ಮೊಹರಂ ಹಬ್ಬ: ಚಿಕ್ಕಮಗಳೂರಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದ್ಯೋತಕ

ಮೊಹರಂ ಎಂದ್ರೆ ಬಹುತೇಕ ಮುಸ್ಲೀಂರ ಪವಿತ್ರ ಹಬ್ಬ ಎಂದೇ ಪರಿಗಣಿಸಲಾಗುವುದು, ಆದ್ರೆ ಚಿಕ್ಕಮಗಳೂರಿನ ಹಿಂದೂ ಕುಟುಂಬವೊಂದರ ಮನೆಯಲ್ಲಿ ಇದನ್ನು ಶ್ರದ್ಧಾಭಕ್ತಿಯಿಂದ ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. 

muharram celebrations in chikkamagaluru district gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.28): ಮೊಹರಂ ಎಂದ್ರೆ ಬಹುತೇಕ ಮುಸ್ಲೀಂರ ಪವಿತ್ರ ಹಬ್ಬ ಎಂದೇ ಪರಿಗಣಿಸಲಾಗುವುದು, ಆದ್ರೆ ಚಿಕ್ಕಮಗಳೂರಿನ ಹಿಂದೂ ಕುಟುಂಬವೊಂದರ ಮನೆಯಲ್ಲಿ ಇದನ್ನು ಶ್ರದ್ಧಾಭಕ್ತಿಯಿಂದ ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಮುಸ್ಲೀಂರು ಕೂಡ ಮೊಹರಂ ಹಬ್ಬದ ವೇಳೆ ಇವರ ಮನೆಗೆ ಬಂದು ಪೂಜೆ ಸಲ್ಲಿಸುತ್ತಿರುವುದು ಭಾವೈಕ್ಯತೆಯ ದ್ಯೋತಕವಾಗಿದೆ.

ಮೊಹರಂ ಹಬ್ಬ ಬಂತೆಂದ್ರೆ ಸಂಭ್ರಮ: ಚಿಕ್ಕಮಗಳೂರು ನಗರದ ಬಸವನಹಳ್ಳಿ ಬಡಾವಣೆಯಲ್ಲಿರುವ ಕೇಶವಮೂರ್ತಿ  ಎಂಬುವರ ಮನೆಯಲ್ಲಿ ಮೊಹರಂ ಹಬ್ಬ ಬಂತೆಂದ್ರೆ ಹಿಂದೂ-ಮುಸ್ಲೀಂರಿಗೆ ಸಂಭ್ರಮ ಹಾಗೂ ಶ್ರದ್ದಾಭಕ್ತಿಯ ಕೇಂದ್ರವಾಗಿಬಿಡುತ್ತದೆ. ಏಕೆಂದ್ರೆ ಇವರ ಮನೆಯಲ್ಲಿ ಪ್ರತಿಷ್ಟಾಪಿಸಲಾಗುವ ಮುಸ್ಲೀಂರ ನಂಬಿಕೆಗೆ ಅನುಗುಣವಾಗಿರುವ ಐದು ದೇವರುಗಳೆಂದ್ರೆ ಪೂಜಿಸಲ್ಪಡುವ ಹಂಟರ್ ಬಾಬಾ, ಮೌಲಾಲಿ, ಕಟಾರ್, ಇಮಾಮಿಕಾಸಿಮ್, ಝುಲ್ಪಿಕರ್, ಸಂದಲ್ ಗಳಿಗೆ ನಮನ ಸಲ್ಲಿಸಲಾಗುವುದು. ಐದು ದಿನಗಳ ಕಾಲ ಇವುಗಳನ್ನು ಇರಿಸಿ ಮುಸ್ಲೀಂ ಪದ್ಧತಿ ಅನುಸಾರವಾಗಿ ಪೂಜೆ ಸಲ್ಲಿಸಲಾಗುವುದು. ಹಿಂದೂಗಳು ಮತ್ತು ಮುಸ್ಲೀಂರು ತಮ್ಮದೇ ಆದ ರೀತಿಯಲ್ಲಿ ಇಲ್ಲಿ ನಮನ ಸಲ್ಲಿಸಿ ಪೂಜಿಸುತ್ತಾರೆ ಎಂದು ಹೇಳುತ್ತಾರೆ ಸೈಯದ್ ಹಫೀಜ್

ಕೆಜೆ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳನ್ನು ಅಮಾಯಕರೆಂದು ಪರಿಗಣಿಸುವುದು ಅಪಾಯಕಾರಿ: ಸಿ.ಟಿ.ರವಿ

ನಾಳೆ ನಗರದಲ್ಲಿ ಮೆರವಣಿಗೆ: 80 ವಷರ್ಗಳಿಂದ ಹಿಂದೂ ಕುಟುಂಬವೊಂದು ಮುಸ್ಲೀಂ ದೇವರುಗಳನ್ನು ಸದ್ದಿಲ್ಲದೆ ಪೂಜಿಸಿ ಕೊಂಡು ಬರುತ್ತಿದೆ. ಕೇಶವಮೂರ್ತಿ ಅವರ ತಾತ, ಅಜ್ಜಿ ಎಚ್. ಆಂಜನಪ್ಪ ಮತ್ತು ರಾಮ ಮುನಿಯಮ್ಮ ಅವರಿಗೆ ಮಕ್ಕಳಿಲ್ಲದ್ದ ವೇಳೆ ಮೊಹರಂ ಹಬ್ಬದಲ್ಲಿ ಮುಸ್ಲೀಂ ದೇವರುಗಳಿಗೆ ಹರಕೆ ಕಟ್ಟಿಕೊಂಡಿದ್ದರಂತೆ. ಬೇಡಿಕೆ ಈಡೇರಿದ ನಂತರ ಆ ದೇವರುಗಳನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ವಿಧಿವಿಧಾನದಂತೆ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. 

ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ: ಸಚಿವ ಶಿವರಾಜ ತಂಗಡಗಿ

ಮೊಹರಂ ಕಡೆ ದಿನವಾದ (ನಾಳೆ) ಚಿಕ್ಕಮಗಳೂರು ನಗರದಲ್ಲಿ ಸಾಗುವ ಬೃಹತ್ ಮೆರವಣಿಗೆಯಲ್ಲಿ ಈ ದೇವರುಗಳನ್ನೂ ತೆಗೆದುಕೊಂಡು ಹೋಗಲಾಗುವುದು. ಆನಂತರ ಮನೆಯಲ್ಲಿ ಜೋಪಾನವಾಗಿ ಪೆಟ್ಟಿಗೆಯಲ್ಲಿಟ್ಟು ರಕ್ಷಿಸಲಾಗುವುದು ಎಂದು ಮನೆ ಮಾಲೀಕರಾದ ಕೇಶವಮೂರ್ತಿ ತಿಳಿಸಿದರು. ಒಟ್ಟಾರೆ ಚಿಕ್ಕಮಗಳೂರು ನಗರದಲ್ಲಿ ಒಂದು ಯಾವ್ದೆ ಪ್ರಚಾರವಿಲ್ಲದೆ ಭಾವೈಕ್ಯತೆಯ ಸಂಕೇತವೆಂಬಂತೆ ಕೇಶವಮೂರ್ತಿಮತ್ತು ಸೈಯದ್ ಹಫೀಜ್ ಕುಟುಂಬ ಅನೂಚಾನವಾಗಿ 80 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.

Latest Videos
Follow Us:
Download App:
  • android
  • ios