Asianet Suvarna News Asianet Suvarna News

Astrology Tips: ಕಾಲಿಗೆ ಬಣ್ಣ ಹಚ್ಚುವಾಗ ಈ ವಿಷ್ಯ ನೆನಪಿಡಿ

ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಕಾಲಿನಿಂದ ತಲೆಯವರೆಗೆ ಅಲಂಕಾರ ಮಾಡಿಕೊಂಡಿರುತ್ತಾರೆ. ಕಾಲಿಗೆ ಕೆಂಪು ಬಣ್ಣವನ್ನು ಹಚ್ಚಿಕೊಳ್ತಾರೆ. ಇದು ಪಾದಗಳ ಸೌಂದರ್ಯ ಹೆಚ್ಚಿಸುತ್ತದೆ. ಇದನ್ನು ಹಚ್ಚಿಕೊಳ್ಳುವ ನಿಯಮವೇನು ಎಂಬುದನ್ನು ನಾವು ಹೇಳ್ತೇವೆ.
 

Mistakes To Avoid While Applying Alta On Feet
Author
First Published Oct 1, 2022, 4:41 PM IST

ಹಿಂದೂ ಧರ್ಮದಲ್ಲಿ ಅಲಂಕಾರಕ್ಕೆ ಹೆಚ್ಚಿನ ಮಹತ್ವವಿದೆ. ಅದ್ರಲ್ಲೂ ಮುತ್ತೈದೆಯರು ಹದಿನಾರು ರೀತಿಯ ಮೇಕಪ್ ಮಾಡಬೇಕು ಎನ್ನಲಾಗುತ್ತದೆ. ಕೈಗೆ ಬಳೆ, ಹಣೆಗೆ ಕುಂಕುಮ, ಹಸ್ತಕ್ಕೆ ಮದರಂಗಿ ಹಾಗೆ ಕಾಲಿಗೆ ಅರಗಿನ ಬಣ್ಣವನ್ನು ಹಚ್ಚಿಕೊಳ್ಳುವ ಸಂಪ್ರದಾಯವಿದೆ. ಈ ಕೆಂಪು ಬಣ್ಣ ಕಾಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪಾದಗಳ ಸೌಂದರ್ಯದ ಬಗ್ಗೆಯೂ ಧರ್ಮ – ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಬ್ಬ, ವೃತದ ಸಂದರ್ಭದಲ್ಲಿ ಕಾಲಿಗೆ ಅರಗಿನ ಬಣ್ಣ ಹಚ್ಚಿಕೊಳ್ಳಬೇಕೆಂದು ಶಾಸ್ತ್ರಗಳಲ್ಲಿಯೇ ಹೇಳಲಾಗಿದೆ. ಆದ್ರೆ ಅರಗಿನ ಬಣ್ಣ ಹಚ್ಚಿಕೊಳ್ಳಲು ಕೆಲವು ನಿಯಮಗಳನ್ನು ಮಾಡಲಾಗಿದೆ. ಹಬ್ಬ ಅಥವಾ ಉಪವಾಸದ ಸಂದರ್ಭದಲ್ಲಿ ನೀವೂ ಅರಗಿನ ಬಣ್ಣ ಹಚ್ಚಿಕೊಳ್ಳಲು ಬಯಸ್ತೀರಿ ಎಂದಾದ್ರೆ ನೀವು ಕೂಡ ಕೆಲ ನಿಯಮಗಳನ್ನು ಪಾಲನೆ ಮಾಡಿ. ಇಲ್ಲವೆಂದ್ರೆ ಗಂಡನ ಜೀವನದಲ್ಲಿ ಸಮಸ್ಯೆ ಎದುರಾಗುತ್ತದೆ. ತಪ್ಪು ತಪ್ಪಾಗಿ ಈ ಬಣ್ಣ ಹಚ್ಚಿಕೊಳ್ಳುವುದ್ರಿಂದ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.   

16 ಶೃಂಗಾರದಲ್ಲಿ ಅರಗ ಬಣ್ಣ ಕೂಡ ಮಹತ್ವ ಪಡೆದಿದೆ. ಪುರಾಣ (Mythology) ಗಳಲ್ಲಿಯೂ ಇದನ್ನು ಕಾಣಬಹುದು, ಶ್ರೀಕೃಷ್ಣನ (Lord Krishna ) ಅನೇಕ ಚಿತ್ರಣಗಳಲ್ಲಿಯೂ ಕಂಡುಬರುತ್ತದೆ. ಕಾಲಿಗೆ ಕೆಂಪು ಬಣ್ಣವನ್ನು ಹಚ್ಚಿಕೊಂಡಿರುವ ಶೀಕೃಷ್ಣನನ್ನು ನೀವು ನೋಡಬಹುದು. ಇದು ಕೆಂಪು (Red) ದ್ರವವಾಗಿದೆ. ಕೆಂಪು ಬಣ್ಣ ಫಲವತ್ತತೆ, ಪ್ರೀತಿ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಈ zodiacs ಸಂಬಂಧದಲ್ಲಿ ಹೊಣೆಗಾರಿಕೆ ತೆಗೆದುಕೊಳ್ಳುವಲ್ಲಿ ಮೊದಲಿಗರು!

ಮಹಿಳೆ ತನ್ನ ಪಾದ (Foot) ಗಳ ಮೇಲೆ ಅದನ್ನು ಹಚ್ಚಿದ್ರೆ ಅವಳ ಅದೃಷ್ಟ ಹೆಚ್ಚಾಗುತ್ತದೆ. ಗಂಡನೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ. ಲಕ್ಷ್ಮಿಯ ಆಗಮನಕ್ಕೆ ಇದು ಮಂಗಳಕರವೆಂದು ಪರಿಗಣಿಸಲಾಗಿದೆ. 

ಅಗರ ಬಣ್ಣ ಹಚ್ಚುವಾಗ ಈ ತಪ್ಪು ಮಾಡಬೇಡಿ :

ದಿಕ್ಕಿನ ಬಗ್ಗೆ ಗಮನವಿರಲಿ : ವಿವಾಹಿತ ಮಹಿಳೆ ತನ್ನ ಪಾದಗಳ ಮೇಲೆ ಅಗರ ಬಣ್ಣ ಬಳಸುವಾಗ ತಪ್ಪು ದಿಕ್ಕಿಗೆ ಕುಳಿತು ಹಚ್ಚಿಕೊಳ್ಳಬಾರದು. ಅಂದ್ರೆ ದಕ್ಷಿಣ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬಾರದು. ಜ್ಯೋತಿಷ್ಯದ ಪ್ರಕಾರ, ಮಹಿಳೆಯರು  ಈ ಬಣ್ಣ ಬಳಸಿದಾಗ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು. ದಕ್ಷಿಣ ದಿಕ್ಕಿಗೆ ಮುಖಮಾಡಿ ಯಾವುದೇ ಮೇಕಪ್ ಮಾಡಬಾರದು. ಈ ದಿಕ್ಕನ್ನು ಮೇಕಪ್ ಮಾಡಲು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

ಈ ದಿನ ಅಪ್ಪಿತಪ್ಪಿಯೂ ಬಣ್ಣ ಹಚ್ಚಿಕೊಳ್ಳಬೇಡಿ : ಎಲ್ಲ ದಿನವೂ ಅಗರ ಬಣ್ಣವನ್ನು ಹಚ್ಚಿಕೊಳ್ಳಲು ಸೂಕ್ತವಲ್ಲ. ವಿವಾಹಿತ ಮಹಿಳೆಯರು ಮಂಗಳವಾರದಂದು ತಮ್ಮ ಪಾದಗಳ ಮೇಲೆ ಅರಗ ಬಣ್ಣವನ್ನು ಹಚ್ಚಬಾರದು ಎಂದು ಸಲಹೆ ನೀಡಲಾಗುತ್ತದೆ. ಈ ದಿನವನ್ನು ಹನುಮಂತನಿಗೆ ಅರ್ಪಿಸಲಾಗಿದೆ. ಆತ ಬ್ರಹ್ಮಚಾರಿ ಎಂದು ನಂಬಲಾಗಿದೆ. ಹಾಗಾಗಿ ಮಹಿಳೆಯರು ಈ ದಿನ ಮೇಕಪ್ ಮಾಡದಂತೆ ಸಲಹೆ ನೀಡಲಾಗುತ್ತದೆ.

ಆಕಾರ ಕೆಡದಂತೆ ನೋಡಿಕೊಳ್ಳಿ : ಅವಸರದಲ್ಲಿ  ಯಾವುದೇ ಕಾರಣಕ್ಕೂ ಈ ಬಣ್ಣ ಹಚ್ಚಬೇಡಿ. ವಿವಾಹಿತ ಮಹಿಳೆಯರು ಇದನ್ನು ಯಾವಾಗಲೂ ಪಾದಗಳ ಮುಂಭಾಗದಿಂದ ಹಿಮ್ಮಡಿಯವರೆಗೆ ಅನ್ವಯಿಸಬೇಕು ಮತ್ತು ಹಿಮ್ಮಡಿಯನ್ನು ಖಾಲಿ ಬಿಡಬಾರದು. ಹಿಮ್ಮಡಿ ಖಾಲಿ ಬಿಡುವುದು ಅಥವಾ ಉಲ್ಟಾ ಬಣ್ಣ ಹಚ್ಚುವುದು ಒಳ್ಳೆಯದಲ್ಲ. ನೀವು ಅವಸರದಲ್ಲಿ ಇದನ್ನು ಹಚ್ಚಿಕೊಂಡ್ರೆ ಅಲ್ಲಲ್ಲಿ ಅದು ಬಿಡುವ ಸಾಧ್ಯತೆಯಿರುತ್ತದೆ. 

ಈ ವಿಷ್ಯಗಳನ್ನು ಪುರುಷರು ಯಾರಿಗೂ ಹೇಳಬಾರದು, ಹೇಳಿದ್ರೆ ಮರ್ಯಾದೆ ಹರಾಜು!

ತಕ್ಷಣ ಈ ತಪ್ಪು ಮಾಡಬೇಡಿ : ಈ ಬಣ್ಣ ಹಚ್ಚಿದ ತಕ್ಷಣವೇ ನಿಮ್ಮ ಪಾದಗಳನ್ನು ತೊಳೆಯಬಾರದು. ಉದ್ದೇಶ ಪೂರ್ವಕವಾಗಿ ಯಾವುದೇ ಕಾರಣಕ್ಕೂ ಇದನ್ನು ತೆಗೆಯಬಾರದು.  ಇದು ಪತಿಗೆ ದುರಾದೃಷ್ಟವನ್ನು ತರಬಹುದು. ಅದನ್ನು ನೀರಿನಲ್ಲಿ ತೊಳೆದ್ರೆ ಅದು ಶೃಂಗಾರಕ್ಕೆ ಮಾಡಿದ ಅಪಮಾನ. ಹಾಗಾಗಿ ನೀವು ಯಾವುದೇ ಕಾರಣಕ್ಕೂ ಈ ಬಣ್ಣ ಹಚ್ಚಿದ ಕಾಲಿಗೆ ನೀರು ಹಾಕಿ, ಕೈನಲ್ಲಿ ಉಜ್ಜಬೇಡಿ.  
 

Follow Us:
Download App:
  • android
  • ios