ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಜೀವನ ನಿರ್ವಹಣೆ ಹೇಗಿರಬೇಕೆಂಬ ಬಗ್ಗೆ ಸಾಕಷ್ಟು ನೀತಿಪಾಠಗಳನ್ನು ಕಾಣಬಹುದು. ಅದರಂತೆ ಈ ಕೆಲ ರೀತಿಯಿಂದ ಸಂಪಾದಿಸುವ ಹಣ ನಮ್ಮನ್ನು ಶ್ರೀಮಂತರಾಗಿಸುವ ಬದಲು ಬಡವರಾಗಿಸುತ್ತದೆ.
ರಾಮಾಯಣ, ಮಹಾಭಾರತ ಸೇರಿದಂತೆ ಇತರ ಧಾರ್ಮಿಕ ಗ್ರಂಥಗಳಲ್ಲಿ ಹಣ ಸಂಪಾದನೆ, ಜೀವನ ನಿರ್ವಹಣೆಯ ಕುರಿತು ಸಾಕಷ್ಟು ನೀತಿಪಾಠಗಳಿವೆ. ಹೇಗೆ ಬದುಕಬೇಕು, ಹೇಗೆ ಗಳಿಸಬೇಕು, ಹೇಗಿರಬೇಕು, ಹೇಗಿರಬಾರದು ಎಲ್ಲವನ್ನೂ ಉದಾಹರಣೆ ಸಮೇತ ಕಾಣಬಹುದು. ಅಂಥದರಲ್ಲೊಂದು ವಿದುರ ನೀತಿ.
ವಿದುರ ನೀತಿ(Vidur niti)ಯು ಮಹಾಭಾರತದ ಒಂದು ವಿಶೇಷ ಭಾಗವಾಗಿದೆ. ಮಹಾಭಾರತ ಯುದ್ಧ ಪ್ರಾರಂಭವಾಗುವ ಮೊದಲು, ಮಹಾತ್ಮ ವಿದುರನು ರಾಜ ಧೃತರಾಷ್ಟ್ರನಿಗೆ ನಡೆಯುತ್ತಿರುವ ವಿದ್ಯಮಾನಗಳನ್ನು ವಿವರಿಸುತ್ತಾನೆ. ಸಾಮ-ದಮ-ದಂಡ-ಭೇದದ ಕುರಿತ ಈ ಸಂಭಾಷಣೆಯನ್ನು ವಿದುರ ನೀತಿ ಎಂದು ಕರೆಯಲಾಗುತ್ತದೆ. ಈ ವಿಷಯಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿವೆ. ಯಾವುದೇ ವ್ಯಕ್ತಿಯು ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅವನು ಜೀವನದಲ್ಲಿ ಎಲ್ಲ ಯಶಸ್ಸು ಮತ್ತು ಸಂತೋಷವನ್ನು ಪಡೆಯಬಹುದು. ಇಂದು ನಾವು ನಿಮಗೆ ವಿದುರ ನೀತಿಯ ಅಡಿಯಲ್ಲಿ ಹೇಗೆ ದುಡಿದ ಹಣ(money)ವು ನಮ್ಮನ್ನು ಬಡವಾಗಿಸುತ್ತದೆ ಎಂಬುದನ್ನು ತಿಳಿಸುತ್ತೇವೆ.
ಶ್ಲೋಕ(Shloka)
ಅತಿಕ್ಲಾಶೇನ್ ಯರ್ಥಃ ಸ್ಯುರ್ಧರ್ಮಸ್ಯತಿಕ್ರಮೇನ್ ವಾ
ಅರೇವ ಪ್ರಣಿಪತೇನ್ ಮಾ ಸ್ಮೇ ತೇಷಾ ಮನ: ಕೃತಃ
ಈ ಶ್ಲೋಕದ ಅರ್ಥ ಇಂತಿದೆ- ವಿವಾದದ ನಂತರ, ತಪ್ಪು ಕೆಲಸಗಳನ್ನು ಮಾಡುವುದರಿಂದ ಅಥವಾ ಶತ್ರುಗಳಿಗೆ ನಮಸ್ಕರಿಸುವುದರಿಂದ ಪಡೆದ ಹಣದಿಂದ ಯಾವುದೇ ಪ್ರಯೋಜನವಿಲ್ಲ. ಹೀಗೆ ಸಂಪಾದಿಸಿದ ಸಂಪತ್ತನ್ನು ಇಟ್ಟುಕೊಂಡವನು ಕ್ರಮೇಣ ಬಡವನಾಗುತ್ತಾನೆ.
ವಿವಾದದಿಂದ ಗಳಿಸಿದ ಹಣ
ನೀವು ಯಾವುದೋ ವಿವಾದದಿಂದ ಅಥವಾ ಯಾರನ್ನಾದರೂ ಅತೃಪ್ತರನ್ನಾಗಿ ಮಾಡುವ ಮೂಲಕ ಹಣವನ್ನು ಗಳಿಸುತ್ತಿದ್ದರೆ, ಅಂತಹ ಹಣವು ನಿಮಗೆ ಮಾತ್ರವಲ್ಲದೆ ನಿಮ್ಮ ಇಡೀ ಕುಟುಂಬದ ದುಃಖಕ್ಕೆ ಕಾರಣವಾಗಬಹುದು. ಯಾರನ್ನಾದರೂ ಅತೃಪ್ತಿಗೊಳಿಸುವುದರಿಂದ ಅಥವಾ ವಿವಾದದಲ್ಲಿ ಗಳಿಸಿದ ಹಣವು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಟ್ಟ ರೀತಿಯಲ್ಲಿ ಗಳಿಸಿದ್ದು, ಕೆಟ್ಟ ರೀತಿಯಲ್ಲಿ ಅನುಭವಿಸುವಂತೆ ಮಾಡುತ್ತದೆ. ಈ ರೀತಿಯಾಗಿ ದೊರೆತ ಹಣವು ನಮ್ಮನ್ನು ಬಡವಾಗಿಸುತ್ತದೆ.
ನೀವೂ ಸೋಮವಾರ ಹುಟ್ಟಿದ್ದಾ? ನಿಮ್ಗೆ ಈ ವೃತ್ತಿಗಳು ಬೆಸ್ಟ್
ತಪ್ಪು ಕೆಲಸ ಮಾಡಿ ಗಳಿಸಿದ ಹಣ
ನೀವು ಕೆಲವು ಅನೈತಿಕ ಅಂದರೆ ತಪ್ಪು ಕೆಲಸ ಮಾಡುವ ಮೂಲಕ ಹಣವನ್ನು ಗಳಿಸಿದರೆ, ಅಂತಹ ಹಣವು ಕುಟುಂಬಕ್ಕೆ ದುಃಖಕ್ಕೆ ಕಾರಣವಾಗಬಹುದು. ಇಲ್ಲಿ ಅನೈತಿಕ ಎಂದರೆ ಆಡಳಿತದಿಂದ ನಿಷೇಧಿಸಲ್ಪಟ್ಟ ಕೃತ್ಯಗಳು. ಕಳ್ಳತನ, ದರೋಡೆ, ವಂಚನೆ, ಸಮಾಜಬಾಹಿರ ಕೆಲಸಗಳಿಂದ ಮಾಡಿದ ಗಳಿಕೆಯು ನೀವದನ್ನು ಮನಸಾರೆ ಅನುಭವಿಸಲು ಬಿಡುವುದಿಲ್ಲ, ಅಂಥ ಹಣ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ, ಮರೆತೂ ಸಹ, ತಪ್ಪು ರೀತಿಯಲ್ಲಿ ಹಣ ಗಳಿಸುವ ಬಗ್ಗೆ ಯೋಚಿಸಬಾರದು.
ಶತ್ರುಗಳ ಮುಂದೆ ನಮಸ್ಕರಿಸಿ ಗಳಿಸಿದ ಹಣ
ಶತ್ರು(Enemy)ವಿನ ಮುಂದೆ ತಲೆ ಬಾಗಬೇಕಾದ ಕೆಲಸ ಮತ್ತು ಆ ನಂತರ ಹಣ ಸಿಕ್ಕರೆ ಮರೆಯುವ ಕೆಲಸವನ್ನೂ ಮಾಡಬಾರದು. ಶತ್ರು ಎಂದರೆ ನಿಮಗೆ ಕೆಟ್ಟದ್ದನ್ನು ಮಾಡುತ್ತಲೇ ಇರುವ ವ್ಯಕ್ತಿ. ಅಂಥವರ ಮುಂದೆ ಕೈ ಚಾಚಿಯೋ, ಅಥವಾ ಅವರೇ ಕರೆದು ಕೊಟ್ಟರೆಂದು ಪಡೆದ ಹಣವಾದರೆ ಅದು ನಿಮ್ಮ ಪ್ರತಿಷ್ಠೆಯನ್ನು ಇಳಿಸುತ್ತದೆ. ಇಂಥ ಗೌರವವಿಲ್ಲದ ಜೀವನವು ಅರ್ಥಹೀನವಾಗುತ್ತದೆ. ಅಂಥ ಹಣದಿಂದ ಜೀವನದ ಉತ್ತಮ ಸಂಗತಿಗಳನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.
ಬುಧ ಗೋಚಾರ 2022: ಈ ನಾಲ್ಕು ರಾಶಿಗಳಿಗೆ ತಪ್ಪದು ಕಂಟಕ
ನಂಬಿಕೆ ದ್ರೋಹದಿಂದ ಗಳಿಸಿದ ಹಣ
ನಿಮ್ಮನ್ನು ತುಂಬಾ ನಂಬಿ ಯಾರೋ ತಿಜೋರಿಯ ಕೀ ಕೊಡಬಹುದು. ಅಥವಾ ಅವರ ಗೂಗಲ್ ಪೇ ಪಾಸ್ವರ್ಡ್ ತಿಳಿಸಬಹುದು. ಅಂಥ ಸಂದರ್ಭದಲ್ಲಿ ಅದನ್ನು ದುರ್ಬಳಕೆ ಮಾಡಿಕೊಂಡು ತಕ್ಷಣ ಶ್ರೀಮಂತರಾಗುವ ಆಸೆಯಲ್ಲಿ ಅವರಿಗೆ ಗೊತ್ತಾಗದಂತೆ ಅಥವಾ ಗೊತ್ತಾಗುವಂತೆ ಹಣ ಮಾಡಿದರೆ, ಮತ್ಯಾರನ್ನೋ ನಂಬಿಸಿ ಅವರ ಹಣ ಲಪಟಾಯಿಸುತ್ತಿದ್ದರೆ, ಅಂಥ ಹಣದಿಂದ ನೀವು ಶ್ರೀಮಂತರಾಗುವುದು ಸಾಧ್ಯವೇ ಇಲ್ಲ. ಅದು ನಿಮ್ಮನ್ನು ಅಧಃಪತನಕ್ಕಿಳಿಸುತ್ತದೆ.
