ಮಗುವೊಂದು ಜನಿಸಿದ ಕೂಡಲೇ ಅದರ ಸಂಪೂರ್ಣ ಭವಿಷ್ಯ ನಿರ್ಧರಿತವಾಗಿರುತ್ತದೆ. ಇದಕ್ಕೆ ಮಗು ಹುಟ್ಟಿದ ದಿನ, ಸಮಯ ಎಲ್ಲವೂ ಸಂಬಂಧಿಸಿರುತ್ತವೆ. ಅಂದ ಹಾಗೆ ಸೋಮವಾರ ಹುಟ್ಟಿದವರು ಸ್ವಭಾವತಃ ಹೇಗಿರುತ್ತಾರೆ, ಅವರ ಭವಿಷ್ಯವೇನು ನೋಡೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭೂಮಿಯಲ್ಲಿ ಯಾರು ಯಾವಾಗ ಹುಟ್ಟುತ್ತಾರೋ ಅವರ ಭವಿಷ್ಯ ಆ ದಿನವೇ ನಿರ್ಧಾರವಾಗುತ್ತದೆ. ಆತ ತನ್ನ ಜೀವನದಲ್ಲಿ ಎಷ್ಟು ಓದುತ್ತಾನೆ, ಅವನು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾನೆ, ಯಾರನ್ನು ಮದುವೆಯಾಗುತ್ತಾನೆ ಮತ್ತು ಯಾವಾಗ ಸಾಯುತ್ತಾನೆ, ಇವೆಲ್ಲವೂ ಮುಂಚೆಯೇ ನಿರ್ಧರಿತವಾಗಿರುತ್ತವೆ. ಧಾರ್ಮಿಕ ಗ್ರಂಥಗಳಲ್ಲಿಯೂ ಇದೇ ವಿಷಯಗಳನ್ನು ಹೇಳಲಾಗಿದೆ.
ಒಬ್ಬ ವ್ಯಕ್ತಿಯು ಹುಟ್ಟಿದ ವಾರದ ದಿನದ ಪ್ರಕಾರ ಅವನ ಸ್ವಭಾವವೂ ಇರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಉದಾಹರಣೆಗೆ, ಸೋಮವಾರ(Monday) ಜನಿಸಿದ ವ್ಯಕ್ತಿಯ ಮೇಲೆ ಚಂದ್ರನ ಪ್ರಭಾವವು ಹೆಚ್ಚು. ಜ್ಯೋತಿಷ್ಯದಲ್ಲಿ, ಚಂದ್ರನನ್ನು ಮೃದು ಮತ್ತು ಸೌಮ್ಯ ಎಂದು ವಿವರಿಸಲಾಗಿದೆ, ಸೋಮವಾರ ಜನಿಸಿದ ಜನರ ಸ್ವಭಾವದಲ್ಲಿ ಈ ಚಿಹ್ನೆಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಇಂದು ಸೋಮವಾರ ಜನಿಸಿದವರ ಕುರಿತ ಕೆಲ ವಿಶೇಷ ವಿಷಯಗಳನ್ನು ತಿಳಿಸುತ್ತೇವೆ.
ಕಲಾವಿದರು(artists)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ ಜನಿಸಿದವರು ಸೌಮ್ಯ ಸ್ವಭಾವದವರು. ಅವರ ಕಲ್ಪನಾ ಶಕ್ತಿ ತುಂಬಾ ಹೆಚ್ಚಿರುತ್ತದೆ. ಇದರಿಂದಾಗಿ ಅವರು ಉನ್ನತ ಮಟ್ಟದ ಕಲಾವಿದರಾಗುತ್ತಾರೆ. ಅವರು ನೃತ್ಯ, ಹಾಡುಗಾರಿಕೆ, ಚಿತ್ರಕಲೆ ಅಥವಾ ಇನ್ನಾವುದೇ ಪ್ರಕಾರದಲ್ಲಿ ಚೆನ್ನಾಗಿ ಪಾರಂಗತರಾಗುತ್ತಾರೆ. ಜನರೊಂದಿಗೆ ಬಹಳ ಬೇಗ ಬೆರೆಯುತ್ತಾರೆ,. ಆದ್ದರಿಂದ ಅವರಿಗೆ ಅನೇಕ ಸ್ನೇಹಿತರಿದ್ದಾರೆ. ಇವರು ಚರ್ಚೆಯಿಂದ ದೂರ ಉಳಿಯಲು ಬಯಸುತ್ತಾರೆ. ಯಾವುದೇ ಕಾರಣವಿಲ್ಲದೆ ಯಾರೊಂದಿಗೂ ಅಹಿತಕರವಾಗಿ ಮಾತನಾಡುವುದಿಲ್ಲ.
ಹೀಗಿರ್ತಾರೆ ಜುಲೈ ಬೇಬೀಸ್ .. ವಿಶೇಷ ಗುಣಗಳ ಬಗ್ಗೆ ತಿಳಿಯಿರಿ..
ಸೌಂದರ್ಯ(beautiful)
ಸೋಮವಾರ ಜನಿಸಿದವರ ಮುಖದಲ್ಲಿ ಚಂದ್ರನ ಕಳೆ ಇರುತ್ತದೆ. ನೋಟದಲ್ಲಿ ಮತ್ತು ಅವರ ಮುಖದ ಮೇಲೆ ತೀಕ್ಷ್ಣತೆ ಇರುತ್ತದೆ. ಅದು ಅವರನ್ನು ಆಕರ್ಷಕವಾಗಿ ಮಾಡುತ್ತದೆ. ಚಂದ್ರನು ತಾಯಿಯ ಕಡೆಗೆ ಸಂಬಂಧಿಸಿದ್ದಾನೆ, ಆದ್ದರಿಂದ ಅವರು ಈ ಜನರಿಂದ ವಿಶೇಷ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತಾರೆ. ಸೋಮವಾರ ಜನಿಸಿದವರು ದುರ್ಬಲ ಹೃದಯದವರು. ಕಠಿಣ ಪರಿಶ್ರಮದ ಜೊತೆಗೆ, ಅವರು ತಮ್ಮ ಕೆಲಸವನ್ನು ಪೂರ್ಣಗೊಳಿಸುತ್ತಾರೆ.
ಜಿಪುಣರು(stingy)
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೋಮವಾರ ಜನಿಸಿದವರು ಬಹಳ ಕಡಿಮೆ ಖರ್ಚು ಮಾಡುತ್ತಾರೆ. ಈ ಕಾರಣದಿಂದ ಅನೇಕ ಬಾರಿ ಅವರು ಜಿಪುಣ ಎನಿಸಿಕೊಳ್ಳುತ್ತಾರೆ. ಅವರು ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದಿಲ್ಲ.
ಪ್ರೇಮ ಜೀವನ(Love Life)
ಸೋಮವಾರದಂದು ಜನಿಸಿದವರು ಸೂಕ್ಷ್ಮ ಸ್ವಭಾವವನ್ನು ಹೊಂದಿರುವುದರಿಂದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅವರು ಕಾಳಜಿಯುಳ್ಳವರು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಅವರ ಭಾವನೆಗಳನ್ನು ಗೌರವಿಸುವವರೆಗೆ, ಅವರು ನಂಬಿಕಸ್ಥರು ಮತ್ತು ಹೊಂದಿಕೊಳ್ಳಲು ಸಿದ್ಧರಿರುತ್ತಾರೆ. ಅವರ ಭಾವನೆಗಳನ್ನು ನೋಯಿಸಿದರೆ ಮತ್ತು ಸುಳ್ಳು ಮತ್ತು ಮೋಸದಿಂದ ಮನನೊಂದಿದ್ದರೆ ಅವರು ಸೇಡು ತೀರಿಸಿಕೊಳ್ಳಬಹುದು. ಅವರ ಸ್ವತಂತ್ರ ಸ್ವಭಾವದಿಂದಾಗಿ ವೈವಾಹಿಕ ಜೀವನವು ತುಲನಾತ್ಮಕವಾಗಿ ಯಶಸ್ವಿಯಾಗುವುದು ಅಪರೂಪ. ಅದರಲ್ಲಿ ಏರಿಳಿತಗಳು ಹೆಚ್ಚು. ಅವರು ವ್ಯಕ್ತಿಯ ದೈಹಿಕ ಲಕ್ಷಣಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ಬುಧ ಗೋಚಾರ 2022: ಈ ನಾಲ್ಕು ರಾಶಿಗಳಿಗೆ ತಪ್ಪದು ಕಂಟಕ
ಈ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ..
ಈ ಜನರು ಹೋಟೆಲ್ ವ್ಯಾಪಾರ, ಹಾಲಿನ ವ್ಯಾಪಾರ, ಕಾಗದ, ಎಣ್ಣೆ, ಸೌಂದರ್ಯ ಸಂಬಂಧಿತ ಇತ್ಯಾದಿ ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಜಾತಕದಲ್ಲಿ ಯಾವುದೇ ದೋಷವಿಲ್ಲದಿದ್ದರೆ, ಅವರು ಸರ್ಕಾರದ ಉನ್ನತ ಸ್ಥಾನಗಳನ್ನು ಸಹ ತಲುಪುತ್ತಾರೆ. ಕಲಾ ಕ್ಷೇತ್ರದಲ್ಲಿ ಮುಂದುವರಿದರೆ ದೇಶ ವಿದೇಶಗಳಲ್ಲಿ ಹೆಸರು ಗಳಿಸುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
