ಒಂದೇ ತಿಂಗಳಲ್ಲಿ ಮೂರು ಬಾರಿ ಬುಧನ ರಾಶಿ ಪರಿವರ್ತನೆ; ಈ ರಾಶಿಗಳಿಗೆ ಬಂಪರ್

ಜುಲೈ ಒಂದರಲ್ಲೇ ಬುಧ ಮೂರು ಬಾರಿ ರಾಶಿ ಬದಲಾವಣೆ ಮಾಡುತ್ತಿದ್ದಾನೆ. ಈಗಾಗಲೇ ಜುಲೈ 2ರಂದು ಮಿಥುನ ರಾಶಿಗೆ ಬಂದಿರುವ ಬುಧ ಇನ್ನೂ ಎರಡು ಬಾರಿ ಸಂಕ್ರಮಣ ನಡೆಸುತ್ತಿದ್ದಾನೆ. ಬುಧನ ಈ ನಡೆಗಳು ಮೂರು ರಾಶಿಗೆ ಅತ್ಯುತ್ತಮ ಫಲವನ್ನು ನೀಡಲಿವೆ. 

Mercury will change three times in the month of July know which zodiac signs will have benefit skr

ಬುಧ(Planet mercury) ಸೂರ್ಯನಿಗೆ ಸಮೀಪದಲ್ಲಿರುವ ಗ್ರಹ. ಆತನ ಚಲನೆ ಕೊಂಚ ವೇಗವುಳ್ಳದ್ದು. ಗುರುವಿನ ಪತ್ನಿ ತಾರಾ ಮತ್ತು ಚಂದ್ರನ ಪುತ್ರ. ದೇವಗುರುವಿನ ಮಲಮಗ ಬುಧ ಗ್ರಹ. ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ. ಜುಲೈನಲ್ಲಿ ಬುಧ ಗ್ರಹವು ಒಂದಲ್ಲಾ, ಎರಡಲ್ಲಾ, ಮೂರು ಬಾರಿ ರಾಶಿ ಪರಿವರ್ತನೆ ಮಾಡುತ್ತಿದೆ. ಗ್ರಹಗಳ ರಾಜಕುಮಾರ ಎನಿಸಿಕೊಂಡಿರುವ ಬುಧ ಗ್ರಹದ ಈ ಬದಲಾವಣೆಯು ಎಲ್ಲ ರಾಶಿಯವರ(Zodiac signs) ಬದುಕಲ್ಲೂ ಬದಲಾವಣೆ ತರುತ್ತದೆ. ಆದರೆ, ಮೂರು ರಾಶಿಗಳಿಗೆ ಮೂರು ಬಾರಿಯ ಬದಲಾವಣೆಯೂ ಲಾಭಕಾರಿಯಾಗಲಿದೆ.

ಮಾತು, ಬುದ್ಧಿವಂತಿಕೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದವನು ಬುಧ. ಬುಧ ಗ್ರಹವು ಜಾತಕದಲ್ಲಿ ಮಂಗಳಕರ ಸ್ಥಾನವನ್ನು ಹೊಂದಿದ್ದರೆ, ವ್ಯಕ್ತಿಯು ಉತ್ತಮ ವಾಕ್ಚಾತುರ್ಯ ಹೊಂದಿರುವ ಜೊತೆಗೆ ವ್ಯವಹಾರ ಜ್ಞಾನ ಹೆಚ್ಚುತ್ತದೆ. ವಾಣಿಜ್ಯ ವಿಷಯಗಳು, ಕಾನೂನು, ಸಂವಹನ, ಹಾಸ್ಯಪ್ರಜ್ಞೆ, ಬರವಣಿಗೆ ಇತ್ಯಾದಿಗಳಿಗೆ ಸಂಬಂಧಿಸಿದ ಬುಧ ನಿಮ್ಮ ಮೇಲೆ ಕೃಪೆ ತೋರಿದರೆ, ಜಾತಕದಲ್ಲಿ ಬಲ ಪಡೆದರೆ ವ್ಯಕ್ತಿಯು ಬದುಕಿನಲ್ಲಿ ಬಹಳಷ್ಟು ಯಶಸ್ಸು(Success) ಕಾಣುತ್ತಾನೆ. 

ಮೂರು ಬಾರಿ ರಾಶಿ ಬದಲಾವಣೆ
ಮೊದಲೇ ಹೇಳಿದಂತೆ ಜುಲೈ ತಿಂಗಳಲ್ಲಿ, ಬುಧ ಗ್ರಹವು ರಾಶಿಚಕ್ರವನ್ನು ಮೂರು ಬಾರಿ ಬದಲಾಯಿಸುತ್ತದೆ. ಈಗಾಗಲೇ ಜುಲೈ 2ರಂದು ಬೆಳಿಗ್ಗೆ 09:52 ಕ್ಕೆ ಬುಧ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಇನ್ನು ಜುಲೈ 17ರಂದು ಈ ತಿಂಗಳಲ್ಲಿ ಎರಡನೇ ಬಾರಿಗೆ ಬೆಳಗ್ಗೆ 12.01 ಕ್ಕೆ ಬುಧನು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಮತ್ತೆ ಮೂರನೇ ಬಾರಿಗೆ ಬುಧನು ಜುಲೈ 31 ರಂದು ಕರ್ಕಾಟಕವನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ.

ಯಾವ ರಾಶಿಯ ಹುಡುಗ ಸಂಗಾತಿಯಾಗಿ ಹೇಗೆ? ಖಾಸಗಿ ಬದುಕಲ್ಲಿ ಆತ ಹೇಗೆ?

ಈ ಬುಧ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಬುಧ ರಾಶಿಯ ಬದಲಾವಣೆಯು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ ಮತ್ತು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಬುಧದ ಬದಲಾವಣೆಯಿಂದ ಯಾವ ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ ನೋಡೋಣ. 

ಸಿಂಹ ರಾಶಿ(Leo)
ಬುಧ ಬದಲಾವಣೆಯು ಸಿಂಹ ರಾಶಿಯ ಜನರಿಗೆ ಲಾಭದಾಯಕವೆಂದು ಸಾಬೀತು ಪಡಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ಆದಾಯವು ಹೆಚ್ಚಾಗಬಹುದು. ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. 

ಕನ್ಯಾ ರಾಶಿ(Virgo)
ಕನ್ಯಾ ರಾಶಿಯ ಜನರ ಜೀವನದಲ್ಲಿ, ಬುಧ ಗ್ರಹವು ಸಂತೋಷದ ಉಡುಗೊರೆಯನ್ನು ತರುತ್ತದೆ. ಈ ಅವಧಿಯಲ್ಲಿ ನೀವು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಹೊಸ ಉದ್ಯೋಗದ ಕೊಡುಗೆಗಳು ಸಹ ಬರಬಹುದು. ವ್ಯಾಪಾರಿಗಳು ಲಾಭವನ್ನು ಗಳಿಸುತ್ತಾರೆ.

ಮಕರ ರಾಶಿ(Capricorn)
ಮಕರ ರಾಶಿಯವರು ಆಸ್ತಿಯಲ್ಲಿ ಲಾಭವನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಬಡ್ತಿ ದೊರೆಯಬಹುದು. ಕೆಲಸದ ಶೈಲಿಯನ್ನು ಪ್ರಶಂಸಿಸಲಾಗುತ್ತದೆ. ಗೌರವದಲ್ಲಿ ಹೆಚ್ಚಳ ಸಾಧ್ಯ.

ದಾಂಪತ್ಯ ಜಗಳ ನಿವಾರಿಸುವ ಜೊತೆಗೆ ಐಶಾರಾಮಿ ಜೀವನ ತಂದುಕೊಡುವ ಬಳೆಗಳು!

ಬುಧನು ಜಾತಕದಲ್ಲಿ ದುರ್ಬಲವಾಗಿರುವವರು, ಆತನ ಬಲವರ್ಧನೆಗಾಗಿ ಬುಧವಾರದಂದು ಹಸಿರು ಧಾನ್ಯ, ವಸ್ತ್ರ ಸೇರಿದಂತೆ ಹಸಿರು ವಸ್ತುಗಳನ್ನು ದಾನ ಮಾಡಬೇಕು. ಜೊತೆಗೆ, ಹಸಿರು ಬಟ್ಟೆ, ಹಸಿರು ಬಳೆ ಧರಿಸುವುದು ಕೂಡಾ ಉತ್ತಮವೆನಿಸಿಕೊಂಡಿದೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios