Asianet Suvarna News Asianet Suvarna News

Vastu Tips : ಕಚೇರಿಯಲ್ಲಿಈ ವಸ್ತುಗಳನ್ನಿಟ್ಟರೆ ಉತ್ತರೋತ್ತರ ಏಳಿಗೆ ಆಗೋದು ಗ್ಯಾರಂಟಿ

ವ್ಯಾಪಾರದಲ್ಲಿ ಲಾಭವಾಗ್ತಿಲ್ಲ, ಕೈ ಹಿಡಿದ ಕೆಲಸದಲ್ಲಿ ಪ್ರಗತಿಯಾಗ್ತಿಲ್ಲ ಎನ್ನುವವರು ಚಿಂತಿಸಬೇಕಾಗಿಲ್ಲ. ಕೆಲ ಸರಳ ಉಪಾಯಗಳು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಅದ್ರಲ್ಲಿ ಚಿನ್ನದ ನಾಣ್ಯಗಳಿಂದ ಮಾಡಿದ ಹಡಗು ಕೂಡ ಸೇರಿದೆ.
 

Office Vastu Tips
Author
First Published Nov 1, 2022, 3:40 PM IST

ಜೀವನದಲ್ಲಿ ಯಶಸ್ಸು ಗಳಿಸ್ಬೇಕು, ವ್ಯವಹಾರದಲ್ಲಿ ಪ್ರಗತಿ ಸಾಧಿಸಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಹಗಲಿರುಳು ದುಡಿದ್ರೂ ವ್ಯವಹಾರದಲ್ಲಿ ಯಶಸ್ಸು ಸಿಗೋದಿಲ್ಲ. ಲಾಭ ಗಳಿಸಲು ಸಾಧ್ಯವಾಗೋದಿಲ್ಲ. ಕೈಗೆ ಬಂದ ಹಣ ಕೆಲವೇ ದಿನಗಳಲ್ಲಿ ಖರ್ಚಾಗಿರುತ್ತದೆ. ಅನೇಕ ನಷ್ಟಗಳನ್ನು ಪದೇ ಪದೇ ಅನುಭವಿಸಬೇಕಾಗುತ್ತದೆ. ಎಷ್ಟೇ ದುಡಿದ್ರೂ ಆರ್ಥಿಕ ಸ್ಥಿತಿ ಸುಧಾರಿಸಿಲ್ಲವೆಂದ್ರೆ ಅದಕ್ಕೆ ಕಚೇರಿ ಅಥವಾ ವ್ಯವಹಾರ ಸ್ಥಳದ ವಾಸ್ತುದೋಷವೂ ಕಾರಣವಾಗಿರುತ್ತದೆ. ವಾಸ್ತು ದೋಷವನ್ನು ಬಗೆಹರಿಸುವ ಪ್ರಯತ್ನ ನಡೆಸಬೇಕು. ಇದಕ್ಕೆ ಕಚೇರಿ ಬದಲಿಸಬೇಕಾಗಿಲ್ಲ ಇಲ್ಲವೆ ಕಟ್ಟಡ ಕೆಡವಬೇಕಾಗಿಲ್ಲ. ಕೆಲವೊಂದು ಸಣ್ಣ ಮಾರ್ಗದ ಮೂಲಕ ನಿಮ್ಮ ದಾರಿಯನ್ನು ಸುಗಮಗೊಳಿಸಬಹುದು. ಅದೃಷ್ಟ ಒಲಿದು ಬರುವಂತೆ ಮಾಡಬಹುದು. ನಾವಿಂದು ನಿಮ್ಮ ವ್ಯಾಪಾರದಲ್ಲಿ ಏಳ್ಗೆ ಪಡೆಯಲು ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.

ವ್ಯಾಪಾರ (Business) ದಲ್ಲಿ ಲಾಭಗಳಿಸಬೇಕೆಂದ್ರೆ ಚಿನ್ನ (Gold) ದ ನಾಣ್ಯ (Coin) ಗಳಿಂದ ಮಾಡಿದ ಸಮುದ್ರ ಹಡಗನ್ನು ನೀವು ಕಚೇರಿಯಲ್ಲಿ ಇಡಬೇಕು. ಫೆಂಗ್ ಶೂಯಿ (Feng Shui) ಯಲ್ಲಿ, ಚಿನ್ನದ ನಾಣ್ಯಗಳನ್ನು ಸಾಗಿಸುವ ಹಡಗನ್ನು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಚೇರಿ (Office) ಯ ಯಾವ ಸ್ಥಳದಲ್ಲಿ ಇಡಬೇಕು ಹಾಗೆ ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ತಿಳಿಯೋದು ಕೂಡ ಮುಖ್ಯ.  

ಚಿನ್ನದ ನಾಣ್ಯದಿಂದ ಮಾಡಿದ ಹಡಗು ಅದೃಷ್ಟದ ಸಂಕೇತ : ಫೆಂಗ್ ಶೂಯಿ ಗ್ರಂಥದಲ್ಲಿ, ಚಿನ್ನದ ನಾಣ್ಯಗಳಿಂದ ಮಾಡಿದ ಹಡಗನ್ನು ಯಶಸ್ಸು, ಪ್ರಗತಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವ್ಯವಹಾರದ ಸ್ಥಳದಲ್ಲಿ ಇದನ್ನು ಇಟ್ಟುಕೊಳ್ಳುವುದು ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ. ಈ ಹಡಗನ್ನು ಕಚೇರಿಯಲ್ಲಿ ಇಡುವುದರಿಂದ ವ್ಯಾಪಾರದಲ್ಲಿ ಯಶಸ್ಸು ಕಾಣಬಹುದು. ಉದ್ಯೋಗದಲ್ಲಿ ಬಡ್ತಿ ಪಡೆಯಲು ಚಿನ್ನದ ನಾಣ್ಯದ ಹಡಗನ್ನು ಇಡಬೇಕು. ಒಬ್ಬ ವ್ಯಕ್ತಿಯು ಜೀವನದಲ್ಲಿ ಪ್ರಗತಿ ಸಾಧಿಸಬೇಕೆಂದ್ರೆ ಈ ಹಡಗನ್ನು ಕಚೇರಿಯಲ್ಲಿ ಇಡಬೇಕು. ಚಿನ್ನದ ನಾಣ್ಯಗಳಿಂದ ಮಾಡಿದ ಹಡಗಿರುವ ಜಾಗದಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವ ಜೊತೆಗೆ ದೇವಾನುದೇವತೆಗಳ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.  

VASTU TIPS: ಎದುರಾಗುವ ಅಪಾಯವನ್ನು ಮುಂಚಿತವಾಗಿ ತಿಳಿಸುತ್ತೆ ತುಳಸಿ!

ಇಲ್ಲಿ ಇರಲಿ ಚಿನ್ನದ ನಾಣ್ಯದಿಂದ ಮಾಡಿದ ಹಡಗು : ಫೆಂಗ್ ಶೂಯಿ ಪ್ರಕಾರ ಚಿನ್ನದ ನಾಣ್ಯಗಳಿಂದ ಮಾಡಿದ ಈ ಹಡಗನ್ನು ಕಚೇರಿಯ ಮೇಜಿನ ಮೇಲೆ ಇಡಬೇಕು. ಹಡಗಿನ ದಿಕ್ಕು ಹೊರಗಿನಿಂದ ಒಳಕ್ಕೆ ಬರುವಂತೆ ಇರಬೇಕು ಎಂದು ಹೇಳಲಾಗುತ್ತದೆ.

ಮನೆಯಲ್ಲೂ ಇಡಿ ಈ ಚಿನ್ನದ ಹಡಗು :  ಚಿನ್ನದ ನಾಣ್ಯಗಳಿಂದ ಮಾಡಿದ ಈ ಹಡಗನ್ನು ನೀವು ಮನೆಯಲ್ಲಿ ಕೂಡ ಇಡಬಹುದು. ಇದು  ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಧನಾತ್ಮಕ ಶಕ್ತಿ ಹರಿವಿಗೆ ನೆರವಾಗುತ್ತದೆ.  

ಮನೆ ಅಥವಾ ಕಚೇರಿಯ ಈ ಜಾಗದಲ್ಲಿ ಹಡಗನ್ನು ಇಡಬೇಡಿ : ಚಿನ್ನದ ನಾಣ್ಯಗಳಿಂದ ಮಾಡಿದ ಹಡಗನ್ನು ಕಚೇರಿಯ ಮುಖ್ಯ ಗೇಟಿನ ಮುಂದೆ ಇಡಬಾರದು.  ಎಲ್ಲಾ ಸಂಪತ್ತು ಮನೆ ಬಾಗಿಲಿನಿಂದ  ಹೊರಗೆ ಹೋಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಅದನ್ನು ಎಂದಿಗೂ ಮುಖ್ಯ ದ್ವಾರದಲ್ಲಿ ಇಡಬೇಡಿ.ಮಾರುಕಟ್ಟೆಯಲ್ಲಿ ಚಿನ್ನದ ನಾಣ್ಯಗಳಿಂದ ತುಂಬಿದ ಅನೇಕ ರೀತಿಯ ಹಡಗುಗಳು ಲಭ್ಯವಿದೆ. ಅದನ್ನು ನೀವು ಖರೀದಿಸಿ ತರಬಹುದು. ಇಲ್ಲವೆ ನೀವೇ ಮನೆಯಲ್ಲಿ ಇದನ್ನು ಮಾಡಬಹುದು. ಇದಕ್ಕೆ ಸಾಮಾನ್ಯ ನೀರು ಹಾಕುವ ಚಿಕ್ಕ ಹಡಗನ್ನು ಖರೀದಿಸಿ. ಅದಕ್ಕೆ ನಕಲಿ ಹಾಗೂ ನಿಜವಾದ ನಾಣ್ಯಗಳನ್ನು ತುಂಬಿಸಿ. ಅದನ್ನು ಕಚೇರಿ ಸ್ಥಳದಲ್ಲಿ ಇಡಿ.  

ಈ ರಾಶಿಗಳಲ್ಲಿ ನಕಾರಾತ್ಮಕತೆ ಹೆಚ್ಚು.. ಜೊತೆ ಏಗೋದು ಕಷ್ಟನಪ್ಪಾ!

ಹಾಗೆಯೇ ಟೈಟಾನಿಕ್ ಸೇರಿದಂತೆ ಮುಳುಗುವ ಹಡಗಿನ ಯಾವುದೇ ಪ್ರತಿಮೆಯನ್ನು ಕಚೇರಿಯಲ್ಲಿ ಇಡಬಾರದು. ಯಾಕೆಂದ್ರೆ ಟೈಟಾನಿಕ್ ಹಡಗಿನಂತೆ ನಿಮ್ಮ ವ್ಯಾಪಾರ ಕೂಡ ಮುಳುಗುವ ಸಾಧ್ಯತೆಯಿರುತ್ತದೆ.
 

Follow Us:
Download App:
  • android
  • ios