Asianet Suvarna News Asianet Suvarna News

Budh Gochar: ಕುಂಭ ರಾಶಿಗೆ ಬುಧನ ಪ್ರವೇಶ, ಇನ್ನು ಬದಲಾಗಲಿದೆ ಈ ರಾಶಿಗಳ ಅದೃಷ್ಟ

ನಾಳೆ, ಅಂದರೆ ಮಾರ್ಚ್ 6ರಂದು ಬುಧ ಗ್ರಹವು ಕುಂಭ ರಾಶಿಗೆ ಪ್ರವೇಶಿಸಲಿದೆ. ಇದರಿಂದ ಹಲವು ರಾಶಿಗಳ ಅದೃಷ್ಟ ಬದಲಾಗಲಿದೆ. 

Mercury Transit in Aquarius on 6th March will change fate of these zodiacs skr
Author
Bangalore, First Published Mar 5, 2022, 12:46 PM IST

ಈ ತಿಂಗಳ ಮೊದಲ ಗ್ರಹ ಗೋಚಾರ ನಾಳೆ ಅಂದರೆ ಮಾರ್ಚ್ 6ರಂದು ಸಂಭವಿಸಲಿದೆ. ಬುಧ ಗ್ರಹ(Mercury)ವು ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತಿರುತ್ತಾನೆ. ಆದರೆ ಈ ತಿಂಗಳಲ್ಲಿ ಎರಡು ಬಾರಿ ರಾಶಿ ಬದಲಾಯಿಸುತ್ತಿದ್ದಾನೆ. ಮಾರ್ಚ್ 6ರಂದು ಬೆಳಗ್ಗೆ 11.31ಕ್ಕೆ ಬುಧ ಗ್ರಹವು ಕುಂಭ ರಾಶಿ(Aquarius)ಗೆ ಪ್ರವೇಶಿಸುತ್ತಿದ್ದಾನೆ. ಮಾರ್ಚ್ 24ರವರೆಗೆ ಇಲ್ಲಿಯೇ ಇರುವ ಬುಧ ನಂತರ ಮೀನ ರಾಶಿ ಪ್ರವೇಶಿಸುತ್ತಾನೆ. ಆತನ ಈ ಚಲನೆಯಿಂದ ಕೆಲ ರಾಶಿಗಳಿಗೆ ಅತ್ಯಂತ ಲಾಭವಾಗಲಿದೆ. ಆ ಲಾಭದ ದಿನಗಳು 18 ದಿನಗಳವರೆಗೆ ಉಳಿಯಲಿವೆ. 

ಬುಧ ಎಂದರೆ ಬುದ್ಧಿವಂತಿಕೆ, ಮಾತು, ತಾರ್ಕಿಕ ಸಾಮರ್ಥ್ಯ(logic)ಗಳ ಕಾರಕ. ವಾಣಿಜ್ಯ ವಿಷಯಗಳು, ಕಾನೂನು, ಸಂವಹನ(communication), ಹಾಸ್ಯಪ್ರಜ್ಞೆ, ಬರವಣಿಗೆ ಇತ್ಯಾದಿಗಳಿಗೆ ಸಂಬಂಧಿಸಿದ್ದಾನೆ. ಆತ ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿ. ಇನ್ನು ದೇಹದ ವಿಷಯಕ್ಕೆ ಬಂದರೆ ಆತ ಚರ್ಮದ ಸಂಗತಿಗಳನ್ನು ನೋಡಿಕೊಳ್ಳುವವನು. ಬುಧ ಜಾತಕ(horoscope)ದಲ್ಲಿ ಬಲವಾಗಿದ್ದರೆ ವ್ಯಕ್ತಿಯು ಬದುಕಿನಲ್ಲಿ ಬಹಳಷ್ಟು ಯಶಸ್ಸು ಕಾಣುತ್ತಾನೆ. 

ಸಧ್ಯ ಎರಡು ಪ್ರಮುಖ ಗ್ರಹಗಳು ಕುಂಭ ರಾಶಿಗೆ ಪ್ರವೇಶಿಸುತ್ತಿವೆ. ಎಲ್ಲ ಗ್ರಹಗಳ ರಾಜನಾದ ಗುರು(Jupiter) ಗ್ರಹವು ಈಗಾಗಲೇ ಕುಂಭ ರಾಶಿಯಲ್ಲಿದ್ದಾನೆ. ಬುಧ ಕೂಡಾ ಇಲ್ಲಿಯೇ ಪ್ರವೇಶಿಸುತ್ತಿರುವುದರಿಂದ ಮೂರು ಗ್ರಹಗಳು ಕುಂಭದಲ್ಲಿದ್ದಂತಾಗುತ್ತದೆ. ಸೂರ್ಯ ಹಾಗೂ ಬುಧ ಒಟ್ಟಿಗೆ ಬಂದಾಗ ಅತ್ಯುತ್ತಮ ಯೋಗವೊಂದು ಉಂಟಾಗುತ್ತದೆ ಅದೇ ಬುಧಾದಿತ್ಯ ಯೋಗ(Budhaditya Yoga). 

ಬುಧನ ಈ ಕುಂಭ ರಾಶಿ ಪ್ರವೇಶದಿಂದ ಯಾವೆಲ್ಲ ರಾಶಿಗಳ ಮೇಲೆ ಏನೆಲ್ಲ ಪರಿಣಾಮಗಳು ಉಂಟಾಗುತ್ತವೆ ನೋಡೋಣ. 

ಮೇಷ(Aries)
ನಿಮ್ಮ ಪರಿಶ್ರಮ(hard work)ಕ್ಕೆ ಫಲ ದೊರೆಯಲಿದೆ. ಆದಾಯ ಹೆಚ್ಚಳವನ್ನು ಕಾಣಲಿರುವಿರಿ. 

Intelligent Zodiacs: ಈ ರಾಶಿಯವರು ಬುದ್ಧಿವಂತಿಕೆಯಲ್ಲಿ ಒಂದು ಕೈ ಮೇಲೆಯೇ..

ವೃಷಭ(Taurus)
ಉದ್ಯೋಗದಲ್ಲಿ ಭಡ್ತಿ ಹೊಂದುವ ಸನ್ನಿವೇಶವಿದೆ. ನಿಮ್ಮ ಆತ್ಮವಿಶ್ವಾಸ(Confidence) ಹೆಚ್ಚಲಿದೆ. ನಿಮ್ಮೆಲ್ಲ ಗುರಿಗಳನ್ನು ಸುಲಭವಾಗಿ ತಲುಪುವಿರಿ.

ಮಿಥುನ(Gemini)
ಕಚೇರಿಯಲ್ಲಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ದೊರೆಯಲಿದೆ. ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆಯಲಿದೆ. ನೀವು ಮಾಡಿರುವ ಹೂಡಿಕೆಯಿಂದ ಲಾಭಗಳು ದೊರೆಯಲಿವೆ. 

ಕಟಕ(Cancer)
ವೈರಿಗಳ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಲಾಭ ಹಾಗೂ ಗೌರವ ಪಡೆಯಲು ಸಿಕ್ಕಾಪಟ್ಟೆ ಪರಿಶ್ರಮ ಪಡೆಯಬೇಕು. ನಿಮ್ಮ ಮಾನಮರ್ಯಾದೆ ವಿಷಯದಲ್ಲಿ ಹೆಚ್ಚು ಜತನ ವಹಿಸಬೇಕಾಗುತ್ತದೆ. 

ಸಿಂಹ(Leo)
ಹೊಸ ಕೆಲಸ ಆರಂಭಿಸುವ ಬಯಕೆಯಿದ್ದರೆ ಅದಕ್ಕಾಗಿ ಉತ್ತಮ ಅವಕಾಶಗಳು(opportunities) ಅರಸಿ ಬರಲಿವೆ. ಜವಾಬ್ದಾರಿಗಳು ಹೆಚ್ಚಲಿವೆ. 

ಕನ್ಯಾ(Virgo)
ನಿಮ್ಮ ಕಚೇರಿಯಲ್ಲಿ ನಿಮ್ಮದೇ ಛಾಪು ಮೂಡಿಸುವಲ್ಲಿ ಸಫಲರಾಗುವಿರಿ. ನಿರುದ್ಯೋಗಿಗಳಿಗೆ ಅಥವಾ ಉದ್ಯೋಗಿಗಳು ಹೊಸ ಕೆಲಸ ಹುಡುಕುತ್ತಿದ್ದಲ್ಲಿ ಈ ಸಮಯದಲ್ಲಿ ಅದು ಫಲಪ್ರದವಾಗಲಿದೆ. 

Religious Ritual: ಈ ವ್ರತ ಮಾಡಿ ಸಾವಿರ ಗೋದಾನದಷ್ಟು ಪುಣ್ಯ ಪಡ್ಕೊಳ್ಳಿ...!

ತುಲಾ(Libra)
ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಜ್ಞಾನ(Knowledge) ಹೆಚ್ಚುತ್ತದೆ. ಹೊಸ ಕೋರ್ಸ್ ಮಾಡಲು ಸುಸಂದರ್ಭವಾಗಿದೆ. 

ವೃಶ್ಚಿಕ(Scorpio)
ಜಮೀನು, ಕಟ್ಟಡ ಕಾಮಗಾರಿ ವಿಷಯದಲ್ಲಿ ವಿಶೇಷ ಯಶಸ್ಸು ಲಭಿಸಲಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಲಭಿಸಲಿದೆ. 

ಧನು(Sagittarius)
ಮುಂದೆ ಹೋಗಲು ಅವಕಾಶಗಳು ದೊರೆಯುತ್ತವೆ. ವೈವಾಹಿಕ ಜೀವನವನ್ನು ಸಂತೋಷವಾಗಿ ಕಳೆಯಲು ಪ್ರಯತ್ನ ಹೆಚ್ಚಿಸಬೇಕಾಗುತ್ತದೆ. 

ಮಕರ(Capricorn)
ಕಚೇರಿಯಲ್ಲಿ ಗೌರವ ಪ್ರಾಪ್ತಿಯಾಗುವುದು. ಭಡ್ತಿಯ ಅವಕಾಶವಿರುತ್ತದೆ. ಅಥವಾ ಸ್ಥಳ ಬದಲಿಸಬೇಕಾದ ಸನ್ನಿವಶ ಎದುರಾಗಬೇಕಾಗಬಹುದು. 

ಕುಂಭ(Aquarius)
ಬುಧ ಕುಂಭ ರಾಶಿಗೇ ಪ್ರವೇಶಿಸಿರುವುದರಿಂದ ಈ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ಮಾತಿನಲ್ಲಿ ಪ್ರೀತಿ, ಸೌಜನ್ಯವಿರಲಿ. 

ಮೀನ(Pisces)
ಆದಾಯ ಹೆಚ್ಚಲಿದೆ. ಹೊಸ ವ್ಯಕ್ತಿಗಳೊಂದಿಗೆ ಸಂಬಂಧ ಏರ್ಪಡಬಹುದು. ವೈರಿಗಳ ಬಗ್ಗೆ ಎಚ್ಚರ ಅಗತ್ಯ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios