ರಾಮಮಂದಿರಕ್ಕಾಗಿ 10ನೇ ವರ್ಷದಿಂದ ಮೌನವ್ರತ; 44 ವರ್ಷಗಳ ಬಳಿಕ 'ರಾಮ ಜಪ' ಮಾಡಿ ಮೌನ ಮುರಿಯಲಿರುವ ಬಾಬಾ!
ಮೋಹನ್ ಗೋಪಾಲ್ ದಾಸ್ ಎಂದು ಕರೆಯಲ್ಪಡುವ ಮೌನಿ ಬಾಬಾ, ರಾಮ ಮಂದಿರ ನಿರ್ಮಾಣದವರೆಗೆ ಚಪ್ಪಲಿ ಧರಿಸುವುದಿಲ್ಲ, ಮಾತನಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ 44 ವರ್ಷಗಳು ಕಳೆದಿವೆ.
ವಯಸ್ಸು 10 ಎಂದರೆ ಇನ್ನೂ ಆಡುತ್ತಾ, ಹಾರುತ್ತಾ, ಕುಣಿಯುತ್ತಾ ಇರುವ ಪ್ರಾಯ. ಆದರೆ, ಮಧ್ಯಪ್ರದೇಶದ ಮೋಹನ್ ಗೋಪಾಲ್ ದಾಸ್ ಆ ಸಣ್ಣ ವಯಸ್ಸಿನಲ್ಲೇ ರಾಮ ಮಂದಿರ ನಿರ್ಮಾಣವಾಗುವವರೆಗೆ ತಾವು ಚಪ್ಪಲಿ ಧರಿಸುವುದಿಲ್ಲ, ಮಾತನ್ನೂ ಆಡುವುದಿಲ್ಲ ಎಂದು ನಿರ್ಧರಿಸಿ ಬರೋಬ್ಬರಿ 44 ವರ್ಷಗಳ ಕಾಲ ಈ ಶಪಥವನ್ನು ನಡೆಸಿಕೊಂಡು ಬಂದಿದ್ದಾರೆ ಎಂದರೆ ಅವರ ಛಲ, ಹಟ ಎಂಥದಿರಬೇಕು.
ಇತ್ತೀಚೆಗಷ್ಟೇ 30 ವರ್ಷದಿಂದ ರಾಮಮಂದಿರಕ್ಕಾಗಿ 30 ವರ್ಷಗಳಿಂದ ಮೌನ ವ್ರತ ಆಚರಿಸಿದರ ಮೌನಿ ಮಾತೆಯ ಬಗ್ಗೆ ಓದಿರುತ್ತೀರಿ. ಇದು ಮೌನಿ ಅದೇ ರೀತಿಯ ಕತೆ. ಆದರೆ, ಈ ವ್ಯಕ್ತಿಯ ಮೌನ ವ್ರತ 44 ವರ್ಷಗಳಷ್ಟು ಸುಧೀರ್ಘ ಕಾಲದ್ದು.
1980ರಿಂದ ಮೌನವಾಗಿರುವ ಸಂತ ಮಧ್ಯಪ್ರದೇಶದ ಮೋಹನ್ ಗೋಪಾಲ್ ದಾಸ್ ಅಂತಿಮವಾಗಿ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮ್ ಲಲ್ಲಾನ ಪ್ರತಿಷ್ಠಾಪನೆ ಸಮಾರಂಭದ ನಂತರ ಭಗವಾನ್ ರಾಮನ ಹೆಸರನ್ನು ಉಚ್ಚರಿಸುವ ಮೂಲಕ ಮತ್ತೆ ಮಾತನಾಡಲು ನಿರ್ಧರಿಸಿದ್ದಾರೆ. ತಮ್ಮ 10ನೇ ವಯಸ್ಸಿನಿಂದ ಮೌನವ್ರತ ಆಚರಿಸಿಕೊಂಡು ಬಂದಿರುವ ಅವರಿಗೀಗ 54 ವರ್ಷ. ಈ ಕಾರಣಕ್ಕೆ ಸುತ್ತಮುತ್ತಲಿನ ಜನರಿಂದ ಮೌನಿಬಾಬಾ ಎಂದೇ ಹೆಸರಾಗಿದ್ದರು. ಇದೀಗ ಅವರು ಜನವರಿ 22ರಂದು ಪ್ರತಿಜ್ಞೆ ಭಂಗ ಮಾಡಲಿದ್ದಾರೆ.
ಅಯೋಧ್ಯೆ ರಾಮಲಾಲಾ ಪ್ರಾಣ ಪ್ರತಿಷ್ಠೆಗೂ ಮುನ್ನವೇ ವಿಶೇಷ ಅನುಷ್ಠಾನ ಶುರು ಮಾಡಿದ ಮೋದಿ
ಈ 'ಮೌನಿ ಬಾಬಾ' ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಕರಸೇವಕರಲ್ಲಿ ಒಬ್ಬರು. ಅಯೋಧ್ಯೆಯ ಸಿಂಹಾಸನದಲ್ಲಿ ಭಗವಾನ್ ರಾಮನನ್ನು ಪ್ರತಿಷ್ಠಾಪಿಸುವವರೆಗೆ ಚಪ್ಪಲಿಯನ್ನೂ ಧರಿಸುವುದಿಲ್ಲ ಎಂದು 1984ರಲ್ಲಿ ನಿರ್ಧರಿಸಿದ ಅವರು ಇದುವರೆಗೂ ಬರಿಗಾಲಲ್ಲೇ ಸಂಚರಿಸಿದ್ದಾರೆ.
ಮಾತುಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ?
ಅವರು ಸೀಮೆಸುಣ್ಣ ಮತ್ತು ಸ್ಲೇಟ್ ಅನ್ನು ಬಳಸಿ, ಕೆಲವೊಮ್ಮೆ ಪೆನ್ನು ಮತ್ತು ಕಾಗದವನ್ನು ಸಹ ಬಳಸಿ ತಮಗೆ ಹೇಳಬೇಕಾದುದನ್ನು ಹೇಳುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಲ್ಲಿ ಸಂಪೂರ್ಣ ನಂಬಿಕೆಯಿದೆ ಮತ್ತು ಉದ್ಘಾಟನೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಿಂದ ಅವರಿಗೆ ರಾಮಮಂದಿರ ಉದ್ಘಾಟನೆಗೆ ಕರೆ ಬಂದಿರುವುದಾಗಿ ತಿಳಿಸಿದ್ದಾರೆ.
ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳು ಹೇಗೆ ನಡೆಯುತ್ತೆ? ಪ್ರಧಾನ ಅರ್ಚಕರು ಹೇಳಿದ್ದೀಗೆ..
ಮೌನಿ ಬಾಬಾ ಅವರ ಸ್ಥಳೀಯ ಸ್ಥಳ ಸೂರ್ಯ ನಗರ ಪುಲಾವ್ ಬಾಲಾಜಿ. ಆದಾಗ್ಯೂ, ಅವರು ಪ್ರಸ್ತುತ ಮಧ್ಯಪ್ರದೇಶದ ದಾತಿಯಾ ದೇವಾಲಯಗಳಲ್ಲಿ ವಾಸಿಸುತ್ತಿದ್ದಾರೆ.