Asianet Suvarna News Asianet Suvarna News

ರಾಮಮಂದಿರ ಉದ್ಘಾಟನೆಗೆ ಸೀತೆಯ ತವರು ನೇಪಾಳದಿಂದ ಬರ್ತಿರೋ ಉಡುಗೊರೆಗಳ ವಿವರ ಇಲ್ಲಿದೆ..

ನೇಪಾಳವು ವಿವಿಧ ರೀತಿಯ ಆಭರಣ, ಪಾತ್ರೆ, ಬಟ್ಟೆ ಮತ್ತು ಸಿಹಿತಿಂಡಿ ಸೇರಿದಂತೆ ವಿಶೇಷ ಉಡುಗೊರೆಗಳನ್ನು ಕಳುಹಿಸಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

nepal to send jewels clothes sweets for ayodhya ram mandir consecration ash
Author
First Published Dec 24, 2023, 7:34 PM IST

ಅಯೋಧ್ಯೆ (ಡಿಸೆಂಬರ್ 24, 2023): ಮುಂದಿನ ತಿಂಗಳು ಉತ್ತರ ಪ್ರದೇಶದ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯಾಗ್ತಿದೆ. ಈ ಹಿನ್ನೆಲೆ ಸೀತೆಯ ತವರು ನೇಪಾಳವು ವಿವಿಧ ರೀತಿಯ ಉಡುಗೊರೆಗಳನ್ನು ಕಳಿಸಿಕೊಡಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. 

ನೇಪಾಳವು ವಿವಿಧ ರೀತಿಯ ಆಭರಣ, ಪಾತ್ರೆ, ಬಟ್ಟೆ ಮತ್ತು ಸಿಹಿತಿಂಡಿ ಸೇರಿದಂತೆ ವಿಶೇಷ ಉಡುಗೊರೆಗಳನ್ನು ಕಳುಹಿಸಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಈ ಉಡುಗೊರೆಗಳನ್ನು ತಲುಪಿಸಲು ಜನಕಪುರಧಾಮ - ಅಯೋಧ್ಯಧಾಮ ಪ್ರಯಾಣ ಕೈಗೊಳ್ಳಲಾಗುವುದು ಎಂದು ನೇಪಾಳದ My Republica ಪತ್ರಿಕೆ ವರದಿ ಮಾಡಿದೆ.

ಇದನ್ನು ಓದಿ: ಬೆಂಗಳೂರಿಗೆ 2 ಸೇರಿ 5 ವಂದೇ ಭಾರತ್, 2 ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಡಿ. 30 ರಂದು ಹಸಿರು ನಿಶಾನೆ

ಜನವರಿ 18 ರಂದು ಪ್ರಾರಂಭವಾಗುವ ಪ್ರಯಾಣವು ಜನವರಿ 20 ರಂದು ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ ಮತ್ತು ಅದೇ ದಿನ ಉಡುಗೊರೆಗಳನ್ನು ಶ್ರೀ ರಾಮ ಜನ್ಮಭೂಮಿ ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಜಾನಕಿ ದೇವಸ್ಥಾನದ ಜಂಟಿ ಮಹಂತ ರಾಮರೋಷನ್ ದಾಸ್ ವೈಷ್ಣವ್ ತಿಳಿಸಿದ್ದಾರೆ. ಜನವರಿ 22 ರಂದು ಅಯೋಧ್ಯೆಯ ಮಹಾಮಸ್ತಕಾಭಿಷೇಕ ನಡೆಯಲಿದೆ.

ಜನಕ್‌ಪುರಧಾಮ್‌ನಿಂದ ಜಲೇಶ್ವರ ನಾಥ್, ಮಲಂಗ್ವಾ, ಸಿಮ್ರೌಂಗಧ್, ಗಧಿಮಾಯಿ, ಬಿರ್‌ಗುಂಜ್ ಮೂಲಕ ಬೇಟಿಯಾ, ಖುಶಿನಗರ, ಸಿದ್ಧಾರ್ಥನಗರ, ಗೋರಖ್‌ಪುರ ಮಾರ್ಗವಾಗಿ ಉತ್ತರ ಪ್ರದೇಶದ ಅಯೋಧ್ಯೆ ತಲುಪಲಿದೆ. ಇದಕ್ಕೂ ಮುನ್ನ ನೇಪಾಳದ ಕಾಳಿಗಂಡಕಿ ನದಿ ದಡದಿಂದ ಸಂಗ್ರಹಿಸಿದ ಶಾಲಿಗ್ರಾಮ ಕಲ್ಲುಗಳನ್ನು ಅಯೋಧ್ಯೆಗೆ ಈಗಾಗಲೇ ಕಳಿಸಲಾಗಿದೆ. ಈ ಕಲ್ಲುಗಳಿಂದ ಮಾಡಿದ ಶ್ರೀರಾಮನ ಪ್ರತಿಮೆಯನ್ನು ಉದ್ಘಾಟನೆಯ ದಿನದಂದು ದೇವಾಲಯದಲ್ಲಿ ಸ್ಥಾಪಿಸಲಾಗುವುದು ಎಂದೂ ಪತ್ರಿಕೆ ತಿಳಿಸಿದೆ.

ಇದನ್ನು ಓದಿ: ಅಯೋಧ್ಯೆ ರಾಮನ ವಿಗ್ರಹ ಜನವರಿ ಮೊದಲ ವಾರದಲ್ಲಿ ಅಂತಿಮ: ಆಯ್ಕೆಯಾಗುತ್ತಾ ಕನ್ನಡಿಗರು ಕೆತ್ತಿರೋ ವಿಗ್ರಹ?

ಅಯೋಧ್ಯೆ ರಾಮನ ವಿಗ್ರಹ ಜನವರಿ ಮೊದಲ ವಾರದಲ್ಲಿ ಅಂತಿಮ: ಆಯ್ಕೆಯಾಗುತ್ತಾ ಕನ್ನಡಿಗರು ಕೆತ್ತಿರೋ ವಿಗ್ರಹ?
ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಜನವರಿ 22ರಂದು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿರುವ ರಾಮನ ವಿಗ್ರಹ ಕುರಿತು ಜನವರಿ ಮೊದಲ ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ‘ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌’ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಹಾಲಿ ಮೂರು ವಿಗ್ರಹಗಳನ್ನು ಕೆತ್ತಲಾಗುತ್ತಿದೆ. ಈ ಪೈಕಿ ಗರ್ಭಗುಡಿಯಲ್ಲಿ ಕೂರಿಸುವ ಬಾಲರಾಮನ ವಿಗ್ರಹ ಯಾವುದಾಗಿರಲಿದೆ ಎಂಬುದನ್ನು ಉನ್ನತ ಮಟ್ಟದ ಸಮಿತಿ, ಜನವರಿ ಮೊದಲ ವಾರದಲ್ಲಿ ಸಭೆ ಸೇರಿ ನಿರ್ಧರಿಸಲಿದೆ ಎಂದು ಚಂಪತ್‌ ರಾಯ್‌ ಮಾಹಿತಿ ನೀಡಿದ್ದಾರೆ.

ಅಯೋಧ್ಯೆ ಹೋರಾಟ ಕುರಿತ ಚಿತ್ರ ‘695’ ಜನವರಿ 19 ರಂದು ತೆರೆಗೆ: ರಾಮಾಯಣ ಖ್ಯಾತಿಯ ಅರುಣ್‌ ಗೋವಿಲ್‌ ನಟನೆ

Follow Us:
Download App:
  • android
  • ios