Asianet Suvarna News Asianet Suvarna News

ಗಂಗಾವತಿ: ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ, 1 ಲಕ್ಷಕ್ಕೂ ಅಧಿಕ ಭಕ್ತರು ಭಾಗಿ..!

ಬೆಳಿಗ್ಗೆ 3 ಗಂಟೆಯಿಂದ ಭಕ್ತರು ಮೆಟ್ಟಿಲು ಮೂಲಕ ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಜೈ ಕಾರ ಹಾಕುತ್ತ ತೆರಳಿ ಹನುಮಮಾಲೆ ವಿಸರ್ಜಿಸಿದರು.  ಹನುಮದ್ ವೃತ ಅಂಗವಾಗಿ  ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ, ನೈವಿದ್ಯ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಆವರಣದಲ್ಲಿ ಪವಮಾನ ಹೋಮ ಜರುಗಿತು.

More than 1 lakh Devotees Visited to Anjanadri Hills at Gangavathi in Koppal grg
Author
First Published Dec 24, 2023, 8:05 PM IST

ರಾಮಮೂರ್ತಿ ನವಲಿ

ಗಂಗಾವತಿ(ಡಿ.24): ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹನುಮ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟಕ್ಕೆ  ವಿವಿಧ ರಾಜ್ಯಗಳಿಂದ ಒಂದು ಲಕ್ಷಕ್ಕು ಅಧಿಕ ಆಗಮಿಸಿ ಹನುಮಮಾಲೆ ವಿಸರ್ಜಿಸಿದರು. ಕಳೆದ ಮೂರು ದಿನಗಳಿಂದ ಆಗಮಿಸಿದ ಭಕ್ತರಿಗೆ ಜಿಲ್ಲಾಡಳಿತ ಮೂಲಭೂತ ಸೌಕರ್ಯಗಳು ಕಲ್ಪಿಸಿದ್ದರು.

ಬೆಳಿಗ್ಗೆ 3 ಗಂಟೆಯಿಂದ ಭಕ್ತರು ಮೆಟ್ಟಿಲು ಮೂಲಕ ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಜೈ ಕಾರ ಹಾಕುತ್ತ ತೆರಳಿ ಹನುಮಮಾಲೆ ವಿಸರ್ಜಿಸಿದರು.  ಹನುಮದ್ ವೃತ ಅಂಗವಾಗಿ  ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ, ನೈವಿದ್ಯ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.  ದೇವಸ್ಥಾನದ ಆವರಣದಲ್ಲಿ ಪವಮಾನ ಹೋಮ ಜರುಗಿತು.

ರಾಮಮಂದಿರ ಉದ್ಘಾಟನೆಗೆ ಸೀತೆಯ ತವರು ನೇಪಾಳದಿಂದ ಬರ್ತಿರೋ ಉಡುಗೊರೆಗಳ ವಿವರ ಇಲ್ಲಿದೆ..

ಪ್ರಸಾದ ವಿತರಣೆ

ಅಂಜನಾದ್ರಿಗೆ ಆಗಮಿಸಿದ್ಧ ಭಕ್ತರಿಗೆ ಬೆಟ್ಟದ ಹಿಂಬಾಗದಲ್ಲಿರುವ ವೇಧ ಪಾಠ ಶಾಲೆಯಲ್ಲಿ   ಪ್ರಸಾದದ ವ್ಯವಸ್ಥೆ ಕೈಗೊಳ್ಳಲಾಗಿತ್ತು.  ಮೂರು ದಿನಗಳ ಕಾಲವು ಪ್ರಸಾದ ವ್ಯವಸ್ತೆಯನ್ನು ತಾಲೂಕ ಆಡಳಿತ ಕೈಗೊಂಡಿದ್ದು,  ಕುಡಿಯುವ ನೀರಿನ ವ್ಯವಸ್ಥೆ, ಸ್ನಾನ, ಶೌಚಾಲಯ,  ಮತ್ತು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಬಿಗಿ ಭದ್ರತೆ

ಕಳೆದ ಮೂರು ದಿನಗಳಿಂದ ಅಂಜನಾದ್ರಿಯಲ್ಲಿ ನಡೆಯುತ್ತಿರುವ ಹನುಮಮಾಲಾ ವಿಸರ್ಜನೆಗೆ ಪೊಲೀಸ್ ಬಿಗಿ ಬದ್ರತೆ ವಹಿಸಲಾಗಿತ್ತು.  ಬರುವ ಭಕ್ತರಿಗೆ  ಸಂಚಾರ ವ್ಯವಸ್ತೆ ಪಾರ್ಕೀಂಗ್, ಮತ್ತು ಜಾಗೃತಿ ವಹಿಸುವಂತೆ ಸೂಚಿಸಿದ್ದರು.

ಪ್ರಮುಖರ ಆಗಮನ

ಅಂಜನಾದ್ರಿ ಬೆಟ್ಟಕ್ಕೆ ಸಚಿವ ಶಿವರಾಜ ತಂಗಡಗಿ, ಸಂಸದ ಕರಡಿ ಸಂಗಣ್ಣ,   ಗಾಲಿ ಜನಾರ್ಧನ ರೆಡ್ಡಿ,  ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಸ್ವಾಮಿ, ಸಂತೋಷ ಕೆಲೋಜಿ, ಬಜರಂಗ ದಳದ ಪ್ರಮುಖರಾದ  ಸೂರ್ಯನಾರಾಯಣ,  ಶಂಕರ ನಾಯ್ಕರ್,  ಪುಂಡಲೀಕ ದಳವಾಯಿ,  ಸುಭಾಸ್, ಜಿಲ್ಲಾದಿಕಾರಿ ನಳಿನ್ ಅತೂಲ್, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ  ಯಶೋಧ ವಂಟಿಗೋಡಿ, ಸಹಾಯಕ ಆಯುಕ್ತ  ಕ್ಯಾ.ಮಹೇಶ ಮಾಲಗಿತ್ತಿ,  ದೇವಸ್ಥಾನದ  ಆಡಾಳಿತಾದಿಕಾರಿ  ಅರವಿಂದ ಸುತುಗುಂಡಿ, ತಹಸೀಲ್ದಾರ ವಿಶ್ವನಾಥ ಮುರುಡಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios