ಕೇತು ದೋಷದಿಂದ ಬೇಸತ್ತಿದ್ದೀರಾ? ಕೇತುವನ್ನು ಸಂತೋಷಪಡಿಸಲು ಇಲ್ಲಿವೆ ಮಾರ್ಗಗಳು..

ಜಾತಕದಲ್ಲಿ ಕೇತು ದೋಷವಿದ್ದರೆ ವ್ಯಕ್ತಿಯು ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ, ಎಲ್ಲ ಕೆಲಸದಲ್ಲೂ ಅಡೆತಡೆಗಳು ಉಂಟಾಗುತ್ತವೆ. ಕೇತುವನ್ನು ಶಾಂತಗೊಳಿಸುವ ಮಾರ್ಗಗಳನ್ನು ಇಲ್ಲಿ ಕೊಡಲಾಗಿದೆ. 

Measures to save yourself from Ketu dosha skr

ಕೇತು(Ketu)ವು ಕ್ರೂರ ಗ್ರಹ. ಹಾಗಿದ್ದೂ ಕೇತುವಿನ ಕೃಪೆಯಿದ್ದಾಗ ವ್ಯಕ್ತಿಯ ಅಂತಃಪ್ರಜ್ಞೆ ಹೆಚ್ಚುತ್ತದೆ. ವ್ಯಕ್ತಿಯು ಸದ್ಗುಣಶೀಲ ಮತ್ತು ಆಧ್ಯಾತ್ಮಿಕ(Spiritual)ವಾಗಿ ಜ್ಞಾನಿಯಾಗುತ್ತಾನೆ. ವಿದ್ಯಾರ್ಥಿಯು ಹೆಚ್ಚು ಓದದೆಯೇ ಪುಸ್ತಕದ ಪೂರ್ಣ ಜ್ಞಾನ ಗ್ರಹಿಸಲು ಸಾಧ್ಯವಾಗುತ್ತದೆ. ಒಳ್ಳೆಯ ಕೇತು ಹಿಂದಿನ ಜನ್ಮಗಳಲ್ಲಿ ಕಲಿತ ಜ್ಞಾನವನ್ನು ನಿರ್ವಹಿಸುತ್ತಾನೆ. ಹಾಗಾಗಿಯೇ, ಕೇತುವಿನ ಆಶೀರ್ವಾದವಿದ್ದಾಗ ವ್ಯಕ್ತಿಯು  ಹೆಚ್ಚು ಓದದೆ ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡಬಹುದು ಮತ್ತು ಬರೆಯಬಹುದು. 

ಅದೇ ಜಾತಕ(Horoscope)ದಲ್ಲಿ ಕೇತು ದೋಷವಿದ್ದಾಗ ವ್ಯಕ್ತಿಯು ನಲುಗಿ ಹೋಗುತ್ತಾನೆ. ಜಾತಕದಲ್ಲಿ ಕೇತುವು ಮಹಾದಶಾದಲ್ಲಿದ್ದರೆ, ಅವನು ವಿವಿಧ ಸವಾಲುಗಳನ್ನು ಹಾಕುತ್ತಾನೆ. ಕೇತು ದೋಷ ಜಾತಕದಲ್ಲಿದ್ದಾಗ ವ್ಯಕ್ತಿಯು ಅನೇಕ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಾನೆ, ತೀರಾ ಕೆಳಮಟ್ಟಕ್ಕಿಳಿಯುತ್ತಾನೆ. ರಾಹುಕೇತು ಕೆಟ್ಟ ಸ್ಥಿತಿಯಲ್ಲಿದ್ದಾಗ ಕಾಳ ಸರ್ಪದೋಷ(Kala Sarpa Dosha)ವೂ ಕಾಡಿಸುತ್ತದೆ. ಕೇತುವು ವ್ಯಕ್ತಿಯ  ತರ್ಕ, ಬುದ್ಧಿವಂತಿಕೆ, ಜ್ಞಾನಕ್ಕೆ ತಡೆಯೊಡ್ಡಿ ಎಲ್ಲ ಕೆಲಸಗಳಲ್ಲಿ ನಿರಾಸಕ್ತಿ, ಅಡಚಣೆ ಉಂಟು ಮಾಡುತ್ತನೆ. ಅಲ್ಲದೆ ಕೇತು ದೋಷವಿದ್ದಾಗ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. 

ಮಿಥುನ ರಾಶಿಯಲ್ಲಿ ಸೂರ್ಯ ಸಂಕ್ರಮಣ: ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ?

ಈ ಸಂದರ್ಭದಲ್ಲಿ ಚರ್ಮದ ಕಾಯಿಲೆ(Skin diseases)ಯ ಅಪಾಯ, ಕೀಲುನೋವು, ದೇಹದ ಭಾಗಗಳ ನರಗಳಲ್ಲಿ ದೌರ್ಬಲ್ಯ, ಶ್ರವಣ ನಷ್ಟ, ಆಗಾಗ್ಗೆ ಕೆಮ್ಮುವುದು, ಹೆರಿಗೆಯಲ್ಲಿ ತೊಂದರೆಗಳು, ಬೆನ್ನುಹುರಿಯ ಸಮಸ್ಯೆ ಇತ್ಯಾದಿ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿದ್ದು ತಲೆಗೆ ಹತ್ತುವುದಿಲ್ಲ. ಏಕಾಗ್ರತೆ(Concentration) ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ವ್ಯಕ್ತಿಯು ಅದರ ದುಷ್ಪರಿಣಾಮಗಳನ್ನು ತೊಡೆದುಹಾಕಲು ಮಾರ್ಗಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಕೇತು ದೋಷ ಪರಿಹಾರ ಮಾರ್ಗಗಳು(Remedies)

  • ಕೇತು ದೋಷವನ್ನು ತೊಡೆದುಹಾಕಲು, ಈ ಮಂತ್ರವನ್ನು ಪ್ರತಿ ದಿನ 108 ಬಾರಿ 'ಓಂ ಸ್ರಾಂ ಸ್ರೀಂ ಸ್ರೌಂ ಸಃ ಕೇತವೇ ನಮಃ' ಎಂದು ಜಪಿಸಬೇಕು.
  • ಕೇತು ಗ್ರಹವನ್ನು ಶಾಂತಗೊಳಿಸಲು, ಶನಿವಾರ ಅಶ್ವತ್ಥ ಮರ(Peepal tree)ದ ಕೆಳಗೆ ತುಪ್ಪದ ದೀಪ ಬೆಳಗಿಸಿ.
  • ಶನಿವಾರದಂದು, ಸ್ವಲ್ಪ ದೂರ್ವೆಯನ್ನು ನೀರಿನಲ್ಲಿ ಹಾಕಿ ಮತ್ತು ಅಶ್ವತ್ಥ ಮರದ ಬುಡಕ್ಕೆ ಅರ್ಪಿಸಿ.
  • ಕೇತುವಿನ ಕೋಪವನ್ನು ಕಡಿಮೆ ಮಾಡಲು, ಆಂಜನೇಯ, ಗಣೇಶ ಮತ್ತು ತಾಯಿ ದುರ್ಗೆಯನ್ನು ಪೂಜಿಸಿ.

    ಶನಿ ದೋಷವಿದ್ರೆ ನಿಮ್ಮಲ್ಲಿ ಈ ಸಮಸ್ಯೆಗಳು ಕಂಡು ಬರುತ್ತೆ!
     
  • ಭಾನುವಾರ ಹೆಣ್ಣುಮಕ್ಕಳಿಗೆ ಸಿಹಿ ಮೊಸರು ಮತ್ತು ಹಲ್ವಾವನ್ನು ನೀಡಿ.
  • ಕೃಷ್ಣ ಪಕ್ಷದಲ್ಲಿ ಬೇಯಿಸಿದ ಅನ್ನದಲ್ಲಿ ಸ್ವಲ್ಪ ಮೊಸರು, ಕಪ್ಪು ಎಳ್ಳನ್ನು ಬೆರೆಸಿ. ಅದನ್ನು ಅಶ್ವತ್ಥ ಮರದ ಕೆಳಗೆ ಇಟ್ಟು ಕೇತುವಿನ ಶಾಂತತೆಗಾಗಿ ಪ್ರಾರ್ಥಿಸಿ.
  • ತ್ರಯೋದಶಿ ತಿಥಿಯಂದು ಕೇತು ಸಂಬಂಧಿತ ಉಪವಾಸ(Fast)ವನ್ನು ಆಚರಿಸಬಹುದು.
  • ಕೇತುವನ್ನು ಒಲಿಸಿಕೊಳ್ಳಲು, ನೀವು ಬೆಕ್ಕಿನ ಕಣ್ಣಿನ ರತ್ನ(gem)ವನ್ನು ಧರಿಸಬಹುದು.
  • ಕೇತು ಗ್ರಹವನ್ನು ಒಲಿಸಿಕೊಳ್ಳಲು ಬೆಚ್ಚನೆಯ ಬಟ್ಟೆ, ಕಬ್ಬಿಣ, ಕೊಡೆ, ಕಂಬಳಿ ಇತ್ಯಾದಿಗಳನ್ನು ದಾನ ಮಾಡಿ.
  • ಕೇತುವನ್ನು ಶಾಂತಗೊಳಿಸಲು ಹಸಿ ಹಾಲಿಗೆ ಕೇಸರಿ ಹಾಕಿಕೊಂಡು ಕುಡಿಯಿರಿ. ಹಣೆಗೆ ಕುಂಕುಮ ತಿಲಕವಿಡಿ. 
  • ಬೀದಿನಾಯಿ(Stray dogs)ಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಕೇತು ಸಂತುಷ್ಟನಾಗುತ್ತಾನೆ. 
  • ಕೇತುವಿನ ಅಡಚಣೆಯನ್ನು ನಿಲ್ಲಿಸಲು, ಬೂದು ಬಣ್ಣದ ವಸ್ತ್ರ ಧರಿಸುವುದನ್ನು ನಿಲ್ಲಿಸಿ ಮತ್ತು ಹೆಚ್ಚಾಗಿ ಹಳದಿ(yellow) ಮತ್ತು ಬಿಳಿ ಬಣ್ಣವನ್ನು ಬಳಸಿ. 
  • ಕೇತು ನಕಾರಾತ್ಮಕವಾಗಿದ್ದರೆ, ಯಾರನ್ನೂ ನಂಬಬೇಡಿ. ಏಕೆಂದರೆ ಹತ್ತಿರದವರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚು. 
  • ಕೇತುದೋಷವು ಒಳ್ಳೆಯ ಸ್ನೇಹಿತರನ್ನು ಹೊಂದಲು ಬಿಡುವುದಿಲ್ಲ, ಹಾಗಾಗಿ, ಇಂಥ ಸಂದರ್ಭದಲ್ಲಿ ಆಧ್ಯಾತ್ಮಿಕ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. 

    ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Latest Videos
Follow Us:
Download App:
  • android
  • ios