ಬುಧ ಗೋಚಾರ 2022: ಕಟಕ, ಕನ್ಯಾ ಸೇರಿ ಈ ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ!

ಏಪ್ರಿಲ್ 8ರಂದು ಮೇಷ ರಾಶಿಯಲ್ಲಿ ಬುಧ ಗೋಚಾರ ಸಂಭವಿಸಿದೆ. ಇದೇ ತಿಂಗಳಲ್ಲಿ ಮತ್ತೊಮ್ಮೆ ಬುಧ ಗ್ರಹವು ವೃಷಭ ರಾಶಿಗೆ ಪ್ರವೇಶಿಸುತ್ತಿದೆ. ಬುಧನ ಈ ಎರಡು ಗೋಚಾರದಿಂದ ಯಾವೆಲ್ಲ ರಾಶಿಗಳಿಗೆ ಒಳಿತಾಗಲಿದೆ ನೋಡಿ. 

Mercury Transit 2022 Cancer Libra and THESE zodiacs will remain lucky skr

ಏಪ್ರಿಲ್ 8ರಂದು ಬುಧ ಗ್ರಹವು ಮೇಷ ರಾಶಿಗೆ ಕಾಲಿಟ್ಟಿದೆ. ಇದೇ ತಿಂಗಳಲ್ಲಿ ಮತ್ತೊಮ್ಮೆ ಅಂದರೆ ಏಪ್ರಿಲ್ 24ರಂದು ಅರ್ಧ ರಾತ್ರಿ 12.20ಕ್ಕೆ ಬುಧ ಮತ್ತೊಮ್ಮೆ ವೃಷಭಕ್ಕೆ ಪರಿವರ್ತನೆ ಹೊಂದುತ್ತಿದ್ದಾನೆ. ಬುಧನ ಈ ಎರಡು ನಡೆಗಳಿಂದ ಕೆಲ ರಾಶಿಗಳಿಗೆ ಅತ್ಯುತ್ತಮ ಫಲಗಳು ದೊರಕುತ್ತವೆ. ಯಾವ ರಾಶಿಯ ಮೇಲೆ ಏನೆಲ್ಲ ಪರಿಣಾಮವಾಗುತ್ತದೆ ನೋಡೋಣ. 

ಮೇಷ(Aries)
ಮೇಷ ರಾಶಿಯವರಿಗೆ ಬುಧ ಗೋಚಾರದಿಂದ ಸಾಕಷ್ಟು ಒಳಿತಾಗಲಿದೆ. ಸಾಮಾಜಿಕವಾಗಿ ನಿಮ್ಮ ಪ್ರಭಾವ ಹೆಚ್ಚಲಿದೆ. ಆದಾಯ ಕೂಡಾ ಹೆಚ್ಚುತ್ತದೆ. ನೀವು ಕಷ್ಟ ಪಟ್ಟು ಮಾಡಿದ ಕೆಲಸಗಳಿಗೆ ಫಲ ದೊರಕಲಿದೆ. ಉದ್ಯೋಗ, ವೃತ್ತಿಯಲ್ಲಿ ಸಂಪೂರ್ಣ ಯಶಸ್ಸಿನ ರುಚಿ ನೋಡಲಿದ್ದೀರಿ. ಸಧ್ಯ ಬುಧವು ನಿಮ್ಮದೇ ರಾಶಿಯಲ್ಲಿದ್ದು, ನಿಮ್ಮ ಕೆಲಸಗಳಿಗೆ ಪ್ರಶಂಸೆ ದೊರೆಯಲಿದೆ. ನಿಮ್ಮ ಶತ್ರುಗಳು ನಿಮ್ಮ ಯಶಸ್ಸನ್ನು ಹಾಳುಗೆಡವಲು ಪ್ರಯತ್ನಿಸಬಹುದು. ಹಾಗಾಗಿ, ಹಣ ಹಾಗೂ ವೃತ್ತಿ ವಿಚಾರದಲ್ಲಿ ಗುಟ್ಟುಗಳನ್ನು ಯಾರೊಂದಿಗೂ ಬಿಟ್ಟು ಕೊಡಬೇಡಿ. ದಂಪತಿಗೆ ಮಕ್ಕಳನ್ನು ಹೊಂದುವ ಯೋಗವಿದೆ. 

ವೃಷಭ(Taurus)
ವೃಷಭಕ್ಕೆ ಬುಧ ಪ್ರವೇಶವಾದ ದಿನದಿಂದ ನಿಮ್ಮ ಅದೃಷ್ಟ ಹೆಚ್ಚಲಿದೆ. ವೃತ್ತಿಯಲ್ಲಿ ಪ್ರಗತಿ ಹೆಚ್ಚುವ ಜೊತೆಗೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಲಿದೆ. ಆರೋಗ್ಯಕ್ಕಾಗಿ ಓಡಾಡಬೇಕಾಗುತ್ತದೆ. ವಿದೇಶದಲ್ಲಿ ಉದ್ಯೋಗ ಅವಕಾಶಗಳು ದೊರೆಯುತ್ತವೆ. ವಿದೇಶದಲ್ಲಿ ಓದಬಯಸುವ ವಿದ್ಯಾರ್ಥಿಗಳಿಗೂ ಅವಕಾಶಗಳು ಸಿಗಲಿವೆ. ಪ್ರೇಮ ವಿವಾಹ(love marriage)ಗಳಿಗೆ ಇದು ಸಕಾಲವಾಗಿದೆ. 

ಮಿಥುನ(Gemini)
ಮಿಥುನ ರಾಶಿಯ ಅಧಿಪತಿ ಬುಧ, ಆದ್ದರಿಂದ ಈ ಸಂಚಾರವು ನಿಮಗೆ ಲಾಭವನ್ನು ತರುತ್ತದೆ. ನೀವು ಮೇಲಧಿಕಾರಿಯ ಬೆಂಬಲವನ್ನು ಪಡೆಯುತ್ತೀರಿ, ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಹೂಡಿಕೆಯಿಂದ ಲಾಭ ಪಡೆಯುತ್ತೀರಿ. ಕೊಟ್ಟ ಹಣವೂ ಹಿಂತಿರುಗುತ್ತದೆ, ಹಠಾತ್ ಹಣದ ಲಾಭವೂ ಆಗಬಹುದು. ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ. ಕುಟುಂಬದ ಹಿರಿಯ ಸದಸ್ಯರು ಮತ್ತು ವಿಶೇಷವಾಗಿ ಅಣ್ಣನ ಬೆಂಬಲ ಇರುತ್ತದೆ. ದಂಪತಿಗೆ ಮಕ್ಕಳನ್ನು ಪಡೆಯುವ ಯೋಗವೂ ಇದೆ.

ಕಟಕ(Cancer)
ಬುಧ ಸಂಕ್ರಮಣವು ಕರ್ಕಾಟಕ ರಾಶಿಯ ಜನರ ಮೇಲೆ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ನೀವು ಹೊಸ ವೃತ್ತಿ ಅಥವಾ ಉದ್ಯೋಗದ ಕೊಡುಗೆಗಳನ್ನು ಪಡೆಯಬಹುದು. ಸಂಬಳ ಹೆಚ್ಚಳವಾಗುತ್ತದೆ. ನಿಮ್ಮ ಜವಾಬ್ದಾರಿ ಹೆಚ್ಚುತ್ತದೆಯಾದರೂ, ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನವು ಸಾರ್ಥಕವಾಗುತ್ತದೆ. ನಿಮ್ಮ ಕೆಲಸವನ್ನು ಕಚೇರಿಯಲ್ಲಿ ಪ್ರಶಂಸಿಸಲಾಗುತ್ತದೆ. ಈ ಸಮಯದಲ್ಲಿ, ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ನೀವು ಜಾಗರೂಕರಾಗಿರಬೇಕು. ನೀವು ಲಾಭ ಮತ್ತು ಗೌರವಕ್ಕಾಗಿ ಹೆಚ್ಚಿನ ಶ್ರಮ ಹಾಕಬೇಕು. ನಿಮ್ಮ ಶಕ್ತಿ ಹೆಚ್ಚಾಗುತ್ತದೆ. ನೀವು ಮನೆ ಅಥವಾ ಕಾರು ಖರೀದಿಸಬಹುದು. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ.

Navratri 2022: ಇಂದಿದೆ ವಿಶೇಷ ಸಂಯೋಗ, ಈ ದೇವಿಯ ಪೂಜೆ ಮಾಡಿದ್ರೆ ಶಾಂತವಾಗ್ತಾನೆ ಶನಿ!

ಸಿಂಹ(Leo)
ಬುಧ ಸಂಕ್ರಮಣವು ನಿಮಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ ಮತ್ತು ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಬಹುದು. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳಿವೆ. ನೀವು ವಿದೇಶಿ ಕಂಪನಿಯಿಂದ ಉದ್ಯೋಗವನ್ನು ಪಡೆಯಬಹುದು. ನ್ಯಾಯಾಲಯದ ತೀರ್ಪುಗಳು ನಿಮ್ಮ ಪರವಾಗಿ ಬರಲಿವೆ.

ಕನ್ಯಾ(Virgo)
ಕನ್ಯಾ ರಾಶಿಯ ಅಧಿಪತಿ ಬುಧ, ಆದ್ದರಿಂದ ಈ ಸಂಚಾರವು ನಿಮಗೂ ಉತ್ತಮವಾಗಿರುತ್ತದೆ. ನೀವು ಬರಹಗಾರರಾಗಿದ್ದರೆ ಇದು ನಿಮಗೆ ಸುವರ್ಣ ಸಮಯ. ಕಛೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ಕೆಲಸದ ಸ್ಥಳದಲ್ಲಿ ರಾಜಕೀಯಕ್ಕೆ ಬಲಿಪಶುವಾಗದಂತೆ ಎಚ್ಚರ ವಹಿಸಿ. ಯಾರಿಗೂ ಸಾಲ ನೀಡಬೇಡಿ.

Astro Policy: ಆರ್ಥಿಕ ಸಮಸ್ಯೆ ನಿವಾರಣೆಗೆ ಈ ಸರಳ ಉಪಾಯ!

ತುಲಾ(Libra)
ತುಲಾ ರಾಶಿಯವರಿಗೆ ಆದಾಯ ಹೆಚ್ಚಾಗುತ್ತದೆ. ಹೊಸ ಕೋರ್ಸ್ ತೆಗೆದುಕೊಳ್ಳಬಹುದು, ಸೃಜನಶೀಲ ಜನರಿಗೆ ಸಮಯ ಒಳ್ಳೆಯದಾಗಿರುತ್ತದೆ. ಅತ್ತೆಯ ಕಡೆಯಿಂದ ಸಹಕಾರ ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವಿದೇಶ ಪ್ರವಾಸ ಅಥವಾ ತೀರ್ಥಕ್ಷೇತ್ರಕ್ಕೆ ಹೋಗುವುದರಿಂದ ನೀವು ಲಾಭವನ್ನು ಪಡೆಯುತ್ತೀರಿ. ಧರ್ಮದಲ್ಲಿ ಅತೀವ ಆಸಕ್ತಿ ಇರುತ್ತದೆ.

ವೃಶ್ಚಿಕ(Scorpio)
ಬುಧ ಸಂಕ್ರಮಣವು ವೃಶ್ಚಿಕ ರಾಶಿಯವರಿಗೆ ಮಿಶ್ರ ಪರಿಣಾಮಗಳನ್ನು ನೀಡುತ್ತದೆ. ಮಾತಿನ ದುರ್ಬಲತೆಯ ಸಮಸ್ಯೆ ಇರಬಹುದು. ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಹೊಸ ಮನೆ ಅಥವಾ ವಾಹನ ಖರೀದಿಗೆ ಅವಕಾಶವಿದೆ. ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನ್ಯಾಯಾಲಯದ ಪ್ರಕರಣಗಳನ್ನು ಹೊರಗೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಸಾಲ ನೀಡಬೇಡಿ.

ಧನು(Sagittarius)
ಧನು ರಾಶಿಯವರಿಗೆ ಬುಧ ಸಂಕ್ರಮಣ ಸಂಪತ್ತು ತರಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ, ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮಕ್ಕಳ ಚಿಂತೆ ಕಡಿಮೆಯಾಗಲಿದೆ. ಮಕ್ಕಳನ್ನು ಪಡೆಯುವ ಯೋಗಗಳೂ ಇವೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಮದುವೆಗೂ ಇದು ಒಳ್ಳೆಯ ಸಮಯ.

ಈ ನಾಲ್ಕು ರಾಶಿಯವರಲ್ಲಿ ಅಹಂಕಾರ ಜಾಸ್ತಿ!

ಮಕರ (Capricorn)
ಮಕರ ರಾಶಿಯವರು ಕಚೇರಿಯಲ್ಲಿ ಗೌರವವನ್ನು ಪಡೆಯುತ್ತಾರೆ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಸ್ಥಳ ಬದಲಾವಣೆ ಆಗಬಹುದು, ಬಡ್ತಿಯೂ ಸಿಗಬಹುದು. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ವಿದೇಶಿ ಕಂಪನಿಯಲ್ಲಿ ಕೆಲಸ ಪಡೆಯಬಹುದು. ಮನೆ ಅಥವಾ ಕಾರು ಖರೀದಿಸಲು ಈಗ ಉತ್ತಮ ಸಮಯ. ಸ್ನೇಹಿತರಿಂದ ಒಳ್ಳೆಯ ಸುದ್ದಿ ಪಡೆಯುವಿರಿ. ಎಚ್ಚರಿಕೆಯಿಂದ ಪ್ರಯಾಣಿಸಿ.

ಕುಂಭ(Aquarius)
ಕುಂಭ ರಾಶಿಯವರು ಸುಳ್ಳು ಹೇಳುವವರ ಬಗ್ಗೆ ಎಚ್ಚರದಿಂದಿರಬೇಕು. ನಿಮ್ಮ ಮಾತಿನಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ಸಾಲ ಮಾಡಬೇಡಿ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ದಾನ ಮಾಡಿ. ನಿಮ್ಮ ಅತ್ಯುತ್ತಮ ಶಕ್ತಿ ಮತ್ತು ಕೆಲಸದ ದಕ್ಷತೆಯೊಂದಿಗೆ, ಕಷ್ಟಕರ ಸಂದರ್ಭಗಳನ್ನು ಸಬಲರಾಗಿ ಎದುರಿಸುತ್ತೀರಿ. ನೀವು ಪೌರತ್ವಕ್ಕಾಗಿ ಅಥವಾ ವಿದೇಶಿ ಕಂಪನಿಯಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಈ ಗೋಚಾರ ನಿಮಗೆ ಫಲ ನೀಡುತ್ತದೆ.

Solar Eclipse 2022: ವರ್ಷದ ಮೊದಲ ಗ್ರಹಣದಿಂದ ಈ ರಾಶಿಗಳಿಗೆ ಲಾಭ

ಮೀನ (Pisces)
ಬುಧದ ಸಂಚಾರವು ನಿಮಗೆ ಹಣವನ್ನು ತರುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಸಂಗಾತಿಯ ಬೆಂಬಲ ಸಿಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಕಳೆದು ಹೋದ ಹಣವೂ ವಾಪಸ್ ಬರುತ್ತದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿವಾದಿತ ವಿಷಯಗಳನ್ನು ನ್ಯಾಯಾಲಯದ ಹೊರಗೆ ಪರಿಹರಿಸಲು ಪ್ರಯತ್ನಿಸಿ.
 

Latest Videos
Follow Us:
Download App:
  • android
  • ios