Eid-ul-Fitr 2023: ಮುಸ್ಲಿಂ ಬಾಂಧವರೊಂದಿಗೆ ರಂಜಾನ್ ಪ್ರಾರ್ಥನೆಯಲ್ಲಿ ಭಾಗಿಯಾದ ಸಚಿವ ಶ್ರೀರಾಮುಲು
ಇಂದು ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆ ಸಚಿವ ಶ್ರೀರಾಮುಲು ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳ್ಳಾರಿ (ಏ.22): ಇಂದು ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆ ಸಚಿವ ಶ್ರೀರಾಮುಲು ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾಥನೆ ಬಳಿಕ ಮಾತನಾಡಿದ ಸಚಿವರು, ಉರಿ ಬಿಸಿಲಿನಲ್ಲೂ ಮುಸ್ಲಿಂ ಬಾಂಧವರು ಒಂದು ತಿಂಗಳು ಕಾಲ ಉಪವಾಸ ಮಾಡಿದ್ದಾರೆ. ಸೇವಾ ಮನೋಭಾವನೆಯಿಂದ ದಾನ ಮಾಡಿ ಧರ್ಮವನ್ನ ಉಳಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಭಗವಂತ ಮುಸ್ಲಿಂ ಬಾಂಧವರ ಸಂಕಲ್ಪ ಈಡೇರಿಸಲಿ ಎಂದರು.
ನಮಗೆ ಪೂರ್ಣ ವಿಶ್ವಾಸವಿದೆ. ದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ಸ್ಥಾನಗಳಲ್ಲಿ 35 ಸ್ಥಾನಗಳನ್ನು ಗೆಲ್ಲುತ್ತೇವೆ. ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸತ್ಕಾರ್ಯಗಳಿಗೆ ಪ್ರೇರಣೆ ನೀಡುವ ಪವಿತ್ರವಾದ ರಂಜಾನ್ ಹಬ್ಬ: ಬನ್ನೂರು ಕೆ. ರಾಜು
ಗ್ರಾಮೀಣ ಕ್ಷೇತ್ರಕ್ಕೆ ನಾನು ಹೊಸಬಲ್ಲ. ಜನರಿಗೆ ರಾಮುಲು ಬಗ್ಗೆ ವಿಶ್ವಾಸ ನಂಬಿಕೆ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದು ಕೊಂಡು ಹೋಗ್ತಾನೆ ಅನ್ನೋ ನಂಬಿಕೆ ಇದೆ. ನಾನು ಬೇರೆ ಬೇರೆ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗುವೆ ಎಂದು.
ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಕೂಡ ಪ್ರಾರ್ಥನೆಯಲ್ಲಿ ಭಾಗಿ:
ಇಂದು ನಡೆದ ಮುಸ್ಲಿಂ ಭಾಂಧವರ ರಂಜಾನ್ ಹಬ್ಬದಲ್ಲಿ ಸಚಿವ ಶ್ರೀರಾಮುಲು ಅಷ್ಟೇ ಅಲ್ಲ, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಕೂಡ ಪ್ರಾಥನೆಯಲ್ಲಿ ಭಾಗಿಯಾದರು. ಇವರ ಜತೆಗೆ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರತ್ ರೆಡ್ಡಿ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಕೂಡ ಭಾಗಿಯಾದರು.
ರಂಜಾನ್ ಹಿಂದು-ಮುಸ್ಲಿಂ ಒಂದಾಗಿ ಆಚರಣೆ ಮಾಡ್ತಾರೆ: ನಾಗೇಂದ್ರ
ಮುಸ್ಲಿಂ ಬಾಂಧವರೊಂದಿಗೆ ಪ್ರಾಥನೆ ಸಲ್ಲಿಸಿದ ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಅವರು ಬಳ್ಳಾರಿಯಲ್ಲಿ ಹಿಂದು ಮತ್ತು ಮುಸ್ಲಿಂ ಬಾಂಧವರು ಒಂದಾಗಿ ಹಬ್ಬವನ್ನ ಆಚರಣೆ ಮಾಡ್ತಾರೆ ನಮ್ಮಗೆಲ್ಲರಿಗೂ ಶಾಂತಿ ನೆಮ್ಮದಿ ಸುಖ, ಮಳೆ ಬೆಳೆಯನ್ನು ಅಲ್ಲಾಹ್ ಕರುಣಿಸಲಿ. ಬಳ್ಳಾರಿಯಲ್ಲಿ ಮುಸ್ಲಿಂ ಬಾಂಧವರ ಜೊತೆ ಹಿಂದುಗಳು ಉತ್ತಮ ಒಡನಾಟ ಹೊಂದಿದ್ದಾರೆ.ಯಾವುದೇ ರಾಜಕೀಯ ಷಡ್ಯಂತ್ರ ಬಳ್ಳಾರಿಗೆ ಬಾರದಿರಲಿ ಎಂದರು.
ಮತದಾನಕ್ಕೆ ಕೆಲವು ದಿನಗಳು ಮಾತ್ರ ಬಾಕಿಯಿದೆ. ಕಾಂಗ್ರೆಸ್ ಪರವಾಗಿ ಜನರು ಇದ್ದಾರೆ. ನಮ್ಮಗೆ ಇದು ಮಾಡು ಇಲ್ಲವೇ ಮಡಿ ಎನ್ನುವಂತಹ ಚುನಾವಣೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬಿಜೆಪಿಯವರು ಹಣ ಬಲದಿಂದ ಚುನಾವಣೆ ಎದುರಿಸುತ್ತಿದ್ದಾರೆ. ಈ ಚುನಾವಣೆ ಹಣ ಬಲ- ಜನ ಬಲದ ಮೇಲೆ ನಡೆಯುತ್ತಿದೆ. ಧರ್ಮ- ಅಧರ್ಮದ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಕೊನೆಗೆ ಧರ್ಮವೇ ಗೆಲ್ಲುತ್ತದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಬಡವರಿಗೆ ನೆರವು:
ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ ಕಾರ್ಯಕ್ರಮವು ಬಡವರಿಗೆ ನೆರವಾಗಲಿದೆ. ಬಿಜೆಪಿಯವರದ್ದು ಹರಾಮಿ ದುಡ್ಡು. ಅವರ ದುಡ್ಡನ್ನ ಯಾರೂ ಮುಟ್ಟಲ್ಲ. ಬಿಜೆಪಿ ಹಣಬಲ ತೋಳ್ಬಲದ ಮೇಲೆ ಬರುತ್ತಿದ್ದಾರೆ. ಕಾಂಗ್ರೆಸ್ ಕಾರ್ಯ ಕರ್ತರು ಯಾರೂ ಹಣಕ್ಕೆ ಮಾರು ಹೋಗಲ್ಲ. ಹೀಗಾಗಿ ಬಿಜೆಪಿಯ ದುಡ್ಡು ಚುನಾವಣೆಯಲ್ಲಿ ಪ್ರಭಾವ ಬೀರಲ್ಲ ಬಿಜೆಪಿಯ ನೋಟು. ಕಾಂಗ್ರೆಸ್ ಗೆ ವೋಟ್ ಅಂತಾ ಜನರು ಮಾತನಾಡುತ್ತಿದ್ದಾರೆ ಎಂದರು.
ಸ್ಟಾರ್ ಪ್ರಚಾರಕರು ಕಾಂಗ್ರೆಸ್‌ನಲ್ಲಿಲ್ಲ:
ಬಿಜೆಪಿ ಪರವಾಗಿ ಸುದೀಪ ಪ್ರಚಾರ ನಡೆಸುತ್ತಿರುವ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ಸ್ಟಾರ್ ಪ್ರಚಾರಕರು ಸಿನಿಮಾ ನಾಯಕರು ಯಾರೂ ಕಾಂಗ್ರೆಸ್ ನಲ್ಲಿ ಇಲ್ಲ. ನಟ ಸುದೀಪ ಆದ್ರೂ ಬರಲಿ. ಪ್ರದೀಪ ಆದ್ರು ಬರಲಿ. ಸುದೀಪ್ ಕಳೆದ ಭಾರಿ ನನ್ನ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ರು. ಆದರೆ ಜನರು ನನ್ನ ಗೆಲ್ಲಿಸಿದರು ಹೀಗಾಗಿ ಸ್ಟಾರ್ ಪ್ರಚಾರಕರು ಜನರ ಮೇಲೆ ಪ್ರಭಾವ ಬೀರಲ್ಲ. ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ ಎಂದರು.
ಒಟ್ಟಿನಲ್ಲಿ ಚುನಾವಣೆ ಸಮೀಪಿಸಿರುವ ಈ ಹೊತ್ತಿನಲ್ಲಿ ಪವಿತ್ರ ರಂಜಾನ್‌ನಲ್ಲಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳು ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಮಾಜ್ ಮುಗಿದ ನಂತರ ಶುಭಾಶಯ ಕೋರಿ ಮುಸ್ಲಿಂ ಬಾಂಧವರ ಬೆಂಬಲ ಕೋರಿದ ಅಭ್ಯರ್ಥಿಗಳು