ಕೊಪ್ಪಳ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಗೆ ಸಾಕ್ಷಿಯಾದ ಹನುಮಸಾಗರ ಗ್ರಾಮ
ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಮುಸ್ಲಿಂ ಸಮುದಾಯ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಕೊಪ್ಪಳ (ಸೆ.8): ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಮುಸ್ಲಿಂ ಸಮುದಾಯ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮುಸ್ಲಿಂ ಸಮುದಾಯದಿಂದಲೇ ಮಸೀದಿಯ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಾ ಬರಲಾಗಿದೆ. ಐದು ದಿನಗಳ ಕಾಲ ಗಣೇಶ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನ ನಡೆಸಲಿರುವ ಮುಸ್ಲಿಂ ಬಾಂಧವರು. ನಾಲ್ಕನೇ ದಿನ ಅನ್ನ ಸಂತರ್ಪಣೆ ಸೇರಿ ವಿವಿಧ ಕಾರ್ಯಕ್ರಮಗಳೂ ಆಯೋಜನೆ ಮಾಡುತ್ತಾರೆ. ಬಳಿಕ ಅದ್ದೂರಿಯಾಗಿ ಗಣೇಶ ವಿಸರ್ಜನೆ ಮಾಡುತ್ತಾರೆ. ಗಣೇಶೋತ್ಸವ ವೇಳೆ ದೇಶಾದ್ಯಂತ ಹಿಂದೂ-ಮುಸ್ಲಿಂ ಪರಸ್ಪರ ಹೊಡೆದಾಡಿಕೊಳ್ಳುವ ದುರಿತ ಕಾಲದಲ್ಲಿ ಹನುಮಸಾಗರ ಮುಸ್ಲಿಂ ಸಮುದಾಯ ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಂದೇಶ ನೀಡಿದ್ದಾರೆ.
ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ; ಅವಕಾಶ ಕೋರಿ ನಾಳೆ ನಾಗರೀಕ ಒಕ್ಕೂಟದಿಂದ ಹೈಕೋರ್ಟ್‌ಗೆ ಅರ್ಜಿ
ಭಾವೈಕ್ಯತೆಗೆ ಸಾಕ್ಷಿ ಈ ಗೆಳೆಯ
ಕೊಪ್ಪಳ ಜಿಲ್ಲೆಯ ದೇವರಾಜು ಅರಸು ಕಾಲೋನಿಯ ಹಿಂದೂ-ಮುಸ್ಲಿಂ ಸಮುದಾಯದ ಈ ಗೆಳೆಯರು ಭಾವೈಕ್ಯತೆಗೆ ಸಾಕ್ಷಿಯಂತಿದ್ದಾರೆ. ಪಿಯುಸಿ ಕಾಲದಿಂದಲೇ ಸ್ನೇಹಿತರಾಗಿರುವ ಶಿವರಾಜ ಹಾಗೂ ಶ್ಯಾಮಿದ್ ಅಲಿ ಎಂಬ ಸ್ನೇಹಿತರು. ಅಷ್ಟಕ್ಕೆ ಸೀಮಿತವಾಗಿಲ್ಲ. ಪರಸ್ಪರ ಇಬ್ಬರ ಧಾರ್ಮಿಕಗಳ ಹಬ್ಬಗಳಲ್ಲಿ ಭಾಗಿಯಾಗುತ್ತಾರೆ. ಹಿಂದೂ ಸ್ನೇಹಿತನ ಮನೆಯಲ್ಲಿ ಆಚರಿಸುವ ಗಣೇಶ ಹಬ್ಬದಲ್ಲಿ ಖುದ್ದು ಮುಸ್ಲಿಂ ಸ್ನೇಹಿತನೇ ಬಂದು ಗಣೇಶೋತ್ಸವ ತೆಗೆದುಕೊಂಡು ಹೋಗಿ ಸ್ನೇಹಿತನ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾನೆ. ಕಳೆದ ಏಳೆಂಟು ವರ್ಷಗಳಿಂದ ಪ್ರತಿ ಬಾರಿ ಗಣೇಶ ಹಬ್ಬದಲ್ಲಿ ಸ್ನೇಹಿತ ಶಿವರಾಜ ಜೊತೆಗೂಡಿ ಆಚರಿಸುತ್ತಾ ಬಂದಿದ್ದಾರೆ. ಆ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ್ದಾರೆ.