ಜೀವಿತಾವಧಿಯಲ್ಲಿ ಈ 5 ರೀತಿಯ ದಾನ ಮಾಡಿದರೆ ಮೋಕ್ಷ ಪ್ರಾಪ್ತಿ

ದಾನ ಧರ್ಮ ಮಾಡುವುದು ಮಾನವ ಜೀವನದ ಅತ್ಯಂತ ಪುಣ್ಯದ ಕೆಲಸ. ಇದ್ದುದರಲ್ಲಿಯೇ ಕೈಲಾದಷ್ಟು ಅಸಹಾಯಕರಿಗೆ ದಾನ ಮಾಡುವುದರಿಂದ ಮೋಕ್ಷ ಸಿದ್ಧಿಯಾಗುತ್ತದೆ. ಅಷ್ಟೇ ಅಲ್ಲ, ನಮ್ಮ ಕರ್ಮಗಳಿಗೆ ಅನುಸಾರವಾಗಿ ಫಲವನ್ನೂ ಪಡೆಯುತ್ತೇವೆ. ಜೀವಮಾನದಲ್ಲಿ ಏನೆಲ್ಲ ದಾನ ಮಾಡಬೇಕು ನೋಡೋಣ.

Must donate these 5 things in lifetime in Hinduism for salvation skr

ಎಲ್ಲ ಧರ್ಮಗಳೂ ದಾನ ಧರ್ಮವನ್ನು ಪ್ರೋತ್ಸಾಹಿಸುತ್ತವೆ. ಅದರಲ್ಲೂ ಸನಾತನ ಸಂಸ್ಕೃತಿಯಲ್ಲಿ ಪ್ರತಿ ಹಬ್ಬಹರಿದಿನಗಳಲ್ಲಿ, ಹುಣ್ಣಿಮೆ, ಅಮವಾಸ್ಯೆಗಳಂದು, ಮನೆಯಲ್ಲಿ ಶುಭ ಕಾರ್ಯ ನಡೆಯುವಾಗ ಹೀಗೆ- ದಾನಕ್ಕೆ ವರ್ಷದ ಬಹುತೇಕ ದಿನಗಳನ್ನು ಪ್ರೋತ್ಸಾಹಿಸಲಾಗುತ್ತದೆ. ನಮ್ಮಲ್ಲಿ ಎಷ್ಟೇ ಇರಲಿ, ಅದಕ್ಕಿಂತ ಕಡಿಮೆ ಹೊಂದಿದವರು ಈ ಸಮಾಜದಲ್ಲಿ ಅನೇಕರಿದ್ದಾರೆ. ಅಂಥವರನ್ನು ಗುರುತಿಸಿ ದಾನ ಮಾಡಬೇಕು. ಅಸಹಾಯಕರಿಗೆ, ನಿರ್ಗತಿಕರಿಗೆ ಮಾಡುವ ದಾನ ಸರ್ವಶ್ರೇಷ್ಠವಾಗಿದೆ. ದಾನ ಮಾಡುವಾಗ ಒಂದು ಕೈಲಿ ಕೊಟ್ಟಿದ್ದು ಮತ್ತೊಂದು ಕೈಗೆ ತಿಳಿಯಬಾರದು ಎನ್ನಲಾಗುತ್ತದೆ. ಆಗಲೇ ದಾನದ ಸಂಪೂರ್ಣ ಫಲವನ್ನು ಒಬ್ಬರು ಪಡೆಯಬಹುದು. ದಾನವೆಂದರೆ ಕೇವಲ ಹಣವನ್ನಲ್ಲ, ಯಾರಿಗೆ ಯಾವಾಗ ಏನು ಅಗತ್ಯವಿರುತ್ತದೋ ಅದನ್ನು ಕೊಡುವುದು ಸರ್ವಶ್ರೇಷ್ಠವಾಗಿದೆ. 
ಹಿಂದೂ ಧರ್ಮದಲ್ಲಿ ಹಣ ಮಾತ್ರವಲ್ಲ, ಐದು ವಸ್ತುಗಳ ದಾನವನ್ನು ಶ್ರೇಷ್ಠ ದಾನ ಎಂದು ವಿವರಿಸಲಾಗಿದೆ. ಈ ಐದು ವಸ್ತುಗಳನ್ನು ದಾನ ಮಾಡುವುದರಿಂದ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ವ್ಯಕ್ತಿಗೆ ಉತ್ತಮ ಪ್ರತುಫಲ ದೊರೆಯುತ್ತದೆ. ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇವುಗಳನ್ನು ದಾನ ಮಾಡಬೇಕೆಂದು ಹೇಳಲಾಗುತ್ತದೆ. ಹಾಗಾದರೆ ಇಂದು ಈ ಐದು ವಸ್ತುಗಳ ದಾನದ ಮಹತ್ವದ ಬಗ್ಗೆ ತಿಳಿಯೋಣ.

1. ಭೂ ದಾನ
ಸನಾತನ ಧರ್ಮದಲ್ಲಿ ಭೂಮಿ ದಾನದ ವಿಶೇಷ ಮಹತ್ವವನ್ನು ಹೇಳಲಾಗಿದೆ. ಅರ್ಹರು ನಿರ್ಗತಿಕರಿಗೆ ಭೂಮಿ ದಾನ ಮಾಡಬೇಕು. ವೃದ್ಧಾಶ್ರಮಗಳು, ಶಾಲೆಗಳು, ಕಟ್ಟಡಗಳು, ಧರ್ಮಶಾಲೆಗಳು ಮತ್ತು ಗೋಶಾಲೆಗಳಿಗೆ ಭೂಮಿಯನ್ನು ದಾನ ಮಾಡಿದರೆ, ಆ ವ್ಯಕ್ತಿಗೆ ಹೆಚ್ಚಿನ ಪುಣ್ಯ ಸಿಗುತ್ತದೆ. ಇಂಥ ಉತ್ತಮ ಕಾರಣಕ್ಕಾಗಿ ಮಾಡುವ ದಾನ ಬಹಳಷ್ಟು ಜನರಿಗೆ ಹಲವಾರು ತಲೆಮಾರುಗಳ ಕಾಲ ನೆರವಾಗುತ್ತಲೇ ಇರುತ್ತದೆ. ಹಾಗಾಗಿ, ಈ ದಾನದ ಪುಣ್ಯ ನಿರಂತರವಾಗಿ ವ್ಯಕ್ತಿಯ ಖಾತೆಗೆ ಸೇರುತ್ತಲೇ ಇರುತ್ತದೆ. 

Mangal Gochar 2023: ಈ 3 ರಾಶಿಗಳಿಗೆ ಸರ್ವಮಂಗಳ ಉಂಟು ಮಾಡುವ ಮಂಗಳ

2. ಗೋ ದಾನ
ಗೋವುಗಳಿಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಿಂದೂ ಧರ್ಮದಲ್ಲಿ ಹಸುವನ್ನು ತಾಯಿ ಎಂದು ಪೂಜಿಸಲಾಗುತ್ತದೆ. ಹಸುವಿನ ಮೈಮೇಲೆ ಮುಕ್ಕೋಟಿ ದೇವರಿದ್ದಾರೆ ಎಂದು ನಂಬಿ ನಡೆಯಲಾಗುತ್ತದೆ. ಇಂಥ ಹಸುವನ್ನು ದಾನ ಮಾಡಿದರೂ ಮನುಷ್ಯ ಸತ್ಕಾರ್ಯಗಳನ್ನು ಪಡೆಯುತ್ತಾನೆ. 

3. ಅನ್ನದಾನ
ಹಸಿದವನ ಹೊಟ್ಟೆ ತುಂಬಿಸುವುದಕ್ಕಿಂತ ದೊಡ್ಡ ಪುಣ್ಯ ಇನ್ನೊಂದಿಲ್ಲ. ನಿರ್ಗತಿಕರಿಗೆ ಅನ್ನದಾನ ಮಾಡಬೇಕು. ಈ ಜಗತ್ತಿನಲ್ಲಿ ಹಸಿವಿನಷ್ಟು ಕೆಟ್ಟದು ಮತ್ತೊಂದಿಲ್ಲ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಎಂಬಂತೆ ಹಲವರು ಒಂದು ಹೊತ್ತು ಹೊಟ್ಟೆ ತುಂಬಿಸಿಕೊಳ್ಳಲೂ ಸಾಧ್ಯವಾಗದೆ ಒದ್ದಾಡುತ್ತಿರುತ್ತಾರೆ. ಹಾಗಾಗಿ, ಅನ್ನದಾನ ಮಾಡಿದರೂ ಮನುಷ್ಯ ಬಹಳಷ್ಟು ಪುಣ್ಯ ಪಡೆಯುತ್ತಾನೆ.

4. ವಿದ್ಯಾ ದಾನ
ವಿದ್ಯೆಯನ್ನು ದಾನ ಮಾಡುವುದನ್ನೂ ಶ್ರೇಷ್ಠ ದಾನವೆಂದು ಪರಿಗಣಿಸಲಾಗಿದೆ. ಗುರುವು ಶಿಷ್ಯರಿಗೆ ಶಿಕ್ಷಣ ನೀಡುವುದು ಶಿಕ್ಷಣ ದಾನಕ್ಕೆ ಸಮಾನ. ಶಿಕ್ಷಣದಿಂದ ಮಾತ್ರ ಸಮಾಜದ ಸ್ವಾಸ್ಥ್ಯ ಸಾಧ್ಯ. ಗುರು-ಶಿಷ್ಯ ಸಂಪ್ರದಾಯವನ್ನು ಭಾರತೀಯ ಸಂಸ್ಕೃತಿಯಲ್ಲಿ ಶತಮಾನಗಳಿಂದ ಅನುಸರಿಸಲಾಗುತ್ತಿದೆ. ವಿದ್ಯೆ ದಾನ ಮಾಡುವುದರಿಂದ ಕೇವಲ ವ್ಯಕ್ತಿಯದಷ್ಟೇ ಅಲ್ಲ, ಒಂದು ಕುಟುಂಬದ, ಒಂದು ಸಮಾಜದ ಬದುಕಿನ ಚಿತ್ರಣವೇ ಬದಲಾಗುತ್ತದೆ. ನಿಮಗೆ ತಿಳಿದಿರುವುದನ್ನು ಬೇರೆಯವರಿಗೆ ಹೇಳಿಕೊಡುವ ಅಭ್ಯಾಸ ಸದಾ ಒಳ್ಳೆಯದು.

ಕನಸಿನಲ್ಲಿ ನೀರು ಕಂಡ್ರೆ, ನಿಮ್ಮ ಹಣೆ ಬರಹ ಬದಲಾಗಲಿದೆ ಎಂದರ್ಥ

5. ಕನ್ಯಾ ದಾನ
ಹಿಂದೂ ಧರ್ಮದಲ್ಲಿ, ಮದುವೆಯ ಸಮಯದಲ್ಲಿ, ಪೋಷಕರು ಹುಡುಗಿಯ ಕೈಯನ್ನು ವರನಿಗೆ ನೀಡುತ್ತಾರೆ. ಮದುವೆಯ ಈ ಸಂಪ್ರದಾಯವನ್ನು ಕನ್ಯಾ ದಾನ ಎಂದು ಕರೆಯಲಾಗುತ್ತದೆ. ವಧುವಿನ ದಾನವನ್ನು ಹಿಂದೂ ಧರ್ಮದಲ್ಲಿ ಅತಿ ದೊಡ್ಡ ದಾನವೆಂದು ಪರಿಗಣಿಸಲಾಗಿದೆ. ಸನಾತನ ಧರ್ಮದ ಐದು ಪ್ರಮುಖ ದಾನಗಳಲ್ಲಿ ಕನ್ಯಾ ದಾನ ಮಾಡುವುದು ಕೂಡ ಒಂದು.

Latest Videos
Follow Us:
Download App:
  • android
  • ios