ಉತ್ತರಕನ್ನಡ: ಸಂಭ್ರಮದಿಂದ ಜರುಗಿದ ಶ್ರೀ ಮುರುಡೇಶ್ವರನ ಜಾತ್ರೆ

ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರದ ಮಾತೋಭಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ ಸಾವಿರಾರು ಭಕ್ತಾಧಿಗಳ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ಜರಗಿತು. 

Murudeshwar Fair Held in Uttara Kannada grg

ಉತ್ತರಕನ್ನಡ(ಜ.22): ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರದ ಮಾತೋಭಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ ಸಾವಿರಾರು ಭಕ್ತಾಧಿಗಳ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ಜರಗಿತು.‌ ಜನವರಿ 15ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಕ್ಷೇತ್ರದ ಮಹಾರಥೋತ್ಸವ ಸಂಪನ್ನಗೊಂಡಿತು.

ಮಹಾರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹೋಮ ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಮಧ್ಯಾಹ್ನದಿಂದ ಸಾವಿರಾರು  ಭಕ್ತಾಧಿಗಳು ರಥಕಾಣಿಕೆ ನೀಡಿ ಪೂಜೆ ಪುರಸ್ಕಾರ  ನೆರವೇರಿಸಿ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Bellary: ಹೂವಲ್ಲೇ ಅರಳಿತು ಕನಕದುರ್ಗಮ್ಮ ದೇವಾಲಯ, ಪಂಜುರ್ಲಿ ದೈವ

ಸಂಜೆ 5.30ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಾಹಾರಥವನ್ನು ದೇವಸ್ಥಾನದ ಕೆರೆಯ ಸುತ್ತ ಭಕ್ತಾಧಿಗಳ ಜಯಘೋಷದೊಂದಿಗೆ ಎಳೆಯಲಾಯಿತು. ರಥೋತ್ಸವದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ. ಶಾಸಕ ಸುನೀಲ್ ನಾಯ್ಕ್, ಮಾಜಿ ಶಾಸಕ ಮಂಕಾಳ ವೈದ್ಯ, ತಹಶೀಲ್ದಾರ ಅಶೋಕ ಭಟ್, ದೇವಸ್ಥಾನದ ಟ್ರಸ್ಟಿಗಳು, ಆನಂದ ಶೆಟ್ಟಿ, ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು. ದೂರದಿಂದ ಬಂದಿರುವ ಭಕ್ತರ ಹಿತದೃಷ್ಠಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಉತ್ತಮ ಬಂದೋಬಸ್ತ್ ನೀಡಿದ್ದರು. ಭಕ್ತರ ವಾಹನ ಪಾರ್ಕಿಂಗ್‌ಗಾಗಿ ಪೇ ಆ್ಯಂಡ್ ಪಾರ್ಕ್ ಸೌಲಭ್ಯ ಒದಗಿಸಲಾಗಿತ್ತು. 

ಜಾತ್ರೆಯ ವೇಳೆ ಭಕ್ತರ ಚೈನ್ ಎಳೆದು ಪರಾರಿಯಾಗುತ್ತಿದ್ದ ಮೂವರು ಕಳ್ಳರನ್ನು ಎರಡು ದಿನಗಳ ಅಂತರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಇನ್ನಷ್ಟು ಕಳ್ಳರ ಬಗ್ಗೆ ಮಾಹಿತಿ ಪಡೆಯಲು ಅವರನ್ನು ತ‌ನಿಖೆಗೆ ಒಳಪಡಿಸಿದ್ದಾರೆ.

Latest Videos
Follow Us:
Download App:
  • android
  • ios