ಕನಸಿನಲ್ಲಿ ನೀರು ಕಂಡ್ರೆ, ನಿಮ್ಮ ಹಣೆ ಬರಹ ಬದಲಾಗಲಿದೆ ಎಂದರ್ಥ
ಕನಸುಗಳು ನಿಜ ಜೀವನಕ್ಕೆ ನಿಕಟ ಸಂಬಂಧ ಹೊಂದಿವೆ. ಇವು ಭವಿಷ್ಯದ ಚಿಹ್ನೆಗಳು. ಡ್ರೀಮ್ ಸೈನ್ಸ್ ತಜ್ಞರ ಪ್ರಕಾರ, ಕನಸುಗಳು ಸಾಮಾನ್ಯ ಪ್ರಕ್ರಿಯೆ. ಒಬ್ಬ ವ್ಯಕ್ತಿಯ ಆಲೋಚನೆಗಳು ಕನಸುಗಳಾಗಿ ಬದಲಾಗುತ್ತವೆ. ಸರಳವಾಗಿ ಹೇಳುವುದಾದರೆ, ಒಬ್ಬ ವ್ಯಕ್ತಿ ಹಗಲಿನಲ್ಲಿ ಏನು ಯೋಚಿಸುತ್ತಾನೋ ಅದೇ ಕನಸುಗಳಾಗಿ ನಿದ್ರೆಯಲ್ಲಿ ಆಲೋಚನೆಗೆ ಬರುತ್ತೆ.
ನಮಗೆ ಬೀಳುವ ಎಲ್ಲಾ ಕನಸುಗಳಿಗೆ(Dreams) ಒಂದೊಂದು ಅರ್ಥ ಇದೆ. ಕೆಲವು ಕನಸುಗಳು ಒಳ್ಳೆಯದು, ಕೆಲವು ಕೆಟ್ಟವು. ದುಃಸ್ವಪ್ನಗಳು ಎಂದರೆ ನಿಜ ಜೀವನದಲ್ಲಿ ಕೆಟ್ಟ ಸಂಗತಿಗಳು ಸಂಭವಿಸುತ್ತವೆ ಎಂದು ಅರ್ಥವಲ್ಲ. ಹಾಗೆಯೇ, ಅನೇಕ ಕನಸುಗಳು ಜೀವನದಲ್ಲಿ ವಿಶೇಷ ಬದಲಾವಣೆಗಳ ಸಂಕೇತಗಳಾಗಿವೆ.
ಕನಸಿನಲ್ಲಿ ಆಗಾಗ್ಗೆ ನೀರನ್ನು(Water) ನೋಡುತ್ತಿದ್ದರೆ, ಇವು ಮುಂಬರುವ ಜೀವನದ ಚಿಹ್ನೆಗಳಾಗಿವೆ. ಕನಸಿನಲ್ಲಿ ನೀರನ್ನು ನೋಡುವ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ-
ಕನಸಿನಲ್ಲಿ ನೀವು ನದಿಯನ್ನು ನೋಡಿದರೆ, ಇದು ಒಳ್ಳೆಯ ಸಂಕೇತ. ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ನದಿಯನ್ನು ನೋಡುವುದು ಎಂದರೆ ನಿಮ್ಮ ಆಸೆ ಶೀಘ್ರದಲ್ಲೇ ಈಡೇರಲಿದೆ ಎಂದರ್ಥ.
ಕನಸಿನ ವಿಜ್ಞಾನದ ಪ್ರಕಾರ, ಒಬ್ಬ ವ್ಯಕ್ತಿ ಕನಸಿನಲ್ಲಿ ನದಿ ಅಥವಾ ಕೊಳದಲ್ಲಿ ಈಜುವುದನ್ನು(Swimming) ನೋಡೋದು ಮಂಗಳಕರವಾಗಿದೆ. ನಿಮಗೂ ಅಂತಹ ಕನಸುಗಳು ಬಿದ್ದಿದ್ದರೆ, ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದು ಅರ್ಥ..
ಕನಸಿನಲ್ಲಿ ಮಳೆ (Rain) ನೀರನ್ನು ನೋಡಿದರೆ, ಅದು ನಿಮ್ಮ ಜಾತಕದಲ್ಲಿ ಹಣ ಗಳಿಸುವ ಸಾಧ್ಯತೆಗಳಿವೆ ಎಂಬುದರ ಸಂಕೇತ. ಕನಸಿನಲ್ಲಿ ಮಳೆ ನೀರನ್ನು ನೋಡುವುದು ತುಂಬಾ ಮಂಗಳಕರ. ಈ ಕನಸಿನ ಅರ್ಥ ನೀವು ಶೀಘ್ರದಲ್ಲೇ ಹೊಸ ವಾಹನವನ್ನು ಖರೀದಿಸಬಹುದು ಎಂದು .
ಜ್ಯೋತಿಷಿಗಳ ಪ್ರಕಾರ, ಕನಸಿನಲ್ಲಿ ನೀರಿನ ಕೊಳವನ್ನು ನೋಡುವುದು ಸಹ ಮಂಗಳಕರ. ಇವು ಸಂಪತ್ತಿನ ಸಂಕೇತ. ಈ ಕನಸು ಬಂದರೆ ನೀವು ಶೀಘ್ರದಲ್ಲೇ ಶ್ರೀಮಂತರಾಗಲಿದ್ದೀರಿ(Rich) ಎಂದರ್ಥ. ಇನ್ನು ಮುಂದೆ ಕನಸಿನಲ್ಲಿ ನೀರಿನ ಕೊಳ ಕಂಡರೆ ಯೋಚನೆ ಮಾಡಬೇಡಿ. ಖುಷಿ ಪಡಿ.
ಕನಸಿನಲ್ಲಿ ಬಾವಿಯನ್ನು(Well) ನೋಡುವುದು ಸಹ ಶುಭ ಸಂಕೇತ. ಈ ಕನಸು ನಿಮ್ಮ ಆಸೆಗಳು ಶೀಘ್ರದಲ್ಲೇ ಈಡೇರಲಿವೆ ಎಂದರ್ಥ ಕೊಡುತ್ತೆ. ಹಾಗೆಯೇ, ಕನಸಿನಲ್ಲಿ ಶುದ್ಧ ನೀರನ್ನು ನೋಡುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತೆ. ಈ ಕನಸು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರಲಿದೆ ಎಂದರ್ಥ.