ್ತಕಕ್ಕೆ ಎಲ್ಲಿಲ್ಲದ ಡಿಮ್ಯಾಂಡ್; ಪೂರೈಕೆಗೆ ಹೆಣಗುತ್ತಿದೆ ಗೀತಾ ಪ್ರೆಸ್

ಈ ಶುಭ ದಿನದಂದು ಹೆಸರಿಡುವುದಾದರೆ ಗಂಡು ಮಕ್ಕಳಿಗೆ ರಾಮ ಹಾಗೂ ಹೆಣ್ಣು ಮಕ್ಕಳಿಗೆ ಸೀತೆಯ ವಿಶಿಷ್ಟ ಮತ್ತು ಸುಂದರವಾದ ಹೆಸರುಗಳನ್ನು ಇಡಬಹುದು. ಅಂಥ ಕೆಲ ಹೆಸರುಗಳನ್ನು ಇಲ್ಲಿ ನೀಡಲಾಗಿದೆ. 

ಶ್ರೀರಾಮನ ವಿಶಿಷ್ಟ ಹೆಸರು
ತ್ರಿವಿಕಮ - ಮೂರು ಪ್ರಪಂಚಗಳನ್ನು ಮೂರು ಹೆಜ್ಜೆಗಳಲ್ಲಿ ಅಳೆಯುವವನು.
ನಿಮಿಷ - ಭಗವಾನ್ ರಾಮನ ಪೂರ್ವಜರನ್ನು ನಿಮಿಷ ಎಂದು ಕರೆಯಲಾಗುತ್ತದೆ.
ಪರಾಕ್ಷ - ಪರಾಕ್ಷ ಎಂದರೆ ಪ್ರಕಾಶಮಾನವಾದ ಮತ್ತು ಹೊಳೆಯುವ ಎಂದರ್ಥ.
ಶಾಶ್ವತ - ಅದು ಎಂದಿಗೂ ಕೊನೆಗೊಳ್ಳುವುದಿಲ್ಲ.
ಶನಯ್ - ಪ್ರಾಚೀನ, ಇದು ಶಾಶ್ವತವಾಗಿ ಉಳಿಯುತ್ತದೆ, ಇದು ಶನಿಯ ಶಕ್ತಿಯಾಗಿದೆ.
ರಮಿತ್ - ಆಕರ್ಷಕ, ಪ್ರೀತಿ, ಸಂತೋಷ
ಅನಿಕ್ರತ್ - ಹೆಸರು ಅನಿಕ್ರತ್ ಎಂದರೆ ಬುದ್ಧಿವಂತ ಮತ್ತು ಉನ್ನತ ಕುಟುಂಬದ ಮಗ.

ರಾಮಮಂದಿರಕ್ಕಾಗಿ 10ನೇ ವರ್ಷದಿಂದ ಮೌನವ್ರತ; 44 ವರ್ಷಗಳ ಬಳಿಕ 'ರಾಮ ಜಪ' ಮಾಡಿ ಮೌನ ಮುರಿಯಲಿರುವ ಬಾಬಾ!

ಸೀತೆಯ ವಿಶಿಷ್ಟ ಹೆಸರುಗಳು 
ವೈದೇಹಿ - ವೈದೇಹಿ ಎಂದರೆ ಹೆಂಡತಿ ಮತ್ತು ಮಗಳು ಮತ್ತು ಗುಣಗಳಲ್ಲಿ ಉತ್ತಮವಾದವರು.
ಜಾನಕಿ - ರಾಜ ಜನಕನ ಮಗಳು ಎಂಬ ಕಾರಣಕ್ಕೆ ಈ ಹೆಸರನ್ನು ಇಡಲಾಗಿದೆ.
ಮೈಥಿಲಿ - ಸೀತಾ ಜೀ ಮಿಥಿಲಾ ರಾಜನ ಮನೆಯಲ್ಲಿ ಜನಿಸಿದ ಕಾರಣ ಮೈಥಿಲಿ ಎಂದು ಕರೆಯುತ್ತಾರೆ.
ಮೃಣ್ಮಯಿ - ಭೂಮಿಯಿಂದ ಹುಟ್ಟಿ ಮಣ್ಣಿನಿಂದ ಮಾಡಲ್ಪಟ್ಟವಳನ್ನು ಮೃಣ್ಮಯಿ ಎಂದು ಕರೆಯಲಾಗುತ್ತದೆ. ರಾಜ ಜನಕನಿಗೆ ಸೀತೆ ಮಣ್ಣಿನಲ್ಲಿ ದೊರೆತಳು.
ಸಿಯಾ - ಚಂದ್ರನ ಬೆಳಕಿನಂತೆ ಸುಂದರ ಮತ್ತು ತಂಪಾದ
ಪಾರ್ಥವಿ - ಭೂಮಿಯ ಮಗಳು ಮತ್ತು ಭೂಮಿಯಿಂದ ಜನಿಸಿದಳು.

Latest Videos
Follow Us:
Download App:
  • android
  • ios